Shruti Haasan: ಲಾಕ್​ಡೌನ್​ನಲ್ಲಿ ಐಫೋನ್​ನಲ್ಲಿ ಶೂಟ್​ ಮಾಡಿದ ಮ್ಯೂಸಿಕ್​ ವಿಡಿಯೋ ರಿಲೀಸ್​ ಮಾಡಿದ ಶ್ರುತಿ ಹಾಸನ್​..!

ಲಾಕ್​ಡೌನ್​ನಲ್ಲಿ ಶ್ರುತಿ, ಸದಾ ಹಾಡುಗಳನ್ನು ಹಾಡುತ್ತಾ ಅದರ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು.ಈಗ ಅವರೇ ಬರೆದು, ಚಿತ್ರೀಕರಿಸಿರುವ ಎಡ್ಜ್​ ಎಂಬ ಹಾಡಿನ ವಿಡಿಯೋ ರಿಲೀಸ್ ಮಾಡಿದ್ದಾರೆ.

Anitha E | news18-kannada
Updated:August 8, 2020, 7:42 PM IST
Shruti Haasan: ಲಾಕ್​ಡೌನ್​ನಲ್ಲಿ ಐಫೋನ್​ನಲ್ಲಿ ಶೂಟ್​ ಮಾಡಿದ ಮ್ಯೂಸಿಕ್​ ವಿಡಿಯೋ ರಿಲೀಸ್​ ಮಾಡಿದ ಶ್ರುತಿ ಹಾಸನ್​..!
ಶ್ರುತಿ ಹಾಸನ್​
  • Share this:
ಕಮಲ ಹಾಸನ್​ ಮಗಳು ಶ್ರುತಿ ಹಾಸನ್​ ಸಿನಿಮಾದಲ್ಲಿ ಅಭಿನಯಿಸುವ ಮುನ್ನ ಸಂಗೀತ ನಿರ್ದೇಶಕಿಯಾಗಿದ್ದವರು. ಜೊತೆಗೆ ಸಖತ್ತಾಗಿ ಹಾಡುತ್ತಾರೆ. ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದರೂ ಶ್ರುತಿ ಹಾಡುವುದನ್ನು ಮಾತ್ರ ಬಿಟ್ಟಿಲ್ಲ. 

ಲಾಕ್​ಡೌನ್​ನಲ್ಲಿ ಶ್ರುತಿ, ಸದಾ ಹಾಡುಗಳನ್ನು ಹಾಡುತ್ತಾ ಅದರ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು.ಈಗ ಅವರೇ ಬರೆದು, ಚಿತ್ರೀಕರಿಸಿರುವ ಎಡ್ಜ್​ ಎಂಬ ಹಾಡಿನ ವಿಡಿಯೋ ರಿಲೀಸ್ ಮಾಡಿದ್ದಾರೆ.



ಶ್ರುತಿ ಹಾಡಿರುವ ಇಂಗ್ಲಿಷ್​ ಹಾಡು ಎಡ್ಜ್ ಇಂದು ರಿಲೀಸ್ ಆಗಿದೆ. ಇದನ್ನು ಶ್ರುತಿ ತಮ್ಮ ಮನೆಯಲ್ಲಿ ತಾವೇ ಚಿತ್ರೀಕರಿಸಿದ್ದಾರೆ. ಲಾಕ್​ಡೌನ್​ನಲ್ಲಿ ಇದರ ಸಾಹಿತ್ಯವನ್ನು ರಚಿಸಿದ್ದಾರೆ.


ಶ್ರುತಿ ಅವರ ಈ ಸಿಂಗಲ್​ ಹಾಡಿನ ವಿಡಿಯೋಗೆ ಮಹೇಶ್ ಬಾಬು, ರಾಣಾ ದಗ್ಗುಬಾಟಿ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಶುಭ ಕೋರುವುದರೊಂದಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.





shruti haasan released her first original Video track Edge
ರಾಣಾ ದಗ್ಗುಬಾಟಿ ಅವರ ಇನ್​ಸ್ಟಾಗ್ರಾಂ ಸ್ಟೋರೀಸ್​


ಶ್ರುತಿ ಜೊತೆಗೆ ಈ ಹಾಡನ್ನು ನಿರ್ಮಿಸಲು ಕರಣ್​ ಪಾರಿಕ್​ ಕೈ ಜೋಡಿಸಿದ್ದಾರೆ. ಇನ್ನು ಹಾಡನ್ನು ಐಫೋನ್​ನಲ್ಲಿ ಶೂಟ್ ಮಾಡಲಾಗಿದೆ. ಇನ್ನು ಶ್ರುತಿ ಹಾಸನ್​ ಲಾಕ್​ಡೌನ್​ನಲ್ಲಿ ಸಾಕಷ್ಟು ಫೋಟೋಶೂಟ್​ಗಳಿಗೆ ಪೋಸ್​ ಕೊಟ್ಟಿದ್ದು, ಅದನ್ನೂ ಅವರೇ ಶೂಟ್ ಮಾಡಿದ್ದಾರೆ.
Published by: Anitha E
First published: August 8, 2020, 7:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading