ಗೋಲ್ಮಾಲ್ ಮತ್ತು ಗೋಲ್ಮಾಲ್ ರಿಟರ್ಸ್ನಂತಹ ಹಲವಾರು ಬಾಲಿವುಡ್ ಚಲನಚಿತ್ರಗಳಲ್ಲಿ ನಟಿಸಿದ ನಟ ಸಿದ್ಧಾರ್ಥ್ ಜಾಧವ್ (Siddharth Jadhav) ತಾವು ಡಿವೋರ್ಸ್ ಪಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪತ್ನಿ ತೃಪ್ತಿ ಜಾಧವ್ ಜೊತೆಗಿನ ಅವರ ಮದುವೆ ಮುರಿದುಬಿದ್ದಿದೆ, ನಟ ಸಿದ್ಧಾರ್ಥ ಜಾಧವ್ ತಮ್ಮ ಪತ್ನಿ ತೃಪ್ತಿ ಜಾಧವ್ರಿಂದ ಡಿವೋರ್ಸ್ (Siddharth Jadhav Divorce) ಪಡೆಯಲಿದ್ದಾರೆ ಎಂಬ ವದಂತಿಗಳು ಹಬ್ಬಿತ್ತು, ಆದರೆ ಈ ವದಂತಿಗಳಿಗೆ ನಟ ಸಿದ್ಧಾರ್ಥ ಜಾಧವ್ ಸ್ಪಷ್ಟನೆ ನೀಡಿದ್ದು ತೆರೆ ಎಳೆದಿದ್ದಾರೆ. ಈಕುರಿತು ಹಿಂದೂಸ್ಥಾನ ಟೈಮ್ಸ್ ವರದಿ ಮಾಡಿದ್ದು ನಾವು ನಟ ಸಿದ್ಧಾರ್ಥ ಜಾಧವ್ ಅವರನ್ನು ಸಂಪರ್ಕಿಸಿದಾಗ, ಅವರು ಆರಂಭದಲ್ಲಿ ಮದುವೆ-ಡಿವೋರ್ಸ್ ಕುರಿತು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ.
ಈ ವದಂತಿಗಳು ಎಲ್ಲಿಂದ ಬರುತ್ತವೆ ಎಂದು ನನಗೆ ತಿಳಿದಿಲ್ಲ. ನಾನು ಮತ್ತು ತೃಪ್ತಿ ಜಾಧವ್ ಇಬ್ಬರೂ ಒಟ್ಟಿಗೆ ಇದ್ದೇವೆ. ನಮ್ಮಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ವರದಿಯಾಗಿದೆ.
ವದಂತಿ ಹರಡಿದ್ದು ಹೇಗೆ? ಕಳೆದ ಎರಡು ವರ್ಷಗಳಿಂದ ಸಿದ್ಧಾರ್ಥ್ ಮತ್ತು ತೃಪ್ತಿ ಇಬ್ಬರೂ ಜಗಳವಾಡುತ್ತಿದ್ದಾರೆ. ಅಲ್ಲದೇ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಹಲವು ಆಂಗ್ಲ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಸಿದ್ಧಾರ್ಥ ಜಾಧವ್ ಈ ವರದಿಯನ್ನು ನಿರಾಕರಿಸಿದ್ದಾರೆ. ಆದರೆ ತೃಪ್ತಿ ಮತ್ತು ಸಿದ್ಧಾರ್ಥ್ ಕೂಡ ಒಬ್ಬರನ್ನೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಅನ್ ಫಾಲೋ ಮಾಡಿದ್ದಾರೆ. ಎರಡು ವರ್ಷಗಳಿಂದ ಪರಸ್ಪರರ ಬಗ್ಗೆ ಪೋಸ್ಟ್ ಮಾಡಿಲ್ಲ. ಹೀಗಾಗಿ ಈ ಇಬ್ಬರು ಸ್ಟಾರ್ ಕಪಲ್ ಮದುವೆ ಬಗ್ಗೆ ಗುಸುಗುಸು ಹರಡಿತ್ತು.
ಭಾರೀ ಜನಪ್ರಿಯತೆ ಗಳಿಸಿರುವ ಸಿದ್ಧಾರ್ಥ್ ಜಾಧವ್ ಸಿದ್ಧಾರ್ಥ ರಾಮಚಂದ್ರ ಜಾಧವ್ ದೂರದರ್ಶನ, ಮರಾಠಿ ಮತ್ತು ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಬಾಲಿವುಡ್ನಲ್ಲೂ ಸಾಕಷ್ಟು ಹೆಸರು ಗಳಿಸಿದ್ದರೂ ಸಹ ಅವರು ಮರಾಠಿ ಚಲನಚಿತ್ರ, ಕಿರುತೆರೆಯೇ ನನ್ನ ಹೆಚ್ಚು ಇಷ್ಟದ ವೇದಿಕೆ ಎಂದು ಪ್ರತಿಪಾದಿಸಿದ್ದಾರೆ.
ಸಿದ್ಧಾರ್ಥ್ ಜಾಧವ್ ಮರಾಠಿ ಟಿವಿ ಮತ್ತು ಬಾಲಿವುಡ್ ಮತ್ತು ಮರಾಠಿ ಚಲನಚಿತ್ರಗಳಲ್ಲಿ ಜನಪ್ರಿಯ ಹೆಸರು ಗಳಿಸಿದ್ದಾರೆ. ರಣವೀರ್ ಸಿಂಗ್ ಅವರ ಸಿಂಬಾ ಚಿತ್ರದಲ್ಲಿ ಸಿದ್ಧಾರ್ಥ್ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಹಲವು ವರ್ಷಗಳ ಹಿಂದೆ ಪತ್ನಿ ತೃಪ್ತಿ ಜತೆ ಝಲಕ್ ದಿಖ್ಲಾ ಜಾ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು. ಸಿದ್ಧಾರ್ಥ್ ಅವರು ಪ್ರಸಾದ್ ಓಕ್ ಮತ್ತು ಸಾಯಿ ತಮ್ಹಂಕರ್ ಅವರೊಂದಿಗೆ ಮರಾಠಿ ಹಾಸ್ಯ ಕಾರ್ಯಕ್ರಮದ ಮಹಾರಾಷ್ಟ್ರಚಿ ಹಾಸ್ಯ ಜಾತ್ರೆಯನ್ನು ತೀರ್ಪುಗಾರರಾಗಿದ್ದರು. ಅವರು ಡ್ಯಾನ್ಸ್ ಮಹಾರಾಷ್ಟ್ರ ಡ್ಯಾನ್ಸ್ ಸೀಸನ್ 1 ರ ತೀರ್ಪುಗಾರರಾಗಿದ್ದರು.
ಇಬ್ಬರು ಹೆಣ್ಣುಮಕ್ಕಳ ಪೋಷಕರು ಈ ಸ್ಟಾರ್ ದಂಪತಿ ಸಿದ್ಧಾರ್ಥ್ ಜಾಧವ್ ಮತ್ತು ತೃಪ್ತಿ ಜಾಧವ್ ಇಬ್ಬರೂ 2007 ರಲ್ಲಿ ವಿವಾಹವಾಗಿದ್ದಾರೆ. ಈ ಸ್ಟಾರ್ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಸಿದ್ಧಾರ್ಥ್ ಜಾಧವ್ ಮತ್ತು ತೃಪ್ತಿ ಜಾಧವ್ ಅವರ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬ ಗುಸುಗುಸು ಇತ್ತೀಚಿಗೆ ಹಬ್ಬಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಜಾಧವ್ ಹೆಸರು ಬಿಟ್ಟಿದ್ದ ತೃಪ್ತಿ ತೃಪ್ತಿ ಜಾಧವ್ ಇದೀಗ ತನ್ನ ಸಾಮಾಜಿಕ ಜಾಲತಾಣದ ಹ್ಯಾಂಡಲ್ನಿಂದ 'ಜಾಧವ್' ಎಂಬ ಉಪನಾಮವನ್ನು ಕೈಬಿಟ್ಟಿದ್ದರು. ಅಲ್ಲದೇ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಐಡಿಯನ್ನು 'ತೃಪ್ತಿ ಅಕ್ಕಲ್ವಾರ್' ಎಂದು ಮರುನಾಮಕರಣ ಮಾಡಿದ್ದರು. ಇದು ಸಿದ್ಧಾರ್ಥ್ ಜಾಧವ್ ಮತ್ತು ತೃಪ್ತಿ ಜಾಧವ್ ಇಬ್ಬರೂ ಬೇರೆ ಬೇರೆಯಾಗಿದ್ದಾರೆ ಎಂಬ ಊಹಾಪೋಹಕ್ಕೆ ಎಡೆಮಾಡಿಕೊಟ್ಟಿತ್ತು.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ