Sidharth Shukla ಮಾಡಿದ ಕೊನೆಯ ಇನ್​ಸ್ಟಾಗ್ರಾಮ್‌ ಪೋಸ್ಟ್‌ ವೈರಲ್: ನಟನ ಅಕಾಲಿಕ ಮರಣಕ್ಕೆ ಅಭಿಮಾನಿಗಳು ಶಾಕ್!

ಸಿದ್ದಾರ್ಥ್ ಶುಕ್ಲಾ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಕೂಪರ್ ಆಸ್ಪತ್ರೆಯ ಪ್ರಾಥಮಿಕ ವೈದ್ಯಕೀಯ ವರದಿ ತಿಳಿಸಿದೆ. “ನಿಧನ ಹೊಂದಿದ್ದ ಕೆಲವು ಹೊತ್ತಿನ ಬಳಿಕ ಅವರನ್ನು ಆಸ್ಪತ್ರೆಗೆ ತರಲಾಗಿತ್ತು” ಎಂದು ಆಸ್ಪತ್ರೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Sidharth Shuklas- ಸಿದ್ದಾರ್ಥ್ ಶುಕ್ಲಾ

Sidharth Shuklas- ಸಿದ್ದಾರ್ಥ್ ಶುಕ್ಲಾ

  • Share this:

Sidharth Shukla: ಕಿರುತೆರೆ ಮತ್ತು ಸಿನಿಮಾ ನಟ ಸಿದ್ದಾರ್ಥ್ ಶುಕ್ಲಾ ಅವರ ಅಚಾನಕ್ ಮತ್ತು ಅಕಾಲಿಕ ನಿಧನಕ್ಕೆ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಶಾಕ್ ಆಗಿದ್ದಾರೆ.ಇಷ್ಟು ಬೇಗ ಇಹಲೋಕ ತ್ಯಜಿಸಿದ ಸಿದ್ದಾರ್ಥ್ ಅವರಿಗೆ, ಶ್ರದ್ಧಾಂಜಲಿ ಸಲ್ಲಿಸಿರುವ ಮತ್ತು ಶೋಕ ಸಂದೇಶಗಳ ಮಹಾ ಪೂರವೇ ಸಾಮಾಜಿಕ ಮಾಧ್ಯಮದಲ್ಲಿ ಹರಿದು ಬರುತ್ತಿದೆ. ಸಿದ್ದಾರ್ಥ್ ಶುಕ್ಲಾ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಕೂಪರ್ ಆಸ್ಪತ್ರೆಯ ಪ್ರಾಥಮಿಕ ವೈದ್ಯಕೀಯ ವರದಿ ತಿಳಿಸಿದೆ. “ನಿಧನ ಹೊಂದಿದ್ದ ಕೆಲವು ಹೊತ್ತಿನ ಬಳಿಕ ಅವರನ್ನು ಆಸ್ಪತ್ರೆಗೆ ತರಲಾಗಿತ್ತು” ಎಂದು ಆಸ್ಪತ್ರೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.


ಕಾಕತಾಳೀಯವೆಂದರೆ, ಸಿದ್ದಾರ್ಥ್ ಅವರ ಕೊನೆಯ ಇನ್‍ಸ್ಟಾಗ್ರಾಂ ಪೋಸ್ಟ್ ಕೂಡ ಆಸ್ಪತ್ರೆಯ ಸಿಬ್ಬಂದಿಗೆ ಗೌರವ ಸಲ್ಲಿಸಿದ್ದಾಗಿತ್ತು. ಅವರು ಮಾಡಿದ್ದ ಆ ಕೊನೆಯ ಇನ್‍ಸ್ಟಾಗ್ರಾಂ ಪೋಸ್ಟ್‌ನಲ್ಲಿ ಹೀಗೆ ಬರೆಯಲಾಗಿದೆ: ಎಲ್ಲಾ ಮುಂಚೂಣಿಯ ಕೆಲಸಗಾರರಿಗೆ ನನ್ನ ಹೃದಯಪೂರ್ವಕ ವಂದನೆಗಳು. ನೀವು ನಿಮ್ಮ ಜೀವವನ್ನು ಪಣಕ್ಕಿಡುತ್ತೀರಿ, ಅಗಣಿತ ಅವಧಿಗಳ ಕಾಲ ಕೆಲಸ ಮಾಡುತ್ತೀರಿ ಮತ್ತು ತಮ್ಮ ಕುಟುಂಬ ಜೊತೆ ಇರಲಾಗದ ರೋಗಿಗಳಿಗೆ ನೆಮ್ಮದಿ ನೀಡುತ್ತೀರಿ. ನೀವು ನಿಜವಾಗಿಯೂ ಎಲ್ಲರಿಗಿಂತ ಧೈರ್ಯಶಾಲಿಗಳು! ಮುಂಚೂಣಿಯಲ್ಲಿ ಕೆಲಸ ಮಾಡುವುದು ಸುಲಭವಲ್ಲ, ಆದರೆ ನಾವು ನಿಜಕ್ಕೂ ನಿಮ್ಮ ಪ್ರಯತ್ನಗಳನ್ನು ಪ್ರಶಂಸಿಸುತ್ತೇವೆ.#MumbaiDiariesOnPrimeವೈಟ್ ಹ್ಯಾಟ್ ಶುಶ್ರೂಷಾ ಸಿಬ್ಬಂದಿ ಮತ್ತು ಅವರ ಅಸಂಖ್ಯ ತ್ಯಾಗಗಳಿಗೆ ಸಲ್ಲಿಸುವ ಒಂದು ಗೌರವವಾಗಿದೆ. ಆಗಸ್ಟ್ 25 ರಂದು ಅದರ ಟ್ರೈಲರ್ ಬಿಡುಗಡೆ ಆಯಿತು.#TheHeroesWeOwe.


Drug case: ಡ್ರಗ್ ಕೇಸ್​ ವಿಚಾರಣೆಗೆ ಸಂಬಂಧಿಸಿದಂತೆ ಹೈದರಾಬಾದ್​ನಲ್ಲಿ ಕಾಣಿಸಿಕೊಂಡ ನಟಿ ರಾಕುಲ್ ಪ್ರೀತ್!

ಸಿದ್ದಾರ್ಥ್ ಶುಕ್ಲಾ , ಮನರಂಜನಾ ಪ್ರಪಂಚದಲ್ಲಿ ಒಬ್ಬ ಮಾಡೆಲ್ ಆಗಿ ವೃತ್ತಿಜೀವನ ಆರಂಭಿಸಿದರು. ಬಳಿಕ ‘ಬಾಬುಲ್ ಕಾ ಆಂಗನ್ ಚೂಟೇನಾ’ ಎಂಬ ಧಾರಾವಾಹಿಯ ಮೂಲಕ ಪ್ರಥಮ ಬಾರಿಗೆ ಕಿರುತೆರೆಯಲ್ಲಿ ಬಣ್ಣ ಹಚ್ಚಿದರು. ಅದಾದ ನಂತರ ‘ಜಾನೆ ಪೆಹಚಾನೆ ಸೇ.. ಅಜ್‍ನಬಿ’ , ‘ಲವ್ ಯು ಜಿಂದಗಿ’ ಶೋ ನಲ್ಲೂ ಕಾಣಿಸಿಕೊಂಡರು. ಆದರೆ ಅವರಿಗೆ ಯಶಸ್ಸು ಮತ್ತು ಅಪಾರ ಅಭಿಮಾನಿ ಬಳಗವನ್ನು ಹುಟ್ಟು ಹಾಕಿದ್ದು ‘ಬಾಲಿಕಾ ವಧು’ ಧಾರಾವಾಹಿಯಲ್ಲಿ ನಿರ್ವಹಿಸಿದ ಪಾತ್ರ.Flipkart sale: ರಿಯಲ್​ಮಿ ಸ್ಮಾರ್ಟ್​ಫೋನ್​ ಖರೀದಿಸುವವರಿಗೆ ಒಂದೊಳ್ಳೆ ಅವಕಾಶ… 8 ಸಾವಿರದಷ್ಟು ರಿಯಾಯಿತಿ!

ಅವರ ‘ದಿಲ್ ಸೆ ದಿಲ್ ತಕ್’ ಧಾರಾವಾಹಿ ಕೂಡ ಅಪಾರ ಜನಮನ್ನಣೆ ಗಳಿಸಿತ್ತು. ಸಿದ್ದಾರ್ಥ್ ಶುಕ್ಲಾ, ‘ಝಲಕ್ ದಿಕ್‍ಲಾಜಾ 6’, ‘ಫಿಯರ್ ಫ್ಯಾಕ್ಟರ್: ಖತ್‍ರೋಂಕಾ ಖಿಲಾಡಿ 7’ ಮತ್ತು ‘ಬಿಗ್ ಬಾಸ್ 13’ನಂತಹ ರಿಯಾಲಿಟಿ ಕಾರ್ಯಕ್ರಮಗಳಲ್ಲಿ ಸಿದ್ದಾರ್ಥ್ ಮಿಂಚಿದ್ದರು. ‘ಬಿಗ್ ಬಾಸ್ 13’ ಶೋ ಗೆದ್ದ ಬಳಿಕ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿತ್ತು.


ಅವರು ಕರಣ್ ಜೋಹರ್ ನಿರ್ಮಾಣದ “ಹಮ್ಟಿ ಶರ್ಮಾ ಕಿ ದುಲ್ಹನಿಯಾ” ಚಿತ್ರದಲ್ಲಿ ಪೋಷಕ ಪಾತ್ರವೊಂದನ್ನು ನಿರ್ವಹಿಸುವ ಮೂಲಕ ಬಾಲಿವುಡ್‍ಗೆ ಪಾದಾರ್ಪಣೆ ಮಾಡಿದ್ದರು.

First published: