ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಮಂಜು ಭಾಷಿಣಿ: ಬಡ್ಡಿ ಬಂಗಾರಮ್ಮ ಪಾತ್ರದಲ್ಲಿ `ಸಿಲ್ಲಿ ಲಲ್ಲಿ’ ಲಲಿತಾಂಬ ಮಿಂಚಿಂಗ್​!

ಸಿಲ್ಲಿ ಲಲ್ಲಿ ಲಲಿಂತಾಬ ಮತ್ತೊಂದು ಧಾರಾವಾಹಿಯಲ್ಲಿ ಖಡಕ್​ ವಿಲನ್(Villain)​ ರೋಲ್​ನಲ್ಲಿ ಮಿಂಚಿಲಿದ್ದಾರೆ. ಹೌದು ಪುಟ್ಮಲ್ಲಿ ಉಮಾಶ್ರೀ(Umashree) ನಟಿಸುತ್ತಿರುವ ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ಮಂಜು ಭಾಷಿಣಿ ಬಡ್ಡಿ ಬಂಗಾರಮ್ಮ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನಟಿ ಮಂಜು ಭಾಷಿಣಿ

ನಟಿ ಮಂಜು ಭಾಷಿಣಿ

  • Share this:
ಮಂಜು ಭಾಷಿಣಿ(Manju Bhasini) ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯರಾಗಿರುವ ನಟಿ. 1997 ರಲ್ಲಿ ತೆರೆಕಂಡ ಪ್ರಶಸ್ತಿ ವಿಜೇತ ಚಿತ್ರ `ಭೂಮಿ ತಾಯಿ' ಮೂಲಕ ಜನಪ್ರಿಯರಾದರು. ಇವರು ಈ ಟಿವಿ(TV) ಕನ್ನಡದಲ್ಲಿ ಪ್ರಸಾರವಾದ `ಸಿಲ್ಲಿ ಲಲ್ಲಿ'(Silli Lalli) ಧಾರವಾಹಿ(Serial)ಯ ಸಮಾಜಸೇವಕಿ ಲಲಿತಾಂಬ ಪಾತ್ರದ ಮೂಲಕ ತುಂಬಾ ಪ್ರಸಿದ್ಧಿ ಪಡೆದರು. ಹಲವು ವರ್ಷಗಳ ಕಾಲ ಇದೇ ಪಾತ್ರದ ಮೂಲಕ ಜನರನ್ನು ನಕ್ಕು ನಲಿಸಿದ್ದಾರೆ. ಇದಾದ ಬಳಿಕ ಹಲವು ಧಾರಾವಾಹಿಗಳು ಹಾಗೂ ಸಿನಿಮಾದಲ್ಲಿ ಮಂಜು ಭಾಷಿಣಿ ನಟಿಸಿದ್ದಾರೆ. ರಾಜಾರಾಣಿ(Raja Rani) ಧಾರಾವಾಹಿಯ ಮೂಲಕ ಕಿರುತೆರೆಗೆ ವಾಪಸ್ ಆಗಿದ್ದರು . ಮಾಸ್ಟರ್ ಆನಂದ್ , ಶಿವರಾಜ್ ಕೆಆರ್ ಪೇಟೆ  ನಟನೆಯ ಜಂತರ್ ಮಂತರ್(Janthar Manthar) ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಮಾಯಾಮೃಗ(Maya Mruga) ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದು. ಹೊಸ ವಿಚಾರ ಅಂದರೆ, ಸಿಲ್ಲಿ ಲಲ್ಲಿ ಲಲಿಂತಾಬ ಮತ್ತೊಂದು ಧಾರಾವಾಹಿಯಲ್ಲಿ ಖಡಕ್​ ವಿಲನ್(Villain)​ ರೋಲ್​ನಲ್ಲಿ ಮಿಂಚಿಲಿದ್ದಾರೆ. ಹೌದು ಪುಟ್ಮಲ್ಲಿ ಉಮಾಶ್ರೀ(Umashree) ನಟಿಸುತ್ತಿರುವ ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ಮಂಜು ಭಾಷಿಣಿ ಬಡ್ಡಿ ಬಂಗಾರಮ್ಮ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ನಾಯಕನ ತಾಯಿ ಪಾತ್ರದಲ್ಲಿ ಮಂಜು ಭಾಷಿಣಿ

ಪ್ರೇಕ್ಷಕರ ಪ್ರೀತಿಯ ಸಮಾಜ ಸೇವಕಿ ಲಲಿತಾಂಬಾ, ನಟಿ ಮಂಜು ಭಾಷಿಣಿ ಅವರು ಬಹುದಿನಗಳ ನಂತರ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದಾರೆ. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಅವರು ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಮಾಶ್ರೀ ಲೀಡ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಧಾರಾವಾಹಿಗೆ ಆರೂರು ಜಗದೀಶ್​ನಿರ್ದೇಶನ ಮಾಡುತ್ತಿದ್ದಾರೆ. ‘ನಾಯಕನ ತಾಯಿ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ. ಬಡ್ಡಿ ವ್ಯವಹಾರ ಮಾಡುವ ಗಟ್ಟಿಗಿತ್ತಿ ಮಹಿಳೆ ಪಾತ್ರದಲ್ಲಿ ನಾನು ನಟಿಸುತ್ತಿರುವೆ. ಜೀವನದಲ್ಲಿ ಏನಾದರೂ ಸಾಧನೆ ಮಾಡುತ್ತೇವೆ ಎಂದು ನಿಜವಾದ ಕಾರಣ ನೀಡಿದರೆ ಮಾತ್ರ ಅವಳು ಹಣ ನೀಡುತ್ತಾಳೆ. ಸಮಾಜದಲ್ಲಿ ಆಕೆ ನ್ಯಾಯಕ್ಕಾಗಿ ನಿಲ್ಲುತ್ತಾಳೆ’ ಎಂದು ಮಂಜು ಭಾಷಿಣಿ ಹೇಳಿದ್ದಾರೆ.

ಇದನ್ನು ಓದಿ : ಛೇ.. ಕೊನೆಗಾಲದಲ್ಲಿ ಹಿರಿಯ ನಟನಿಗೆ ಇದೆಂಥಾ ಪರಿಸ್ಥಿತಿ: ಪತ್ನಿ, ಮಕ್ಕಳಿಂದಲೇ ಟಾರ್ಚರ್​!

ಕೆಲ ಕಾಲ ಬ್ರೇಕ್​ ತೆಗೆದುಕೊಂಡಿದ್ದ ಲಲಿತಾಂಬ!

ಮಂಜುಭಾಷಿಣಿ  ಕಡೆಯದಾಗಿ ನಟಿಸಿದ್ದು 2018ರಲ್ಲಿ ಪ್ರಸಾರ ಕಾಣುತ್ತಿದ್ದ ಧಾರಾವಾಹಿ ರಾಜ ರಾಣಿಯಲ್ಲಿ.ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಖಡಕ್ ಪಾತ್ರವಾಗಿರುವ ಬಡ್ಡಿ ಬಂಗಾರಮ್ಮನ ಪಾತ್ರದಲ್ಲಿ ಮಂಜು ಭಾಷಿಣಿ ಮಿಂಚಲಿದ್ದಾರೆ.ಪತಿಯ ಕಂಪನಿ ಕೆಲಸಕ್ಕಾಗಿ ಹಲವು ದೇಶ ಸುತ್ತಬೇಕಾಗಿದ್ದ ಕಾರಣ, ಬೆಂಗಳೂರಿನಲ್ಲಿ ಶೂಟಿಂಗ್‌ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಬ್ರೇಕ್ ತೆಗೆದುಕೊಂಡಿದ್ದರಂತೆ. ಆದ್ರೆ ಈಗ ಕೊರೊನಾ ಇರುವ ಕಾರಣ ಭಾರತದಲ್ಲೇ ಕಂಪನಿ ಕೆಲಸವಾಗುತ್ತಿದೆ.ಪುಟ್ಟಕ್ಕನ ಮಕ್ಕಳು ಧಾರಾವಾಹಿ ಶೂಟಿಂಗ್‌ನಲ್ಲಿ ಭಾಗವಹಿಸಿರುವ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ.
ಜೀ ಕನ್ನಡದಲ್ಲಿ ಪುಟ್ಟಕ್ಕನ ಮಕ್ಕಳು ಸೀರಿಯಲ್ ಟೆಲಿಕಾಸ್ಟ್​!

ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಮನೆಮಾತಾಗಿರುವ ಕರ್ನಾಟಕದ ನಂಬರ್ 1 ವಾಹಿನಿ ಜೀ ಕನ್ನಡ(Zee Kannada) ಈಗ ‘ಪುಟ್ಟಕ್ಕನ ಮಕ್ಕಳು’(Puttakkana Makkalu) ಎಂಬ ವಿನೂತನ ಮೆಗಾ ಧಾರಾವಾಹಿ(Serial)ಯನ್ನು ಪ್ರಸಾರ ಮಾಡುತ್ತಿದೆ.. ಡಿಸೆಂಬರ್ 13 ರಿಂದ, ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ 'ಪುಟ್ಟಕ್ಕನ ಮಕ್ಕಳು' ಪ್ರಸಾರವಾಗುತ್ತಿದೆ.ಮಾಜಿ ಸಚಿವೆ, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟಿ ಉಮಾಶ್ರೀ(Umashree) ಪ್ರಮುಖ ಪಾತ್ರದಲ್ಲಿ ಈ ಧಾರಾವಾಹಿಯ ಮೂಲಕ ಕಿರುತೆರೆಗೆ ಮರಳಿದ್ದಾರೆ.

ಇದನ್ನು ಓದಿ : ವಿಶ್ವಸುಂದರಿ ಕಿರೀಟ ಧರಿಸುವಾಗ ಹರ್ನಾಜ್ ತೊಟ್ಟ ಗೌನ್ ಡಿಸೈನ್ ಮಾಡಿದ್ದು ಓರ್ವ ತೃತೀಯ ಲಿಂಗಿ!

ಪುಟ್ಟಕ್ಕನ ಪಾತ್ರದಲ್ಲಿ ಅವರು ಮೂರು ಹೆಣ್ಣು ಮಕ್ಕಳ ತಾಯಿಯಾಗಿ ನಟಿಸಿದ್ದಾರೆ. `ಜೊತೆ ಜೊತೆಯಲಿ’(Jothe Jotheyali) ಸೀರಿಯಲ್​ಗೆ ನಿರ್ದೇಶನ ಮಾಡಿ ಜನಮೆಚ್ಚುಗೆ ಗಳಿಸಿರುವ ಆರೂರು ಜಗದೀಶ್​ ಅವರು ‘ಪುಟ್ಟಕ್ಕನ ಮಕ್ಕಳು’ ಸೀರಿಯಲ್​ ಅನ್ನು ನಿರ್ದೇಶಿಸುವ ಹೊಣೆ ಹೊತ್ತಿದ್ದಾರೆ.
Published by:Vasudeva M
First published: