Silk Smitha Birthday: ಆತ್ಮಹತ್ಯೆಗೂ ಮುನ್ನ ರವಿಚಂದ್ರನ್​ಗೆ ಕರೆ ಮಾಡಿದ್ದ ನಟಿ ಸಿಲ್ಕ್​ ಸ್ಮಿತಾ..!

Silk Smitha Birthday: ಹಳ್ಳಿ ಮೇಷ್ಟ್ರು ಸಿನಿಮಾದ ಮೂಲಕ ಪರಿಚವಾದ ರವಿಚಂದ್ರನ್​ ಹಾಗೂ ಸಿಲ್ಕ್​ ಸ್ಮಿತಾ ಅವರ ನಡುವೆ ಸ್ನೇಹ ಬೆಳೆದಿತ್ತು. ಇದರಿಂದಲೇ ಇರಬೇಕು ಆಗಾಗ ಅವರು ದೂರವಾಣಿಯಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಸ್ಮಿತಾ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಅಂದರೆ 1996 ಸೆ. 23 ರಂದು ಸ್ಮಿತಾ ರವಿಚಂದ್ರನ್​ ಅವರಿಗೆ ಕರೆ ಮಾಡಿದ್ದರಂತೆ.

ಸಿಲ್ಕ್​ ಸ್ಮಿತಾ ಹಾಗೂ ರವಿಚಂದ್ರನ್​

ಸಿಲ್ಕ್​ ಸ್ಮಿತಾ ಹಾಗೂ ರವಿಚಂದ್ರನ್​

  • Share this:
ಒಂದು ಕಾಲದಲ್ಲಿ ಕನ್ನಡ, ತೆಲುಗು ಸೇರಿದಂತೆ ಇಡೀ ದಕ್ಷಿಣದ ಸಿನಿರಂಗವನ್ನೇ ಆಳಿದ ನಟಿ ಸಿಲ್ಕ್​ ಸ್ಮಿತಾ. ಎಷ್ಟು ಬೇಗ ಯಶಸ್ಸಿನ ಉತ್ತುಂಗವೇರಿದರೋ ಅಷ್ಟೇ ವೇಗವಾಗಿ ನೆಲಕಚ್ಚಿದ ಸ್ಮಿತಾರ ಜೀವನ ಮೇಲೆ ಸಿನಿಮಾ ಸಹ ತೆಗೆಯಲಾಯಿತು. ಅದೇ ದರ್ಟಿ ಪಿಕ್ಚರ್​. ವಿದ್ಯಾಬಾಲನ್​ ನಟನೆಯ ಈ ಸಿನಿಮಾ ಸೂಪರ್ ಹಿಟ್​ ಆಯಿತು. 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಸಿಲ್ಕ್​ ಸ್ಮಿತಾ ಇದ್ದಕ್ಕಿದ್ದಂತೆ ಒಂದು ದಿನ ಆತ್ಮಹತ್ಯೆಗೆ ಶರಣಾದರು. ಅವರ ಈ ಸಾವಿನ ಸುದ್ದಿ ತಿಳಿದ ತಕ್ಷಣ ಇಡೀ ಸಿನಿ ರಂಗವೇ ಸಾವಿನ ಕಾರಣ ತಿಳಿಯದೆ ನೋವಿನಲ್ಲಿ ಮುಳುಗಿತ್ತು. ಬಡ ಕುಟುಂಬದಿಂದ ಬಂದಿದ್ದ ಸಿಲ್ಕ್​ ಸ್ಮಿತಾ ಬಯಸಿದ್ದು ನಾಯಕಿಯಾಗಬೇಕೆಂದು. ಆದರೆ ಆಗಿದ್ದು ಮಾತ್ರ...! ತೆಲುಗು, ಮಲಯಾಳಂ, ತಮಿಳು ಸೇರಿದಂತೆ ಕನ್ನಡದಲ್ಲೂ ಸ್ಮಿತಾ ನಟಿಸಿದ್ದರು. ಕನ್ನಡದಲ್ಲಿ ರವಿಚಂದ್ರನ್​ ಅವರೊಂದಿಗೆ ಹಳ್ಳಿ ಮೇಷ್ಟ್ರು ಸಿನಿಮಾದಲ್ಲಿ ಸಿಲ್ಕ್​ ನಟಿಸಿದ್ದರು. ಇದರಿಂದಾಗಿ ರವಿ ಹಾಗೂ ಸ್ಮಿತಾ ಮಧ್ಯೆ ಸ್ನೇಹ ಸಂಬಂಧ ಬೆಳೆದಿತ್ತು.

ಹಳ್ಳಿ ಮೇಷ್ಟ್ರು ಸಿನಿಮಾದ ಮೂಲಕ ಪರಿಚವಾದ ರವಿಚಂದ್ರನ್​ ಹಾಗೂ ಸಿಲ್ಕ್​ ಸ್ಮಿತಾ ಅವರ ನಡುವೆ ಸ್ನೇಹ ಬೆಳೆದಿತ್ತು. ಇದರಿಂದಲೇ ಇರಬೇಕು ಆಗಾಗ ಅವರು ದೂರವಾಣಿಯಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಸ್ಮಿತಾ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಅಂದರೆ 1996 ಸೆ. 23 ರಂದು ಸ್ಮಿತಾ ರವಿಚಂದ್ರನ್​ ಅವರಿಗೆ ಕರೆ ಮಾಡಿದ್ದರಂತೆ.

Silk Smitha Birthday, ರವಿಚಂದ್ರನ್​, ಸಿಲ್ಕ್​ ಸ್ಮಿತಾ, Ravichandran, silk smitha, silk smitha suicide,silk smitha death secrets,silk smitha death story,silk smitha suicide,silk smitha movies,silk smitha ravichandran,silk smitha ravichandran movies,silk smitha songs,silk smitha video songs,silk smitha interview, Kannada News, ಸಿಲ್ಕ್​ ಸ್ಮಿತಾ ಸಾವು, ಸಿಲ್ಕ್​ ಸ್ಮಿತಾ ಆತ್ಮಹತ್ಯೆ, ರವಿಚಂದ್ರನ್​ಗೆ ಕರೆ ಮಾಡಿದ್ದ ಸಿಲ್ಕ್​ ಸ್ಮಿತಾ
ಸಿಲ್ಕ್​ ಸ್ಮಿತಾ


ಆದರೆ, ಅಂದು ರವಿಚಂದ್ರನ್​ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಕಾರಣ ಆಗ ತೆಗೆಯಲಾಗಲಿಲ್ಲ. ನಂತರ ಕರೆ ಮಾಡಲು ಯತ್ನಿಸಿದರೂ ನೆಟ್​ವರ್ಕ್​ ಸಮಸ್ಯೆಯಿಂದ ಕರೆ ತಾಗಲಿಲ್ಲ. ಅಂದು ಆ ಕರೆಯನ್ನು ರಿಸೀವ್​ ಮಾಡಿದಿದ್ದರೆ ಪರಿಸ್ಥಿತಿ ಬೇರೆಯಾಗಿರುತ್ತಿತ್ತೇನೋ ಎಂದು ರವಿಮಾಮ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಇದನ್ನೂ ಓದಿ: Happy Birthday Ayra: ಹುಟ್ಟುಹಬ್ಬದ ಸಂಭ್ರಮದಲ್ಲಿ ಆಯ್ರಾ: ನೀನು ಮಗುವಾಗಿಯೇ ಇರು ಕಂದ ಎಂದ ರಾಧಿಕಾ ಪಂಡಿತ್​

ಸ್ಮಿತಾ ಬಗ್ಗೆ ನೆನಸಿಕೊಂಡಾಗಲೆಲ್ಲ ಅವರ ಸಾವು ನನ್ನನ್ನು ಕಾಡುತ್ತದೆ. ಆಕೆ ಎಂದರೆ ಇಷ್ಟಪಡವರು ಸಿನಿ ರಂಗದಲ್ಲಿ ಸಾಕಷ್ಟು ಮಂದಿ ಇದ್ದರು. ಕಾರಣ, ಆಕೆಗಿದ್ದ ಸಿಟ್ಟು. ಆದರೆ ಸ್ಮಿತಾ ಎದುರಿನವರಿಂದ ಬಯಸುತ್ತಿದ್ದದ್ದು ಕೇವಲ ಗೌರವ ಹಾಗೂ ಪ್ರೀತಿ. ನಾನು ಅವರನ್ನು ಗೌರವದಿಂದ ಕಾಣುತ್ತಿದ್ದೆ. ಇದೇ ಕಾರಣಕ್ಕೆ ಇರಬೇಕು ನಮ್ಮಿಬ್ಬರ ನಡುವೆ ಸ್ನೇಹ ಬೆಳೆಯಲು ಕಾರಣವಾಗಿದ್ದು. ಅವರು ನನ್ನೊಂದಿಗೆ ಅಷ್ಟು ಆತ್ಮೀಯವಾಗಿದ್ದರು. ಅದಕ್ಕೆ, ಸಾವಿನ ಮುನ್ನ ಅವರು ನನಗೆ ಕರೆ ಮಾಡಿದ್ದು ಎಂದಿದ್ದಾರೆ ರವಿಚಂದ್ರನ್​.
Published by:Anitha E
First published: