Aditya Sasikumar: ಹಳ್ಳಿಯ ಪ್ರೇಮ ಕಥೆ ಹೇಳಹೊರಟ್ಟಿದ್ದಾರೆ ಸಿದ್ಧಾರ್ಥ್ ಮರಡೆಪ್ಪ, ಚಿತ್ರದ ಟೈಟಲ್​ ಅನೌನ್ಸ್

ಸ್ಯಾಂಡಲ್​ವುಡ್​ನ (Sandalwood) ಹಿರಿಯ ನಟ ಶಶಿಕುಮಾರ್ (Sasikumar) ಅವರ ಪುತ್ರ ಆದಿತ್ಯ ಶಶಿಕುಮಾರ್ (Aditya Sasikumar) ಅವರ ಚಿಚ್ಚಲ ಸಿನಿಮಾದ ಟೈಟಲ್ ಘೋಷಣೆ ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸ್ಯಾಂಡಲ್​ವುಡ್​ನ (Sandalwood) ಹಿರಿಯ ನಟ ಶಶಿಕುಮಾರ್ (Sasikumar) ಅವರ ಪುತ್ರ ಆದಿತ್ಯ ಶಶಿಕುಮಾರ್ (Aditya Sasikumar) ಅವರ ಚಿಚ್ಚಲ ಸಿನಿಮಾದ ಟೈಟಲ್ ಘೋಷಣೆ ಆಗಿದೆ. 'ಜಯ ಜಯ ಜಾನಕಿರಾಮ' (Jaya Jaya Jjanakirama) ಎಂಬ ಚಿತ್ರದ ಮೂಲಕ ಆದಿತ್ಯ ಶಶಿಕುಮಾರ್ ಕನ್ನಡ ಚಿತ್ರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಇಂದು ಚಿತ್ರದ ಟೈಟಲ್ ಘೊಷಣೆಆಗಿದ್ದು, ಚಿತ್ರ ಶೂಟಿಂಗ್ ಆರಂಭವಾಗಿದೆ. ಇನ್ನು, ಕೇವಲ ನಟನ ಜೊತೆ ನಿರ್ದೇಶಕ ಸಿದ್ಧಾರ್ಥ್ ಮರಡೆಪ್ಪ ಅವರೂ ಸಹ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಹೀಗಾಗಿ ಚಿತ್ರದ ಮೇಲೆ ನಿರೀಕ್ಷೆಯಿದ್ದು, ಇನ್ನಷ್ಟೇ ಚಿತ್ರೀಕರಣ ಪ್ರಾರಂಭವಾಗಿದೆ. ಇನ್ನು, ಚಿತ್ರಕ್ಕೆ ವಿಕ್ಟರಿ 2, ಕೃಷ್ಣ ಟಾಕೀಸ್ ಚಿತ್ರದಲ್ಲಿ ನಟಿಸಿರುವ ನಟಿ ಅಪೂರ್ವ ಹಾಗೂ ನಾಯಕ ನಟಿಯಾಗಿ ಅಭಿನಯಿಸುತ್ತಿದ್ದಾರೆ. ಹೊಸಬರ ತಂಡವೇ ಸೇರಿಕೊಂಡು ಮಾಡುತ್ತಿರುವ ಈ ಚಿತ್ರದ ಮೇಲೆ ಬಹಳಷ್ಟು ನಿರೀಕ್ಷೆಗಳಿದೆ.

ಸಿದ್ಧಾರ್ಥ್ ಮರಡೆಪ್ಪ ಅವರ ಚೊಚ್ಚಲ ಚಿತ್ರ:

ಮೂಲತಃ ಉತ್ತರ ಕರ್ನಾಟಕದವರಾದ ನಿರ್ದೇಶಕ ಸಿದ್ಧಾರ್ಥ್ ಮರಡೆಪ್ಪ ಅವರಿಗೆ ಇದು ಮೊದಲ ಚಿತ್ರವಾಗಿದೆ. ಆದರೆ ಸ್ಯಾಂಡಲ್​ವುಡ್ ಇವರಿಗೆ ತೀರಾ ಹಳೆಯದಾಗಿದೆ. ಹೌದು, ಇವರು ಅನೇಕ ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರೀಯರಾಗಿ ತೊಡಗಿಕೊಂಡಿದ್ದಾರೆ. ಮೈನಾ, ಮಾಸ್ತಿಗುಡಿ, ದೃಶ್ಯ 1 ಸೇರಿದಂತೆ ಅನೇಕ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಮಾಡಿರುವ ಅನುಭವವಿದೆ. ಈ ಎಲ್ಲಾ ಅನುಭವಗಳನ್ನು ಸೇರಿಸಿಕೊಂಡು ಇದೀಗ ತಮ್ಮದೇ ನಿರ್ದೇಶನದಲ್ಲಿ ಮೊದಲ ಬಾರಿಗೆ ಚಿತ್ರವನ್ನು ಮಾಡುತ್ತಿದ್ದಾರೆ. ಅವರ ಚೊಚ್ಚಲ ಚಿತ್ರಕ್ಕೆ ಜಯ ಜಯ ಜಾನಕಿರಾಮ ಎಂದು ಟೈಟಲ್​ ಫೈನಲ್ ಆಗಿದೆ.

ಜಾನಕಿರಾಮ ಪ್ರೇಮಕತೆ:

ಇನ್ನು, ಜಯ ಜಯ ಜಾನಕಿರಾಮ ಚಿತ್ರವು ಒಂದು ಪಕ್ಕಾ ಹಳ್ಳಿಯ ಸೊಗಡಿನಿಂದ ಕೂಡಿರುತ್ತದೆ ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ. ಸುಮದರ ಹಳ್ಳಿಯ ಒಂದು ನವಿರಾದ ಪ್ರೇಮಕಥೆಯನ್ನು ನಿರ್ದೇಶಕರು ಹೆಣದಿದ್ದು, ಹಳ್ಳಿಯ ಹದಿಹರೆಯದವರ ಪ್ರೇಮಕಥೆಯ ಸುತ್ತ ಚಿತ್ರ ಸುತ್ತುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Major: ‘ಮೇಜರ್‘ OTT ರಿಲೀಸ್ ಡೇಟ್​ ಅನೌನ್ಸ್, ಕಣ್ತುಂಬಿಕೊಳ್ಳಿ ಸಂದೀಪ್ ಉನ್ನಿಕೃಷ್ಣನ್ ಬಯೋಪಿಕ್

ಹಾಗೆಂದ ಮಾತ್ರಕ್ಕೆ ಸಂಪೂರ್ಣ ಪ್ರೇಮ ಕಥೆಯನ್ನು ಮಾತ್ರ ಇದು ಹೊಂದಿಲ್ಲ. ಬದಲಿಗೆ ಮಾಸ್​ ಅಮಶವನ್ನೂ ಸಿನಿಮಾದಲ್ಲಿ ನೀಡಲಾಗಿದೆ ಎನ್ನುವ ಮೂಲಕ ಚಿತ್ರದ ಜೀವಾಳವನ್ನು ತೆರೆದಿಟ್ಟಿದ್ದಾರೆ. ಇನ್ನು, ಚಿತ್ರಕ್ಕೆ ರವಿವರ್ಮ ಅವರ ಆಕ್ಷನ್ ಇರಲಿದ್ದು, ಫೈಟ್​ ಸೀನ್​ ಗಳು ಮತ್ತಷ್ಟು ಅದ್ಭುತವಾಗಿ ಮೂಡಿಬರಲಿದೆ ಎನ್ನಲಾಗಿದೆ. ಜೊತೆಗೆ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಮತ್ತು ಉದಯ್ ಬಲ್ಲಾಳ್ ಅವರ ಛಾಯಾಗ್ರಹಣವಿದೆ.

ಇದನ್ನೂ ಓದಿ: Pavitra Lokesh: ರಮ್ಯಾ-ಪವಿತ್ರಾ ಲೋಕೇಶ್ ಬಗ್ಗೆ ಕ್ಲ್ಯಾರಿಟಿ ಕೊಟ್ಟ ನರೇಶ್, ಮುಂದೇನು?

ಶಶಿಕುಮಾರ್ ಪುತ್ರ ಸ್ಯಾಂಡಲ್​ ವುಡ್​ಗೆ ಎಂಟ್ರಿ:

ಇನ್ನು, ಕನ್ನಡ ಚಿತ್ರರಂಗದ ಹಿರಿಯ ನಟ ಶಶಿಕುಮಾರ್ ಅವರ ಪುತ್ರ ಅದಿತ್ಯಾ ಶಶಿಕುಮಾರ್ ಈಗಾಗಲೇ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ಸೀತಾಯಾನ ಚಿತ್ರದ ಮೂಲಕ ಸ್ಯಾಂಡಲ್ ವುಡ್​ಗೆ ಪಾದಾರ್ಪಣೆ ಮಾಡಿರುವ ಇವರ ಖಾತೆಗೆ ಇದೀಗ ಮತ್ತೊಂದು ಚಿತ್ರ ಸೇರ್ಪಡೆಯಾಗಿದೆ. ಇದಲ್ಲದೇ ಅವರ ಅಭಿನಯದ ಓ ಮೈ ಲವ್ ಚಿತ್ರ ಜುಲೈ 15 ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಇನ್ನು, ಚಿತ್ರದಲ್ಲಿ ಖ್ಯಾತ ಖಳನಟ ಬಹುಭಾಷಾ ನಟ ರವಿಶಂಕರ್ ಸಹ ಇರಲಿದ್ದಾರೆ. ಈ ಚಿತ್ರದಲ್ಲಿಯೂ ಅವರು ಖಳನಟನಾಗಿ ನಟಿಸಲಿದ್ದಾರಂತೆ. ಚಿತ್ರವು ಬ್ರೌನ್‌ಬುಲ್ ಸ್ಟುಡಿಯೋಸ್‌ ನಿರ್ಮಿಸುತ್ತಿದ್ದು, ಚಿತ್ರದಲ್ಲಿ ರಾಜು ತಾಳಿಕೋಟೆ, hಇರಿಯ ನಟಿಯರಾದ ತಾರಾ ಮತ್ತು ಶ್ರುತಿ ಕಾಣಿಸಿಕೊಳ್ಳುವ ಮೂಲಕ ಬಹು ದೊಡ್ಡ ತಾರಾಬಳಗವನ್ನೇ ಚಿತ್ರದಲ್ಲಿ ಇರಿಸಲಾಗಿದೆ.
Published by:shrikrishna bhat
First published: