Silk Smitha: Silk Smitha: Silk Smitha: 36ನೇ ವಯಸ್ಸಿಗೆ ನಿಗೂಢ ಸಾವು,​ ಮಾದಕ ಚೆಲುವೆ ಸಿಲ್ಕ್‌ ಸ್ಮಿತಾ ಕುರಿತಾದ ಕೆಲ ಇಂಟರೆಸ್ಟಿಂಗ್ ವಿಚಾರ!

ಸಿಲ್ಕ್ ಸ್ಮಿತಾ ಎಂದು ಪ್ರಸಿದ್ಧರಾಗಿದ್ದ ವಿಜಯಲಕ್ಷ್ಮಿ ವಡ್ಲಪಟ್ಲ ಅವರು ಸೆಪ್ಟೆಂಬರ್ 23, 1996 ರಲ್ಲಿ ನಿಗೂಢ ರೀತಿಯಲ್ಲಿ 36ನೇ ವಯಸ್ಸಿನಲ್ಲಿಯೇ ಶವವಾಗಿ ಪತ್ತೆಯಾಗಿದ್ದರು. ನಮ್ಮನ್ನಗಲಿ ಇಷ್ಟು ವರ್ಷವಾದರೂ ಸಿನಿ ಪ್ರೇಮಿಗಳ ಬಾಯಲ್ಲಿ ಸಿಲ್ಕ್‌ ಹೆಸರು ಇನ್ನೂ ನೆನಪಿದೆ. ಸಿನಿ ಪ್ರೇಕ್ಷಕರಿಗೆ ಸಿಲ್ಕ್‌ ಸ್ಮಿತಾ ಮಾತ್ರ ಆಗಿ ಕಾಣಿಸಿಕೊಂಡ ಈ ದುರಂತ ನಾಯಕಿಯ ಬಗ್ಗೆ ಹಲವಾರು ಇಂಟೆರೆಸ್ಟಿಂಗ್‌ ಮಾಹಿತಿಗಳು ಇವೆ. ನಟಿ ಸಿಲ್ಕ್ ಸ್ಮಿತಾ ಬಗ್ಗೆ ನಿಮಗೆ ತಿಳಿದಿಲ್ಲದ 10 ಸಂಗತಿಗಳು ಇಲ್ಲಿವೆ.

ಮಾದಕ ಚೆಲುವೆ ಸಿಲ್ಕ್‌ ಸ್ಮಿತಾ

ಮಾದಕ ಚೆಲುವೆ ಸಿಲ್ಕ್‌ ಸ್ಮಿತಾ

  • Share this:
1) 10 ನೇ ವಯಸ್ಸಿನಲ್ಲಿ ವಿದ್ಯಾಭ್ಯಾಸ ತೊರೆದ ಸಿಲ್ಕ್

ಡಿಸೆಂಬರ್ 2, 1960 ರಂದು ಆಂಧ್ರಪ್ರದೇಶದಲ್ಲಿ ಜನಿಸಿದ ಸಿಲ್ಕ್ ಸ್ಮಿತಾ ನಿಜವಾದ ಹೆಸರು ವಿಜಯಲಕ್ಷ್ಮಿ ವಡ್ಲಪಟ್ಲ. ಕುಟುಂಬದ ಬಡತನದ ಕಾರಣದಿಂದಾಗಿ ವಿದ್ಯಾಭ್ಯಾಸ ಮುಂದುವರೆಸಲು ಸಾಧ್ಯವಾಗದ ಸ್ಮಿತಾ 10ನೇ ವಯಸ್ಸಿನಲ್ಲಿಯೇ ಶಾಲೆ ಬಿಟ್ಟಳು.

2) 14 ನೇ ವಯಸ್ಸಿನಲ್ಲಿಯೇ ಮದುವೆ ಸಿಲ್ಕ್ ಸ್ಮಿತಾ

ಅವರ ಪೋಷಕರು 14 ನೇ ವಯಸ್ಸಿನಲ್ಲಿ ಅವಳಿಗೆ ಬಲವಂತದ ಮದುವೆ ಮಾಡಿದರು. ಆದಾಗ್ಯೂ, ಮದುವೆಯಾಗಿ ಕೆಲವು ವರ್ಷಗಳ ನಂತರ, ಪತಿ ಮತ್ತು ಅತ್ತೆಯ ಕಾಟವನ್ನು ತಾಳದೇ ಮದುವೆ ಸಂಬಂಧ ಮುರಿದುಕೊಂಡು ಹೊರಬಂದ ಸ್ಮಿತಾ ಹೊಸ ಜೀವನ ಕಟ್ಟಿಕೊಳ್ಳುವ ನಿರ್ಧಾರ ಮಾಡುತ್ತಾಳೆ. ಈ ನಿರ್ಧಾರವೇ ಸ್ಮಿತಾಳನ್ನು ಬಣ್ಣದ ಲೋಕಕ್ಕೆ ಕರೆತರುತ್ತದೆ.3) ಸಿಲ್ಕ್ ಸ್ಮಿತಾಳನ್ನು ಗುರುತಿಸಿದ ನಿರ್ದೇಶಕ ವಿನು ಚಕ್ರವರ್ತಿ

ಚೆನ್ನೈನ ಹೆಸರಾಂತ ಎವಿಎಂ ಸ್ಟುಡಿಯೋ ಬಳಿ ಸ್ಮಿತಾಳ ನೃತ್ಯ ವೀಕ್ಷಿಸಿದ ವಿನು, ಈಕೆಯ ಪ್ರತಿಭೆಗೆ ನ್ಯಾಯ ಒದಗಿಸುವ ಕೆಲಸ ಮಾಡಿದರು. ನಿರ್ದೇಶಕರು ಅವರ ಪತ್ನಿ ಕರ್ಣ ಪೂ, ಸಿಲ್ಕ್‌ ಸ್ಮಿತಾಳಿಗೆ ನಟನೆ, ನೃತ್ಯ ಬಗ್ಗೆ ತರಬೇತಿ ನೀಡಿ ಪೂರ್ಣ ಕಲಾವಿದೆಯನ್ನಾಗಿ ಮಾಡಿದರು.4) ಸಿಲ್ಕ್ ಸ್ಮಿತಾ ಆದ ವಿಜಯಲಕ್ಷ್ಮಿ ವಡ್ಲಪಟ್ಲ 1981 ರ ತಮಿಳು ಸಿನಿಮಾ 'ವಂಡಿಚಕ್ಕರಂ'ನಲ್ಲಿ' ಸಿಲ್ಕ್ 'ಪಾತ್ರದಿಂದ ಮೊದಲು ಬಾರಿಗೆ ಗಮನ ಸೆಳೆದರು ವಿಜಯಲಕ್ಷ್ಮಿ ಉರ್ಫ್‌ ಸಿಲ್ಕ್‌. ಈ ಚಿತ್ರದಲ್ಲಿ ಸಿಲ್ಕ್ ಎಂಬ ಹುಡುಗಿಯ ಪಾತ್ರವನ್ನು ನಿರ್ವಹಿಸಿದರು. ಚಿತ್ರವು ದೊಡ್ಡ ಯಶಸ್ಸನ್ನು ಕಂಡಿತು. ಅಲ್ಲಿಂದ ವಿಜಯಕ್ಷ್ಮಿಯ ಲಕ್‌ ತಿರುಗಿತು ಮತ್ತು ಚಿತ್ರರಂಗದಲ್ಲಿ ಸಿಲ್ಕ್ ಸ್ಮಿತಾ ಅಂತಾನೇ ಫೇಮಸ್‌ ಆದರು.5) ಸೆಕ್ಸ್ ಸಿಂಬಲ್ ಆದ ಸಿಲ್ಕ್ ಸ್ಮಿತಾ ಹಸಿಬಿಸಿ ದೃಶ್ಯಗಳಲ್ಲಿ ನಟಿಸುವಲ್ಲಿ ಹೆಸರುವಾಸಿಯಾದ ಸ್ಮಿತಾ ಚಿತ್ರರಂಗದಲ್ಲಿ ಸೆಕ್ಸ್‌ ಸಿಂಬಲ್‌ ಆಗಿ ಪರಿವರ್ತನೆಯಾಗಲು ರಜನಿಕಾಂತ್‌ ಅವರ ಚಿತ್ರ ಮೂಂಡ್ರು ಮುಗಮ್ ಕಾರಣವಾಯಿತು. ಇಲ್ಲಿಂದ ಎಲ್ಲಾ ಚಿತ್ರದಲ್ಲೂ ‌ಸಿಲ್ಕ್‌ ಸ್ಮಿತಾ ಇರುವ ಐಟಂ ಹಾಡು ಇದ್ದೇ ಇರುತ್ತಿತ್ತು.6) ಕಡಿಮೆ ಸ್ನೇಹಿತರನ್ನು ಹೊಂದಿದ್ದ ಸಿಲ್ಕ್ ಸ್ಮಿತಾ ಅಂತರ್ಮುಖಿಯಾಗಿದ್ದ ಸಿಲ್ಕ್ ಸ್ಮಿತಾ ತುಂಬಾ ಕಡಿಮೆ ಆಪ್ತರನ್ನು ಹೊಂದಿದ್ದರು. ಯಾರೊಂದಿಗೂ ಬೇಗ ಸ್ನೇಹಿತೆಯಾಗುತ್ತಿರಲಿಲ್ಲ. ಆದಾಗ್ಯೂ, ಅವಳು ಆಗಾಗ್ಗೆ ತನ್ನ ಹಳೆಯ ಸ್ನೇಹಿತರೊಂದಿಗೆ ಸಮಯ ಕಳೆಯಲು ತಮ್ಮ ಬ್ಯುಸಿ ಶೆಡ್ಯೂಲ್‌ ನಲ್ಲೂ ಸಹ ಟೈಂ ನೀಡುತ್ತಿದ್ದರು.7) ಸಿಲ್ಕ್ ಸ್ಮಿತಾ ಜೊತೆ ಮೈಚಳಿ ಬಿಟ್ಟು ಕುಣಿದಿದ್ದ ಕಮಲ್ ಹಾಸನ್ ಸದ್ಮಾ ಚಿತ್ರದಲ್ಲಿನ ಓ ಬಾಬುವಾ ಯೇ ಮಹುವಾ ಹಾಡಿನಲ್ಲಿ ಸಿಲ್ಕ್ ಸ್ಮಿತಾ ಅವರೊಂದಿಗೆ ಕಮಲ್ ಹಾಸನ್ ಹೆಜ್ಜೆ ಹಾಕಿದ್ದರು. ಸಖತ್‌ ಫ್ಯಾಶನ್‌ ಸೆನ್ಸ್‌ ಹೊಂದಿದ್ದ ಸ್ಮಿತಾ ಅಭಿಯನಕ್ಕಾಗಿ ಎಲ್ಲವನ್ನೂ ಕಲಿಯುತ್ತಿದ್ದಳಂತೆ. ಸ್ಮಿತಾ ತಮ್ಮ ಜೀವನದ ಕೆಟ್ಟ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು ಎಂದು ಸ್ವತಹಃ ಕಮಲ್‌ ಹಾಸನ್‌ ಅವರೇ ಹೇಳಿದ್ದಾರೆ.8) ಬೇರೆ ಪಾತ್ರಗಳಲ್ಲೂ ಸೈ ಎನಿಸಿಕೊಂಡಿದ್ದ ಸಿಲ್ಕ್ ಸ್ಮಿತಾ ಬಿಕಿನಿ ತೊಟ್ಟ ಹಸಿಬಿಸಿ ದೃಶ್ಯಗಳ ಪಾತ್ರಗಳ ಹೊರತಾಗಿ, ಸಿಲ್ಕ್ ಸ್ಮಿತಾ ತಮ್ಮ ನಟನೆಯಿಂದ ಬೇರೆ ಪಾತ್ರಕ್ಕೂ ಜೀವ ತುಂಬುತ್ತಿದ್ದರು9) ಸಿಲ್ಕ್ ಸ್ಮಿತಾ ಸಿನಿ ಪಯಣ ಸಿಲ್ಕ್ ಸ್ಮಿತಾ ಅವರು ತಮ್ಮ ವೃತ್ತಿ ಜೀವನದಲ್ಲಿ ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ 450 ಚಿತ್ರಗಳಲ್ಲಿ ನಟಿಸಿದ್ದಾರೆ.10) ಖಿನ್ನತೆಯಿಂದ ಬಳಲುತ್ತಿದ್ದ ಸಿಲ್ಕ್ ಸ್ಮಿತಾ ಈ ನಟಿಯ ಸಾವಿನ ಹಿಂದಿನ ಕಾರಣ ಇನ್ನೂ ನಿಗೂಢವಾಗಿ ಉಳಿದರೂ, ಖಿನ್ನತೆಯಿಂದಾಗಿ ಆಕೆ ತನ್ನ ಜೀವವನ್ನು ತೆಗೆದುಕೊಂಡಳು ಎಂದು ಕೆಲವರು ಹೇಳುತ್ತಾರೆ. ತೆರೆ ಮೇಲೆ ಮಾತ್ರ ಮಿಂಚುತ್ತಿದ್ದ ನಟಿ ಕ್ರಮೇಣ ಮಂಕಾದಳು. ಆಕೆಯ ಮರಣೋತ್ತರ ಪರೀಕ್ಷೆಯ ವರದಿಯು ಅತಿಯಾದ ಮದ್ಯಪಾನದಿಂದ ಸಾವನ್ನಪ್ಪಿದ್ದಾಳೆ ಎಂದು ಹೇಳಿತ್ತು.
Published by:Ashwini Prabhu
First published: