Shruti Haasan: ತಂದೆ ಕಮಲ್ ಹಾಸನ್-ತಾಯಿ ಸಾರಿಕಾ ಬೇರ್ಪಟ್ಟಿದ್ದು ಒಳ್ಳೆಯದೇ ಆಯ್ತು ಎಂದ ಶ್ರುತಿ ಹಾಸನ್

ನಟಿ ಶ್ರುತಿ ಹಾಸನ್‍ಗೆ ಅಪ್ಪ ಕಮಲ್ ಹಾಸನ್ ಎಂದರೆ ಅಚ್ಚುಮೆಚ್ಚು. ನಮ್ಮ ತಾಯಿಯು ಕೂಡ ತುಂಬಾ ಸಂತೋಷದಿಂದ ಅವರಂದುಕೊಂಡಂತೆ ಜೀವನ ಸಾಗಿಸುತ್ತಿದ್ದಾರೆ. ಇವರಿಬ್ಬರದ್ದು ಅದ್ಭುತ ವ್ಯಕ್ತಿತ್ವ. ಆದರೆ ಅವರಿಬ್ಬರ ಜೀವನ ಅನ್ಯೋನ್ಯವಾಗಿರಲಿಲ್ಲವಂತೆ. ಹೀಗೆಂದು ಶ್ರುತಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಅಪ್ಪ-ಅಮ್ಮನೊಂದಿಗೆ ಶ್ರುತಿ ಹಾಗೂ ಅಕ್ಷರಾ ಹಾಸನ್​

ಅಪ್ಪ-ಅಮ್ಮನೊಂದಿಗೆ ಶ್ರುತಿ ಹಾಗೂ ಅಕ್ಷರಾ ಹಾಸನ್​

  • Share this:
ಬಾಲಿವುಡ್​ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಯ ಸಿನಿಮಾಗಳಲ್ಲಿ ಮಿಂಚುತ್ತಿರುವ ಪ್ರತಿಭೆ ನಟಿ ಶ್ರುತಿ ಹಾಸನ್. ಯಾರ ಪ್ರಭಾವವೂ ಇಲ್ಲದೇ ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡುವುದು ಅಷ್ಟು ಸುಲಭವಲ್ಲ. ಆದರೆ ಆ ಮಾತನ್ನು ಸುಳ್ಳಾಗಿಸಿದವರು ಶ್ರುತಿ ಹಾಸನ್. ಜನಪ್ರಿಯ ನಟ ಕಮಲ್ ಹಾಸನ್ ಹಾಗೂ ನಟಿ ಸಾರಿಕಾ ಅವರ ಮೊದಲ ಮಗಳು ಶ್ರುತಿ ಹಾಸನ್. ತಂದೆ, ನಟನಾಗಿ, ನಿರ್ದೇಶಕ ಹಾಗೂ ನಿರ್ಮಾಪಕರಾಗಿದ್ದರೂ ಅವರ ಹೆಸರನ್ನು ಬಳಸಿಕೊಳ್ಳದೆ ಬೆಳೆದ ನಟಿ ಶ್ರುತಿ ಹಾಸನ್ ಇದೀಗ ತಂದೆ ತಾಯಿ ಬೇರೆಯಾದ ಬಗ್ಗೆ ಮಾತನಡಿದ್ದಾರೆ. ಹೌದು, ಕಮಲ್​ ಹಾಸನ್​ ಹಾಗೂ ಸಾರಿಕಾ ಅವರು ವಿಚ್ಛೇದನ ಪಡೆದು 16 ವರ್ಷಗಳಾಗಿದ್ದು, ಈಗ ಈ ಕುರಿತು ಶ್ರುತಿ ಹಾಸನ್​ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಜೂಮ್ ಡಿಜಿಟಲ್ ಮೀಡಿಯಾಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಶ್ರುತಿ ಹಾಸನ್, ತಂದೆ ಹಾಗೂ ತಾಯಿ ಬೇರ್ಪಟ್ಟಿದ್ದು ಒಳ್ಳೆಯದೇ ಆಯಿತು. ಏಕೆಂದರೆ ಜನರ ಒತ್ತಾಯಕ್ಕೆ ಮಣಿದು ಹೊಂದಾಣಿಕೆ ಇಲ್ಲದೇ ಬಲವಂತವಾಗಿ ಬದುಕು ಕಟ್ಟಿಕೊಳ್ಳುವುದು ಬೇಡವಾಗಿತ್ತು ಎಂದಿದ್ದಾರೆ.

ಕಮಲ್ ಹಾಸನ್ ಮತ್ತು ನಟಿ ಸಾರಿಕಾ 1988ರಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು. ಅವರ ಮೊದಲ ಮಗು ಶ್ರುತಿ (ಜನನ 1986) ಜನಿಸಿದ ನಂತರ ವಿವಾಹವಾದರು. 2002ರಲ್ಲಿ, ದಂಪತಿಗಳು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಕೊನೆಗೆ 2 ವರ್ಷದ ಬಳಿಕ 2004ರಲ್ಲಿ ವಿಚ್ಚೇದನ ಪಡೆದುಕೊಂಡರು. ಬೇರೆಯಾದ ನಂತರ ಇವರಿಬ್ಬರೂ ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ.

Kamal Haasan, Shruti and Kamal Haasan photos, Shruti Haasan hot, Shruti Haasan, Shruti haasan,Shruti haasan size,Shruti haasan age,Shruti haasan fb,Shruti haasan facebook,Shruti haasan instagram,Shruti Haasan,Shruti Haasan fb,Shruti Haasan size,Shruti Haasan age,Shruti Haasan instagram,Shruti Haasan twitter,shruti haasan,shruthi haasan,shruti hassan,shruti haasan songs,shruti haasan movies,shruti haasan interview,shruti haasan funny,shruti haasan gq,shruti haasan,shruthi hassan hot,shruti hassan,shruti haasan hot,shruthi hassan,shruti hassan hot,shruti hassan hot scenes,shruthi,shruti,shruti hasan hot,shruti hassan songs,hassan,shruti hassan interview,shruti haasan songs,shruti haasan navel,shruthi haasan hot,shruthi hasan hot, ಶ್ರುತಿ ಹಾಸನ್​, ವೆಡ್ಡಿಂಗ್​ ವೋವ್ಸ್​, ಬಾಲಿವುಡ್​, ಕಾಲಿವುಡ್ ನಟಿ, Actress Shruti Haasan shared adorable photos with her father Kamal Haasan ae
ಅಪ್ಪನೊಂದಿಗೆ ಶ್ರುತಿ ಹಾಸನ್​
ನಟಿ ಶ್ರುತಿ ಹಾಸನ್‍ಗೆ ಅಪ್ಪ ಕಮಲ್ ಹಾಸನ್ ಎಂದರೆ ಅಚ್ಚುಮೆಚ್ಚು. ನಮ್ಮ ತಾಯಿಯು ಕೂಡ ತುಂಬಾ ಸಂತೋಷದಿಂದ ಅವರಂದುಕೊಂಡಂತೆ ಜೀವನ ಸಾಗಿಸುತ್ತಿದ್ದಾರೆ. ಇವರಿಬ್ಬರದ್ದು ಅದ್ಭುತ ವ್ಯಕ್ತಿತ್ವ. ಆದರೆ ಅವರಿಬ್ಬರ ಜೀವನ ಅನ್ಯೋನ್ಯವಾಗಿರಲಿಲ್ಲ. ಆದರೆ ಅವರಿಬ್ಬರ ಮಾನವೀಯತೆಯ ಆಂತರಿಕ ಸೌಂದರ್ಯವನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಅವರಿಬ್ಬರು ಬೇರ್ಪಟ್ಟಾಗ ನಾನು ಇನ್ನೂ ಚಿಕ್ಕವಳಾಗಿದ್ದೆ. ಅವರಿಬ್ಬರು ಒಟ್ಟಿಗೆ ಕಾಲಕಳೆದ ದಿನಗಳಿಗಿಂತ ಇದೀಗ ಸಂತೋಷವಾಗಿದ್ದಾರೆ ಎಂದು ಹೇಳಿದ್ದಾರೆ.

ಕಮಲ್ ಹಾಸನ್ ಮೊದಲ ಪತ್ನಿ ವಾಣಿ ಗಣಪತಿ
ಕಮಲ್ ಹಾಸನ್ ಅವರಿಗೆ ಇಬ್ಬರು ಪತ್ನಿಯರು. ಸಾರಿಕಾ ಅವರನ್ನು ವಿವಾಹ ಆಗುವುದಕ್ಕಿಂತ ಮೊದಲು ನೃತ್ಯಗಾರ್ತಿ ವಾಣಿ ಗಣಪತಿ ಅವರನ್ನು ಮದುವೆಯಾಗಿದ್ದರು. ನಂತರ ಇವರಿಬ್ಬರು 1988ರಲ್ಲಿ ವಿಚ್ಛೇದನ ಪಡೆದು ಬೇರ್ಪಟ್ಟರು. ಕಮಲ್ ಹಾಸನ್ ಮತ್ತು ಸಾರಿಕಾ ಅವರು 1986ರಲ್ಲಿ ಮೊದಲ ಮಗು ಶ್ರುತಿ ಹಾಸನ್‍ಗೆ ಜನ್ಮವಿತ್ತರು. ಅವರ ಎರಡನೇ ಮಗು ಅಕ್ಷರಾ 1991ರಲ್ಲಿ ಜನಿಸಿದರು. ಅಕ್ಷರಾ 2015 ರಲ್ಲಿ ಹಾಸ್ಯ ಭರಿತ ಶಮಿತಾಭ್ ಸಿನಿಮಾದಲ್ಲಿ ಅಮಿತಾಭ್​ ಬಚ್ಚನ್ ಮತ್ತು ಧನುಷ್​ ಜೊತೆ ಸಹ ನಟಿಯಾಗಿ ನಟಿಸಿದ್ದಾರೆ.

ಇದನ್ನೂ ಓದಿ: ವೆಬ್​ ಸರಣಿ ರೂಪದಲ್ಲಿ ಮಾಯಾಮೃಗ: ಪ್ರಸಾರದ ಬಗ್ಗೆ ಮಾಹಿತಿ ನೀಡಿದ ಟಿ ಎನ್​ ಸೀತಾರಾಮ್

ಶ್ರುತಿ ಹಾಸನ್ ಸಿನಿಮಾ ಪಯಣ
ಶ್ರುತಿ ಹಾಸನ್ ಹಲವಾರು ತಮಿಳು ಮತ್ತು ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ. ಇಮ್ರಾನ್ ಖಾನ್ ಜೊತೆಯಾಗಿ ನಟಿಸಿದ 2009ರ ಚಲನಚಿತ್ರ ಲಕ್ ಮೂಲಕ ಅವರು ಬಾಲಿವುಡ್‍ಗೆ ಪಾದಾರ್ಪಣೆ ಮಾಡಿದರು. ವೆಲ್ಕಮ್ ಬ್ಯಾಕ್, ರಾಮಯ್ಯ ವಸ್ತವಾಯ, ದಿಲ್ ತೋಹ್ ಬಚ್ಚಾ ಹೈ ಜಿ ಮತ್ತು ಡಿ-ಡೇ ಮುಂತಾದ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸಲಾರ್ ಎಂಬ ಚಿತ್ರದಲ್ಲಿ ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ ಅವರೊಂದಿಗೆ ನಾಯಕ ನಟಿಯಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ.
Published by:Anitha E
First published: