SIIMA 2022 Award: ಬೆಂಗಳೂರಲ್ಲಿ ಅದ್ಧೂರಿ ಸೈಮಾ ಅವಾರ್ಡ್​; ಅನೇಕರಿಗೆ ಪ್ರಶಸ್ತಿ ವಿತರಣೆ

ಸೈಮಾ 2022

ಸೈಮಾ 2022

 ಪುನೀತ್ ರಾಜ್​ಕುಮಾರ್​ ಅಭಿನಯಿಸಿದ್ದ ಯುವರತ್ನ ಚಿತ್ರದ ನೀನಾದೇನಾ ಹಾಡಿಗೆ ಗಾಯಕ ಅರ್ಮಾನ್ ಮಲೀಕ್ ಗೆ ಸೈಮಾ ಪ್ರಶಸ್ತಿ ದೊರಕಿದೆ. ಈ ಪ್ರಶಸ್ತಿಯನ್ನು ಅವರು ಅಪ್ಪು ಅವರಿಗೆ ಡೆಡಿಕೇಟ್​ ಮಾಡಿದ್ದಾರೆ.

  • Share this:

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೈಮಾ 2022 (SIIMA) ಪ್ರಶಸ್ತಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಚಿತ್ರರಂಗದ ವಿವಿಧ ವಿಭಾಗದಲ್ಲಿ ಪ್ರಶಸ್ತಿ ನೀಡಲಾಗಿದೆ. ಬೆಂಗಳೂರಿನ ಪ್ಯಾಲೇಸ್ ​ಗ್ರೌಂಡ್ (Bengaluru Palace Ground)​ನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಹಲವು ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿದ್ದಾರೆ. ಕಳೆದ ವರ್ಷ ನಿಧನ ಹೊಂದಿದ ಪುನೀತ್​ ರಾಜ್​ಕುಮಾರ್ (Puneeth Rajkumar) ಅವರಿಗೆ ಇಂದಿನ ಕಾರ್ಯಕ್ರಮದಲ್ಲಿ ವಿಶೇಷ ಗೌರವ ಸಲ್ಲಿಕೆ ಮಾಡಲಾಗಿದೆ. 


ಪ್ರಶಸ್ತಿ ಬಾಚಿಕೊಂಡ ಹಲವು ಸಿನಿಮಾ


2021ರಲ್ಲಿ ತೆರೆಗೆ ಬಂದ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳನ್ನು ನಾನಾ ವಿಭಾಗಗಳಲ್ಲಿ ನಾಮಿನೇಷನ್ ಮಾಡಲಾಗಿತ್ತು. ಆ ಪೈಕಿ ಹಲವು ಸಿನಿಮಾಗಳು ಪ್ರಶಸ್ತಿ ಬಾಚಿಕೊಂಡಿವೆ.


19 ವಿಭಾಗಗಳಿಗೆ ಪ್ರಶಸ್ತಿ


ಸೌತ್ ಇಂಡಿಯನ್ ಇಂಟರ್​ನ್ಯಾಷನಲ್​ ಮೂವಿ ಅವಾರ್ಡ್ಸ್​ ಇದು ಸೈಮಾದ ವಿಸ್ತಾರ ರೂಪ. ಇದು ಆರಂಭಗೊಂಡಿದ್ದು 2012ರಲ್ಲಿ. ಹೀಗಾಗಿ, ಸೈಮಾ ಈ ಬಾರಿ 10 ವರ್ಷದ ಸಂಭ್ರಮಾಚರಣೆಯಲ್ಲಿ ಇದೆ. ಈ ಕಾರಣಕ್ಕೂ ಸೈಮಾ ಕಾರ್ಯಕ್ರಮ ವಿಶೇಷವಾಗಿದೆ. ಪ್ರತಿ ಭಾಷೆಯಲ್ಲಿ ಸುಮಾರು 19 ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ.


2021ರಲ್ಲಿ ತರುಣ್ ಸುಧಿರ್ ನಿರ್ದೇಶನದ ‘ರಾಬರ್ಟ್​’ ಸಿನಿಮಾ ತೆರೆಗೆ ಬಂತು. ಸುಧಾಕರ್ ರಾಜ್ ಅವರು ಈ ಚಿತ್ರದ ಸಿನಿಮಾಟೋಗ್ರಫಿಗೆ ‘ಬೆಸ್ಟ್ ಸಿನಿಮಾಟೋಗ್ರಫಿ’ (ಕನ್ನಡ) ಪ್ರಶಸ್ತಿ ಪಡೆದುಕೊಂಡಿದ್ದಾರೆ.



‘ನಿನ್ನ ಸನಿಹಕೆ’ ಸಿನಿಮಾದ ‘ನೀ ಪರಿಚಯ..’ ಹಾಡಿಗೆ ವಾಸುಕಿ ವೈಭವ್ ‘ಅತ್ಯುತ್ತಮ ಗೀತ ರಚನಕಾರ’ (ಕನ್ನಡ) ಪ್ರಶಸ್ತಿ ಬಾಚಿಕೊಂಡಿದ್ದಾರೆ.



ಪುನೀತ್ ರಾಜ್​ಕುಮಾರ್​ ಅಭಿನಯಿಸಿದ್ದ ಯುವರತ್ನ ಚಿತ್ರದ ನೀನಾದೇನಾ ಹಾಡಿಗೆ ಗಾಯಕ ಅರ್ಮಾನ್ ಮಲೀಕ್ ಗೆ ಸೈಮಾ ಪ್ರಶಸ್ತಿ ದೊರಕಿದೆ. ಈ ಪ್ರಶಸ್ತಿಯನ್ನು ಅವರು ಅಪ್ಪು ಅವರಿಗೆ ಡೆಡಿಕೇಟ್​ ಮಾಡಿದ್ದಾರೆ.



ಇದನ್ನೂ ಓದಿ: Pruthvi Ambaar: ಕನ್ನಡಿಗರ ದಿಲ್ ಕದ್ದ ದಿಯಾ ಮರಾಠಿಯಲ್ಲೂ ಬಹುತೇಕ ಪೂರ್ಣ: ನಾಯಕ ನಟ ಪೃಥ್ವಿ ಅಂಬರ್ ಏನ್ ಹೇಳ್ತಾರೆ?


ಮೊದಲ ದಿನದ ಕಾರ್ಯಕ್ರಮದಲ್ಲಿ ಹಲವು ಸ್ಟಾರ್​ಗಳ ಸಮಾಗಮ ಆಗಿದೆ. ‘ಕೆಜಿಎಫ್ 2’ ಮೂಲಕ ವಿಶ್ವ ಮಟ್ಟದಲ್ಲಿ ಹೆಸರು ಮಾಡಿದ ಯಶ್ . ‘ಪುಷ್ಪ’ ಹೀರೋ ಅಲ್ಲು ಅರ್ಜುನ್ , ತೆಲುಗು ನಟ ಆಲಿ ಕುಟುಂಬ, ಶುಭ್ರಾ ಅಯ್ಯಪ್ಪ, ಸೋನು ಗೌಡ , ಲಾಸ್ಯ ನಾಗರಾಜ್ , ಕಾವ್ಯ ಶಾ, ಆಕುಲ್ ಬಾಲಾಜಿ , ನಿಧಿ ಸುಬ್ಬಯ್ಯ ಅರ್ಜುನ್ ಜನ್ಯ ಪೂರ್ಣಿಮ ರಾಮ್ ಕುಮಾರ್ ಸೇರಿದಂತೆ ಹಲವು ನಟನಟಿಯರು ಆಗಮಿಸಿದ್ದಾರೆ.

First published: