Emergency Movie: ಕಂಗನಾ ಸಿನಿಮಾಗೆ ಹೊಸ ನಟ ಸೇರ್ಪಡೆ, ವಾಜಪೇಯಿ ಪಾತ್ರ ರಿವೀಲ್ ಮಾಡಿದ ನಟಿ

Emergency Film: ಈ ಸಿನಿಮಾದಲ್ಲಿ ಅಟಲ್ ಬಿಹಾರಿ ವಾಜಪೇಯಿ ಪಾತ್ರದಲ್ಲಿ ನಟ ಶ್ರೇಯಸ್ ತಲ್ಪಡೆ ನಟಿಸಲಿದ್ದಾರೆ ಎನ್ನುವ ಮಾಹಿತಿ ಈಗ ಹೊರ ಬಿದ್ದಿದೆ. ಚಿತ್ರದಲ್ಲಿ ಶ್ರೇಯಸ್ ಅವರ ಲುಕ್ ಅನ್ನು ರಿವೀಲ್​ ಮಾಡುವ ಎಮರ್ಜೆನ್ಸಿ ಸಿನಿಮಾದ ಹೊಸ ಪೋಸ್ಟರ್ ಅನ್ನು ಕಂಗನಾ ಹಂಚಿಕೊಂಡಿದ್ದಾರೆ

ಶ್ರೇಯಸ್​ ತಲ್ಪಡೆ

ಶ್ರೇಯಸ್​ ತಲ್ಪಡೆ

  • Share this:
ಬಾಲಿವುಡ್ (Bollywood) ಫೈರ್ ಬ್ರ್ಯಾಂಡ್ ಕಂಗನಾ ರಣಾವತ್ (Kangana Ranaut) ಸದ್ಯ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇತ್ತೀಚೆಗಷ್ಟೇ ಅವರ ಸಿನಿಮಾ ಧಾಕಡ್​ ಮಕಾಡೆ ಮಲಗಿರುವ ವಿಚಾರ ಗೊತ್ತಿದೆ. ಒಂದು ಸಿನಿಮಾದ ಹೀನಾಯ ಸೋಲಿನ ನಂತರ ಮತ್ತೆ ಕಂಗನಾ ಪುಟಿದೆದ್ದಿದ್ದಾರೆ. ಅವರ ಮುಂದಿನ ಸಿನಿಮಾ ಎಮರ್ಜೆನ್ಸಿ (Emergency) ಸಿನಿಮಾದ ಟೀಸರ್ ಬಿಡುಗಡೆಯಾಗಿ ವಿವಾದಕ್ಕೆ ಕಾರಣವಾಗಿದ್ದು ಎಲ್ಲರಿಗೂ ಗೊತ್ತಿದೆ. ಇದೀಗ ಈ ಸಿನಿಮಾದ ಮತ್ತೊಂದು ಪಾತ್ರದ ಬಗ್ಗೆ ಮಾಹಿತಿ ಲಭಿಸಿದೆ.

ವಾಜಪೇಯಿ ಪಾತ್ರದಲ್ಲಿ ನಟ ಶ್ರೇಯಸ್ ತಲ್ಪಡೆ

ಈ ಸಿನಿಮಾದಲ್ಲಿ ಕಂಗನಾ ರಣಾವತ್ ಈ ಸಿನಿಮಾದಲ್ಲಿ ಇಂದಿರಾ ಗಾಂಧಿ ಅವರ ಪಾತ್ರವನ್ನು ಮಾಡುತ್ತಿದ್ದಾರೆ, ಅಲ್ಲದೇ ಹಿರಿಯ ನಟ ಅನುಪಮ್ ಖೇರ್ ಅವರು ಜಯಪ್ರಕಾಶ್ ನಾರಾಯಣ್ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಈಗಾಗಲೇ ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡಿತ್ತು. ಇದೀಗ ಮತ್ತೊಂದು ಪ್ರಮುಖ ಪಾತ್ರದ ಚಿತ್ರತಂಡ ಮಾಹಿತಿ ನೀಡಿದೆ.

Kangana Ranaut s Emergency lands in controversy

ಹೌದು, ಈ ಸಿನಿಮಾದಲ್ಲಿ ಅಟಲ್ ಬಿಹಾರಿ ವಾಜಪೇಯಿ ಪಾತ್ರದಲ್ಲಿ ನಟ ಶ್ರೇಯಸ್ ತಲ್ಪಡೆ ನಟಿಸಲಿದ್ದಾರೆ ಎನ್ನುವ ಮಾಹಿತಿ ಈಗ ಹೊರ ಬಿದ್ದಿದೆ.  ಚಿತ್ರದಲ್ಲಿ ಶ್ರೇಯಸ್ ಅವರ ಲುಕ್ ಅನ್ನು ರಿವೀಲ್​ ಮಾಡುವ ಎಮರ್ಜೆನ್ಸಿ ಸಿನಿಮಾದ ಹೊಸ ಪೋಸ್ಟರ್ ಅನ್ನು ಕಂಗನಾ ಹಂಚಿಕೊಂಡಿದ್ದಾರೆ. "#ಎಮರ್ಜೆನ್ಸಿಯಲ್ಲಿ @shreyastalpade27 ಅವರನ್ನು ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿಯಾಗಿ ನಿಮ್ಮ ಮುಂದೆ ತೋರಿಸುತ್ತಿದ್ದೇವೆ,ನಿಜವಾದ ರಾಷ್ಟ್ರೀಯತಾವಾದಿ, ಅವರ ರಾಷ್ಟ್ರದ ಮೇಲಿನ ಪ್ರೀತಿ ಮತ್ತು ಹೆಮ್ಮೆ ಅಪ್ರತಿಮವಾಗಿತ್ತು ಮತ್ತು ತುರ್ತು ಪರಿಸ್ಥಿತಿಯ ಸಮಯದಲ್ಲಿ ಮುಂಚೂಣಿಯಲ್ಲಿದ್ದ ನಾಯಕರಾಗಿದ್ದರು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಕಿಚ್ಚ ಸುದೀಪ್​ ಬಗ್ಗೆ ರಾಜಮೌಳಿ ಮೆಚ್ಚುಗೆಯ ಮಾತು, ಎಲ್ಲೆಡೆ ವಿಕ್ರಾಂತ್ ರೋಣನ ಹವಾ!

ಶ್ರೇಯಸ್ ಬಗ್ಗೆ ಮಾತನಾಡಿದ ಕಂಗನಾ, “ಶ್ರೀಮತಿ ಗಾಂಧಿ ಮೊದಲ ಬಾರಿಗೆ ಪ್ರಧಾನಿಯಾದಾಗ ಯುವ ಮತ್ತು ಮುಂಚೂಣಿ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಪಾತ್ರವನ್ನು ಶ್ರೇಯಸ್​ ಮಾಡಿದ್ದಾರೆ. ಅವರು ಬಹುಮುಖ ಪ್ರತಿಭೆಯಾಗಿರುವುದರಿಂದ ಅವರನ್ನು ನಮ್ಮ ತಂಡದಲ್ಲಿ ಸೇರಿಸಿಕೊಳ್ಳಲು ಸಂತೋಷವಾಗುತ್ತದೆ, ನಾವು ಅದೃಷ್ಟವಂತರು. ಅಟಲ್ ಬಿಹಾರಿ ವಾಜಪೇಯಿ ಪಾತ್ರದಲ್ಲಿ ಅವರ ಅಭಿನಯವು ಅದ್ಭುತವಾಗಿದೆ ಎಂದು ನಾನು ವೈಯಕ್ತಿಕವಾಗಿ ಭಾವಿಸುತ್ತೇನೆ. ಈ ಮಹತ್ವದ ಪಾತ್ರವನ್ನು ನಿರ್ವಹಿಸಲು ಅವರಂತಹ ಶಕ್ತಿಶಾಲಿ ನಟನನ್ನು ಪಡೆದ ನಾವು ಅದೃಷ್ಟವಂತರು ಎಂದು ಹೇಳಿದ್ದಾರೆ.ಈ ಪಾತ್ರ ಬಹಳ ಜವಾಬ್ದಾರಿಯುತವಾದದ್ದು

ಶ್ರೇಯಸ್ ತಲ್ಪಾಡೆ ಸಹ ಈ ಬಗ್ಗೆ ಮಾತನಾಡಿದ್ದು“ಅಟಲ್ ಜೀ ಅವರು ಅತ್ಯಂತ ಗೌರವಾನ್ವಿತ, ಬುದ್ಧಿವಂತ, ಪ್ರಭಾವಶಾಲಿ ಮತ್ತು ಭಾರತದ ಮತ್ತು ಪ್ರಪಂಚದಾದ್ಯಂತದ ಅತ್ಯಂತ ಪ್ರೀತಿಯ ನಾಯಕರಲ್ಲಿ ಒಬ್ಬರು. ಅವರ ಪಾತ್ರವನ್ನು ತೆರೆಯ ಮೇಲೆ ಮಾಡುವುದು ದೊಡ್ಡ ಅವಕಾಶ ಮಾತ್ರವಲ್ಲದೆ ದೊಡ್ಡ ಗೌರವ ಮತ್ತು ಖಂಡಿತವಾಗಿಯೂ ದೊಡ್ಡ ಜವಾಬ್ದಾರಿ. ನಾನು ಎಲ್ಲರ ನಿರೀಕ್ಷೆಗಳಿಗೆ ತಕ್ಕಂತೆ ಮಾಡಿದ್ದೇನೆ ಎಂದು ಭಾವಿಸಿದ್ದೇನೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ರಕ್ಕಮ್ಮನ ಡ್ಯಾನ್ಸ್, ಕಿಚ್ಚನ ಫೈಟ್, ಬಾಕ್ಸ್ ಆಫೀಸ್ ಉಡೀಸ್! ಹೇಗಿದ್ದಾನೆ ಗೊತ್ತಾ ವಿಕ್ರಾಂತ್ ರೋಣ?

ಇನ್ನು, ಇಂದಿರಾ ಗಾಂಧಿ ಪ್ರಧಾನ ಮಂತ್ರಿಯಾಗಿದ್ದ ಸಮಯದಲ್ಲಿ ಭಾರತ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಲಾಗಿತ್ತು. ಫಸ್ಟ್ ಲುಕ್​ ನಲ್ಲಿಯೂ ಸಹ ಇದರ ಹಿನ್ನಲೆಯನ್ನೇ ತೋರಿಸಲಾಗಿದೆ. ಹೀಗಾಗಿ ಇಂದಿರಾ ಗಾಂಧಿ ಅವರ ರಾಜಕೀಯ ಜೀವನದ ಕುರಿತು ಕಥೆ ಇರಲಿದೆ ಎನ್ನಲಾಗುತ್ತಿದೆ. ಈ ಚಿತ್ರದ ಮತ್ತೊಂದು ವಿಶೇಷ ಅಂದರೆ ಈ ಚಿತ್ರವನ್ನ ನಟಿ ಕಂಗನಾ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ರೇಣು ಪಿಟ್ಟಿ ನಿರ್ಮಾಣ ಮಾಡುತ್ತಿದ್ದಾರೆ.
Published by:Sandhya M
First published: