Ranveer-Deepika ಇಬ್ಬರು ಶಿಸ್ತಿನ ದಂಪತಿ ಎಂದ್ರು ಸಿದ್ಧಾಂತ್ ಚತುರ್ವೇದಿ, ಸಿದ್ಧಾಂತ್ ಹೀಗೆ ಹೇಳಿದ್ದು ಯಾಕೆ? ಈ ಸ್ಟೋರಿ ಓದಿ

ಸಿದ್ಧಾಂತ್ ಚತುರ್ವೇದಿ ಪ್ರಕಾರ, ರಣವೀರ್ ದೀಪಿಕಾ ಇಬ್ಬರೂ ಭಿನ್ನವಾದರೂ ಒಂದೇ ರೀತಿಯವರು ಈ ದಂಪತಿಗಳು ಭಿನ್ನ ವ್ಯಕ್ತಿತ್ವ ಹೊಂದಿದ್ದರೂ ಕೆಲಸದ ನೈತಿಕತೆ ವಿಚಾರ ಬಂದಾಗ ಇಬ್ಬರೂ ಬಹುತೇಕ ಒಂದೇ ಎಂದಿದ್ದಾರೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ತಮ್ಮ ಬಿಡುಗಡೆಯಾಗಬೇಕಿರುವ, ಹಿರಿಯ ನಿರ್ದೇಶಕ ಶಕುನ್ ಬಾತ್ರಾ ನಿರ್ದೇಶಿಸಿರುವ ಚಿತ್ರ ‘ಗೆಹರಾಯಿಯಾಂ’ಗಾಗಿ ಸದ್ಯ ಬಿಡುವಿಲ್ಲದ ಪ್ರಚಾರದಲ್ಲಿ ಸಿದ್ಧಾಂತ್ ಚತುರ್ವೇದಿ (Siddhant Chaturvedi) ನಿರತರಾಗಿದ್ದಾರೆ. ಈ ತಾರಾ ನಟ ಅನನ್ಯ (Ananya Pandey) ಪಾಂಡೆ ಹಾಗೂ ದೀಪಿಕಾ ಪಡುಕೋಣೆ (Deepika Padukone) ಯೊಂದಿಗೆ ತಮ್ಮ ಮುಂಬರುವ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಸ್ವಾರಸ್ಯಕರ ಸಂಗತಿಯೆಂದರೆ, ಸಿದ್ಧಾಂತ್ ಚತುರ್ವೇದಿ ತಮ್ಮ ಚೊಚ್ಚಲ ಚಿತ್ರ ‘ಗಲ್ಲಿ ಬಾಯ್‍’ನಲ್ಲಿ ದೀಪಿಕಾ ಪಡುಕೋಣೆಯವರ ಪತಿ ರಣವೀರ್ ಸಿಂಗ್ (Ranveer Singh) ಅವರೊಂದಿಗೆ ಈ ಹಿಂದೆ ನಟಿಸಿದ್ದರು. ಪಿಂಕ್‍ವಿಲ್ಲಾ’ ಅಂತರ್ಜಾಲ ಸುದ್ದಿ ಸಂಸ್ಥೆಯೊಂದಿಗೆ ವಿಶೇಷ ಮಾತುಕತೆ ನಡೆಸಿರುವ ಈ ಚಿತ್ರದ ನಾಯಕ ನಟ, ಬಿಟೌನ್‍ನ ಪ್ರತಿಷ್ಠಿತ ರಣವೀರ್ ಸಿಂಗ್-ದೀಪಿಕಾ ಪಡುಕೋಣೆ ತಾರಾ ದಂಪತಿಗಳ ನಡುವೆ ಇರುವ ಸಾಮ್ಯತೆ ಹಾಗೂ ಭಿನ್ನತೆ ಕುರಿತು ನಿಷ್ಕಪಟವಾಗಿ ಮಾತನಾಡಿದ್ದಾರೆ.

ದಂಪತಿಗಳು ಬಹಳ ಶಿಸ್ತು
ಸಿದ್ಧಾಂತ್ ಚತುರ್ವೇದಿ ಪ್ರಕಾರ, ರಣವೀರ್-ದೀಪಿಕಾ ಇಬ್ಬರೂ ಭಿನ್ನವಾದರೂ ಒಂದೇ ರೀತಿಯವರು. ಈ ದಂಪತಿಗಳು ಭಿನ್ನ ವ್ಯಕ್ತಿತ್ವ ಹೊಂದಿದ್ದರೂ, ಕೆಲಸದ ನೈತಿಕತೆ ವಿಚಾರ ಬಂದಾಗ ಇಬ್ಬರೂ ಬಹುತೇಕ ಒಂದೇ ಹಂತದವರಾಗಿದ್ದು, ತಮ್ಮ ಪಾತ್ರಗಳಿಗೆ ಒಂದೇ ರೀತಿಯಲ್ಲಿ ಅರ್ಪಿಸಿಕೊಳ್ಳುತ್ತಾರೆ ಎಂದು ‘ಬಂಟಿ ಔರ್ ಬಬ್ಲಿ 2’ ಚಿತ್ರದ ಈ ನಾಯಕ ನಟ ತಿಳಿಸಿದ್ದಾರೆ. ದಂಪತಿಗಳು ಬಹಳ ಶಿಸ್ತಿನವರಾಗಿದ್ದು, ತಮ್ಮ ಪಾತ್ರಗಳ ಆಳಕ್ಕೆ ಇಳಿಯಲು ತುಂಬಾ ಕಠಿಣ ಪರಿಶ್ರಮ ಪಡುತ್ತಾರೆ ಎಂದು ಸಿದ್ಧಾಂತ್ ಚತುರ್ವೇದಿ ಅಭಿಪ್ರಾಯ ಪಟ್ಟಿದ್ದಾರೆ.

ಒಂದೇ ವ್ಯಕ್ತಿತ್ವ
ನನಗನ್ನಿಸುವ ಪ್ರಕಾರ ಅವರಿಬ್ಬರೂ ಬೇರೆ ಆದರೂ ಒಂದೇ. ಅರ್ಥಾತ್, ಅವರಿಬ್ಬರದೂ ಒಂದೇ ವ್ಯಕ್ತಿತ್ವವಾದರೂ, ಕಲೆ ವಿಚಾರಕ್ಕೆ ಬಂದಾಗ ಮಾತ್ರ ಬರವಣಿಗೆ, ನಿರ್ದೇಶನಕ್ಕೆ ತುಂಬಾ ಶಿಸ್ತಿನಿಂದ ಒಂದೇ ಬಗೆಯಲ್ಲಿ ಅರ್ಪಿಸಿಕೊಳ್ಳುತ್ತಾರೆ. ನಾನು ಮೊದಲ ಬಾರಿಗೆ ರಣವೀರ್ ಸಿಂಗ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಿ ಅವರೊಂದಿಗೆ ಓದುವಾಗ ಅವರು ರಣವೀರ್ ಸಿಂಗ್ ಆಗಿರಲೇ ಇಲ್ಲ. ಬದಲಿಗೆ ಮುರಾದ್ ಪಾತ್ರದ ಆಳಕ್ಕೆ ಹೋಗಲು ಬಯಸುತ್ತಿರುವ ಸಣ್ಣ ಹುಡುಗರಂತೆ ಮಾತ್ರ ಕಾಣಿಸುತ್ತಿದ್ದರು.

ಇದನ್ನೂ ಓದಿ: Deepika Padukone: ಡಿಪ್ಪಿ ಧರಿಸಿರೋದು ರಣವೀರ್​ ಡ್ರೆಸ್​ ಅಲ್ಲ ಅಲ್ವಾ? ಸಖತ್​ ಟ್ರೋಲ್​ ಆಗ್ತಿದೆ ನಟಿಯ ಹೊಸ ಫೋಟೋ!

ನಾನು ಮೊದಲ ಬಾರಿಗೆ ದೀಪಿಕಾ ಅವರನ್ನು ಭೇಟಿಯಾದಾಗ ಅವರು ದೀಪಿಕಾ ಆಗಿರಲಿಲ್ಲ; ಬದಲಿಗೆ ಶಾಲೆಗೆ ಮೊದಲ ಬಾರಿಗೆ ಹಾಜರಾಗಿ ತನ್ನ ಪೆನ್ಸಿಲ್ ಬಾಕ್ಸ್‌, ಪೆನ್, ಹೈಲೈಟರ್‌ನೊಂದಿಗೆ ನಮ್ಮೊಂದಿಗೆ ಕುಳಿತು ಮೊದಲ ಮೇಜಿನ ಕಂಪನ ಸೃಷ್ಟಿಸುತ್ತಿದ್ದ ಹುಡುಗಿಯಂತಿದ್ದರು. ಅವರಿಬ್ಬರೂ ವಿಶೇಷ ರೀತಿಯಲ್ಲಿ ಒಂದೇ ಆಗಿದ್ದಾರೆ” ಎಂದು ಸಿದ್ಧಾಂತ್ ಚತುರ್ವೇದಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಪ್ರಣಯದ ಸುಳಿಗಾಳಿ
‘ಗೆಹರಾಯಿಯಾಂ’ ಚಿತ್ರದ ಎಳೆ ಏನು ಎಂಬುದು ಇನ್ನೂ ಅಸ್ಪಷ್ಟವಾಗಿದ್ದರೂ, ಈ ಚಿತ್ರವು ನಾಲ್ಕು ಮಂದಿಯ ನಡುವೆ ತಿರುವು ಹೊಂದಿರುವ ಪ್ರೇಮಕತೆಯಾಗಿರಬಹುದು ಎಂಬುದನ್ನು ಚಿತ್ರದ ಟ್ರೈಲರ್‌ ಸೂಚಿಸುತ್ತಿವೆ. ತ್ರಿಕೋನ ಪ್ರೇಮದ ಸುಳಿವು ಹೊಂದಿರುವ ಈ ಚಿತ್ರವು, ವಿಶ್ವಾಸದ್ರೋಹ, ಸಮನ್ವಯತೆ ಹಾಗೂ ಉತ್ಕಟ ಪ್ರೀತಿಯನ್ನು ಹೊಂದಿದ್ದು, ಪ್ರೇಕ್ಷಕರಲ್ಲಿ ಪ್ರಣಯದ ಸುಳಿಗಾಳಿಯನ್ನೇ ಎಬ್ಬಿಸುವ ಸಾಧ್ಯತೆ ಇದೆ. ಫೆಬ್ರವರಿ 11, 2022ರಂದು ಈ ಚಿತ್ರ ಅಮೆಜಾನ್ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ.

ಗೆಹರಾಯಿಯಾಂ ಚಿತ್ರದ ಹೊರತಾದ ಕೆಲಸಗಳ ಕುರಿತು ಮಾಹಿತಿ ನೀಡಿದ ಸಿದ್ಧಾಂತ್ ಚತುರ್ವೇದಿ, ಕತ್ರೀನಾ ಕೈಫ್ ಹಾಗೂ ಇಶಾನ್ ಖಟ್ಟರ್‌ರೊಂದಿಗೆ ‘ಫೋನ್ ಬೂತ್’ನಲ್ಲಿ ನಟಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಮತ್ತೊಂದು ಸಾಹಸಮಯ ಚಿತ್ರ ‘ಯುಧ್ರ’ದಲ್ಲಿ ಮಾಳವಿಕಾ ಮೋಹನನ್ ಎದುರು ನಟಿಸುತ್ತಿದ್ದಾರೆ. ಈ ಎರಡೂ ಚಿತ್ರಗಳ ಬಿಡುಗಡೆಯ ದಿನಾಂಕ ಇನ್ನಷ್ಟೇ ಘೋಷಣೆಯಾಗಬೇಕಿದೆ.

ಇದನ್ನೂ ಓದಿ: Gehraiyaan Movie: 'ಗೆಹರಾಯಿಯಾಂ' ಚಿತ್ರದ Trailer ರಿಲೀಸ್​ -ಪತ್ನಿ ನೋಡಿ ರಣವೀರ್​ ಹೇಳಿದ್ದೇನು?

ಗೆಹರಾಯಿಯಾಂ ಚಿತ್ರದ ಕುರಿತು ಮಾತನಾಡಿರುವ 39 ವರ್ಷದ ನಿರ್ದೇಶಕ ಶಕುನ್ ಬಾತ್ರಾ, “ಕಳೆದ ದಶಕಗಳಲ್ಲಿ ಬಾಲಿವುಡ್‍ ಚಿತ್ರಗಳಲ್ಲಿ ನಾವೇನೆಲ್ಲ ಧ್ವನಿಯನ್ನು ಕೇಳಿದ್ದೇವೆ. ಅದನ್ನೆಲ್ಲ ನಾನು ಬದಲಾಯಿಸಲು ಬಯಸಿದ್ದೆ. ರೀಮಿಕ್ಸ್ ಅಂತಹುದೇ ಪ್ರಯತ್ನಗಳಾಗಿವೆ. ಒಂದು ಹಂತದಲ್ಲಿ ನಾನು ಇತರೆ ಬಾಲಿವುಡ್ ಚಿತ್ರಗಳಂತೆಯೇ ನನ್ನ ಚಿತ್ರವೂ ಧ್ವನಿಸಬಹುದು ಎಂಬ ಆತಂಕದಿಂದ ಚಿತ್ರಕ್ಕೆ ಹಿನ್ನೆಲೆ ಸಂಗೀತವನ್ನೇ ಅಳವಡಿಸದಿರಲು ನಿರ್ಧರಿಸಿದ್ದೆ ಎಂದು ಹೇಳಿಕೊಂಡಿದ್ದಾರೆ.
Published by:vanithasanjevani vanithasanjevani
First published: