Gehraiyaan: ಡಿಪ್ಪಿ ಜೊತೆ ಕಿಸ್​ ಸೀನ್​ ಕಂಡು ಸಿದ್ದಾರ್ಥ್ ಚಿಕ್ಕಪ್ಪ ಕೇಳಿದ್ದೇನು ಅಂತ ಗೊತ್ತಾದ್ರೆ ಸಖತ್​ ನಗ್ತೀರಾ!

ನಟಿ ದೀಪಿಕಾ ಪಡುಕೊಣೆ(Deepika Padukone), ನಟ ಸಿದ್ಧಾಂತ್ ಚತುರ್ವೇದಿ(Siddhant Chaturvedi), ನಟಿ ಅನನ್ಯ ಪಾಂಡೆ(Ananya Pandey) ಮತ್ತು ಧೈರಿಯಾ ಕರ್ವಾ ಅವರನ್ನು ಜನರು ತುಂಬಾನೇ ಶ್ಲಾಘಿಸಿದ್ದಾರೆ.

ಸಿದ್ದಾರ್ಥ್​, ದೀಪಕಾ ಪಡುಕೋಣೆ

ಸಿದ್ದಾರ್ಥ್​, ದೀಪಕಾ ಪಡುಕೋಣೆ

  • Share this:
ಶಕುನ್ ಬಾತ್ರಾ(Shakun Batra) ಅವರ ನಿರ್ದೇಶನದ ‘ಗೆಹರಾಯಿಯಾ’((Gehraiyaan) ಚಿತ್ರವು ಈಗಾಗಲೇ ಅಮೆಜಾನ್ ಪ್ರೈಮ್(Amazon Prime) ವೀಡಿಯೋದಲ್ಲಿ ಬಿಡುಗಡೆಯಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಈ ಚಿತ್ರವು ಒಟಿಟಿ ಮಾಧ್ಯಮದಲ್ಲಿ ಬಿಡುಗಡೆಯಾದಾಗಿನಿಂದ ಪ್ರೇಕ್ಷಕರು ಮತ್ತು ಹಿತೈಷಿಗಳಿಂದ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಸಾಮಾಜಿಕ ಮಾಧ್ಯಮ(Social Media)ಗಳಲ್ಲಿ ಈ ಚಿತ್ರವನ್ನು ನೋಡಿ ಇಷ್ಟ ಪಟ್ಟು ತಮ್ಮ ಮೆಚ್ಚುಗೆ ಪೋಸ್ಟ್(Post)ಗಳನ್ನು ಹಾಕಿದ್ದಾರೆ ಮತ್ತು ತುಂಬಾನೇ ಸಂಕೀರ್ಣವಾದ ಪಾತ್ರಗಳನ್ನು ತುಂಬಾನೇ ಲೀಲಾಜಾಲವಾಗಿ ನಿಭಾಯಿಸಿದ ನಟಿ ದೀಪಿಕಾ ಪಡುಕೊಣೆ(Deepika Padukone), ನಟ ಸಿದ್ಧಾಂತ್ ಚತುರ್ವೇದಿ(Siddhant Chaturvedi), ನಟಿ ಅನನ್ಯ ಪಾಂಡೆ(Ananya Pandey) ಮತ್ತು ಧೈರಿಯಾ ಕರ್ವಾ ಅವರನ್ನು ಜನರು ತುಂಬಾನೇ ಶ್ಲಾಘಿಸಿದ್ದಾರೆ.

ಕಪಿಲ್​ ಶರ್ಮಾ ಶೋನಲ್ಲಿ ‘ಗೆಹರಾಯಿಯಾ’ ಟೀಂ!

ಇತ್ತೀಚೆಗೆ, ಹಾಸ್ಯನಟ ಕಪಿಲ್ ಶರ್ಮಾ ಅವರ ಶೋ ದಲ್ಲಿ ‘ಗೆಹರಾಯಿಯಾ’ ಚಿತ್ರದ ಪಾತ್ರವರ್ಗವು ಕಾಣಿಸಿಕೊಂಡಿತ್ತು. ಈ ಪ್ರಸಂಗವು ತುಂಬಾನೇ ಮೋಜು ಮಸ್ತಿಯಿಂದ ಕೂಡಿತ್ತು ಮತ್ತು ಮೋಜಿನ ಸಮಯವನ್ನು ಕಳೆದಂತಹ ಚಿತ್ರದ ನಟ ಮತ್ತು ನಟಿಯರು ಚಿತ್ರದ ಬಗ್ಗೆ ತುಂಬಾ ವಿಷಯಗಳನ್ನು ಹಂಚಿಕೊಂಡರು ಎಂದು ಹೇಳಬಹುದು. ಕಪಿಲ್ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಸೆನ್ಸಾರ್ ಮಾಡದ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.

ಕಿಸ್ ಸೀನ್​ ನೋಡಿ ಸಿದ್ದಾರ್ಥ್​ ಚಿಕ್ಕಪ್ಪ ಕೇಳಿದ್ಧೇನು?

ಈ ವೀಡಿಯೋದಲ್ಲಿ ನಟ ಸಿದ್ಧಾಂತ್ ಅವರು ‘ಗೆಹರಾಯಿಯಾ’ ಚಿತ್ರದಲ್ಲಿ ನಟಿ ದೀಪಿಕಾ ಪಡುಕೊಣೆ ಅವರೊಂದಿಗೆ ಕಿಸ್ ಮಾಡಿದ ದೃಶ್ಯವನ್ನು ಚಿತ್ರದ ಟ್ರೈಲರ್ ನಲ್ಲಿ ನೋಡಿ ತಮ್ಮ ಮನೆಯಲ್ಲಿ ಅವರ ಚಿಕ್ಕಪ್ಪ ಏನೆಂದು ಕೇಳಿದ್ದರು ಎಂದು ಇಲ್ಲಿ ಬಹಿರಂಗವಾಗಿ ಹೇಳಿಕೊಂಡರು. ತಮ್ಮ ಚಿಕ್ಕಪ್ಪನ ಉಲ್ಲಾಸದ ಪ್ರತಿಕ್ರಿಯೆಯ ಬಗ್ಗೆ ಒಂದು ಚಿಕ್ಕ ಕಥೆಯನ್ನು ಹಂಚಿ ಕೊಂಡಿದ್ದಾರೆ, ನೀವು ಕೇಳಿ.

‘ಕರೆ ಮಾಡಿ ನಿಜವಾಗಲೂ ಕಿಸ್​ ಮಾಡಿದ್ಯಾ ಅಂತ ಕೇಳಿದ್ರು’

ಈ ಚಿತ್ರದ ಟ್ರೈಲರ್ ಹೊರ ಬಂದಾಗ, ನನ್ನ ತಂದೆಯ ಸಹೋದರ ಎಂದರೆ ನನ್ನ ಚಿಕ್ಕಪ್ಪ ನಮ್ಮ ಹಳ್ಳಿಯಿಂದ ನನಗೆ ಕರೆ ಮಾಡಿದರು ಮತ್ತು ಅವರು ನಿನ್ನ ಮತ್ತು ದೀಪಿಕಾ ಅವರ ತುಟಿಗಳು ಆ ಕಿಸ್ಸಿಂಗ್ ದೃಶ್ಯದಲ್ಲಿ ನಿಜವಾಗಿಯೂ ಸ್ಪರ್ಶಿಸಿವೆಯೇ ಅಥವಾ ಚಿತ್ರೀಕರಣದ ಸಮಯದಲ್ಲಿ ನಿಮ್ಮಿಬ್ಬರ ತುಟಿಗಳ ಮಧ್ಯೆ ಗಾಜಿನ ಫಲಕ ಇಡಲಾಗಿತ್ತೇ ಎಂದು ಅವರು ಕೇಳಿಯೇ ಬಿಟ್ಟರು. ನನ್ನ ತಂದೆಗೆ ಅವರ ಪ್ರಶ್ನೆಗೆ ಹೇಗೆ ಉತ್ತರಿಸುವುದು ಎಂದು ತಿಳಿಯದೆ ನನ್ನ ಬಳಿ ಕೇಳಲು ಅವರಿಗೆ ಹೇಳಿದ್ದರಂತೆ ಎಂದು ನಟ ಸಿದ್ದಾಂತ್ ಅವರು ಬಹಿರಂಗವಾಗಿ ಇದನ್ನು ಹಂಚಿ ಕೊಂಡರು.

ಇದನ್ನೂ ಓದಿ; ಬೇರೊಬ್ಬನ ಜೊತೆ ರೊಮ್ಯಾನ್ಸ್​​ ಮಾಡೋಕೆ ರಣವೀರ್​ ಕೊಟ್ರಾ ಪರ್ಮಿಷನ್​? ಹಿಂಗ್​ ಪ್ರಶ್ನೆ ಕೇಳಿದವರಿಗೆ ಡಿಪ್ಪಿ ಖಡಕ್​ ರಿಪ್ಲೈ!

ಮಾನವ ಸಂಬಂಧಗಳ ಮಹತ್ವ ಸಾರುವ ಸಿನಿಮಾ!

‘ಗೆಹರಾಯಿಯಾ’ ಚಿತ್ರವು ಈ ಮಾನವ ಸಂಬಂಧಗಳಲ್ಲಿರುವ ಪ್ರೀತಿ, ಸ್ನೇಹ ಮತ್ತು ದ್ರೋಹದಂತಹ ಸಂಕೀರ್ಣತೆಗಳ ಬಗ್ಗೆ ಹೆಣೆದ ಒಂದು ಕಥೆಯಾಗಿದೆ. ಈ ಕಥೆಯು ನಾಲ್ಕು ಜನರ ಜೀವನದ ಸುತ್ತ ಸುತ್ತುತ್ತದೆ. ನಟಿ ದೀಪಿಕಾ ಪಡುಕೋಣೆ ನಿರ್ವಹಿಸಿದ ಅಲಿಶಾ, ಅನನ್ಯ ಪಾಂಡೆ ನಿರ್ವಹಿಸಿದ ಟಿಯಾ ಪಾತ್ರ, ನಟ ಸಿದ್ಧಾಂತ್ ಚತುರ್ವೇದಿ ನಿರ್ವಹಿಸಿದ ಝೈನ್ ಮತ್ತು ಧೈರಿಯಾ ಕರ್ವಾ ಅವರ ಕರಣ್ ಪಾತ್ರದ ಸುತ್ತಲೂ ಸುತ್ತುವ ಕಥೆಯಾಗಿದೆ.

ಇದನ್ನೂ ಓದಿ: ಇವ್ಳ್​ ಅವತಾರ ನೋಡೋಕೆ ಆಗ್ತಿಲ್ಲ.. ವಿಚಿತ್ರ ಕಾಸ್ಟ್ಯೂಮ್​ ಕಂಡು ಫ್ಯಾಶನ್​ ಡಿಸಾಸ್ಟರ್​ ಅಂದ್ರು ನೆಟ್ಟಿಗರು!

ಇನ್ನೂ ಈ ಚಿತ್ರದ ಹಾಡುಗಳ ಬಗ್ಗೆ ಮಾತನಾಡುವುದಾದರೆ, ಈಗಾಗಲೇ ಪ್ರೇಕ್ಷಕರು ಈ ಚಿತ್ರದ ಎಲ್ಲಾ ಹಾಡುಗಳನ್ನು ತುಂಬಾನೇ ಇಷ್ಟ ಪಟ್ಟಿದ್ದಾರೆ. ಚಿತ್ರ ತಯಾರಕರು ‘ಬೇಕಾಬೂ’ ಎಂಬ ಹಾಡನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದರು ಮತ್ತು ಅದು ಬಹುತೇಕವಾಗಿ ಎಲ್ಲರ ಪ್ಲೇ ಲಿಸ್ಟ್ ನಲ್ಲಿ ಇರಬಹುದು ಎಂದು ಹೇಳಲಾಗುತ್ತಿದೆ.
Published by:Vasudeva M
First published: