ಬಾಲಿವುಡ್ ನಲ್ಲಿ (Bollywood) ಇತ್ತೀಚಿನ ಕೆಲವು ವರ್ಷಗಳಲ್ಲಿ ಅನೇಕ ಸ್ಟಾರ್ ನಟ-ನಟಿಯರು ಪ್ರೀತಿಸಿ ಒಬ್ಬರನ್ನೊಬ್ಬರು ಇಷ್ಟಪಟ್ಟು ಮದುವೆಯಾಗಿರುವುದನ್ನು ನಾವು ನೋಡಿದ್ದೇವೆ. ಹೌದು. ನಟಿ ಕತ್ರೀನಾ ಕೈಫ್
(Katrina Kaif) ಮತ್ತು ನಟ ವಿಕ್ಕಿ ಕೌಶಲ್, ನಟಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್, ಈ ಹಿಂದೆ ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್ ಮದುವೆಗಳನ್ನು ನಾವು ನೋಡಿದ್ದೆವು. ಈಗ ಮತ್ತೊಂದು ಸ್ಟಾರ್ ಜೋಡಿ ಮದುವೆಯಾಗಲು ಹೊರಟಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ನೀವು ಹಿಂದಿ ಚಲನಚಿತ್ರ ‘ಶೇರ್ ಷಾ’ (Sher Shah) ವನ್ನು ನೋಡಿದ್ದರೆ, ಅದರಲ್ಲಿ ನಟಿಸಿದ್ದ ಇಬ್ಬರು ಸುಂದರ ನಟ ಮತ್ತು ನಟಿಯ ಮುಖ ನಿಮಗೆ ಇನ್ನೂ ನೆನಪಿರುತ್ತದೆ.
ಹೌದು.. ಆ ಚಿತ್ರದ ನಟಿ ಕಿಯಾರಾ ಅಡ್ವಾಣಿ (Kiara advani) ಮತ್ತು ನಟ ಸಿದ್ದಾರ್ಥ್ ಮಲ್ಹೋತ್ರಾ (Sidharth Malhotra) ಅವರು ಮದುವೆಯಾಗಲಿರುವ ಜೋಡಿ ಅಂತ ಹೇಳಬಹುದು.
ನಟಿ ಕಿಯಾರಾ ಮತ್ತು ನಟ ಸಿದ್ದಾರ್ಥ್ ಮದ್ವೆಯಂತೆ!
ಕೆಲವು ದಿನಗಳ ಹಿಂದೆಯಷ್ಟೆ ನಟಿ ಕಿಯಾರಾ ಅವರು ಡಿಸೆಂಬರ್ ತಿಂಗಳಿನಲ್ಲಿ ವಿಶೇಷವಾದದ್ದನ್ನು ಘೋಷಿಸುವುದಾಗಿ ಹೇಳಿ ತಮ್ಮ ಅಭಿಮಾನಿಗಳು ಮತ್ತು ಫಾಲೋವರ್ ಗಳಲ್ಲಿ ಕುತೂಹಲವನ್ನು ಮೂಡಿಸಿದ್ದರು.
ಈ ಸಂದರ್ಭದಲ್ಲಿ ನಟಿಯು ಅದಾಗಲೇ ಅವರೊಂದಿಗೆ ಬಹು ಚರ್ಚಿತವಾಗಿದ್ದ ಪ್ರಿಯಕರ ಸಿದ್ಧಾರ್ಥನೊಂದಿಗೆ ಮದುವೆ ಮಾಡಿಕೊಳ್ಳಬಹುದೆಂದು ಅವರ ಅಭಿಮಾನಿಗಳು ಊಹಿಸಿದ್ದರು.
ಈ ಊಹೆಯಂತೆಯೇ ‘ಶೇರ್ ಷಾ’ ಚಿತ್ರದ ನಾಯಕ ನಟ-ನಟಿಯರು ಇದೀಗ ಮದುವೆಯಾಗಲು ಯೋಜಿಸುತ್ತಿದ್ದಾರೆ ಎಂಬ ವರದಿಗಳು ಹರಿದಾಡುತ್ತಿದ್ದು, ಅಭಿಮಾನಿಗಳ ಊಹಾಪೋಹಗಳನ್ನು ಇನ್ನಷ್ಟು ಬಲಪಡಿಸಿವೆ ಎಂದು ಹೇಳಬಹುದು.
ನಟಿ ಕಿಯಾರಾ ಮತ್ತು ನಟ ಸಿದ್ಧಾರ್ಥ್ ಕೆಲವು ಸಮಯದಿಂದ ಡೇಟಿಂಗ್ ಮಾಡುತ್ತಿದ್ದು, ಈ ಜೋಡಿಯು ತಮ್ಮ ಸಂಬಂಧವನ್ನು ಈಗಾಗಲೇ ಅನೇಕ ಕಡೆಗಳಲ್ಲಿ ಖಚಿತಪಡಿಸಿದ್ದಾರೆ.
ಒಂದೊಮ್ಮೆ ಸಿದ್ಧಾರ್ಥ್ ಬಾಲಿವುಡ್ ನ ಜನಪ್ರಿಯ ನಿರ್ಮಾಪಕರಾದ ಕರಣ್ ಜೋಹರ್ ಅವರ ‘ಕಾಫಿ ವಿತ್ ಕರಣ್’ ಶೋ ನಲ್ಲಿಯೂ ಸಹ ಮದುವೆಯಾಗುವ ಬಗ್ಗೆ ಸುಳಿವು ನೀಡಿದ್ದರು.
ಇದನ್ನೂ ಓದಿ: Ram Gopal Varma-Ashu Reddy: ಆಶು ರೆಡ್ಡಿಗೆ ಫೂಟ್ ಮಸಾಜ್ ಕೊಟ್ಟ ಆರ್ಜಿವಿ ಟ್ರೋಲ್
ನಟಿ ಕಿಯಾರಾ ಮತ್ತು ನಟ ಸಿದ್ಧಾರ್ಥ್ ಮಲ್ಹೋತ್ರಾ ಬಹುಶಃ ಈಗ ಬಾಲಿವುಡ್ ನ ಬಹುಬೇಡಿಕೆಯ ನಟರು ಅಂತಾ ಹೇಳಿದರೆ ತಪ್ಪಾಗುವುದಿಲ್ಲ. ಅವರು ತಮ್ಮ ಸಂಬಂಧದ ಬಗ್ಗೆ ಹೇಳಿಕೊಂಡರೂ ಸಹ ಅವರ ಮದುವೆ ಯಾವಾಗ ಅಂತ ಎಲ್ಲಿಯೂ ತುಟಿ ಬಿಚ್ಚಿಲ್ಲ.
ಆದರೆ ಸುದ್ದಿ ಮಾಧ್ಯಮದಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳೆಲ್ಲವು ಶೀಘ್ರದಲ್ಲಿಯೇ ಈ ಇಬ್ಬರು ಮದುವೆಯಾಗಲಿದ್ದಾರೆ ಎಂದು ಹೇಳುತ್ತಿವೆ.
ಈ ಸ್ಟಾರ್ ಜೋಡಿಯ ಮದ್ವೆ ಎಲ್ಲಿ ನಡೆಯಲಿದೆ ಗೊತ್ತೇ?
ನಟಿ ಕಿಯಾರಾ ಮತ್ತು ನಟ ಸಿದ್ಧಾರ್ಥ್ ಶೀಘ್ರದಲ್ಲಿಯೇ ಮದುವೆಯಾಗಲಿದ್ದಾರೆ ಎಂದು ಫಿಲ್ಮ್ಫೇರ್ ತಿಳಿಸಿದೆ. ಮೂಲಗಳ ಪ್ರಕಾರ, ಇವರ ಮದುವೆ ಚಂಡೀಘಡ್ ದಲ್ಲಿ ನಡೆಯಲಿದೆ ಎಂದು ದೃಢಪಟ್ಟಿದೆ.
ಈ ಹಿಂದೆ ಇವರಿಬ್ಬರ ಮದುವೆ ಗೋವಾದಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿತ್ತು. ಆದಾಗ್ಯೂ, ಸಿದ್ಧಾರ್ಥ್ ಅವರ ಪಂಜಾಬಿ ಕುಟುಂಬವನ್ನು ಗಮನದಲ್ಲಿಟ್ಟುಕೊಂಡು ದಂಪತಿಗಳು ಚಂಡೀಘಡ್ ಅನ್ನು ಆರಿಸಿಕೊಂಡಂತೆ ಕಾಣುತ್ತಿದೆ.
ರಾಜ್ಕುಮಾರ್ ರಾವ್ ಮತ್ತು ಪತ್ರಲೇಖಾ ಅವರು ಮದುವೆಯಾದ ಚಂಡೀಗಢದ ರೆಸಾರ್ಟ್ ಅನ್ನು ಸಹ ಈ ಜೋಡಿ ಈಗಾಗಲೇ ಸಂಪರ್ಕಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Prabhas-Rishab Shetty: ವಿಶ್ ಮಾಡೋಕೆ ಕಾಲ್ ಮಾಡಿದ್ರೆ ಇಂಟ್ರೆಸ್ಟ್ ತೋರಿಸ್ಲಿಲ್ಲ ಪ್ರಭಾಸ್! ರಿಷಬ್ ಏನಂದ್ರು?
‘ಶೆರ್ ಷಾ’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಈ ನಟರ ಮಧ್ಯೆ ಪ್ರೀತಿ ಹುಟ್ಟಿದೆ ಅಂತ ಹೇಳಲಾಗುತ್ತಿದೆ. ಈ ಚಿತ್ರಕ್ಕೆ ಅಭಿಮಾನಿಗಳಿಂದ ಉತ್ತಮವಾದ ಪ್ರತಿಕ್ರಿಯೆ ಸಹ ಸಿಕ್ಕಿತು. ಅಭಿಮಾನಿಗಳು ಸಹ ಇವರ ಜೋಡಿಯನ್ನು ತುಂಬಾನೇ ಮೆಚ್ಚಿಕೊಂಡರು.
ಇನ್ನೂ ಕೆಲಸದ ವಿಷಯಕ್ಕೆ ಬಂದರೆ, ನಟಿ ಕಿಯಾರಾ ಅಡ್ವಾಣಿ ಶೀಘ್ರದಲ್ಲಿಯೇ ‘ಗೋವಿಂದ ನಾಮ್ ಮೇರಾ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರು ತಮ್ಮ ಒಟಿಟಿ ಚೊಚ್ಚಲ ‘ಇಂಡಿಯನ್ ಪೊಲೀಸ್ ಫೋರ್ಸ್’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ