HOME » NEWS » Entertainment » SHRUTHI KRISHNA SHARED HER SCHOOL BUS PASS PHOTO IN HER INSTAGRAM AE

ಅಪರೂಪದ ಫೋಟೋ ಇರುವ ಶಾಲಾ ದಿನಗಳ ಬಸ್​ ಪಾಸ್​ನ ಪ್ರತಿ ಹಂಚಿಕೊಂಡ ನಟಿ ಶ್ರುತಿ..!

ನಟಿ ಶ್ರುತಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಲೆಟೆಸ್ಟ್​ ಪೋಸ್ಟ್​ ಮಾಡಿದ್ದು, ಇದು ನೆಟ್ಟಿಗರ ಗಮನ ಸೆಳೆಯುತ್ತಿದೆ. 1989ರಲ್ಲಿ ಖರೀದಿಸಿದ ಬಸ್​ ಪಾಸ್​ನ ಪ್ರತಿಯನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದು, ಆಸಕ್ತಿಕರ ವಿಷಯವನ್ನು ಅಭಿಮಾನಿಗಳೊಂದಿಗೆ ಶೇರ್​ ಮಾಡಿದ್ದಾರೆ.

Anitha E | news18-kannada
Updated:March 25, 2021, 4:48 PM IST
ಅಪರೂಪದ ಫೋಟೋ ಇರುವ ಶಾಲಾ ದಿನಗಳ ಬಸ್​ ಪಾಸ್​ನ ಪ್ರತಿ ಹಂಚಿಕೊಂಡ ನಟಿ ಶ್ರುತಿ..!
ನಟಿ ಶ್ರುತಿ ಕೃಷ್ಣ
  • Share this:
ಸ್ಯಾಂಡಲ್​ವುಡ್​ ನಟಿ ಶ್ರುತಿ ರಾಜಕೀಯ ಹಾಗೂ ಸಿನಿಮಾಗಳಲ್ಲಿ ಸಕ್ರಿಯವಾಗಿರುವಂತೆಯೇ ಸಾಮಾಜಿಕ ಜಾಲತಾಣದಲ್ಲೂ ಸಿಕ್ಕಾಪಟ್ಟೆ ಆ್ಯಕ್ಟೀವ್​ ಆಗಿದ್ದಾರೆ. ಪ್ರವಾಸಾದ್ಯಮ ಇಲಾಖೆ ಕುರಿತಾದ ಪೋಸ್ಟ್​ಗಳ ಜತೆಗೆ ಸಿನಿಮಾ ಹಾಗೂ ತಮ್ಮ ವೈಯಕ್ತಿಕ ವಿಷಯಗಳ ಬಗ್ಗೆಯೂ ನೆಟ್ಟಿಗರೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಈ ಹಿಂದೆಯೂ ಸಾಕಷ್ಟು ಪೋಸ್ಟ್​ಗಳ ಮೂಲಕ ತಮ್ಮ ಸಿನಿಮಾ ಹಾಗೂ ಸಿನಿಮಾಗಳ ಚಿತ್ರೀಕರಣ ನಡೆದ ಸ್ಥಳ ಹಾಗೂ ಅಲ್ಲಿನ ಜನರ ಬಗ್ಗೆ ಫೋಟೋ ಸಹಿತ ಮಾಹಿತಿ ಹಂಚಿಕೊಂಡಿದ್ದಾರೆ. ಈಗ ತಮ್ಮ ವೈಯಕ್ತಿಯ ಬದುಕಿಗೆ ಸಂಬಂಧಪಟ್ಟ ವಿಷಯಗಳ ಕುರಿತಾಗಿ ಪೋಸ್ಟ್​ಗಳನ್ನು ಮಾಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ತಮ್ಮ ಮಗಳ ಬಾಲ್ಯ ಹಾಗೂ ತಮ್ಮ ಬಾಲ್ಯಕ್ಕೆ ಸಂಬಂಧಪಟ್ಟ ವಿಷಯಗಳನ್ನು ಶ್ರುತಿ ನೆಟ್ಟಿಗರ ಜೊತೆ ಶೇರ್​ ಮಾಡುತ್ತಿದ್ದಾರೆ. ಅಪರೂಪದ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. 

ಹೌದು, ನಟಿ ಶ್ರುತಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಲೆಟೆಸ್ಟ್​ ಪೋಸ್ಟ್​ ಮಾಡಿದ್ದು, ಇದು ನೆಟ್ಟಿಗರ ಗಮನ ಸೆಳೆಯುತ್ತಿದೆ. 1989ರಲ್ಲಿ ಖರೀದಿಸಿದ ಬಸ್​ ಪಾಸ್​ನ ಪ್ರತಿಯನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದು, ಆಸಕ್ತಿಕರ ವಿಷಯವನ್ನು ಅಭಿಮಾನಿಗಳೊಂದಿಗೆ ಶೇರ್​ ಮಾಡಿದ್ದಾರೆ.








View this post on Instagram






A post shared by Shruthi (@shruthi__krishnaa)






ಇದು ನನ್ನ ಸ್ಕೂಲ್​ ಬಸ್​ ಪಾಸ್​. ಹಲವಾರು ಊರುಗಳಲ್ಲಿ ಓದಿ, ಕೊನೆಗೆ ಬಂದು ಸೇರಿದ್ದು ಮಲ್ಲೇಶ್ವರದ ಕಾರ್ಪೋರೇಷನ್​ ಗರ್ಲ್ಸ್​ ಹೈಸ್ಕೂಲ್​ಗೆ. ನಂತರ ಇದೇ ವರ್ಷದ ಕೊನೆಯಲ್ಲಿ ನನ್ನ ಮೊದಲ ಸಿನಿಮಾ ಆಸೆ ಗೊಬ್ಬ ಮೀಸೆ ಗೊಬ್ಬ ಚಿತ್ರಕ್ಕೆ ಆಯ್ಕೆಯಾಗಿ ನನ್ನ ಸಿನಿಜೀವನ ಶುರುವಾಯಿತು ಎಂದು ಬರೆದುಕೊಂಡಿದ್ದಾರೆ.

Shruthi Krishna, shruthi Krishna Bus Pass Photos, 1989 bus pass photos, Gowri Krishna, Actres Shruthi, Shruthi Mysuru, shruthi Daughter, Shruthi Ex Husband, Shruthi Husband, Sandalwood, ನಟಿ ಶ್ರುತಿ, ಶ್ರುತಿ ಕೃಷ್ಣ, ಸ್ಯಾಂಡಲ್​ವುಡ್​, ಪ್ರವಾಸೋದ್ಯಮ ನಿಗಮದ ಅಧ್ಯಕ್ಷೆ ಶ್ರುತಿ, ಬಿಜೆಪಿ ಶ್ರುತಿ, ಶ್ರುತಿ ಗಂಡ, ಶ್ರುತಿ ಮಗಳು ಗೌರಿ, shruthi Krishna shared her school bus pass photo in her Instagram ae
ನಟಿ ಶ್ರುತಿ ಕೃಷ್ಣ ಅವರ ಶಾಲಾ ದಿನಗಳ ಬಸ್​ ಪಾಸ್​ನ ಪ್ರತಿ


ಶ್ರುತಿ ಅವರು ಹಂಚಿಕೊಂಡಿರುವ ಈ ಬಸ್​ ಪಾಸ್​ 1989ರ ಜೂನ್ 16ರಂದು ವಿತರಿಸಲಾಗಿದೆ. ಇದರ ಬೆಲೆ ಆಗ ಎರಡು ರೂಪಾಯಿ. ಇದರಲ್ಲಿ ಶ್ರುತಿ ಅವರ ಶಾಲಾ ದಿನಗಳ ಅಪರೂಪದ ಫೋಟೋ ಸಹ ಇದೆ. ಇಷ್ಟೇ ಅಲ್ಲ ಮಗಳ ಜೊತೆಗೆ ಬಹಳ ಹಿಂದೆ ತೆಗೆದಿರುವ ಒಂದು ವಿಡಿಯೋವನ್ನೂ ಹಂಚಿಕೊಂಡಿದ್ದಾರೆ.








View this post on Instagram






A post shared by Shruthi (@shruthi__krishnaa)






ಈ ವಿಡಿಯೋದಲ್ಲಿ ಶ್ರುತಿ ತಮ್ಮ ಸಿನಿಮಾದ ಹಾಡನ್ನೇ ಮಗಳಿಗೆ ಹೇಳಿ ಕೊಡುತ್ತಿದ್ದಾರೆ. ಇನ್ನು ಮಗಳು ಗಾಯಕಿ ಆಗಬೇಕೆನ್ನುವ ಆಸೆಯಂತೆ. ಅದಕ್ಕೆ ಸಮಯ ಸಿಕ್ಕಾಗಲೆಲ್ಲ ಮಗಳೊಂದಿಗೆ ಈ ಹೀಗೆ ಸಮಯ ಕಳೆಯೋದು ಎಂದು ಈ ವಿಡಿಯೋ ಜೊತೆಗೆ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಮತ್ತೊಂದು ವೀಕ್ನೆಸ್ ಬಿಚ್ಚಿಟ್ಟ ಸಮೀರಾ ರೆಡ್ಡಿ; ಚಿಕ್ಕ ವಯಸ್ಸಲ್ಲಿದ್ದ ಸಮಸ್ಯೆ ಬಗ್ಗೆ ಮಾತನಾಡಿದ ನಟಿ

ಇನ್ನು ಶ್ರುತಿ ಅವರ ಮಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಾವು ಹಾಡಿರುವ ಹಾಡಿನ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.












ಶ್ರುತಿ ಅವರ ಮಗಳು ಗೌರಿ ಕನ್ನಡ ಸೇರಿದಂತೆ ತೆಲುಗು, ತಮಿಳು ಹಾಗೂ ಇತರೆ ಭಾಷೆಗಳ ಹಾಡುಗಳನ್ನು ಹಾಡಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ಇತ್ತೀಚೆಗಷ್ಟೆ ಅವರು ಹಾಡಿರುವ ರಾಬರ್ಟ್​ ಸಿನಿಮಾದ ಕಣ್ಣು ಹೊಡಿಯಾಕಾ ಹಾಡಿನ ವಿಡಿಯೋ ದರ್ಶನ್​ ಅಭಿಮಾನಿಗಳ ಪುಟಗಳಲ್ಲಿ ಹರಿದಾಡಿತ್ತು.
Published by: Anitha E
First published: March 25, 2021, 4:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories