• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Aditi Rao Hydari: ಟಮ್ ಟಮ್ ಹಾಡಿಗೆ ಸೌತ್​ ನಟನ ಜೊತೆ ಅದಿತಿ ಡ್ಯಾನ್ಸ್! ಡೇಟಿಂಗ್ ಮಾಡ್ತಿರೋದು ಪಕ್ಕಾ

Aditi Rao Hydari: ಟಮ್ ಟಮ್ ಹಾಡಿಗೆ ಸೌತ್​ ನಟನ ಜೊತೆ ಅದಿತಿ ಡ್ಯಾನ್ಸ್! ಡೇಟಿಂಗ್ ಮಾಡ್ತಿರೋದು ಪಕ್ಕಾ

ಅದಿತಿ-ಸಿದ್ಧಾರ್ಥ್

ಅದಿತಿ-ಸಿದ್ಧಾರ್ಥ್

ನಟಿ ಅದಿತಿ ರಾವ್ ಹೈದರಿ ಹಾಗೂ ನಟ ಸಿದ್ಧಾರ್ಥ್ ಡೇಟ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹೊಸದೇನಲ್ಲ. ಆದರೆ ಈಗ ಈ ಜೋಡಿ ವೈರಲ್ ಆಗ್ತಿರೋ ಟಮ್ ಟಮ್ ಹಾಡಿಗೆ ಒಟ್ಟಿಗೆ ಸ್ಟೆಪ್ ಹಾಕಿದ್ದು ವಿಡಿಯೋ ವೈರಲ್ ಆಗಿದೆ.

  • News18 Kannada
  • 2-MIN READ
  • Last Updated :
  • Chennai, India
  • Share this:

ಸೌತ್​ನಲ್ಲಿ ಸದ್ಯ ಸೌಂಡ್ ಮಾಡ್ತಿರೋ ಜೋಡಿ ಅದಿತಿ ರಾವ್ ಹೈದರಿ (Aditi Rao Hydari) ಹಾಗೂ ಸಿದ್ಧಾರ್ಥ್ (Siddharth) ಅವರದ್ದು. ಬಾಲಿವುಡ್ (Bollywood) ನಟಿ ಹಾಗೂ ಕಾಲಿವುಡ್ (Kollywood) ನಟ ಡೇಟಿಂಗ್ (Dating) ಮಾಡ್ತಿದ್ದಾರೆ ಎನ್ನುವ ಸುದ್ದಿ ಬಹಳಷ್ಟು ದಿನಗಳಿಂದ ಕೇಳಿ ಬರುತ್ತಿದೆ. ಇದಕ್ಕೆ ಪೂರಕ ಎನ್ನುವಂತಿರುತ್ತವೆ ಅವರಿಬ್ಬರ ಸೋಷಿಯಲ್ ಮೀಡಿಯಾ (Social Media) ಪೋಸ್ಟ್​ಗಳು. ಇದೀಗ ಇವರಿಬ್ಬರ ವಿಡಿಯೋ ವೈರಲ್ (Viral Video) ಆಗುತ್ತಿದೆ. ಇವರು ತಮಿಳು ಹಾಡು ಟಮ್ ಟಮ್​ಗೆ ಡ್ಯಾನ್ಸ್ ಮಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ಇನ್​ಸ್ಟಾಗ್ರಾಮ್​ನಲ್ಲಿ (Instagram) ವೈರಲ್ ಆಗುತ್ತಿರುವ ಈ ಹಾಡಿಗೆ ರೀಲ್ಸ್ ಮಾಡಿದ್ದಾರೆ.


ಅದಿತಿ ರಾವ್ ಅವರು ಸಿದ್ಧಾರ್ಥ್ ಜೊತೆ ಖುಷಿ ಖುಷಿಯಾಗಿ ಟಮ್ ಟಮ್ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಇಬ್ಬರೂ ಜಾಯಿಂಟ್ ಪೋಸ್ಟ್ ಹಾಕಿದ್ದಾರೆ. ವಿಶಾಲ್ ಅಭಿನಯದ ತಮಿಳು ಸಿನಿಮಾ ಎನಿಮಿ(2021) ಸೂಪರ್ ಹಿಟ್ ಹಾಡು ಇದು. ಇದರಲ್ಲಿ ಸಿದ್ಧಾರ್ಥ್ ಬ್ಲ್ಯಾಕ್ ಶರ್ಟ್ ಧರಿಸಿದ್ದರು. ಅದಿತಿ ಫ್ಲೋರಲ್ ಡ್ರೆಸ್ ಧರಿಸಿದ್ದರು.


ಡ್ಯಾನ್ಸ್ ಮಧ್ಯೆ ಇಬ್ಬರೂ ಪರಸ್ಪರ ಮುಖ ನೋಡಿಕೊಂಡು ಸ್ಮೈಲ್ ಮಾಡುವುದನ್ನು ಕಾಣಬಹುದು. ವಿಡಿಯೋ ಕೊನೆಗೊಳ್ಳುವಾಗ ಅದಿತಿ ಸಿದ್ಧಾರ್ಥ್​ನನ್ನು ತಳ್ಳುವುದನ್ನು ಕಾಣಬಹುದು. ನಟಿ ಮಂಕಿ ಎಮೋಜಿ ಹಾಕಿದ್ದಾರೆ. ಡ್ಯಾನ್ಸ್ ಮಂಕೀಸ್, ದಿ ರೀಲ್ ಡೀಲ್ ಎಂದು ಬರೆದಿದ್ದಾರೆ. ಹನ್ಸಿಕಾ ಮೊಟ್ವಾನಿ ಕಮೆಂಟ್ ಮಾಡಿ ಕ್ಯೂಟ್ ಎಂದು ಹೇಳಿದ್ದಾರೆ.




ಓಕೆ, ಈ ಮಂಗಗಳು ತುಂಬಾ ಮುದ್ದಾಗಿವೆ ಎಂದು ಸೋಫಿ ಚೌದ್ರಿ ಬರೆದಿದ್ದಾರೆ. ಕೆಬಾ ಜೆರೆಮಿಯಾ ಕಮೆಂಟ್ ಮಾಡಿ ತುಂಬಾ ಕ್ಯೂಟ್ ಎಂದಿದ್ದಾರೆ. ನಿಕಿತಾ ಶರ್ಮಾ ಕಮೆಂಟ್ ಮಾಡಿ ಇದು ಸೂಪರ್ ಆಗಿದೆ ಎಂದಿದ್ದಾರೆ.


ಅಭಿಮಾನಿಯೊಬ್ಬರು ಕಮೆಂಟ್ ಮಾಡಿ ಅವರು ಡೇಟಿಂಗ್ ಮಾಡುತ್ತಿದ್ದಾರೆಯೇ ಎಂದು ಕೇಳಿದ್ದಾರೆ. ಮದುವೆ ಡ್ಯಾನ್ಸ್​ಗಾಗಿ ಕಾಯುತ್ತಿದ್ದಾರೆ ಎಂದಿದ್ದಾರೆ ಇನ್ನೊಬ್ಬರು. ನಿಮ್ಮ ಬಿಗ್ ನ್ಯೂಸ್​ಗಾಗಿ ನಾವು ಕಾಯುತ್ತಿದ್ದೇವೆ. ಬೇಗ ಮದುವೆ ಅನೌನ್ಸ್ ಮಾಡಿ ಎಂದಿದ್ದಾರೆ ನೆಟ್ಟಿಗರು.


ಇದನ್ನೂ ಓದಿ: Alia Bhatt: ಇದರಲ್ಲಿ ಸೆಲ್ಫಿ ಕ್ಯಾಮೆರಾ ಎಲ್ಲಿದೆ? Android ಫೋನ್​ ಬಳಸಲು ತಿಳಿಯದೆ ಪರದಾಡಿದ ಆಲಿಯಾ


ಸಿದ್ಧಾರ್ಥ್ ಮತ್ತು ಅದಿತಿ, 2021 ರಲ್ಲಿ ತಮ್ಮ ಮಹಾ ಸಮುದ್ರಂ ಚಿತ್ರದ ಸೆಟ್‌ನಲ್ಲಿ ಮೊದಲ ಬಾರಿಗೆ ಭೇಟಿಯಾದರು. ನಂತರ ಅವರು ಡೇಟಿಂಗ್ ಪ್ರಾರಂಭಿಸಿದರು. 2021 ರಲ್ಲಿ ಚಂಡೀಗಢದಲ್ಲಿ ರಾಜ್‌ಕುಮಾರ್ ರಾವ್ ಮತ್ತು ಪತ್ರಲೇಖಾ ಅವರ ವಿವಾಹದಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡರು. ಇವರಿಬ್ಬರು ತಮ್ಮ ವೆಕೇಷನ್ ಸಮಯದಲ್ಲಿ ಮುಂಬೈನಲ್ಲಿ ಹಲವಾರು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.




ಲವರ್ ಬಾಯ್ ಎನಿಸಿಕೊಂಡಿರುವ ಸಿದ್ಧಾರ್ಥ್ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಫೋಟೋ ಹಾಗೂ ಕಾಮೆಂಟ್ ವ್ಯಾಪಕವಾಗಿ ವೈರಲ್ ಆಗಿತ್ತು. ಸಿದ್ಧಾರ್ಥ್ ಮತ್ತು ಅದಿತಿ ರಾವ್ ಹೈದರಿ ನಡುವೆ ಸಮ್ ಥಿಂಗ್ ಸ್ಪೆಷಲ್ ನಡೆಯುತ್ತಿದೆ ಅಂತ ಎನ್ನಲಾಗುತ್ತಿದೆ. ಟಾಲಿವುಡ್ ಅಂಗಳದಲ್ಲಿ ಈಗ ಇದೇ ದೊಡ್ಡ ಗುಲ್ಲಾಗಿದೆ. ಮುಂಬೈನ ವಿವಿಧ ರೆಸ್ಟೋರೆಂಟ್‌ಗಳಲ್ಲಿ ಇಬ್ಬರೂ ಒಟ್ಟಿಗೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.




ಆದರೆ ಇಬ್ಬರ ನಡುವಿನ ಸಂಬಂಧವನ್ನು ಬಹಿರಂಗಪಡಿಸದಿದ್ದರೂ, ಇದೀಗ ಸಿದ್ಧಾರ್ಥ್ ಪೋಸ್ಟ್‌ನೊಂದಿಗೆ ಸ್ವಲ್ಪ ಸ್ಪಷ್ಟತೆ ಬಂದಿದೆ. ಪ್ರೇಮಿಗಳಾಗಿ ನಟಿಸಿರುವ ಸಿದ್ಧಾರ್ಥ್ ಮತ್ತು ಅದಿತಿ ರಾವ್ ಹೈದರಿ ಚಿತ್ರದಲ್ಲಿ ಪ್ರಣಯವನ್ನು ಸಖತ್ತಾಗಿ ಬೆಳೆಸಿದ್ದಾರೆ. ಆ ನಂತರ ಇಬ್ಬರ ನಡುವೆ ಕುಚ್ ಕುಚ್ ಹೋ ತಾ ಹೈ ಎಂಬ ಮಾತು ಕೇಳಿ ಬರುತ್ತಿದೆ. ಈ ವೇಳೆ ಸಿದ್ಧಾರ್ಥ್ ಅದಿತಿಯ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.

Published by:Divya D
First published: