‘ನಾನು ವಿಸ್ಕಿ ವ್ಯಸನಿಯಾಗಿದ್ದೆ‘; ಅಚ್ಚರಿಯ ಸಂಗತಿಯನ್ನು ಹೇಳಿದ ನಟಿ ಶ್ರುತಿ ಹಾಸನ್​

ಎರಡು ವರ್ಷಗಳ ಕಾಲ ನಾನು ಮದ್ಯಪಾನದ ವ್ಯಸನಿಯಾಗಿ ಪ್ರತಿದಿನ ಸಿಕ್ಕಾಪಟ್ಟೆ ಕುಡಿಯುತ್ತಿದೆ.

news18-kannada
Updated:October 10, 2019, 7:20 PM IST
‘ನಾನು ವಿಸ್ಕಿ ವ್ಯಸನಿಯಾಗಿದ್ದೆ‘; ಅಚ್ಚರಿಯ ಸಂಗತಿಯನ್ನು ಹೇಳಿದ ನಟಿ ಶ್ರುತಿ ಹಾಸನ್​
ನಟಿ ಶ್ರುತಿ ಹಾಸನ್
news18-kannada
Updated: October 10, 2019, 7:20 PM IST
ದಕ್ಷಿಣ ಭಾರತದ ಪ್ರಸಿದ್ಧ ನಟಿ, ಕಮಲ್ ಹಾಸನ್ ಮಗಳು ಶ್ರುತಿ ಹಾಸನ್​ ಲಂಡನ್​ ಮೂಲದ ಮೈಕೆಲ್​ ಕಾರ್ಸೇಲ್​ ಜೊತೆ ಲಬ್​​ ಬ್ರೇಕಪ್​ ಮಾಡಿಕೊಂಡ ಸುದ್ದಿ ಸಾಕಷ್ಟು ವೈರಲ್​ ಆಗಿತ್ತು. ಈ ಮಧ್ಯೆ ನಟಿ ಶ್ರುತಿ ಹಾಸನ್​ ಹೇಳಿರುವ ಮಾತೊಂದು ಅಚ್ಚರಿಗೆ ಕಾರಣವಾಗಿದೆ.

ಹೌದು. ನಟಿ ಶುತ್ರಿ ಹಾಸನ್​ ಖಾಸಗಿ ಕಾರ್ಯಕ್ರಮವೊಂದರಲ್ಲಿ ತಮ್ಮ ವೈಯ್ಯಕ್ತಿಕ ಬದುಕಿನಲ್ಲಿ ಆಗಿರುವ ಘಟನೆಯೊಂದನ್ನು ಬಿಚ್ಚಿಟ್ಟಿದ್ದಾರೆ. ಟಾಲಿವುಡ್​ ನಟಿ ಲಕ್ಷ್ಮಿ ಮಂಚು ನಡೆಸಿಕೊಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರುತಿ ಹಾಸನ್​ ‘ನಾನು ವಿಸ್ಕಿ ವ್ಯಸನಿಯಾಗಿದ್ದೆ ಎಂದು ಹೇಳಿದ್ದಾರೆ. ಎರಡು ವರ್ಷಗಳ ಕಾಲ ನಾನು ಮದ್ಯಪಾನದ ವ್ಯಸನಿಯಾಗಿ ಪ್ರತಿದಿನ ಸಿಕ್ಕಾಪಟ್ಟೆ ಕುಡಿಯುತ್ತಿದೆ. ಹೀಗಾಗಿ ನನ್ನ ಆರೋಗ್ಯ ಹಾಳಾಗಿತ್ತು‘ ಎಂದು ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: 90ನೇ ವಾರ್ಷಿಕೋತ್ಸವಕ್ಕೆ ‘ಜಾವಾ‘ ಹೊಸ ಆವೃತ್ತಿ ಬಿಡುಗಡೆ; ಇದರ ಬೆಲೆಯೆಷ್ಟು ಗೊತ್ತಾ?

‘ವಿಪರೀತ ಕುಡಿತದಿಂದಾಗಿ ನನ್ನ ಆರೋಗ್ಯದಲ್ಲಿ ಕೊಂಚ ತೊಂದರೆಗಳು ಕಾಣಿಸಿಕೊಂಡಿತು. ಬಳಿಕ ಎಲ್ಲವನ್ನು ನಿಲ್ಲಿಸಲು ನಿರ್ಧರಿಸಿದೆ. ಜೊತೆಗೆ ನನ್ನ ಜೀವನದಲ್ಲಿ ಹೊಸ ಬದಲಾವಣೆಯಾಗಿವೆ‘ ಎಂದು ಹೇಳಿದ್ದಾರೆ.

ನಂತರ ಮಾತು ಮುಂದುವರಿಸಿದ ನಟಿ ಶ್ರುತಿ ಹಾಸನ್ ‘ಕುಡಿತದ ಚಟದಿಂದಾಗಿ​ ನಾನು ಅನಾರೋಗ್ಯದಿಂದ ಬಳಲುತ್ತಿದ್ದದ್ದು ಯಾರಿಗೂ ತಿಳಿದಿರಲಿಲ್ಲ. ಇದು ನನ್ನ ವೈಯಕ್ತಿಕ ವಿಚಾರವಾದ ಕಾರಣ ನನ್ನ ಸ್ನೇಹಿತರಿಗೂ ಹೇಳಿಲ್ಲ. ಸದ್ಯ ಚಿಕಿತ್ಸೆ ಪಡೆದುಕೊಂಡು ಅನಾರೋಗ್ಯದಿಂದ ಚೇತರಿಸಿಕೊಂಡಿದ್ದೇನೆ. ಚೇತರಿಸಿಕೊಳ್ಳಲು ತುಂಬಾ ಸಮಯ ಬೇಕಾದ ಕಾರಣ ನಾನು ಸಿನಿಮಾಗಳಿಂದ ದೂರವಾದೆ. ಸದ್ಯಕ್ಕೆ ವೃತ್ತಿ ಬದುಕಿನ ಕಡೆಗೆ ದೃಷ್ಟಿ ಹರಿಸಿದ್ದೇನೆ‘ ಎಂದು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಕಾರ್ಸೇಲ್​ ಜೊತೆಗಿನ ಲವ್​​ ಬ್ರೇಕಪ್​ ಮಾಡಿಕೊಂಡಿರುವ ವಿಷಯವನ್ನು ಹೊರಹಾಕಿದ್ದಾರೆ.

First published:October 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...