ಅರ್ಜುನ್​ ಸರ್ಜಾ ವಿರುದ್ಧ #MeToo ಎಂದಿದ್ದಕ್ಕೆ ಶ್ರುತಿ ಹರಿಹರನ್​ಗೆ ಸಿಕ್ಕ ಪ್ರತಿಫಲವೇನು ಗೊತ್ತಾ?

#MeToo ಅಭಿಯಾನದ ಪರವಾಗಿ ಧ್ವನಿಯೆತ್ತಿದ ನಂತರ ಶ್ರುತಿ ಹರಿಹರನ್​ ಅವರಿಗೆ ಸಿನಿಮಾ ಅವಕಾಶಗಳೇ ಕಡಿಮೆಯಾಗಿದೆ. ಅರ್ಜುನ್​ ಸರ್ಜಾ ವಿರುದ್ಧ ಮಾತನಾಡುವ ಮೊದಲು ವಾರಕ್ಕೆ ಮೂರ್ನಾಲ್ಕು ಸಿನಿಮಾ ಕಥೆಗಳನ್ನು ಕೇಳುತ್ತಿದ್ದ ಶ್ರುತಿಯನ್ನು ಈಗ ಕೇಳುವವರೇ ಇಲ್ಲವಾಗಿದ್ದಾರೆ.

Sushma Chakre | news18
Updated:December 11, 2018, 10:34 PM IST
ಅರ್ಜುನ್​ ಸರ್ಜಾ ವಿರುದ್ಧ #MeToo ಎಂದಿದ್ದಕ್ಕೆ ಶ್ರುತಿ ಹರಿಹರನ್​ಗೆ ಸಿಕ್ಕ ಪ್ರತಿಫಲವೇನು ಗೊತ್ತಾ?
ಶ್ರುತಿ ಹರಿಹರನ್
  • News18
  • Last Updated: December 11, 2018, 10:34 PM IST
  • Share this:
ನಟ ಅರ್ಜುನ್​ ಸರ್ಜಾ ತನ್ನ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾರೆ, ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ #MeToo ಅಭಿಯಾನದ ಮೂಲಕ ಧ್ವನಿಯೆತ್ತಿದ್ದರು ನಟಿ ಶ್ರುತಿ ಹರಿಹರನ್​. 2 ತಿಂಗಳ ಹಿಂದೆ ಸಿನಿಮಾರಂಗದ ಹಲವರ ಅಸಲಿ ಮುಖವನ್ನು ಬಯಲು ಮಾಡಿದ್ದ  #MeToo ಅಭಿಯಾನ ಇದೀಗ ಸ್ವಲ್ಪ ತಣ್ಣಗಾಗಿದೆ.

ಈ ಅಭಿಯಾನದಲ್ಲಿ ಸಂಗೀತಾ ಭಟ್, ಸಂಜನಾ ಗಲ್ರಾನಿ, ತನುಶ್ರೀ ದತ್ತಾ, ಶ್ರುತಿ ಹರಿಹರನ್ ಸೇರಿದಂತೆ ಅನೇಕ ನಟಿಯರು ತಮಗಾದ ಕೆಟ್ಟ ಅನುಭವಗಳನ್ನು ಹಂಚಿಕೊಂಡಿದ್ದರು. ಆದರೆ, ಇವರಲ್ಲಿ ಅತಿಯಾಗಿ ಚರ್ಚೆಗೊಳಗಾಗಿದ್ದು ಮಾತ್ರ ಶ್ರುತಿ ಹರಿಹರನ್. ಅದಕ್ಕೆ ಕಾರಣವೂ ಇತ್ತು. ದಕ್ಷಿಣ ಭಾರತದ ಸಿನಿಮಾರಂಗದಲ್ಲಿ 3 ದಶಕಗಳಿಗೂ ಹೆಚ್ಚು ಕಾಲದಿಂದ ಸಕ್ರಿಯರಾಗಿರುವ ಅರ್ಜುನ್ ಸರ್ಜಾ ಮೇಲೆ ಶ್ರುತಿ ಹರಿಹರನ್​ ಆರೋಪ ಮಾಡಿದ್ದರಿಂದ ಚಿತ್ರರಂಗದ ಬಹುಪಾಲು ಕಲಾವಿದರು ಅರ್ಜುನ್​ ಪರವಾಗಿ ಧ್ವನಿಯೆತ್ತಿದ್ದರು. ಇದರಿಂದ ಶ್ರುತಿಗೆ ಬೆಂಬಲವೇ ಇಲ್ಲದಂತಾಗಿತ್ತು.

ಇದನ್ನೂ ಓದಿ: ಶ್ರುತಿ ಹರಿಹರನ್​ಗೆ ಆಗಿದೆಯಾ ಮದುವೆ? ಯಾರು ಆಕೆ ಗಂಡ? ಪೊಲೀಸ್ ಠಾಣೆಯಲ್ಲಿ ಬಯಲಾಯ್ತು ರಹಸ್ಯ

ಆ ಘಟನೆ ನಡೆದು ಒಂದೂವರೆ ತಿಂಗಳ ಮೇಲಾಗಿದೆ. ಪ್ರಕರಣವೀಗ ನ್ಯಾಯಾಲಯದಲ್ಲಿದ್ದು, ವಿಚಾರಣೆ ನಡೆಯುತ್ತಿದೆ. ಬಲವಾದ ಸಾಕ್ಷಿಗಳ ಕೊರತೆಯಿಂದ ಪ್ರಕರಣ ಇತ್ಯರ್ಥವಾಗದೆ ನಿಂತಲ್ಲೇ ನಿಂತಿದೆ. ಆದರೆ, ತನಗಾದ ಕೆಟ್ಟ ಅನುಭವವನ್ನು ಮಾಧ್ಯಮದೆದುರು ಹೇಳಿಕೊಂಡಿದ್ದ ಶ್ರುತಿ ಹರಿಹರನ್​ ಮಾತ್ರ ಅದರ ಪರಿಣಾಮವನ್ನು ಎದುರಿಸುತ್ತಲೇ ಇದ್ದಾರೆ.

ಸಿನಿಮಾ ಅವಕಾಶಗಳೇ ಕಡಿಮೆಯಾಗಿದೆಯಂತೆ:

#MeToo ಅಭಿಯಾನದ ಪರವಾಗಿ ಧ್ವನಿಯೆತ್ತಿದ ನಂತರ ಶ್ರುತಿ ಹರಿಹರನ್​ ಅವರಿಗೆ ಸಿನಿಮಾ ಅವಕಾಶಗಳೇ ಕಡಿಮೆಯಾಗಿದೆಯಂತೆ. ಇವತ್ತಷ್ಟೇ ಅವರ 'ನಾತಿಚರಾಮಿ' ಸಿನಿಮಾದ ಟ್ರೈಲರ್​ ಬಿಡುಗಡೆಯಾಗಿದ್ದು, ಸಾಕಷ್ಟು ಮೆಚ್ಚುಗೆಯನ್ನೂ ಪಡೆಯುತ್ತಿದೆ. ಆದರೆ, ಸೆಪ್ಟೆಂಬರ್​ ತಿಂಗಳ ನಂತರ ಶ್ರುತಿಗೆ ಯಾವ ಉತ್ತಮ ಅವಕಾಶಗಳೂ ಸಿಗುತ್ತಿಲ್ಲ ಎಂಬುದು ಅವರ ಬೇಸರಕ್ಕೆ ಕಾರಣ.

ಇದನ್ನೂ ಓದಿ: ಅರ್ಜುನ್ ಸರ್ಜಾ ಆಪ್ತ ಪ್ರಶಾಂತ್​ ಸಂಬರಗಿ ವಿರುದ್ಧ ತಡರಾತ್ರಿ ದೂರು ನೀಡಿದ ಶ್ರುತಿ ಹರಿಹರನ್ನನ್ನ ಮೇಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡುವ ಮೊದಲು ವಾರಕ್ಕೆ 3 ಸಿನಿಮಾಗಳ ಆಫರ್​ ಬರುತ್ತಿತ್ತು. ಅದರಲ್ಲಿ ನನಗೆ ಇಷ್ಟವಾದ ಕತೆ, ನಿರ್ದೇಶಕರು, ಪಾತ್ರವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಸಿಗುತ್ತಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾದ  ನಾನು ಅಭಿನಯಿಸಿದ್ದ 'ಅಂಬಿ ನಿಂಗ್​ ವಯಸ್ಸಾಯ್ತೋ' ಸಿನಿಮಾ ಯಶಸ್ವಿ ಪ್ರದರ್ಶನವನ್ನೂ ಕಂಡಿತ್ತು. ಆದರೂ ಯಾಕೋ ಯಾವ ಒಳ್ಳೆಯ ಆಫರ್​ಗಳೂ ಬರುತ್ತಿಲ್ಲ. ಸೆಪ್ಟೆಂಬರ್​ ತಿಂಗಳ ನಂತರ ಹೆಚ್ಚೆಂದರೆ 2 ಸಿನಿಮಾಗಳ ಆಫರ್​ ಬಂದಿರಬಹುದು. ಆದರೆ, ಅವೆರಡರ ಕತೆ, ಪಾತ್ರಗಳು ನನಗೆ ಇಷ್ಟವಾಗದ ಕಾರಣ ನಾನು ಅವನ್ನು ಒಪ್ಪಿಕೊಂಡಿಲ್ಲ ಎಂದು ಶ್ರುತಿ ಹರಿಹರನ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ರೆಬೆಲ್ ಅಂಬಿ​ ಅಂಗಳದಲ್ಲಿ ಶ್ರುತಿ-ಅರ್ಜುನ್​ #MeToo ಪ್ರಕರಣ..!

First published: December 11, 2018, 10:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading