Sidharth Shukla Funeral: ಇಂದು ನಡೆಯಲಿದೆ ನಟ ಸಿದ್ಧಾರ್ಥ್​ ಶುಕ್ಲಾ ಅಂತ್ಯ ಸಂಸ್ಕಾರ

ನಿನ್ನೆ ಸಂಜೆಯೇ ಸಿದ್ಧಾರ್ಥ್​ ಶುಕ್ಲಾ ಅವರ ಅಂತಿಮ ಸಂಸ್ಕಾರ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಪೊಲೀಸರ ತನಿಖೆ ಹಾಗೂ ಮರಣೋತ್ತರ ಪರೀಕ್ಷೆಯಿಂದಾಗಿ ತಡವಾಗಿದೆ. ಅದಕ್ಕೆ ಇಂದು ಮೃತ ದೇಹ ಸಿಕ್ಕ ನಂತರ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ.

ಸಿದ್ಧಾರ್ಥ್​ ಶುಕ್ಲಾ

ಸಿದ್ಧಾರ್ಥ್​ ಶುಕ್ಲಾ

  • Share this:
ಬಾಲಿವುಡ್​ನ ಯುವ ನಟ ಹಾಗೂ ಕಿರುತೆರೆಯ ಸೆನ್ಸೆಷನ್​ ಎಂದೇ ಕರೆಯಲಾಗುತ್ತಿದ್ದ ಸಿದ್ಧಾರ್ಥ್​ ಶುಕ್ಲಾ (Sidharth Shukla) ಅವರು ನಿನ್ನೆ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ಬಾಲಿಕಾ ವಧು ಧಾರಾವಾಹಿಯಲ್ಲಿ ನಾಯಕಿಯ ಎರಡನೇ ಪತಿಯಾಗಿ ಅಭಿನಯಿಸಿ ಮನೆ ಮಾತಾಗಿದ್ದರು. ನಂತರದಲ್ಲಿ ಬೇರೆ ಧಾರಾವಾಹಿಗಳು, ಮಾಡೆಲಿಂಗ್​, ವೆಬ್​ ಸರಣಿ, ಆಲ್ಬಂ ಹಾಡುಗಳು ಹೀಗೆ  ಬಣ್ಣದ ಲೋಕದಲ್ಲಿ ಸಕ್ರಿಯವಾಗಿದ್ದರು. ಅಲ್ಲದೆ ಬಿಗ್ ಬಾಸ್ ಸೀಸನ್​ 13ರಲ್ಲಿ (Bigg Boss Season 13) ಸ್ಪರ್ಧಿಯಾಗಿ ವಿನ್ನರ್ ಸಹ ಆಗಿದ್ದರು. ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ 40 ವರ್ಷದ  ಸಿದ್ಧಾರ್ಥ್ ಶುಕ್ಲಾ ಅವರು  ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ನಿನ್ನೆ ಅವರನ್ನು ಮುಂಜಾನೆ ಕೂಪರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಆಸ್ಪತ್ರೆಗೆ ಬರುವ ಮುನ್ನವೇ ಸಾವನ್ನಪ್ಪಿದ್ದರು ಎಂದು ಆಸ್ಪತ್ರೆಯ ಮೂಲಗಳಿಂದ ತಿಳಿದು ಬಂದಿದೆ. ಇನ್ನು ಒಂದು ಮುಂಬೈನಲ್ಲೇ ಸಿದ್ಧಾರ್ಥ್​ ಶುಕ್ಲಾ ಅವರ ಅಂತ್ಯಕ್ರಿಯೆ (Sidharth Shukla Final Rites) ನಡೆಯಲಿದೆ. 

ಮಗ ಸಿದ್ಧಾರ್ಥ್​ ಶುಕ್ಲಾ ಅವರ ಅಕಾಲಿಕ ನಿಧನದಿಂದ ತಾಯಿ ರೀತಾ ಶುಕ್ಲಾ (Rita Shukla) ಅವರಿಗೆ ದೊಡ್ಡ ಆಘಾತವಾಗಿದೆ. ನಿನ್ನೆಯೇ ಸಿದ್ಧಾರ್ಥ್​ ಶುಕ್ಲಾ ಅವರ ಮರಣೋತ್ತರ ಪರೀಕ್ಷೆ ಕೂಪರ್ ಆಸ್ಪತ್ರೆಯಲ್ಲಿ ಆಗಿದೆ. ಇಂದು ಅವರ ಅಂತಿಮ ಸಂಸ್ಕಾರ ನಡೆಯಲಿದೆ. ಬೆಳಿಗ್ಗೆ 11ಕ್ಕೆ ಸಿದ್ಧಾರ್ಥ್​ ಕುಟುಂಬದವರಿಗೆ ಸಿದ್ಧಾರ್ಥ್​ ಅವರ ದೇಹವನ್ನು ನೀಡಲಾಗುತ್ತದೆ.

big boss
ತಾಯಿಯೊಂದಿಗೆ ಸಿದ್ದಾರ್ಥ್​ ಶುಕ್ಲಾ.


ನಿನ್ನೆ ಸಂಜೆಯೇ ಸಿದ್ಧಾರ್ಥ್​ ಶುಕ್ಲಾ ಅವರ ಅಂತಿಮ ಸಂಸ್ಕಾರ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಪೊಲೀಸರ ತನಿಖೆ ಹಾಗೂ ಮರಣೋತ್ತರ ಪರೀಕ್ಷೆಯಿಂದಾಗಿ ತಡವಾಗಿದೆ. ಅದಕ್ಕೆ ಇಂದು ಮೃತ ದೇಹ ಸಿಕ್ಕ ನಂತರ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ.

ಇದನ್ನೂ ಓದಿ: Vaishnavi Gowda: ರೇಷ್ಮೆ ಸೀರೆಯುಟ್ಟು ಮಹಾಲಕ್ಷ್ಮಿಯಂತೆ ಕಂಗೊಳಿಸಿದ ಬಿಗ್ ಬಾಸ್​ ಖ್ಯಾತಿಯ ರೇಷ್ಮಕ್ಕ!

ಅಂತಿಮ ಸಂಸ್ಕಾರಕ್ಕೂ ಮೊದಲು ಬ್ರಹ್ಮಕುಮಾರಿ ಆಶ್ರಮದಲ್ಲಿ ಪೂಜೆ ನಡೆಯಲಿದೆಯಂತೆ. ಆಸ್ಪತ್ರೆಯಿಂದ ನೇರವಾಗಿ ಜುಹೂವಿನಲ್ಲಿರುವ ಬ್ರಹ್ಮಕುಮಾರಿ ಕಚೇರಿಗೆ ತೆಗೆದುಕೊಂಡು ಹೋಗಲಾಗುತ್ತದೆಯಂತೆ. ಅಲ್ಲಿ ಅವರ ಆತ್ಮ ಶಾಂತಿಗಾಗಿ ಪೂಜೆ ನಡೆಯಲಿದೆ. ನಂತರ ಅಲ್ಲಿಂದ ಪಾರ್ಥೀವ ಶರೀರವನ್ನು ಮನೆಗೆ ತೆಗೆದುಕೊಂಡು ಹೋಗಲಾಗುತ್ತದೆಯಂತೆ. ರೀತಾ ಅವರು ತುಂಬಾ ಸಮಯದಿಂದ ಬ್ರಹ್ಮಕುಮಾರಿ ಸಂಸ್ಥಾನದ ಜೊತೆ ಸಂಬಂಧ ಹೊಂದಿದ್ದಾರೆ. ಇದೇ ಕಾರಣದಿಂದ ಕಳೆದ ಕೆಲ ಸಮಯದಿಂದ ಸಿದ್ಧಾರ್ಥ್​ ಶುಕ್ಲಾ ಸಹ ಬ್ರಹ್ಮಕುಮಾರಿ ಸಂಸ್ಥಾನದ ಜೊತೆ ಸಂಬಂಧ ಬೆಳೆಸಿಕೊಂಡಿದ್ದರು. ಇನ್ನು ಇಂದು ಪೊಲೀಸರು ಈ ಘಟನೆ ಸಂಬಂಧ ಅಧಿಕೃತ ಹೇಳಿಕೆ ಬಿಡುಗಡೆ ಮಾಡಲಿದ್ದಾರೆ.

ಘಟನೆಯ ವಿವರ

ಪೊಲೀಸ್​ ಮಾಹಿತಿ ಪ್ರಕಾರ, ಎಂದಿನಂತೆ ಊಟ ಮಾಡಿ ಮಲಗಿದ್ದ ಸಿದ್ಧಾರ್ಥ್​ ಶುಕ್ಲಾ ಗುರುವಾರ ಬೆಳಗಿನ ಜಾವ 3- 30.30ರ ಸುಮಾರಿಗೆ ಎದ್ದಿದ್ದಾರೆ. ಈ ವೇಳೆ ತಮ್ಮ ದೇಹದಲ್ಲಿ ಏನೋ ಒಂದು ರೀತಿ ಸಂಕಟ ಅನುಭವಿಸಿದ್ದು, ತಕ್ಷಣಕ್ಕೆ ಈ ಬಗ್ಗೆ ತಾಯಿಗೆ ತಿಳಿಸಿದ್ದಾರೆ. ಏನೋ ಒಂದು ರೀತಿ ಸಂಕಟದ ಜೊತೆ ಹೃದಯದ ನೋವಾಗುಇತ್ತಿದ್ದ ಹಿನ್ನಲೆ ತಾಯಿ ನೀರು ಕುಡಿಸಿ ಮಲಗಿಸಿದ್ದಾರೆ. ಹೀಗೆ ಮಲಗಿದ ಶುಕ್ಲಾ ಸಂಪೂರ್ಣವಾಗಿ ಚಿರ ನಿದ್ರೆಗೆ ಜಾರಿದ್ದರು. ತಾಯಿ ಎಷ್ಟೇ ಎಚ್ಚರಿಸಿದ್ದರೂ ಎಚ್ಚರಗೊಳ್ಳಲಿಲ್ಲ. ಈ ವೇಳೆ ಆತಂಕಕ್ಕೆ ಒಳಗಾದ ಶುಕ್ಲಾ ತಾಯಿ ಮಗಳಿಗೆ ಕರೆ ಮಾಡಿದ್ದಾರೆ. ಬಳಿಕ ವೈದ್ಯರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: Kichcha Sudeep Birthday: ಅಕುಲ್ ಬಾಲಾಜಿಗೆ ಮೇಕಪ್​ ಮಾಡಿದ ಕಿಚ್ಚ ಸುದೀಪ್​..!

ಬೆಳಗ್ಗೆ ಸುಮಾರು 9.40ರ ಸುಮಾರಿಗೆ ಸಿದ್ದಾರ್ಥ್​ ಕರೆದುಕೊಂಡು ಕೂಪರ್​ ಆಸ್ಪತ್ರೆಗೆ ಬರಲಾಗಿದೆ. 10.15ಕ್ಕೆ ಆತನ ಸಾವನ್ನು ವೈದ್ಯರು ಖಚಿತ ಪಡಿಸಿದ್ದಾರೆ. ಆತನ ದೇಹವನ್ನು ಕನಿಷ್ಠ ಪಕ್ಷ ಎರಡು ಮೂರು ಬಾರಿ ತುರ್ತು ಘಟಕದಲ್ಲಿ ಪರೀಕ್ಷೆ ನಡೆಸಲಾಗಿದೆ. ಈ ವೇಳೆ ಆತನ ದೇಹದ ಮೇಲೆ ಯಾವುದೇ ಬಾಹ್ಯ ಗಾಯ ಆಗಲಿ, ಕಲೆಯಾಗಲಿ ಕಂಡು ಬಂದಿಲ್ಲ.

ಮರಣೋತ್ತರ ಪರೀಕ್ಷೆ

ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಬಳಿಕ ಮತ್ತೊಬ್ಬ ಹಿಂದಿ ನಟ ಚಿಕ್ಕ ವಯಸ್ಸಿಗೆ ಚಿರ ನಿದ್ರೆಗೆ ಜಾರಿತ್ತು. ಈ ಸಾವಿನ ಬಗ್ಗೆ ಕೂಡ ಸಾಕಷ್ಟು ಅನುಮಾನ ವ್ಯಕ್ತವಾದವು. ಇದೇ ಹಿನ್ನಲೆ ಸಿದ್ದಾರ್ಥ್​ ಶುಕ್ಲಾ ಮರಣೊತ್ತರ ಪರೀಕ್ಷೆಯನ್ನು ಹೆಚ್ಚಿನ ಜಾಗರುಕತೆಯಲ್ಲಿ ನಿರ್ವಹಿಸಲಾಗಿದೆ. 3. 45ಕ್ಕೆ ಮರಣೋತ್ತರ ಪರೀಕ್ಷೆಗೆ ಮುಂದಾಗಲಾಗಿದ್ದು, ಇದರ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಅಷ್ಟೇ ಅಲ್ಲದೇ, ಈ ವೇಳೆ ಇಬ್ಬರು ಪೊಲೀಸರು ಕೂಡ ಹಾಕರಿದ್ದರು.

ಪೋಷಕರ ಹೇಳಿಕೆ ದಾಖಲು
ಇನ್ನು ಸಿದ್ದಾರ್ಥ್​ ಶುಕ್ಲಾ ಸಾವಿನ ಕುರಿತು ಅವರ ಕುಟುಂಬಸ್ಥರು ಯಾವುದೇ ಅನುಮಾನ ವ್ಯಕ್ತಪಡಿಸಿಲ್ಲ. ಆದರೂ ಕೂಡ ಈ ಸಂಬಂಧ ಅವರ ಕುಟುಂಬಸ್ಥರ ಎಲ್ಲಾ ಹೇಳಿಕೆಗಳನ್ನು ಪೊಲೀಸರು ಸಂಪೂರ್ಣವಾಗಿ ದಾಖಲು ಮಾಡಿದ್ದಾರೆ.
Published by:Anitha E
First published: