Sushant Singh: ಯೂಟ್ಯೂಬ್​ ಟ್ರೆಂಡಿಂಗ್​ನಲ್ಲಿ ಟಾಪ್​ನಲ್ಲಿದೆ ಸುಶಾಂತ್​ ಅಭಿನಯದ ದಿಲ್ ಬೆಚಾರ ಟ್ರೇಲರ್​..!

Dil Bechara Movie Trailer: ಸಂಜನಾ ಸಂಘಿ ಹಾಗೂ ಸುಶಾಂತ್ ನಟಿಸಿರುವ ಈ ರೊಮ್ಯಾಂಟಿಕ್​ ಲವ್​ ಸ್ಟೋರಿ ದಿಲ್ ಬೆಚಾರ ಚಿತ್ರದ ಟ್ರೇಲರ್​ ವೀಕ್ಷಕರ ಕಣ್ಣು ಒದ್ದೆ ಮಾಡಿದೆ. ಟ್ರೇಲರ್​ ಬಿಡುಗಡೆಯಾಗಿ 19 ಗಂಟೆಗಳು ಕಳೆದರೂ ಇದು ಯೂಟ್ಯೂಬ್​ ಟ್ರೆಂಡಿಂಗ್​ನಲ್ಲಿ ಟಾಪ್​ನಲ್ಲಿದೆ.

Anitha E | news18-kannada
Updated:July 7, 2020, 12:02 PM IST
Sushant Singh: ಯೂಟ್ಯೂಬ್​ ಟ್ರೆಂಡಿಂಗ್​ನಲ್ಲಿ ಟಾಪ್​ನಲ್ಲಿದೆ ಸುಶಾಂತ್​ ಅಭಿನಯದ ದಿಲ್ ಬೆಚಾರ ಟ್ರೇಲರ್​..!
ದಿಲ್​ ಬೆಚಾರ ಸಿನಿಮಾದಲ್ಲಿ ಸುಶಾಂತ್​ ಹಾಗೂ ಸಂಜನಾ ಸಂಘಿ
  • Share this:
ಸುಶಾಂತ್​ ಸಿಂಗ್​ ರಜಪೂತ್​ ಅಭಿನಯದ ಕಡೆಯ ಸಿನಿಮಾ 'ದಿಲ್ ಬೆಚಾರ'ದ ಟ್ರೇಲರ್​ ನಿನ್ನೆಯಷ್ಟೆ ಬಿಡುಗಡೆಯಾಗಿದೆ. ನೆಚ್ಚಿನ ನಟನ ಸಿನಿಮಾ ಟ್ರೇಲರ್​ ಅನ್ನು ಟ್ರೆಂಡ್​ ಮಾಡಲು ಹಾಗೂ ಅತಿ ಹೆಚ್ಚಿನ ವೀಕ್ಷಣೆ ಸಿಗುವಂತೆ ಮಾಡಲು ನೆಟ್ಟಿಗರು ಈಗಾಗಲೇ ಪಣ ತೊಟ್ಟಿದ್ದಾರೆ.

ಸಂಜನಾ ಸಂಘಿ ಹಾಗೂ ಸುಶಾಂತ್ ನಟಿಸಿರುವ ಈ ರೊಮ್ಯಾಂಟಿಕ್​ ಲವ್​ ಸ್ಟೋರಿ' ದಿಲ್ ಬೆಚಾರ ' ಚಿತ್ರದ ಟ್ರೇಲರ್​ ವೀಕ್ಷಕರ ಕಣ್ಣು ಒದ್ದೆ ಮಾಡಿದೆ. ಟ್ರೇಲರ್​ ಬಿಡುಗಡೆಯಾಗಿ 19 ಗಂಟೆಗಳು ಕಳೆದರೂ ಇದು ಯೂಟ್ಯೂಬ್​ ಟ್ರೆಂಡಿಂಗ್​ನಲ್ಲಿ ಟಾಪ್​ನಲ್ಲಿದೆ.ಮುಕೇಶ್​ ಛಾಬ್ರ ನಿರ್ದೇಶನದ ಈ ಸಿನಿಮಾದ ಟ್ರೇಲರ್​ಗೆ ಇಲ್ಲಿಯವರೆಗೆ ಯೂಟ್ಯೂಬ್​ನಲ್ಲಿ 2.3 ಕೋಟಿ ವೀಕ್ಷಣೆ ಸಿಕ್ಕಿದೆ. 2.85 ಲಕ್ಷ ಕಮೆಂಟ್ಸ್ ಹಾಗೂ 5 ಲಕ್ಷ ಲೈಕ್ಸ್​ ಸಿಕ್ಕಿದೆ ಈ ಟ್ರೇಲರ್​ಗೆ.

ಸುಶಾಂತ್ ಸಿಂಗ್​ ರಜಪೂತ್​ ಅಗಲಿಕೆ ನಂತರ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಸ್ವಜನಪಕ್ಷಪಾತ ಹಾಗೂ ಹೊರಗಿನಿಂದ ಬಂದ ಕಲಾವಿದರನ್ನು ನಿರ್ಲಕ್ಷಿಸುವ ಕುರಿತು ಸಮರ ಸಾರಿದ್ದರು. ಇದು ಈಗಲೂ ಮುಂದುವರೆದಿದೆ.

ಇದನ್ನೂ ಓದಿ: Yogi: 10 ನಿಮಿಷ ಕತೆ ಕೇಳಿ ಸಿನಿಮಾಗೆ ಓಕೆ ಎಂದ ಲೂಸ್​ ಮಾದ ಯೋಗಿ: ರಿಲೀಸ್​ ಆಯ್ತು ಟೈಟಲ್​ ಪೋಸ್ಟರ್​..!

ಇನ್ನೂ ಸಹ ಸಲ್ಮಾನ್​ ಖಾನ್​, ಸೋನಮ್​ ಕಪೂರ್​, ಕರಣ್​ ಜೋಹರ್ ಹಾಗೂ ಆಲಿಯಾ ಭಟ್ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಸುಶಾಂತ್​ ಸಾವಿಗೆ ನ್ಯಾಯ ಸಿಗುವವರೆಗೂ ಅಭಿಯಾನವನ್ನು ಮುಂದುವರೆಸುವಂತೆ ಮನವಿ ಮಾಡುತ್ತಿದ್ದಾರೆ.Ramesh Aravind: ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ರಮೇಶ್​ ಅರವಿಂದ್​ ದಂಪತಿ..!


 

ಇದನ್ನೂ ಓದಿ: ಬಹಳ ದಿನಗಳ ನಂತರ ಐ ಲವ್​ ಯೂ ಬೇಬಿ ಎಂದ ನಿವೇದಿತಾ ಗೌಡ: ಇಲ್ಲಿದೆ ವಿಡಿಯೋ..!
Published by: Anitha E
First published: July 7, 2020, 12:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading