Sidney Poitier: ಆಸ್ಕರ್​ ವಿಜೇತ ಮೊದಲ ಕಪ್ಪುವರ್ಣೀಯ ನಟ ಸಿಡ್ನಿ ಪೊಯ್ಟಿಯರ್‌ ವಿಧಿವಶ

2022ರ ಆರಂಭದಲ್ಲೇ ಸಿನಿಮಾ ಜಗತ್ತಿಗೆ ಕಹಿ ಸುದ್ದಿ ಕೇಳಿಬಂದಿದೆ..‘ಲಿಲೀಸ್ ಆಫ್ ದಿ ಫೀಲ್ಡ್‌’(Lilies of the Field) ಚಿತ್ರದ ಪಾತ್ರ ನಿರ್ವಹಣೆಗಾಗಿ ಅತ್ಯುತ್ತಮ ನಟ(Best Actor) ಪ್ರಶಸ್ತಿ ಪಡೆದ ಸಿಡ್ನಿ ಪೊಯ್ಟಿಯರ್(Sidney Poitier) ಕೊನೆಯುಸಿರೆಳೆದಿದ್ದಾರೆ. 94 ವರ್ಷದ ಆಸ್ಕರ್‌ ವಿಜೇತ(Oscar winner) ಮೊದಲ ಕಪ್ಪುವರ್ಣೀಯ ಬಹಮಿಯನ್‌-ಅಮೆರಿಕನ್‌ ನಟ ಸಿಡ್ನಿ ಪೊಯ್ಟಿಯರ್‌ ನಿಧನರಾಗಿದ್ದಾರೆ.

ಸಿಡ್ನಿ ಪೊಯ್ಟಿಯರ್‌ ಇನ್ನಿಲ್ಲ

ಸಿಡ್ನಿ ಪೊಯ್ಟಿಯರ್‌ ಇನ್ನಿಲ್ಲ

  • Share this:


2022ರ ಆರಂಭದಲ್ಲೇ ಸಿನಿಮಾ ಜಗತ್ತಿಗೆ ಕಹಿ ಸುದ್ದಿ ಕೇಳಿಬಂದಿದೆ..‘ಲಿಲೀಸ್ ಆಫ್ ದಿ ಫೀಲ್ಡ್‌’(Lilies of the Field) ಚಿತ್ರದ ಪಾತ್ರ ನಿರ್ವಹಣೆಗಾಗಿ ಅತ್ಯುತ್ತಮ ನಟ(Best Actor) ಪ್ರಶಸ್ತಿ ಪಡೆದ ಸಿಡ್ನಿ ಪೊಯ್ಟಿಯರ್(Sidney Poitier) ಕೊನೆಯುಸಿರೆಳೆದಿದ್ದಾರೆ. 94 ವರ್ಷದ ಆಸ್ಕರ್‌ ವಿಜೇತ(Oscar winner) ಮೊದಲ ಕಪ್ಪುವರ್ಣೀಯ ಬಹಮಿಯನ್‌-ಅಮೆರಿಕನ್‌ ನಟ ಸಿಡ್ನಿ ಪೊಯ್ಟಿಯರ್‌ ನಿಧನರಾಗಿದ್ದಾರೆ.  ಜನಾಂಗೀಯ ಅಡೆತಡೆಗಳನ್ನು ಮೆಟ್ಟಿನಿಂತು ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಕಪ್ಪು ವರ್ಣೀಯ ಕಲಾವಿದ(The First Black Chromatic Artist) ಸಿಡ್ನಿ ಪೊಯ್ಟಿಯರ್. ನಾಗರಿಕ ಹಕ್ಕುಗಳ ಚಳವಳಿಯ ಸಮಯದಲ್ಲಿ ಒಂದು ಪೀಳಿಗೆಗೆ ಸ್ಫೂರ್ತಿ ನೀಡಿದ ಕಲಾವಿದರೂ ಅವರಾಗಿದ್ದರು. ಅವರ ನಿಧನದ ಕುರಿತು ಬಹಮಿಯನ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ಮಾಹಿತಿ ನೀಡಿದೆ. 1963ರಲ್ಲಿ ʻಲಿಲೀಸ್ ಆಫ್ ದಿ ಫೀಲ್ಡ್ʼ ಚಲನಚಿತ್ರ ತೆರೆಕಂಡು ದೊಡ್ಡ ಮೈಲಿಗಲ್ಲನ್ನೇ ಸೃಷ್ಟಿಸಿತು. ಸಿನಿಮಾದಲ್ಲಿ ಸಿಡ್ನಿ ಅವರ ಅತ್ಯುತ್ತಮ ನಟನೆಗೆ ಆಸ್ಕರ್‌ ಒಲಿಯಿತು. ಸಿನಿಮಾರಂಗದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ಮೊದಲ ಕಪ್ಪು ವರ್ಣೀಯ ಎಂಬುದು ಮತ್ತೊಂದು ಇತಿಹಾಸ ನಿರ್ಮಿಸಿತ್ತು. ಅಮೆರಿಕಾ(America)ದ ಹೆಚ್ಚಿನ ಭಾಗಗಳಲ್ಲಿ ಪ್ರತ್ಯೇಕತೆಯು ಚಾಲ್ತಿಯಲ್ಲಿದ್ದ ಸಮಯದಲ್ಲಿ ಪೊಯ್ಟಿಯರ್ ತಮ್ಮ ಮೂರು ಚಲನಚಿತ್ರಗಳೊಂದಿಗೆ ಒಂದೇ ವರ್ಷದಲ್ಲಿ ವಿಶಿಷ್ಟವಾದ ಸಿನಿಮಾ ಪರಂಪರೆಗೆ ನಾಂದಿಹಾಡಿದರು. ಪೊಯ್ಟಿಯರ್‌ ಒಬ್ಬ ಐಕಾನ್‌, ಹೀರೋ, ಮಾರ್ಗದರ್ಶಕ, ಹೋರಾಟಗಾರ, ನಿರ್ದೇಶಕ ಎಂದು ಬಹಮಿಯನ್‌ ಉಪ ಪ್ರಧಾನಿ ಚೆಸ್ಟರ್‌ ಕೂಪರ್‌ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ.

1927ರ ಫೆಬ್ರವರಿ 20ರಂದು ಸಿಡ್ನಿ ಪೊಯ್ಟಿಯರ್‌ ಜನನ!

1927ರ ಫೆಬ್ರವರಿ 20ರಂದು ಜನಿಸಿದರು. ಬಹಾಮಾಸ್​ನ ಟೊಮೆಟೊ ಫಾರ್ಮ್​ನಲ್ಲಿ ಬೆಳೆದರು. ಕೇವಲ ಒಂದು ವರ್ಷದ ಔಪಚಾರಿಕ ಶಾಲಾ ಶಿಕ್ಷಣವನ್ನು ಹೊಂದಿದ್ದ ಪೊಯ್ಟಿಯರ್, ನಂತರ ಬಡತನ, ಅನಕ್ಷರತೆ ಮತ್ತು ಪೂರ್ವಾಗ್ರಹದ ವಿರುದ್ಧ ಹೋರಾಡಿದರು. ನಂತರದಲ್ಲಿ ಮುಖ್ಯವಾಹಿನಿಯ ಚಿತ್ರಗಳಲ್ಲಿ ಕಾಣಿಸಿಕೊಂಡ ಅವರು  ಪ್ರಮುಖ ಪಾತ್ರಗಳಲ್ಲಿ ನಟಿಸಿ ಆ ಕಾಲದಲ್ಲಿ ಮೆಚ್ಚುಗೆ ಪಡೆದ ಕಪ್ಪು ವರ್ಣದ ಕೆಲವೇ ನಟರಲ್ಲಿ ಒಬ್ಬರಾಗಿದ್ದರು..ಸಿಡ್ನಿ ಪೊಯ್ಟಿಯರ್ ಮಿಯಾಮಿಯಲ್ಲಿ
2009 ರಲ್ಲಿ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾರಿಂದ ಪೊಯ್ಟಿಯರ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ‘ಪ್ರೆಸಿಡೆನ್ಶಿಯಲ್ ಮೆಡಲ್ ಆಫ್ ಫ್ರೀಡಮ್’ ಪ್ರದಾನ ಮಾಡಲಾಗಿತ್ತು. ಪೊಯ್ಟಿಯರ್ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ.

ಇದನ್ನು ಓದಿ: ಕ್ರಿಕೆಟ್ ಪ್ಲೆಯರ್‌ ಆಗ್ತಿದ್ದಾರಂತೆ ವಿರಾಟ್​ ಪತ್ನಿ! ಸೂಪರ್​ ಕಮ್‌ ಬ್ಯಾಕ್‌ ಎಂದ ಫ್ಯಾನ್ಸ್..

ಜನಾಂಗೀಯವಾದದ ಕುರಿತು ಬೆಳಕು ಚೆಲ್ಲಿದ್ದ ಸಿನಿಮಾಗಳು

‘ಗೆಸ್ ಹು ಈಸ್ ಕಮಿಂಗ್ ಟು ಡಿನ್ನರ್‌’, ‘ಹೀಟ್ ಆಫ್ ದಿ ನೈಟ್‌’, ‘ಟು ಸರ್, ವಿತ್ ಲವ್’ ಚಿತ್ರಗಳು ಜನಾಂಗೀಯವಾದದ ಕುರಿತು ಬೆಳಕು ಚೆಲ್ಲಿದ್ದವು. 1963 ರಲ್ಲಿ ‘ಲಿಲೀಸ್ ಆಫ್ ದಿ ಫೀಲ್ಡ್’ ಚಿತ್ರದ ನಟನೆಗಾಗಿ ಪೊಯ್ಟಿಯರ್ ಆಸ್ಕರ್ ಪಡೆದು ಇತಿಹಾಸ ನಿರ್ಮಿಸಿದರು. ಆ ಚಿತ್ರದಲ್ಲಿ ಜರ್ಮನ್ ಸನ್ಯಾಸಿನಿಯರು ಮರುಭೂಮಿಯಲ್ಲಿ ಪ್ರಾರ್ಥನಾ ಮಂದಿರವನ್ನು ನಿರ್ಮಿಸಲು ಸಹಾಯ ಮಾಡುವ ಸಹಾಯಕನ ಪಾತ್ರದಲ್ಲಿ ಪೊಯ್ಟಿಯರ್ ನಟಿಸಿದ್ದರು.  ಮುಖ್ಯವಾಹಿನಿಯ ಚಿತ್ರಗಳಲ್ಲಿ ಕಾಣಿಸಿಕೊಂಡ ಅವರು  ಪ್ರಮುಖ ಪಾತ್ರಗಳಲ್ಲಿ ನಟಿಸಿ ಆ ಕಾಲದಲ್ಲಿ ಎಲ್ಲರಿಂದ ಮೆಚ್ಚುಗೆ ಪಡೆದ ಕಪ್ಪು ವರ್ಣದ ಕೆಲವೇ ನಟರಲ್ಲಿ ಒಬ್ಬರಾಗಿದ್ದರು.

ಇದನ್ನು ಓದಿ : ರಾಕಿಂಗ್​ ಸ್ಟಾರ್​ ಬರ್ತ್​ಡೇಗೆ KGF 2 ಹೊಸ ಪೋಸ್ಟರ್​ ರಿಲೀಸ್​: ಮನೆಯಲ್ಲೇ ಸಿಂಪಲ್​ ಸೆಲೆಬ್ರೇಷನ್ ಮಾಡಿದ ಯಶ್​!

ಹಾಲಿವುಡ್​ ನಿರ್ದೇಶಕ ಪೀಟರ್​ ಬಾಗ್ಡಾನವಿಚ್ ನಿಧನ

ಆಸ್ಕರ್​ ಪ್ರಶಸ್ತಿ ಪುರಸ್ಕೃತ ಲೆಜೆಂಡರಿ ನಿರ್ದೇಶಕ ಪೀಟರ್​ ಬಾಗ್ಡಾನವಿಚ್ ಅವರು ನಿಧನರಾಗಿದ್ದಾರೆ. ಜನವರಿ 6ರಂದಯ ಇಹಲೋಕ ತ್ಯಜಿಸಿದ ಅವರಿಗೆ 82 ವರ್ಷ ವಯಸ್ಸಾಗಿತ್ತು. ಹಲವಾರು ಜನಪ್ರಿಯ ಹಾಲಿವುಡ್​ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ಪೀಟರ್​ ಬಾಗ್ಡಾನವಿಚ್ ಅವರು ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿದ್ದರು. ಅನೇಕ ನಿರ್ದೇಶಕರಿಗೆ ಅವರು ಸ್ಫೂರ್ತಿ ಆಗಿದ್ದರು. ಸಿನಿಮಾ ನಿರ್ದೇಶಕ ಆಗುವುದಕ್ಕೂ ಮುನ್ನ ಅವರು ವಿಮರ್ಶಕನಾಗಿ ಫೇಮಸ್​ ಆಗಿದ್ದರು. ಗೋಲ್ಡನ್​ ಗ್ಲೋಬ್​, ಆಸ್ಕರ್​, ಗ್ರ್ಯಾಮಿ ಅವಾರ್ಡ್​ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಅವರು ಪಡೆದುಕೊಂಡಿದ್ದರು.

Published by:Vasudeva M
First published: