Sudharani ಮನೆಯಲ್ಲಿ ರಾಗಿ ಮುದ್ದೆ ಪಾರ್ಟಿ: ಎಂಜಾಯ್​ ಮಾಡಿದ ಶ್ರುತಿ-ಮಾಳವಿಕಾ ಅವಿನಾಶ್​..!

ಸುಧಾರಾಣಿ, ಮಾಳವಿಕಾ ಅವಿನಾಶ್ ಹಾಗೂ ಶ್ರುತಿ ಅವರು ಮಾಡುವ ಪಾರ್ಟಿಗಳು ಸಖತ್ ಕ್ರೇಜಿ ಆಗಿರುತ್ತವೆ. ಹೌದು, ಈಗ ಅವರ ರಾಗಿ ಮುದ್ದೆ ಪಾರ್ಟಿ ಬಗ್ಗೆ ಇಲ್ಲಿ ಮಾಹಿತಿ ಕೊಡುತ್ತೇವೆ ಓದಿ...

ಸುಧಾರಾಣಿ ಮನೆಯಲ್ಲಿ ಬಿಸಿ ಬಿಸಿ ರಾಗಿ ಮುದ್ದೆ ಮಾಡಿದ ನಟಿ ಶ್ರುತಿ

ಸುಧಾರಾಣಿ ಮನೆಯಲ್ಲಿ ಬಿಸಿ ಬಿಸಿ ರಾಗಿ ಮುದ್ದೆ ಮಾಡಿದ ನಟಿ ಶ್ರುತಿ

  • Share this:
ಸಾಮಾನ್ಯವಾಗಿ ಯಾವ ಸಿನಿರಂಗ ನೋಡಿದರೂ ಅಲ್ಲಿ, ಸ್ಟಾರ್ ವಾರ್​ ಅನ್ನೋ ಮಾತು ಕೇಳಿಸದೆ ಇರೋದಿಲ್ಲ. ನಟಿಯರಲ್ಲಂತೂ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗೋದಿಲ್ಲ. ಬಾಲಿವುಡ್​ನಲ್ಲಿ (Bollywood) ಇದು ಕೊಂಚ ಹೆಚ್ಚಾಗಿದೆ ಎಂದರೆ ತಪ್ಪಾಗದು. ಈ ವಿಷಯ ಹೆಚ್ಚಾಗಿ ಕಾಫಿ ವಿಥ್ ಕರಣ್ ಕಾರ್ಯಕ್ರಮದಲ್ಲಿ ಕರಣ್ ಜೋಹರ್ ಪ್ರಶ್ನೆ ಕೇಳುವಾಗಲೇ ಅರ್ಥವಾಗಿ ಬಿಡುತ್ತದೆ. ಆದರೆ, ಸ್ಯಾಂಡಲ್​ವುಡ್ (Sandalwood)​ನಲ್ಲಿ ಸ್ಟಾರ್​ ವಾರ್​ (Star War) ಅನ್ನೋ ಪದ  ಆಗೊಮ್ಮೆ ಈಗೊಮ್ಮೆ ಕೇಳಿಸುತ್ತಿರುತ್ತದೆ. ಕನ್ನಡದಲ್ಲಿ ನಟ-ನಟಿಯರು ಒಂದು ಕುಟುಂಬದಂತೆ ಇರುತ್ತಾರೆ ಎಂದೂ ಹೇಳಲಾಗುತ್ತದೆ. ಈ ಮಾತೂ ಸುಳ್ಳಲ್ಲ. ಆದರೆ, ಸ್ಯಾಂಡಲ್​ವುಡ್​ನ  ಈ ತಾರೆಯರು ಮಾತ್ರ ಸ್ಟಾರ್ ವಾರ್ ಎಂಬ ಮಾತಿಗೆ ಅಪವಾದ ಎಂಬಂತೆ ಬದುಕುತ್ತಿದ್ದಾರೆ. ಸದ್ಯ ಪೋಷಕರ ಪಾತ್ರಗಳಲ್ಲಿ ಮಿಂಚುತ್ತಿರುವ ನಟಿಯರಾದ ಸುಧಾರಾಣಿ (Sudharani), ಶ್ರುತಿ  (Shruthi) ಹಾಗೂ ಮಾಳವಿಕಾ (Malavika Avinash) ನಿಜ ಜೀವನದಲ್ಲಿ ಆತ್ಮೀಯ ಸ್ನೇಹಿತೆಯರು. 

ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಳ್ಳುವ ಸುಧಾರಾಣಿ, ಮಾಳವಿಕಾ ಅವಿನಾಶ್ ಹಾಗೂ ಶ್ರುತಿ ಸ್ಯಾಂಡಲ್​ವುಡ್​ನಲ್ಲಿ ಒಳ್ಳೆಯ ಗೆಳತಿಯರು. ಕಷ್ಟ-ಸುಖ ಏನೇ ಇರಲಿ ಎಲ್ಲವನ್ನೂ ಸಮನಾಗಿ ಹಂಚಿಕೊಳ್ಳುತ್ತಾ ಸದಾ ತಮ್ಮ ಗೆಳೆತನದ ಝಲಕ್​ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.


View this post on Instagram


A post shared by Shruthi (@shruthi__krishnaa)


ಹೌದು, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಸುಧಾರಾಣಿ, ಮಾಳವಿಕಾ ಅವಿನಾಶ್ ಹಾಗೂ ಶ್ರುತಿ ಅವರು ಆಗಾಗ ತಮ್ಮ ಇನ್​ಸ್ಟಾಗ್ರಾಂನಲ್ಲಿ ಫೋಟೋಗಳು ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ಈ ಮೂರು ಮಂದಿ ಆಗಾಗ ಒಂದೆಡೆ ಸೇರಿ ಸಂತೋಷದಿಂದ ಕಾಲ ಕಳೆಯುತ್ತಾರೆ. ಅಲ್ಲದೆ ಪಾರ್ಟಿ ಸಹ ಮಾಡುತ್ತಾರೆ.

ಇದನ್ನೂ ಓದಿ: Weight Loss: 15 ಕೆಜಿ ತೂಕ ಇಳಿಸಿದ Bharti Singh: ವೇಗವಾಗಿ ತೂಕ ಇಳಿಸಲು ಈ ನಾಲ್ಕು ಕ್ರಮಗಳನ್ನು ಅನುಸರಿಸಿ..!

ಸುಧಾರಾಣಿ, ಮಾಳವಿಕಾ ಅವಿನಾಶ್ ಹಾಗೂ ಶ್ರುತಿ ಅವರು ಮಾಡುವ ಪಾರ್ಟಿಗಳು ಸಖತ್ ಕ್ರೇಜಿ ಆಗಿರುತ್ತವೆ. ಹೌದು, ಈಗ ಅವರ ರಾಗಿ ಮುದ್ದೆ ಪಾರ್ಟಿ ಬಗ್ಗೆ ಇಲ್ಲಿ ಮಾಹಿತಿ ಕೊಡುತ್ತೇವೆ ಓದಿ...
ಮಾಳವಿಕಾ ಅವಿನಾಶ್​ ಹಾಗೂ ಶ್ರುತಿ ಅವರು ಗೆಳತಿ ಸುಧಾರಾಣಿ ಅವರ ಮನೆಗೆ ಭೇಟಿ ಕೊಟ್ಟಿದ್ದು, ಅಲ್ಲೇ ಕೆಲ ಸಮಯ ಕಳೆದಿದ್ದಾರೆ. ಸುಧಾರಾಣಿ ಅವರ ಅಡುಗೆ ಮನೆಗೆ ಲಗ್ಗೆ ಇಟ್ಟ ನಟಿ ಶ್ರುತಿ ಅವರು ಸಖತ್ತಾಗಿ ಬಿಸಿ ಬಿಸಿ ರಾಗಿ ಮುದ್ದೆ ಮಾಡಿ ಉಣ ಬಡಿಸಿದ್ದಾರೆ. ಶ್ರುತಿ ಅವರಿಗೆ ಅಡುಗೆ ಮಾಡುವುದೆಂದರೆ ತುಂಬಾ ಇಷ್ಟವೆನಿಸುತ್ತದೆ. ಅವರು ಯಾವ ಆತ್ಮೀಯರ ಮನೆಗೆ ಭೇಟಿ ಕೊಟ್ಟರೂ ಅಲ್ಲಿ ಅಡುಗೆ ಮಾಡಿದ ಬಡಿಸುತ್ತಾರೆ.

ಶ್ರುತಿ ಅವರು ಹೇಗೆ ತಟ್ಟೆ ಬಳಸಿ ರಾಗಿ ಮುದ್ದೆ ಮಾಡಿದ್ದಾರೆ ಅಂತ ಸ್ನೇಹಿತೆಯರು ವಿಡಿಯೋ ಮಾಡಿದ್ದು, ಅದನ್ನು ಸುಧಾರಾಣಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ರಾಗಿ ಮುದ್ದೆ ಪಾರ್ಟಿ ಎಂದು ಶೀರ್ಷಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ: Yash-KGF 2: ಸಿನಿಮಾದಿಂದ ಹೊರ ಬಂದ ನಂತರ ನಿರ್ಮಾಪಕರಿಗೆ ಹಣ ಹಿಂತಿರುಗಿಸಿದ್ದಾರಂತೆ ಯಶ್​..!

ಸುಧಾರಾಣಿ, ಮಾಳವಿಕಾ ಅವಿನಾಶ್ ಹಾಗೂ ಶ್ರುತಿ ಅವರು ಒಟ್ಟಿಗೆ ಸೇರಿ ಹೀಗೆ ಎಂಜಾಯ್ ಮಾಡಿರೋದು ಇದೇ ಮೊದಲೇನಲ್ಲ. ಕೆಲವು ದಿನಗಳ ಹಿಂದೆಯಷ್ಟೆ ಶ್ರುತಿ ಹಾಗೂ ಮಾಳವಿಕಾ ಅವಿನಾಶ್​, ಶ್ರುತಿ ಅವರ ಮಗಳು ಗೌರಿ ಹಾಗೂ ಸುಧಾರಾಣಿ ಅವರ ಮಗಳು ಸೇರಿ ಸಖತ್ ಸರ್ಪ್ರೈಸ್​ ಬರ್ತ್​ಡೇ ಪಾರ್ಟಿ ಆಯೋಜಿಸಿದ್ದರು. ತಮ್ಮ ಹುಟ್ಟುಹಬ್ಬದಂದು ಸಿಕ್ಕಿದ್ದ ಸರ್ಪ್ರೈಸ್​ ನೋಡಿ ಸುಧಾರಾಣಿ ಸಂತೋಷದಿಂದ ಮಾತು ಬಾರದಂತಾಗಿದ್ದರು.


View this post on Instagram


A post shared by Shruthi (@shruthi__krishnaa)


ಇನ್ನು ಈ ಗೆಳತಿಯರು ಇತ್ತೀಚೆಗಷ್ಟೆ ಹಿರಿಯ ನಟಿ ಲೀಲಾವತಿ ಅವರ ಮನೆಗೆ ಭೇಟಿ ನೀಡಿದ್ದು, ಅವರ ಆರೋಗ್ಯ ವಿಚಾರಿಸಿದ್ದರು. ಅಲ್ಲದೆ ಅಲ್ಲೆ, ಅಡುಗೆ ಮಾಡಿ ಅವರಿಗೂ ಬಡಿಸಿ, ಕೆಲ ಸಮಯ ಅವರೊಂದಿಗೆ ಕಳೆದಿದ್ದರು.
Published by:Anitha E
First published: