Shwetha Srivatsav: ಎಲ್ಲಿಗೆ ಬಂತು ಶ್ವೇತಾ ಶ್ರೀವಾತ್ಸವ್ ಪುಸ್ತಕ ಬರೆಯೋ ಕೆಲಸ? ಇಲ್ಲಿದೆ ಅಪ್ಡೇಡ್

Shwetha Srivatsav: ನಟಿ ಶ್ವೇತಾ ಶ್ರೀವಾತ್ಸವ್ ಅವರು ಪುಸ್ತಕ ಬರೆಯುತ್ತಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಹಾಗಾದರೆ ಈ ಪುಸ್ತಕ ಬರೆಯೋ ಕೆಲಸ ಎಲ್ಲಿಗೆ ಬಂತು? ನಟಿ ಲೇಟೆಸ್ಟ್ ಅಪ್ಡೇಟ್ ಶೇರ್ ಮಾಡಿದ್ದಾರೆ.

ನಟಿ ಶ್ವೇತಾ ಶ್ರೀವಾತ್ಸವ್

ನಟಿ ಶ್ವೇತಾ ಶ್ರೀವಾತ್ಸವ್

  • Share this:
ಸ್ಯಾಂಡಲ್​ವುಡ್ ನಟಿ ಶ್ವೇತಾ ಶ್ರೀವಾತ್ಸವ್ (Shwetha Srivatsav) ಅವರು ಸೋಷಿಯಲ್ ಮೀಡಿಯಾದಲ್ಲಿ (Social Media) ಆ್ಯಕ್ಟಿವ್ ಆಗಿದ್ದಾರೆ. ಸ್ಯಾಂಡಲ್​​ವುಡ್​ನಲ್ಲಿ (Sandalwood) ಪ್ರೇಕ್ಷಕರ ರಂಜಿಸಿದ ನಟಿ ಸದ್ಯ ಸ್ಮಾಲ್ ಬ್ರೇಕ್ ತೆಗೆದುಕೊಂಡು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೌದು ನಟಿ ಶ್ವೇತಾ ಅವರು ಪುಸ್ತಕ ಬರೆಯುತ್ತಿರುವ (Book Writing) ವಿಚಾರ ನಿಮಗೆ ಗೊತ್ತೇ ಇದೆ. ನಟಿ ಹೊಸ ಪುಸ್ತಕವೊಂದನ್ನು ಬರೆಯುತ್ತಿದ್ದಾರೆ ಎನ್ನುವ ವಿಚಾರ ಎಲ್ಲರಿಗೂ ಗೊತ್ತು. ಆದರೆ ಆ ಪುಸ್ತಕದ ಕೆಲಸ ಎಲ್ಲಿಗೆ ತಲುಪಿತು? ಈ ಬಗ್ಗೆ ನಟಿಯೇ ಸ್ವತಃ ಇನ್​ಸ್ಟಾಗ್ರಾಂ (Instagram) ಪೋಸ್ಟ್ ಮೂಲಕ ಉತ್ತರ ಕೊಟ್ಟಿದ್ದಾರೆ. ಹೌದು, ನಟಿ ತಮ್ಮ ಪುಸ್ತಕದ ಕೆಲಸದ ವಿಚಾರವಾಗಿ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ (Video) ಒಂದನ್ನು ಹಂಚಿಕೊಂಡಿದ್ದಾರೆ. 

ಕಳೆದ ಕೆಲವು ವಾರಗಳಿಂದ ನಟಿಯ ಕೆಲಸವಿದು

ನಟಿ ರೀಲ್ಸ್ ಶೇರ್ ಮಾಡಿಕೊಂಡಿದ್ದು ಇದರಲ್ಲಿ ಶ್ವೇತಾ ಅವರು ಕೆಲವೊಂದಷ್ಟು ಸ್ಕ್ರಿಪ್ಟ್ ಪೇಪರ್ ಹಾಗೂ ಕೈಯಲ್ಲೊಂದು ಪೆನ್ಸಿಲ್ ಹಿಡಿದು ಕೆಲಸ ಮಾಡುತ್ತಿರುವುದನ್ನು ಕಾಣಬಹುದು. ವಿಡಿಯೋ ಪೋಸ್ಟ್ ಮಾಡುವಾಗ ನಟಿ ಕಳೆದ ಕೆಲವು ವಾರಗಳಿಂದ ನನ್ನ ಕೆಲಸವಿದು ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

ನೆಟ್ಟಿಗರ ರಿಯಾಕ್ಷನ್

ನಟಿಯ ವಿಡಿಯೋಗೆ ಈಗಾಗಲೇ 1135 ಲೈಕ್ಸ್ ಬಂದಿದ್ದು ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ನಟಿಯ ವಿಡಿಯೋ ಈಗ 26 ಸಾವಿರ ವ್ಯೂಸ್ ಗಳಿಸಿದೆ. ಇನ್ನೂ ಕೆಲವರು ಕಮೆಂಟ್ ಮಾಡಿ ಯಾವಾಗ ಎಕ್ಸಾಮ್ ಎಂದು ಕೇಳುತ್ತಿದ್ದಾರೆ. ಕಾಗದಗಳನ್ನು ಹರಡಿ ಕುಳಿತುಕೊಂಡಿರುವ ರೀತಿ ನೋಡಿದರೆ ನಟಿ ಯಾವುದೋ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವಂತೆ ಕಂಡುಬಂದಿದೆ.






ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಸಿನಿಮಾ ಮೂಲಕ ಕನ್ನಡಿಗರ ಮನ ಗೆದ್ದ ನಟಿ

ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಸಿನಿಮಾ ಮೂಲಕ ಸಿಂಪಲ್ ಹುಡುಗಿ ಎನಿಸಿಕೊಂಡ ನಟಿ ಶ್ವೇತಾ ಶ್ರೀವಾತ್ಸವ್‌, ಪ್ರತಿಭಾನ್ವಿತ ನಟಿ ಮಾತ್ರವಲ್ಲದೇ, ಅಭಿಮಾನಿಗಳ ಫೇವರೇಟ್​ ಕೂಡ. ಸಿನಿಮಾಗಳಲ್ಲಿ ಬ್ಯುಸಿ ಇದ್ದ ನಟಿ ಹಲವಾರು ಉತ್ತಮ ಚಿತ್ರಗಳನ್ನು ನೀಡಿದ್ದಾರೆ. ಆದರೆ ಮಗಳ ಜನನದ ನಂತರ ಸಿನಿಮಾದಿಂದ ದೂರವಿದ್ದ ಸುಂದರಿ ಮತ್ತೆ ಕಮ್​ ಬ್ಯಾಕ್​ ಮಾಡಿದ್ದಾರೆ.

ಪುಸ್ತಕ ಬರೆಯೋ ಪ್ಲಾನ್

ಈ ವಿಚಾರ ಹಳೆಯದು. ಈಗಾಗಲೇ ಅವರ ನಟನೆಯ ಹೋಪ್‌' ಸಿನಿಮಾ ಬಿಡುಗಡೆಯಾಗಿತ್ತು. ಅಲ್ಲದೇ, ಅವರು ಇನ್ನೂ ಹಲವಾರು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ನಟನೆಯ ಜೊತೆ ಪುಸ್ತಕ ಬರೆಯತ್ತಿದ್ದಾರೆ. ಮದುವೆಯ ನಂತರ ಅವರು ಹೇಗೆ ಸಿನಿಮಾರಂದಲ್ಲಿ ತೊಡಗಿಸಿಕೊಂಡು, ಅವರ ಪ್ರಯತ್ನಗಳು ಸೇರಿದಂತೆ ಅವರ ಕಥೆಯನ್ನು ಜನರ ಮುಂದೆ ತರಲು ಹೊರಟಿದ್ದಾರೆ.

ಇದನ್ನೂ ಓದಿ: Shwetha Srivatsav: ಹೊಸ ನಿರ್ಧಾರ ಮಾಡಿದ ಶ್ವೇತಾ ಶ್ರೀವಾತ್ಸವ್‌, ಅಚ್ಚರಿಯಾದ್ರೂ ಅದ್ಬುತ ಇದು!

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಟಿ, ಒಂದು ಪುಸ್ತಕ ಬರೆಯುತಿದ್ದೇನೆ. ಯಾರಿಗಾದರೂ ಸ್ಫೂರ್ತಿ ಸಿಗಬಹುದು ಎಂಬ ಆಶಯವಿದೆ, ಅಲ್ಲದೇ ಇದೇ ನನ್ನ ಉದ್ದೇಶ ಎಂದು ಅಭಿಮಾನಿಗಳೊಂದಿಗೆ ಸುದ್ದಿ ಹಂಚಿಕೊಂಡಿದ್ದರು.

ಅಭಿಮಾನಿಗಳೂ ಪುಸ್ತಕದ ಭಾಗವಾಗಬಹುದು

ಇಲ್ಲೊಂದು ವಿಶೇಷವಿದೆ. ಈ ಪುಸ್ತಕದ ಭಾಗವಾಗಲು ಅಭಿಮಾನಿಗಳಿಗೆ ಸಹ ಅವಕಾಶವಿದೆ. ಹೌದು, ನಟಿಯ ಬಗ್ಗೆ ಯಾವುದೇ ಪ್ರಶ್ನೆಗಳಿದ್ದರೂ ನೀವು shwethasrivatsav04@gmail.com ಈ ಮೇಲ್​ ಐಡಿಗೆ ಕಳುಹಿಸಬಹುದು.
ನೀವು ಕೇಳಿದ ಪ್ರಶ್ನೆಗಳಿಗೆ ನಟಿ ಪುಸ್ತಕದಲ್ಲಿ ಉತ್ತರ ನೀಡಲಿದ್ದಾರೆ. ಅಲ್ಲದೇ ನಿಮ್ಮ ಹೆಸರನ್ನು ಯಾವುದೇ ಕಾರಣಕ್ಕೂ ರಿವೀಲ್​ ಮಾಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Bigg Boss OTT: ಖಾಲಿ ಕ್ಯಾನ್​​ಗೆ ಬಾಲ್ಸ್ ಹಾಕೋ ಆಟ! ಗುರೂಜಿ ಟಾಸ್ಕ್ ಗೆಲ್ತಾರಾ?

ಅಲ್ಲದೆ, ಈ ಪುಸ್ತಕ ನನ್ನ ಆತ್ಮಕಥನ ಅಲ್ಲ ಎಂಬುದನ್ನ ನಟಿ ಸ್ಪಷ್ಟಪಡಿಸಿದ್ದಾರೆ.
ಒಟ್ಟಾರೆಯಾಗಿ ನಟಿ ಒಂದು ಅದ್ಭುತ ಹೆಚ್ಚೆ ಇಡುತ್ತಿರುವುದು ಅವರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಶ್ವೇತಾ, ರಾಘವೇಂದ್ರ ಸ್ಟೋರ್ಸ್, ಚಿಕ್ಕಿಯ ಮೂಗುತಿ ಸೇರಿದಂತೆ ಕೆಲ ಸಿನಿಮಾಗಳನ್ನು ಮಾಡುತ್ತಿದ್ದಾರೆ.
Published by:Divya D
First published: