ಸಿದ್ಧಾರ್ಥ್ ಶುಕ್ಲಾ ಸಾವಿಗೆ ಸಂತಾಪ ಸೂಚಿಸಿದ WWE ಸೂಪರ್ ಸ್ಟಾರ್ ಜಾನ್ ಸೀನಾ

John Cena: ಜಾನ್​ ಸೀನಾ ಅನೇಕ ಅಭಿಮಾನಿಗಳು ಹೊಂದಿರುವ ಸೂಪರ್​​ ಸ್ಟಾರ್​. ಭಾರತದಲ್ಲಿ ಜಾನ್​ ಸೀನಾರನ್ನು ಇಷ್ಟಪಡುವ  ಅಭಿಮಾನಿಗಳಿದ್ದಾರೆ. ಜಾನ್​ ಸೀನಾ ಕೂಡ ಭಾರತೀಯರನ್ನು ಅಷ್ಟೇ ಇಷ್ಟ ಪಡುತ್ತಾರೆ. ಅದರಂತೆ ನಟ ಸಿದ್ಧಾರ್ಥ್​​ ಅವರ ಸಾವಿನ ವಿಚಾರ ತಿಳಿದಂತೆ ತಮ್ಮ ಇನ್​ಸ್ಟಾ ಖಾತೆ ಅವರ ಫೋಟೋ ಪೋಸ್ಟ್​ ಮಾಡಿದ್ದಾರೆ. ಇದನ್ನು ಕಂಡ ಬಾರತೀಯರು ಭಾವುಕರಾಗಿದ್ದಾರೆ.

John Cena- Sidharth Shukla

John Cena- Sidharth Shukla

 • Share this:
  ಬಾಲಿವುಡ್​ ನಟ, ಬಿಗ್​ ಬಾಸ್​ ಸೀಸನ್​ 13ರ ವಿನ್ನರ್​ ಸಿದ್ಧಾರ್ಥ್​ ಶುಕ್ಲಾ ಸೆಪ್ಟೆಂಬರ್ 2 ರಂದು ಹೃದಯಾಘಾತದಿಂದ ನಿಧನರಾದರು.  ಇವರ ಅಕಾಲಿಕ ಸಾವು ಸಿನಿ ತಾರೆಯರಿಗೆ ನೋವುಂಟು ಮಾಡಿತ್ತಲ್ಲದೆ. ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸಿತು. ಬಿಗ್​ ಬಾಸ್​ 13ರ ವೇದಿಕೆಯ ಮೇಲೆ ಎಲ್ಲರ ಮುಂದೆ ಗಮನ ಸೆಳೆದಿದ್ದ ಮತ್ತು ಅನೇಕ ಅಭಿಮಾನಿಗಳ ಮನಸ್ಸನ್ನು ಗೆದ್ದ ಈ ನಟನ ಸಾವು ಯಾರಿಗೂ ಊಸಿಸಲಾಗಲಿಲ್ಲ. ಅನೇಕರು ಇವರ ಸಾವಿಗೆ ಕಂಬನಿ ಮಿಡಿದಿದ್ದಾರೆ. ಭಾರತೀಯರು ಮಾತ್ರವಲ್ಲ ವಿದೇಶಿಗರು ಕೂಡ ಈ ನಟನನ್ನು ಸ್ಮರಿಸಿಕೊಂಡಿದ್ದಾರೆ. ಅದರಲ್ಲೂ ಖ್ಯಾತ WWE ಸೂಪರ್​ ಸ್ಟಾರ್​ ಜಾನ್​ ಸೀನಾ ಕೂಡ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಸಿದ್ಧಾರ್ಥ್ ಫೋಟೋವನ್ನು ಪೋಸ್ಟ್​ ಮಾಡುವ ಮೂಲಕ ನಟ ಸಾವಿಗೆ ಸಂತಾಪ ಸೂಚಿಸಿದ್ದಾರೆ.

  ಜಾನ್​ ಸೀನಾ ಅನೇಕ ಅಭಿಮಾನಿಗಳು ಹೊಂದಿರುವ ಸೂಪರ್​​ ಸ್ಟಾರ್​. ಭಾರತದಲ್ಲಿ ಜಾನ್​ ಸೀನಾರನ್ನು ಇಷ್ಟಪಡುವ  ಅಭಿಮಾನಿಗಳಿದ್ದಾರೆ. ಜಾನ್​ ಸೀನಾ ಕೂಡ ಭಾರತೀಯರನ್ನು ಅಷ್ಟೇ ಇಷ್ಟ ಪಡುತ್ತಾರೆ. ಅದರಂತೆ ನಟ ಸಿದ್ಧಾರ್ಥ್​​ ಅವರ ಸಾವಿನ ವಿಚಾರ ತಿಳಿದಂತೆ ತಮ್ಮ ಇನ್​ಸ್ಟಾ ಖಾತೆ ಅವರ ಫೋಟೋ ಪೋಸ್ಟ್​ ಮಾಡಿದ್ದಾರೆ. ಇದನ್ನು ಕಂಡ ಬಾರತೀಯರು ಭಾವುಕರಾಗಿದ್ದಾರೆ.

  ಸಿದ್ಧಾರ್ಥ್​ ಶುಕ್ಲಾ ಅವರ ಸಾವಿಗೆ ಸಂತಾಪ ಸೂಚಿಸಿದ ಜಾನ್​ ಸೀನಾಗೆ ಅನೇಕರು ಧನ್ಯವಾದ ಸಮರ್ಪಿಸಿದ್ದಾರೆ. ನೀವು ಶ್ರೇಷ್ಟ ವ್ಯಕ್ತಿಯೆಂದು ಹಾಡಿ ಹೊಗಳಿದ್ದಾರೆ.


  View this post on Instagram


  A post shared by John Cena (@johncena)


  ಜಾನ್​ ಸೀನಾ ಈ ಹಿಂದೆ ರಿಷಿ ಕಪೂರ್​ ಸಾವನ್ನಪ್ಪಿದಾಗಲೂ ಕೂಡ ಅವರ ಫೋಟೋ ಹಂಚಿಕೊಳ್ಳುವ ಮೂಲಕ ಸಂತಾಪ ಸೂಚಿಸಿದ್ದರು.

  ಇನ್ನು ಸಿದ್ಧಾರ್ಥ ಶುಕ್ಲಾ ಸೆಪ್ಟೆಂಬರ್ 2 ರಂದು ಬೆಳಗ್ಗಿನ ಜಾವ ನಿಧರಾಗಿದ್ದಾರೆ.  ಅದಕ್ಕೂ ಮೊದಲು ಮಧ್ಯರಾತ್ರಿ ತಾಯಿಯ ಬಳಿ ಮಾತನಾಡಿದ್ದರಂತೆ, ನೀರು ತರಿಸಿಕೊಂಡು ಮಲಗಿದ್ದರಂತೆ. ಆದರೆ ಬೆಳಗ್ಗೆ ಎದ್ದು ನೋಡಿದಾಗ ಸಿದ್ಧಾರ್ಥ್​ ಸಾವನ್ನಪ್ಪಿದ್ದಾರೆ. ಕೂಡಲೇ ಅವರ ಮನೆಯವರು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅದಕ್ಕೂ ಮೊದಲು ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.

  ಸಿದ್ಧಾರ್ಥ್ ಮತ್ತು ಶೆಹನಾಜ್​​ ಇಬ್ಬರು ಸ್ನೇಹಿತರು. ಬಿಗ್​ ಬಾಸ್​ ವೇದಿಕೆಯ ಮೇಲೆ ಈ ಜೋಡಿ ಹವಾ ಸೃಷ್ಠಿಸಿದ್ದರು. ಮಾತ್ರವಲ್ಲದೆ ಎಲ್ಲರೂ ಇವರನ್ನು ಗುರುತಿಸುವಂತೆ ಮಾಡಿದ್ದರು. ಶೆಹನಾಜ್​ಗೆ ಸಿದ್ಧಾರ್ಥ್​ ಎಂದರೆ ತುಂಬಾ ಪ್ರೀತಿ. ಆದರೆ ಸಿದ್ಧಾರ್ಥ್​ ಸಾವಿನ ಸುದ್ದಿ ಕೇಲಿ ಕಂಗಾಲಾಗಿದ್ದರು.  ಸೆಪ್ಟೆಂಬರ್​ 3 ರಂದು  ಸ್ನೇಹಿತರು, ಕುಟುಂಬಸ್ಥರು ಸಮ್ಮುಖದಲ್ಲಿ ಸಿದ್ಧಾರ್ಥ್​ ಅಂತ್ಯಕ್ರಿಯೆ ನಡೆದಿದೆ.
  Published by:Harshith AS
  First published: