ಅರ್ಜುನ್ ಸರ್ಜಾ ಮೇಲಿನ ಸಿಟ್ಟಿಗೆ ಶ್ರುತಿಯನ್ನು ಬೆಂಬಲಿಸಿದರಾ ನಟ ಚೇತನ್ ?

G Hareeshkumar | news18
Updated:October 23, 2018, 6:59 AM IST
ಅರ್ಜುನ್ ಸರ್ಜಾ ಮೇಲಿನ ಸಿಟ್ಟಿಗೆ ಶ್ರುತಿಯನ್ನು ಬೆಂಬಲಿಸಿದರಾ ನಟ ಚೇತನ್ ?
  • News18
  • Last Updated: October 23, 2018, 6:59 AM IST
  • Share this:
ನ್ಯೂಸ್ 18 ಕನ್ನಡ

ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಆರೋಪ ವಿಚಾರದಲ್ಲಿ ನಟ ಆ ದಿನಗಳು ಚೇತನ್ ಸೇಡು ತೀರಿಸಿಕೊಳ್ಳಲು ಶ್ರುತಿಯನ್ನು ಬೆಂಬಲಿಸಿದರಾ ಅನ್ನುವ ಅನುಮಾನ ಕೇಳಿ ಬರುತ್ತಿದೆ.

ಅರ್ಜುನ್ ಸರ್ಜಾ ತಮ್ಮ ಮಗಳ ನಟನೆಯ ಪ್ರೇಮ ಬರಹ ಸಿನಿಮಾದಲ್ಲಿ ನಟನೆಗಾಗಿ  ಮುಂಗಡವಾಗಿ 10 ಲಕ್ಷ ರೂ ಪಡೆದುಕೊಂಡಿದ್ದರು. ಬಳಿಕ ವರ್ಕ್ಶಾಪ್ ವೇಳೆ ಚೇತನ್ ನಟನೆ ಒಪ್ಪದ ಹಿನ್ನೆಲೆಯಲ್ಲಿ  ನಟ ಅರ್ಜುನ್ ಸರ್ಜಾ ಅಡ್ವಾನ್ಸ್ ಹಣವನ್ನು  ವಾಪಸ್ ನೀಡುವಂತೆ  ಚೇತನ ಅವರಿಗೆ ನೋಟಿಸ್ ನೀಡಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ  ಅರ್ಜುನ್ ಸರ್ಜಾ ವಿರುದ್ಧದ ಸೇಡಿಗೆ ಶ್ರುತಿಗೆ ಚೇತನ್ ಬೆಂಬಲ ನೀಡಿದ್ದಾರೆ ಆರೋಪ ಬಂದಿದೆ.

ಇಲ್ಲಿ ಓದಿ : #MeToo: ನಟ ಅರ್ಜುನ್​​ ಸರ್ಜಾರಿಗೂ ತಟ್ಟಿದ ಬಿಸಿ: ಫೇಸ್​ಬುಕ್​ನಲ್ಲಿ ಬಾಂಬ್​ ಸಿಡಿಸಿದ ಶ್ರುತಿ ಹರಿಹರನ್​..!

ಶ್ರುತಿ ಹರಿಹರನ್ ವಿರುದ್ದ ಹಿರಿಯ ನಟ ರಾಜೇಶ್ ದೂರು

 

ನಟ ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ #MeToo ಆರೋಪ ಮಾಡಿರುವ ವಿಚಾರವಾಗಿ ಅರ್ಜುನ್​ ಸರ್ಜಾ ಅವರ ಮಾವ, ಹಿರಿಯ ನಟ ರಾಜೇಶ್​  ಚಲನಚಿತ್ರ ವಾಣಿಜ್ಯ ಮಂಡಳಿಗೆ ಶೃತಿ ಹರಿಹರನ್ ವಿರುದ್ಧ ದೂರು ನೀಡಿದರು.ಮಾಧ್ಯಮದ ಮುಂದೆ ಎಲ್ಲವನ್ನು ಪುನರಾವರ್ತನೆ ಮಾಡೋದಕ್ಕೆ‌ ನಾನು ಬರೋದಿಲ್ಲ. ಬುರ್ಖಾ ಹಾಕಿ ಆರೋಪ ಮಾಡೋರ ಬಗ್ಗೆ ನಂಬರ್ ಹಾಗೂ ಪೂರ್ಣ ವಿಳಾಸ ನೀಡಿ. ಅವರನ್ನು ನ್ಯಾಯಾಲಯದಲ್ಲಿ ಬುರ್ಖಾ ತೆಗೆಸೋ ಕೆಲಸ ನಾನು ಮಾಡುತ್ತೇನೆ. ಕಲಾವಿದರನ್ನು ಕರೆಸಿ ಅವರ ವಾಯ್ಸ್ ಟೆಸ್ಟ್ ಮಾಡಿಸುತ್ತಾರೆ, ಆಡಿಷನ್ ಮಾಡ್ತಾರೆ. ಇಷ್ಟ ಆದ್ರೇ ತೆಗೆದುಕೊಳ್ತಾರೆ ಇಲ್ಲ ಅಂದ್ರೆ ವಾಪಸ್ ಕಳಿಸುತ್ತಾರೆ. ಅಷ್ಟಕ್ಕೆ ಸೇಡು ತೀರಿಸಿಕೊಂಡ್ರೆ ಏನು ಮಾಡೋದಕ್ಕೆ ಆಗೋದಿಲ್ಲ ಅಂತಾ ನಟ ಚೇತನ್​ಗೆ ಟಾಂಗ್​ ನೀಡಿದರು.

ಇಲ್ಲಿ ಓದಿ :  #MeToo: ಬಾಲಿವುಡ್​ನಲ್ಲಿ ದೊಡ್ಡ ನಟರಿಂದಲೇ ನನಗೂ ಕಿರುಕುಳ ಆಗಿದೆ: ಅವಂತಿಕಾ ಶೆಟ್ಟಿ..!

ಇನ್ನೂ ನ್ಯೂಸ್ 18 ಕನ್ನಡಕ್ಕೆ ನಟ ಚೇತನ್ ಪ್ರತಿಕ್ರಿಯೆ ನೀಡಿದ್ದು,  ಅರ್ಜುನ್ ಸರ್ಜಾ ಪುತ್ರಿಯ ಸಿನಿಮಾಕ್ಕೆ ನಾನು ಆಯ್ಕೆಯಾಗಿದ್ದೆ. 10 ಲಕ್ಷ ರೂ. ಅಡ್ವಾನ್ಸ್ ಪೇಮೆಂಟ್ ಆಗಿರೋದು ನಿಜ. ಅರ್ಜುನ್ ಸರ್ಜಾ ಡೈರೆಕ್ಟ್ ಆಗಿ ಈ ಹಣವನ್ನು ವಾಪಸ್ ಕೇಳಿಲ್ಲ ಆದರೆ ಅರ್ಜುನ್ ಸರ್ಜಾ ಮುಂದೆ ಬೇರೆ ಚಿತ್ರ ಮಾಡುವವರಿದ್ದರು. ಅರ್ಜುನ್ ಸರ್ಜಾ ವಿರುದ್ಧ ವೈಯಕ್ತಿಕ ದ್ವೇಷ ಏನೂ ಇಲ್ಲ ಎಂದು ಹೇಳಿದ್ದಾರೆ.

ಅರ್ಜುನ್ ಸರ್ಜಾ ವಿರುದ್ಧ ಹಿಂದೂ ವಿರೋಧಿಗಳು ಷಡ್ಯಂತ್ರ

ಅರ್ಜುನ್ ಸರ್ಜಾ ಸ್ನೇಹಿತ ಪ್ರಶಾಂತ್ ಸಂಬರ್ಗಿ ಪ್ರತಿಕ್ರಿಯೆ ನೀಡಿದ್ದು, ಅರ್ಜುನ್ ಸರ್ಜಾ ವಿರುದ್ಧ ಹಿಂದೂ ವಿರೋಧಿಗಳು ಷಡ್ಯಂತ್ರ ನಡೆಸಿದ್ದು, 10 ದಿನ ಹಿಂದೆಯೇ ಶ್ರುತಿ ಹರಿಹರನ್ ಸುದ್ದಿಗೋಷ್ಠಿ ನಿಗದಿ ಪಡಿಸಿಲಾಗಿತ್ತು. ದಿನ ನಿಗದಿಯಾದಂದೆ ನಟಿ ಸಂಗೀತಾ ಭಟ್ ಕೂಡಾ ಆರೋಪ ಮಾಡಿದ್ದರು. ಬಳಿಕ ಪ್ರಕಾಶ್ ರೈ ಕೂಡಾ ಶ್ರುತಿ ಹರಿಹರನ್ ಪರ ಹೇಳಿಕೆ ನೀಡಿದ್ದರು. ಗೋಲ್ಡನ್ ಸ್ಟಾರ್ ಗಣೇಶ್ ವಿರುದ್ಧವೂ ಕಿರುಕುಳದ ಆರೋಪ ಮಾಡಿದ್ದರು. ಗಣೇಶ್ ಪತ್ನಿ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಹಿನ್ನೆಲೆ ಆರೋಪ ಮಾಡಿದ್ದಾರೆ.  ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಅಜಯ್ ದೇವಗನ್, ನಾನಾ ಪಾಟೇಕರ್  ಸೇರಿದಂತೆ ಮತ್ತಿತರ ಹಿಂದೂ ಪರ ಇರುವ ನಟರ ವಿರುದ್ಧ ಈ ಅಭಿಯಾನ ನಡೀತಿದೆ ಎಂದು  ಪ್ರಶಾಂತ್ ಸಂಬರ್ಗಿ ಆರೋಪ ಮಾಡಿದ್ದಾರೆ.

ಇಲ್ಲಿ ಓದಿ :  #MeToo: ಶ್ರುತಿ ಹರಿಹರನ್​ ಬೆಂಬಲಕ್ಕೆ ನಿಂತ ಚಂದನವನದ ಕಲಾವಿದರು..! 
First published: October 22, 2018, 3:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading