HOME » NEWS » Entertainment » SHRUJAN LOKESH MAJA TALKIES TO BEGIN FROM AUGUST END PROMO OUT HG

ಮತ್ತೆ ನಕ್ಕು ನಗಿಸಲು ಬರುತ್ತಿದ್ದಾರೆ ಸೃಜಾ; ಆಗಸ್ಟ್ 29ರಿಂದ ಮಜಾ ಟಾಕೀಸ್​​!

Maja Talkies: ಕಲರ್ಸ್​ ಕನ್ನಡ ವಾಹಿನಿ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಮಜಾ ಟಾಕೀಸ್​ ಪ್ರೊಮೋವನ್ನು ಹಂಚಿಕೊಂಡಿದೆ. ನಟ ಸೃಜನ್​ ಲೊಕೇಶ್​ ಕೂಡ ಸಾಮಾಜಿಕ ಜಾಲತಾಣದಲ್ಲಿ ಮಜಾ ಟಾಕೀಸ್​ ಪ್ರೊವೋವನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳಂತೂ ಈ ಪ್ರೊಮೋ ನೋಡಿ ಮತ್ತೆ ತಮ್ಮ ಇಷ್ಟದ ಕಾರ್ಯಕ್ರಮ ಮೂಡಿ ಬರುತ್ತಿದೆ ಎಂದು ಖುಷಿ ಹಂಚಿಕೊಳ್ಳುತ್ತಿದ್ದಾರೆ.

news18-kannada
Updated:August 18, 2020, 2:44 PM IST
ಮತ್ತೆ ನಕ್ಕು ನಗಿಸಲು ಬರುತ್ತಿದ್ದಾರೆ ಸೃಜಾ; ಆಗಸ್ಟ್ 29ರಿಂದ ಮಜಾ ಟಾಕೀಸ್​​!
ಮಜಾ ಟಾಕೀಸ್
  • Share this:
ಕನ್ನಡದ ಕಿರುತೆರೆಯಲ್ಲಿ ಹೊಸ ಅಲೆ ಎಬ್ಬಿಸಿದ ಟಾಕಿಂಗ್​ ಶೋ ಮಜಾ ಟಾಕೀಸ್​ ಸಾಕಷ್ಟು ಜನಪ್ರಿಯಗೊಂಡಿತ್ತು. ಸೀಸನ್​ 1 ಮತ್ತು ಸೀಸನ್ 2​ ಕಾರ್ಯಕ್ರಮ ಯಶಸ್ವಿಗೊಂಡು ಜನಮನ್ನಣೆ ಗೆದ್ದಿತ್ತು. ಈ ಕಾರ್ಯಕ್ರಮವನ್ನು ಟಾಕಿಂಗ್​​​​ ಸ್ಟಾರ್​​ ಸೃಜನ್​ ಲೊಕೇಶ್​ ನಿರೂಪಣೆ ಮಾಡುತ್ತಾ ಬಂದಿದ್ದಾರೆ. ಇದೀಗ ಮಜಾ ಟಾಕೀಸ್​ ಸೀಸನ್​ 3 ಶೋ ಬರಲು ಸಜ್ಜಾಗಿದೆ. ಆಗಸ್ಟ್​ 29ರಿಂದ ಕಲರ್ಸ್ ಕನ್ನಡ​ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಕಲರ್ಸ್​ ಕನ್ನಡ ವಾಹಿನಿ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಮಜಾ ಟಾಕೀಸ್​ ಪ್ರೊಮೋವನ್ನು ಹಂಚಿಕೊಂಡಿದೆ. ನಟ ಸೃಜನ್​ ಲೊಕೇಶ್​ ಕೂಡ ಸಾಮಾಜಿಕ ಜಾಲತಾಣದಲ್ಲಿ ಮಜಾ ಟಾಕೀಸ್​ ಪ್ರೊವೋವನ್ನು ಹಂಚಿಕೊಂಡಿದ್ದಾರೆ.

ಇನ್ನು ಆಗಸ್ಟ್​ 29ರ ನಂತರ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಮಜಾ ಟಾಕೀಶ್​ಕಾರ್ಯಕ್ರಮ ಮೂಡಿಬರಲಿದೆ. ಅಭಿಮಾನಿಗಳಂತೂ ಈ ಪ್ರೊಮೋ ನೋಡಿ ತಮ್ಮ ಇಷ್ಟದ ಕಾರ್ಯಕ್ರಮ ಮತ್ತೆ ಬರುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಖುಷಿ ಹಂಚಿಕೊಳ್ಳುತ್ತಿದ್ದಾರೆ.ಸೃಜನ್​​ ಲೊಕೇಶ್​ ಅವರ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಮಜಾ ಟಾಕೀಸ್ ಸೀಸನ್ 1 ಮತ್ತು ಸೀಸನ್​ 2​ದಲ್ಲಿ ಇಂದ್ರಜಿತ್​ ಲಂಕೇಶ್​​ ಸೇರಿದಂತೆ ನಟಿ ಶ್ವೇತ ಚಂಗಪ್ಪ, ಅಪರ್ಣ, ಮಿಮಿಕ್ರಿ ದಯಾನಂದ್​​, ಮಂಡ್ಯ ರಮೇಶ್​​, ಕುರಿ ಪ್ರತಾಪ್​​, ವಿಶ್ವ, ಪವನ್​ ಕುಮಾರ್​ ಮತ್ತು ರೇಖಾ ಕಾಣಿಸಿಕೊಂಡಿದ್ದರು. ಪ್ರತಿ ಎಪಿಸೋಡ್​​ನಲ್ಲಿ ಹೊಸ ಕಾನ್ಸೆಪ್ಟ್​ ಇಟ್ಟುಕೊಂಡು ವೀಕ್ಷಕರಿಗೆ ಮನರಂಜನೆಯನ್ನು ನೀಡಲಾಗುತ್ತಿತ್ತು.

ಇದೀಗ ಮತ್ತೆ ಪ್ರೇಕ್ಷಕರನ್ನು ನಗುವಿತ್ತ ಕೊಂಡೊಯ್ಯಲು ಸೃಜನ್​ ಲೊಕೇಶ್​​ ಮಜಾ ಟಾಕೀಸ್​ ಸೀಸನ್​ 3 ಮೂಲಕ ಬರಲು ಸಿದ್ಧರಾಗಿದ್ದಾರೆ.
Published by: Harshith AS
First published: August 18, 2020, 2:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories