Shruthi Haasan: 2ನೇ ಬಾಯ್ ಫ್ರೆಂಡ್​ಗೆ ಮೊದಲು `I love You’ ಹೇಳಿದ್ದೇ ಶ್ರುತಿ ಹಾಸನ್​​ ಅಂತೆ!

ಶ್ರುತಿ ಹಾಸನ್​,  ಶಂತನು ಹಝರಿಕ

ಶ್ರುತಿ ಹಾಸನ್​, ಶಂತನು ಹಝರಿಕ

  • Share this:
ಕಮಲ್​ ಹಾಸನ್ (Kamal Haasan)​ ಮಗಳು ನಟಿ ಶ್ರುತಿ ಹಾಸನ್ (Shruthi Haasan)​ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ತಂದೆ ಹೆಸರಲ್ಲಿ ಅವಕಾಶ ಪಡೆದುಕೊಳ್ಳೋಕೆ ಅವರಿಗೆ ಇಷ್ಟವಿಲ್ಲ. ಹೀಗಾಗಿ, ಜೀವನದ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದನ್ನು ಸ್ವಂತವಾಗಿ ತೆಗೆದುಕೊಳ್ಳುತ್ತಾರೆ. ಲಂಡನ್‌ (London) ಮೂಲದ ಬಾಯ್‌ ಫ್ರೆಂಡ್ (Boyfriend) ಜೊತೆಗೆ ಬ್ರೇಕಪ್‌ (Break Up) ಆದ ಬಳಿಕ ಶೃತಿ ಹಾಸನ್ ಶಂತನು ಹಝರಿಕ (Santanu Hazarika) ಜೊತೆಗೆ ಸುತ್ತಾಡುತ್ತಿರುವ ವಿಚಾರ ಹೊರ ಬಂದಿತ್ತು. ಬಳಿಕ ಶಾಂತನು ಶೃತಿಯ ಹೊಸ ಬಾಯ್ ಫ್ರೆಂಡ್ ಎನ್ನುವುದು ಜಗಜ್ಜಾಹೀರಾಗಿದೆ. ಸೂಕ್ಷ್ಮವಾಗಿ ಈ ವಿಚಾರವನ್ನು ಶ್ರುತಿ ಹಲವು ಕಡೆಗಳಲ್ಲಿ ಹೇಳಿಕೊಂಡಿದ್ದಾರೆ. ಇದೀಗ ಇವರಿಬ್ಬರ ನಡುವೆ ಪ್ರೀತಿ (Love) ಹೇಗಾಯ್ತು? ಯಾರು ಮೊದಲು ಐ ಲವ್​ ಯೂ (I Love You) ಹೇಳಿದ್ದು ಎಂಬುದನ್ನು ಕೂಡ ಶ್ರುತಿ ಹಾಸನ್​ ರಿವೀಲ್​ ಮಾಡಿದ್ದಾರೆ. ಶ್ರುತಿ ಹಾಸನ್ ತಮ್ಮ ಬಾಯ್ ಫ್ರೆಂಡ್ ಶಂತನು ಹಜಾರಿಕಗೆ ಮೊದಲು ತಾವೇ ಪ್ರಪೋಸ್ (Propose) ಮಾಡಿರುವ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿದ್ದಾರೆ. ತಮ್ಮ ಹೊಸ ಬಾಯ್‌ ಫ್ರೆಂಡ್‌ ಜೊತೆಗಿನ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಶಂತನು ಮತ್ತು ಶ್ರುತಿ ತಮ್ಮ ಪ್ರೀತಿ ಮತ್ತು ಹೊಂದಾಣಿಕೆಯ ಬಗ್ಗೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಲಾಗಿದೆ. ಅದಕ್ಕೆ ಶ್ರುತಿ ಹಾಸನ್ ಮತ್ತು ಶಂತನು ಉತ್ತರಿಸಿದ್ದಾರೆ. ಈ ವೇಳೆ ಒಂದಷ್ಟು ಸೀಕ್ರೆಟ್‌ಗಳನ್ನು ನಟಿ ಶ್ರುತಿ ಹಾಸನ್​ ಬಿಟ್ಟುಕೊಟ್ಟಿದ್ದಾರೆ.

ಮೊದಲು  ಪ್ರಪೋಸ್​ ಮಾಡಿದ್ದು ಶ್ರುತಿ ಹಾಸನ್​ ಅಂತೆ!

ಶ್ರುತಿ ಹಾಸನ್ ಹಾಗೂ ಸಂತನು ಹಜಾರಿಕ ಇನ್‍ಸ್ಟಾಗ್ರಾಮ್‍ನಲ್ಲಿ ಕೇಳಲಾದ ಕೆಲವೊಂದು ಕಪಲ್ಸ್ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ವೇಳೆ ನಿಮ್ಮಲ್ಲಿ ಮೊದಲು ಯಾರು ಪ್ರಪೋಸ್ ಮಾಡಿದ್ದು ಎಂಬ ಪ್ರಶ್ನೆಗೆ ಶೃತಿ ಹಾಸನ್ ನಾನೇ ಎಂದು ಹೇಳಿದ್ದಾರೆ. ನಿಮ್ಮಿಬ್ಬರಲ್ಲಿ ಹೆಚ್ಚಾಗಿ ಯಾರು ಪ್ರೊಟೆಕ್ಟ್ ಮಾಡುತ್ತಾರೆ ಎಂಬ ಪ್ರಶ್ನೆಗೆ ಇಬ್ಬರು ಒಬ್ಬರನ್ನೊಬ್ಬರು ತೋರಿಸಿದ್ದಾರೆ. ಮೊದಲ ಬ್ರೇಕಪ್‌ ಬಳಿಕ ಆ ನೋವಿನಿಂದ ಶ್ರುತಿ ಹೊರಬಂದ್ದಿದ್ದಾರೆ, ಸದ್ಯ ಹೊಸ ಜೀವನವನ್ನು ಸಾಗಿಸುತ್ತಿದ್ದಾರೆ. ಇನ್ನು ಶಂತನು ಅವರಿಗೆ ಐ ಲವ್‌ ಯು ಹೇಳುವ ಮೂಲಕ ಪ್ರೇಮಿಯಾಗಿದ್ದಾರೆ ಶ್ರುತಿ ಹಾಸನ್. ಇದಕ್ಕೂ ಮುನ್ನ ಕೆಲವು ಸಂದರ್ಶನಗಳಲ್ಲಿ ಶ್ರುತಿ ಸಿಂಗಲ್‌ ಆಗಿಯೆ ಇರುವುದಾಗಿ ಹೇಳಿಕೊಂಡಿದ್ದರು.



ಇದನ್ನು ಓದಿ: ಬಾಲಿವುಡ್ `ಗ್ರೀಕ್ ಗಾಡ್’​ಗೆ 48ರ ಹರೆಯ..ಈ ವಯಸ್ಸಲ್ಲೂ ಹೃತಿಕ್​ ಸಖತ್​ ಫಿಟ್!

ಮೊದಲು ಇಷ್ಟಪಟ್ಟಿದ್ದು ಸಂತನು ಅಂತೆ!

ಇನ್ನು ಇದೇ ವಿಡಿಯೋದಲ್ಲಿ ಇಬ್ಬರಲ್ಲಿ, ಪ್ರೀತಿ ಮಾಡಲು ಮೊದಲು ಆಸಕ್ತಿ ತೋರಿದ್ದು ಯಾರು ಎನ್ನುವ ಪ್ರಶ್ನೆ ಕೂಡ ಇದೆ. ಅದಕ್ಕೆ ಇಬ್ಬರು ಒಂದೇ ಉತ್ತರ ನೀಡಿದ್ದಾರೆ. ಶ್ರುತಿ ಹಾಸನ್ ಸಂತನು ಎಂದು ಅವರ ಕಡೆಗೆ ಕೈ ತೋರಿಸಿದ್ದಾರೆ. ಅಂತಯೇ ಶಂತನು ಕೂಡ ತಲೆ ದೂಗಿದ್ದಾರೆ. ಇನ್ನು ಮುಂದುವರೆದ ಹಾಗೆ, ಇಬ್ಬರಲ್ಲಿ ಯಾರು ಹೆಚ್ಚು ಕ್ಲೀನ್, ಯಾರು ಬೇಗ ನಿದ್ದೆ ಮಾಡುತ್ತಾರೆ, ಯಾರು ಹೆಚ್ಚು ಹಣ ಖರ್ಚು ಮಾಡುತ್ತಾರೆ ಎನ್ನುವ ಪ್ರಶ್ನೆಗಳು ಕೂಡ ಇವೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಇದನ್ನು ಓದಿ :OTTಯಲ್ಲೂ ದಾಖಲೆ ಬರೆದ ಶಿವಣ್ಣನ `ಭಜರಂಗಿ 2’: 10 ಕೋಟಿ ನಿಮಿಷ ವೀಕ್ಷಣೆ!

ಮೊದಲು ಮೈಕಲ್ ಜೊತೆ ರಿಲೇಷನ್​​ಶಿಪ್​ನಲ್ಲಿದ್ದ ಶ್ರುತಿ!

ಇದಕ್ಕೂ ಮೊದಲು ನಟಿ ಶ್ರುತಿ ಹಾಸನ್ ಲಂಡನ್ ಮೂಲದ ಬಾಯ್‌ ಫ್ರೆಂಡ್ ಹೊಂದಿದ್ದರು. ಮೈಕಲ್‌ ಕೋರ್ಸಲ್ ಜೊತೆಗೆ ಹಲವು ವರ್ಷಗಳು ಶೃತಿ ಬಾಂಧವ್ಯ ಹೊಂದಿದ್ದರು. ಅವರ ಜೊತೆಯಲ್ಲಿ ಶ್ರುತಿ ಲಂಡನ್‌ನಲ್ಲೇ ವಾಸವಿದ್ದರು. ಅವರ ಜೊತೆಯಾದ ಮೇಲೆ ಶ್ರುತಿ ಹಾಸನ್ ಚಿತ್ರಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿದ್ದರು. ಇನ್ನೇನು ಶ್ರು ತಿ ಮತ್ತೆ ಚಿತ್ರ ರಂಗಕ್ಕೆ ಬರುವುದೇ ಇಲ್ಲ ಎನ್ನುವಾಗ, ಮೈಕಲ್ ಜೊತೆಗೆ ಶ್ರುತಿ ಬ್ರೇಕಪ್ ಆಗಿತ್ತು.
Published by:Vasudeva M
First published: