ಚಾನ್ಸ್ ಕೊಡಲು ಮಂಚಕ್ಕೆ ಕರೀತಾರೆ: ಚಿತ್ರರಂಗದ ಕೊಳಕು ಬಿಚ್ಚಿಟ್ಟ ನಟಿ ಶೃತಿ ಹರಿಹರನ್

ಸಿನಿಮಾ ರಂಗಗಳಲ್ಲಿ ಲೈಂಗಿಕ ಕಿರುಕುಳದ ಆರೋಪ ಬಹಳ ಹಳೆಯದು. ಅದು ಓಪನ್ ಸೀಕ್ರೆಟ್. ಇತ್ತೀಚಿನ ದಿನಗಳಲ್ಲಿ ನಟಿಯರು ತಮಗೆ ಲೈಂಗಿಕ ಕಿರುಕುಳವಾದ ಘಟನೆಗಳನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ದಕ್ಷಿಣ ಭಾರತದ ಚಿತ್ರ ನಟಿ ಶೃತಿ ಹರಿಹರನ್ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಹೈದರಾಬಾದ್​ನಲ್ಲಿ ನಡೆದ ಇಂಡಿಯಾ ಟುಡೇ ಸೌಥ್ ಕಾಂಕ್ಲೇವ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶೃತಿ ಹರಿಹರನ್, ಸಿನಿಮಾದಲ್ಲಿ ಅವಕಾಶಕ್ಕೆ ಬದಲಾಗಿ ತಮ್ಮನ್ನು ಮಂಚಕ್ಕೆ ಕರೆದ ಘಟನೆಯನ್ನು ನಟಿ ಮೆಲುಕು ಹಾಕಿಕೊಂಡಿದ್ದಾರೆ. ಅಷ್ಟೇ ಅಲ್ಲ, ತಾನು ಇಂತಹ ಕೊಳಕನ್ನು ವಿರೋಧಿಸಿದ್ದರಿಂದಾಗಿ ತನಗೆ ಒಳ್ಳೆಯ ಸಿನಿಮಾಗಳ ಅವಕಾಶ ಬರುವುದು ನಿಂತುಹೋಯಿತು ಎಂದು ಹೇಳಿಕೊಂಡಿದ್ದಾರೆ.


Updated:January 19, 2018, 11:46 AM IST
ಚಾನ್ಸ್ ಕೊಡಲು ಮಂಚಕ್ಕೆ ಕರೀತಾರೆ: ಚಿತ್ರರಂಗದ ಕೊಳಕು ಬಿಚ್ಚಿಟ್ಟ ನಟಿ ಶೃತಿ ಹರಿಹರನ್
ಶ್ರುತಿ ಹರಿಹರನ್
  • Share this:
ಬೆಂಗಳೂರು(ಜ. 19): ಸಿನಿಮಾ ರಂಗಗಳಲ್ಲಿ ಲೈಂಗಿಕ ಕಿರುಕುಳದ ಆರೋಪ ಬಹಳ ಹಳೆಯದು. ಅದು ಓಪನ್ ಸೀಕ್ರೆಟ್. ಇತ್ತೀಚಿನ ದಿನಗಳಲ್ಲಿ ನಟಿಯರು ತಮಗೆ ಲೈಂಗಿಕ ಕಿರುಕುಳವಾದ ಘಟನೆಗಳನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ದಕ್ಷಿಣ ಭಾರತದ ಚಿತ್ರ ನಟಿ ಶೃತಿ ಹರಿಹರನ್ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಹೈದರಾಬಾದ್​ನಲ್ಲಿ ನಡೆದ ಇಂಡಿಯಾ ಟುಡೇ ಸೌಥ್ ಕಾಂಕ್ಲೇವ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶೃತಿ ಹರಿಹರನ್, ಸಿನಿಮಾದಲ್ಲಿ ಅವಕಾಶಕ್ಕೆ ಬದಲಾಗಿ ತಮ್ಮನ್ನು ಮಂಚಕ್ಕೆ ಕರೆದ ಘಟನೆಯನ್ನು ನಟಿ ಮೆಲುಕು ಹಾಕಿಕೊಂಡಿದ್ದಾರೆ. ಅಷ್ಟೇ ಅಲ್ಲ, ತಾನು ಇಂತಹ ಕೊಳಕನ್ನು ವಿರೋಧಿಸಿದ್ದರಿಂದಾಗಿ ತನಗೆ ಒಳ್ಳೆಯ ಸಿನಿಮಾಗಳ ಅವಕಾಶ ಬರುವುದು ನಿಂತುಹೋಯಿತು ಎಂದು ಹೇಳಿಕೊಂಡಿದ್ದಾರೆ.

ಮಲಯಾಳಂ ಚಿತ್ರದ ಮೂಲಕ ಸಿನಿಮಾ ಇಂಡಸ್ಟ್ರಿಗೆ ಅಡಿ ಇಟ್ಟ ಶೃತಿ ಹರಿಹರನ್ ತಮ್ಮ 18ನೇ ವಯಸ್ಸಿನಲ್ಲಿ ಸ್ಯಾಂಡಲ್ವುಡ್​ಗೆ ಪದಾರ್ಪಣೆ ಮಾಡಿದರು. ಅವರ ಮೊದಲ ಕನ್ನಡ ಸಿನಿಮಾದಲ್ಲಿ ಅವರಿಗೆ ಲೈಂಗಿಕ ಕಿರುಕುಳವಾಯಿತಂತೆ. ಪಾತ್ರಕ್ಕೆ ಬದಲಾಗಿ ಮಂಚ ಏರಬೇಕೆಂದು ಒತ್ತಾಯಿಸಲಾಯಿತಂತೆ. ಆ ಸಂದರ್ಭವನ್ನು ಕಾರ್ಯಕ್ರಮದಲ್ಲಿ ನೆನಪಿಸಿಕೊಂಡ ಶೃತಿ ಹರಿಹರನ್, “ನನಗೆ ಏನು ಮಾಡಬೇಕೆಂದು ತೋಚದೆ ನೃತ್ಯ ನಿರ್ದೇಶಕರ ಬಳಿ ಅಳಲು ತೋಡಿಕೊಂಡೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ನಿನಗೆ ಆಗದೇ ಇದ್ದರೆ ಹೊರಟುಹೋಗು ಎಂದರು,” ಎಂದು ವಿವರಿಸಿದ್ದಾರೆ.

ಇದಾಗಿ ನಾಲ್ಕು ವರ್ಷಗಳಲ್ಲಿ ತಮಿಳು ಚಿತ್ರರಂಗದಲ್ಲೂ ಶೃತಿ ಹರಿಹರನ್​ಗೆ ಇಂಥ ಕೆಟ್ಟ ಅನುಭವವಾಗಿದೆ. “ನನ್ನ ಕನ್ನಡ ಚಿತ್ರವೊಂದರ ತಮಿಳು ರೀಮೇಕ್ ಮಾಡುವಾಗ ಅದೇ ಪಾತ್ರದ ಆಫರ್ ನನಗೆ ಕೊಡಲಾಯಿತು. ನಾವು ಐವರು ನಿರ್ಮಾಪಕರಿದ್ದೀವಿ. ನಮಗೆ ಬೇಕಾದ ರೀತಿಯಲ್ಲಿ ನಿಮ್ಮನ್ನು ಎಕ್ಸ್​ಚೇಂಜ್ ಮಾಡುತ್ತೇವೆ ಎಂದರು. ನಾನು ಕೂಡಲೇ ಹೇಳಿದೆ: ಕೈಗೆ ಚಪ್ಪಲಿ ತೆಗೆದುಕೊಳ್ಳಬೇಕಾಗುತ್ತದೆ,” ಎಂದು ಶೃತಿ ಹರಿಹರನ್ ತಿಳಿಸಿದ್ದಾರೆ.

ಆ ಘಟನೆ ಬಳಿಕ ತನ್ನ ಬಗ್ಗೆ ಚಿತ್ರರಂಗದಲ್ಲಿ ಅಪಪ್ರಚಾರ ಆಗತೊಡಗಿತು. ಈ ವ್ಯಕ್ತಿಗೆ ಗೊತ್ತಿರುವ ಹಲವು ಪ್ರೊಡ್ಯೂಸರ್​ಗಳು ನನ್ನ ಬಳಿ ಬಂದು ಈ ಘಟನೆ ಬಗ್ಗೆ ವಿಚಾರಿಸಿದರು. ತಾನು ತಿರುಗೇಟು ನೀಡಿದ್ದು ನಿಜವೆಂದು ತಿಳಿಸಿದ ಬಳಿಕ ತಮಿಳಿನಲ್ಲಿ ಒಳ್ಳೆಯ ಮೂವಿಗಳ ಆಫರ್ ಕಡಿಮೆಯಾಯಿತು ಎಂದು ಶೃತಿ ಹರಿಹರನ್ ಆ ಇಂಡಿಯಾ ಟುಡೇ ಕಾರ್ಯಕ್ರಮದ ವೇಳೆ ಹೇಳಿದ್ದಾರೆ.
First published:January 19, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading