• Home
  • »
  • News
  • »
  • entertainment
  • »
  • Kantara Movie: ಕಾಂತಾರ ನೋಡಿ ರಿಷಬ್ ಭೇಟಿಯಾದ ಸಿದ್ಧಾಂತ್! ಬಾಲಿವುಡ್​ ನಟನ ಕನ್ನಡ ಪೋಸ್ಟ್

Kantara Movie: ಕಾಂತಾರ ನೋಡಿ ರಿಷಬ್ ಭೇಟಿಯಾದ ಸಿದ್ಧಾಂತ್! ಬಾಲಿವುಡ್​ ನಟನ ಕನ್ನಡ ಪೋಸ್ಟ್

ರಿಷಬ್ ಶೆಟ್ಟಿ-ಸಿದ್ಧಾಂತ್ ಚತುರ್ವೇದಿ

ರಿಷಬ್ ಶೆಟ್ಟಿ-ಸಿದ್ಧಾಂತ್ ಚತುರ್ವೇದಿ

ಗೆಹರಾಯಿಯಾ ಸಿನಿಮಾ ಹೀರೋ ಸಿದ್ಧಾಂತ್ ರಿಷಬ್ ಶೆಟ್ಟಿ ಅವರನ್ನು ಭೇಟಿಯಾಗಿದ್ದಾರೆ. ಕಾಂತಾರ ಸಿನಿಮಾ ನೋಡಿ ಕನ್ನಡದಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.

  • News18 Kannada
  • Last Updated :
  • Bangalore, India
  • Share this:

ಗೆಹರಾಯಿಯಾ ಸಿನಿಮಾ ಹೀರೋ ಸಿದ್ದಾಂತ್ ಚತುರ್ವೇದಿ (Siddhant Chaturvedi) ಅವರು ಇತ್ತೀಚೆಗೆ ಕಾಂತಾರ (Kantara) ಸಿನಿಮಾ ನೋಡಿದ್ದಾರೆ. ಸಿನಿಮಾ (Cinema) ವೀಕ್ಷಿಸಿದ ನಂತರ 'ಕಾಂತಾರ' ಚಿತ್ರಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿ ಪೋಸ್ಟ್ ಅನ್ನು (Post) ಹಂಚಿಕೊಂಡಿದ್ದಾರೆ. ನಟ ನಿರ್ದೇಶಕ-ನಟ ರಿಷಬ್ ಶೆಟ್ಟಿ (Rishab Shetty) ಅವರನ್ನು 'ಮಾಸ್ಟರ್' (Master) ಎಂದು ಕರೆದು ಹೊಗಳಿದ ಬಾಲಿವುಡ್ ನಟ ಸ್ಪೂರ್ತಿದಾಯಕ ಸಿನಿಮಾ (Cinema) ಕೊಟ್ಟಿದ್ದಕ್ಕಾಗಿ ಅವರಿಗೆ ಧನ್ಯವಾದಗಳನ್ನು (Thanks) ತಿಳಿಸಿದ್ದಾರೆ. ನಟ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್ ಶೇರ್ ಮಾಡಿಕೊಂಡು ರಿಷಬ್ ಅವರೊಂದಿಗಿನ ಭೇಟಿಯ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ವಿಡಿಯೋ ಜೊತೆ ಕ್ಯಾಪ್ಶನ್ ಬರೆದ ನಟ ಕಾಂತಾರಕ್ಕೆ ನನ್ನ ಮೆಚ್ಚುಗೆ ಪೋಸ್ಟ್ ತುಂಬಾ ತಡವಾಯಿತು. ನಾನು ನಿನ್ನೆ ರಾತ್ರಿ ಸಿನಿಮಾ ನೋಡಿದೆ. ರಿಷಬ್ ಶೆಟ್ಟಿ ನೀವು ಮಾಸ್ಟರ್. ಇದೊಂದು ಮೇರುಕೃತಿ! ಚಿತ್ರದಲ್ಲಿ ಆಳವಾಗಿ ಬೇರೂರಿರುವ ಸಾಂಸ್ಕೃತಿಕ ಸಾರವು ನನ್ನನ್ನು ಪ್ರೇರೇಪಿಸಿತು. ಅದು ನನ್ನೊಂದಿಗೆ ಶಾಶ್ವತವಾಗಿ ಉಳಿಯುತ್ತದೆ. ಈ ಸ್ಪೂರ್ತಿದಾಯಕ ಸಿನಿಮಾದ ಕೊಟ್ಟಿದ್ದಕ್ಕೆ ಧನ್ಯವಾದಗಳು. Nimage thumbaa ಧನ್ಯವಾದಗಳು ಎಂದು ಬರೆದಿದ್ದಾರೆ ನಟ.


ರಿಷಬ್ ಶೆಟ್ಟಿಯಲ್ಲದೆ, 'ಕಾಂತಾರ' ಸಿನಿಮಾದಲ್ಲಿ ಕಿಶೋರ್, ಸಪ್ತಮಿ ಗೌಡ, ಅಚ್ಯುತ್ ಕುಮಾರ್ ಮತ್ತು ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಅಕ್ಟೋಬರ್ 14 ರಂದು ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಿದೆ. ಪ್ರಭಾಸ್, ಧನುಷ್, ಅನುಷ್ಕಾ ಶೆಟ್ಟಿ, ಮತ್ತು ಶಿಲ್ಪಾ ಶೆಟ್ಟಿ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಈಗಾಗಲೇ ಚಿತ್ರವನ್ನು ಹೊಗಳಿದ್ದಾರೆ.
ರಜನೀಕಾಂತ್ ಮೆಚ್ಚುಗೆ


ಸಿನಿಮಾವನ್ನು ನೋಡಿ ಟ್ವೀಟ್ ಮಾಡಿದವರಲ್ಲಿ ರಜನೀಕಾಂತ್ ಅವರೂ ಒಬ್ಬರು. ಸೂಪರ್ ಸ್ಟಾರ್ ರಜನೀಕಾಂತ್ ಅವರು ಟ್ವೀಟ್ ಮಾಡಿ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ನಂತರ ಸಿನಿಮಾವನ್ನು ಭಾರತೀಯ ಸಿನಿಮಾದ ಮಾಸ್ಟರ್ ಪೀಸ್ ಎಂದು ಹೊಗಳಿದ್ದಾರೆ.


ಇದಾದ ನಂತರ ರಿಷಬ್ ಶೆಟ್ಟಿ ಅವರು ಖುದ್ದಾಗಿ ರಜನೀಕಾಂತ್ ಅವರನ್ನು ಭೇಟಿಯಾಗಿ ಧನ್ಯವಾದ ತಿಳಿಸಿದ್ದರು. ಈ ಸಂದರ್ಭ ರಿಷಬ್ ಅವರನ್ನು ಅಭಿನಂದಿಸಿದ ಹಿರಿಯ ನಟ ಅವರಿಗೆ ಶಾಲು ಹಾಕಿ ಅಭಿನಂದಿಸಿ ಚಿನ್ನದ ಸರವನ್ನು ಅವರ ಕೊರಳಿಗೆ ಹಾಕಿದ್ದರು.


ಕಂಗನಾ ರಣಾವತ್ ಮೆಚ್ಚುಗೆ


ಕುಟುಂಬ ಸಮೇತ ಕಾಂತಾರ ಸಿನಿಮಾ ನೋಡಿದ ಕಂಗನಾ ರಣಾವತ್ ಸೆಲ್ಫೀ ವಿಡಿಯೋ ಮಾಡಿ ಸಿನಿಮಾವನ್ನು ಹೊಗಳಿದ್ದರು. ಸಿನಿಮಾ ಅದ್ಭುತವಾಗಿದೆ ಎಂದು ಹೊಗಳಿದ ಅವರು ಅದರಿಂದ ತಾವಿನ್ನೂ ಹೊರಬಂದಿಲ್ಲ ಎಂದು ಪದೇ ಪದೇ ಹೇಳಿದ್ದರು.


ಇದನ್ನೂ ಓದಿ: Kantara Song: ಜರ್ಮನ್ ಅಂಧ ಗಾಯಕಿಯ ಧ್ವನಿಯಲ್ಲಿ ವರಾಹ ರೂಪಂ! ಸಖತ್ ವೈರಲ್


ಕಾಂತಾರ ಬಜೆಟ್ ಎಷ್ಟು?


ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ಕಾಂತಾರ ಸಿನಿಮಾದ ಬಜೆಟ್ 14ರಿಂದ 16 ಕೋಟಿ ರೂಪಾಯಿ. ಆದರೆ ಈ ಸಿನಿಮಾದ ಗಳಿಕೆ ಬಗ್ಗೆ ನೋಡಿದರೆ ಟೋಟಲ್ ಮೊತ್ತ ಈಗ 400 ಕೋಟಿಯನ್ನು ಮೀರಿದೆ. ಕರ್ನಾಟದಲ್ಲಿ ಸಿನಿಮಾ 183 ಕೋಟಿ ಕಲೆಕ್ಷನ್ ಮಾಡಿದ್ದು ಹಿಂದಿಯಲ್ಲಿ 75 ಕೋಟಿ ಹಾಗೂ ತೆಲುಗಿನಲ್ಲಿ 50 ಕೋಟಿ ಗಳಿಸಿದೆ.


ಭರ್ಜರಿ ಸಕ್ಸಸ್


ಸಿನಿಮಾಗೆ ಭರ್ಜರಿ ಸಕ್ಸಸ್ ಸಿಕ್ಕಿದ್ದು ಎಲ್ಲರಿಂದ ವ್ಯಾಪಕ ಮೆಚ್ಚುಗೆ ಬರುತ್ತಿದೆ. ಇದೀಗ ಸಿನಿಮಾ 50 ದಿನ ಪೋರೈಸಿದ್ದು ಈಗಲೂ ಸಿನಿಮಾ ಸಕ್ಸಸ್​ಫುಲ್ ಆಗಿ ರನ್ ಆಗುತ್ತಿದೆ.

Published by:Divya D
First published: