ಚೆಕ್​ಬೌನ್ಸ್ ಮಾಡುತ್ತಿದ್ದವರಿಗೂ, ಸಿಲ್ಕ್​ಸ್ಮಿತಾ ಅವರ ಮನೆಯ ನಾಯಿಗಳಿಗೂ ಏನು ಸಂಬಂಧ?

news18
Updated:July 20, 2018, 5:04 PM IST
ಚೆಕ್​ಬೌನ್ಸ್ ಮಾಡುತ್ತಿದ್ದವರಿಗೂ, ಸಿಲ್ಕ್​ಸ್ಮಿತಾ ಅವರ ಮನೆಯ ನಾಯಿಗಳಿಗೂ ಏನು ಸಂಬಂಧ?
news18
Updated: July 20, 2018, 5:04 PM IST
ನ್ಯೂಸ್ 18 ಕನ್ನಡ

ತೆರೆ ಮೇಲೆ ಅಬ್ಬರಿಸುತ್ತಿದ್ದ ಡಾ. ರಾಜ್​ಕುಮಾರ್​ ಯಾವತ್ತೂ ಅನ್ನದಾತರು ಅಂತ ಕರೆಯುತ್ತಿದ್ದ ನಿರ್ಮಾಪಕರೆದುರು ಅಬ್ಬರಿಸಿದವರಲ್ಲವೇ ಅಲ್ಲ. ಇನ್ನು ಭೋಜರಾಜ ಶ್ರೀನಿವಾಸಮೂರ್ತಿ ಅವರು ಅಭಿನಯಿಸುತ್ತಿದ್ದ ಪಾತ್ರಗಳಲ್ಲೂ ಪಾಪ... ನಿಜ ಜೀವನದಲ್ಲೂ ಮಗುವಿನಂತಹ ಮನಸಿಸನವರು. ಯಾರಿಗೂ ಒಂಚೂರು ಬೈದವರಲ್ಲ.

ಒಂದು ಕಾಲದಲ್ಲಿ ಬೇಡಿಕೆಯ ಉತ್ತುಂಗದಲ್ಲಿದ್ದ ಈ ಇಬ್ಬರೂ ತಾರೆಯರು ಯಾವತ್ತೂ ಯಾರ ಮೇಲೂ ಎಗರಾಡಿದವರಲ್ಲ. ತಮ್ಮ ಇಡೀ ಸಿನಿ ಜೀವನದಲ್ಲಿ ಅದೆಷ್ಟು ಚೆಕ್‍ಬೌನ್ಸ್​ ಆದ ಅದೆಷ್ಟು ಚೆಕ್‍ಗಳು ಮನೆಯಲ್ಲೇ ಕೊಳೆಯುತ್ತಿವೆಯೋ. ಆದರೆ ಸಿಡಿಲ ತೊಡೆಗಳ ಸುಂದರಿ ಸಿಲ್ಕ್ ಸ್ಮಿತಾ ಕೂಡ ಚೆಕ್​ಬೌನ್ಸ್​ ವಿಷಯದಲ್ಲಿ ಇಷ್ಟೇ ಸಹೃದಯಿ.

ರಸಿಕರ ರಾಣಿ ಸಿಲ್ಕ್ ಸ್ಮಿತಾ.... 80-90ರ ದಶಕದಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದ ರಸಿಕರು ಗಿರಗಿರನೇ ಗಿರಿಗಿಟ್ಲೆ ಹೊಡೆಯುವಂತೆ ಮಾಡಿದ್ದ ಮದನಾರಿ. ಸಿಲ್ಕ್ ಸ್ಮಿತಾ ಹೆಜ್ಜೆ ಹಾಕಿದರೆ ಪಡ್ಡೆಗಳ ಎದೆಯಲ್ಲಿ ಢವ ಢವ ಶುರುವಾಗುತ್ತಿತ್ತು. ಅಂತಹ ಬೇಡಿಕೆಯ ಸುಂದರಿಗೂ ನಿರ್ಮಾಪಕರು ನೀಡುತ್ತಿದ್ದ ಚೆಕ್​ಗಳು ಸಾಲು ಸಾಲಾಗಿ ಚೆಕ್‍ಬೌನ್ಸ್​ ಆಗುತ್ತಿತ್ತಂತೆ. ಇದರಿಂದ ಅವರೂ ಕಂಗಾಲಾಗಿ ಹೋಗಿದ್ದರು.

ಆದರೆ ಸಿಲ್ಕ್ ಸ್ಮಿತಾ ಚೆಕ್​ಬೌನ್ಸ್ ಆದಾಗ ಏನು ಮಾಡುತ್ತಿದ್ದರು ಅಂತ ಕೇಳಿದರೆ ನಿಮಗೆ ಅಚ್ಚರಿಯಾಗುತ್ತೆ. ಹೌದು. ಈ ರಸಿಕರ ಪಾಲಿನ ರಂಭೆ, ಚೆಕ್​ಬೌನ್ಸ್​ಗೆ ಕಾರಣರಾದ ನಿರ್ಮಾಪಕರ ಹೆಸರನ್ನು ತಮ್ಮ ಮನೆಯ ಸಾಕು ನಾಯಿಗೆ ಇಡುತ್ತಿದ್ದರಂತೆ. ಇದೇ ಕಾರಣಕ್ಕೆ ಸಿಲ್ಕ್ ಸ್ಮಿತಾ ಮನೆಯಲ್ಲಿ ಸಾಕು ನಾಯಿಗಳ ಸಂಖ್ಯೆಯೂ ದೊಡ್ಡದಿತ್ತಂತೆ..

ಮೋಸ ಮಾಡಿದವನ ಹೆಸರಿನ ಮಗನಿರಬೇಕು ಅಂತ ಹೇಳುತ್ತಾರೆ. ಸಿಲ್ಕ್​ಸ್ಮಿತಾ ಕೂಡ ಅದನ್ನೇ ಫಾಲೋ ಮಾಡಿದ್ದರು. ಆದರೆ ಮನೆಯಲ್ಲಿ ಮಗನಂತೆ ಸಾಕಿದ್ದ ನಾಯಿಗಳಿಗೆ ಚೆಕ್​ಬೌನ್ಸ್​ ಹೆಸರಿಡುತ್ತಿದ್ದರು. ಒಂದು ಆ ನಿರ್ಮಾಪಕನ ಬಗ್ಗೆ ಇದ್ದ ಬೇಸರಕ್ಕೆ ಮತ್ತೊಂದು ಅವರ ಹೆಸರು ಮರೆತು ಹೋಗದಿರಲಿ ಅನ್ನೋ ಕಾರಣಕ್ಕೆ.

ಸಿಲ್ಕ್ ಸ್ಮಿತಾ ಅನ್ನೋ ಹೆಸರು ಕೇಳಿದರೆ ಎದೆ ಬಡಿತ ಹೆಚ್ಚಿಸಿಕೊಳ್ಳುತ್ತಿದ್ದ ಎಷ್ಟೋ ಜನರಿಗೆ, ಈ ನಾಯಕಿಯ ನಿಜ ಜೀವನದ ವ್ಯಥೆ ಕೇಳಿದರೆ ಕರುಳು ಹಿಂಡಿಂದಂತಾಗುತ್ತೆ ಅನ್ನೋದರಲ್ಲಿ ಅನುಮಾನವಿಲ್ಲ.
Loading...

 
First published:July 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ