ಸವರ್ಣದೀರ್ಘ ಸಂಧಿ ಹೊಸ ಹಾಡು ರಿಲೀಸ್; ಮತ್ತೆ ಒಂದಾದ ಮನೋಮೂರ್ತಿ-ಶ್ರೇಯಾ ಘೋಷಾಲ್ ಜೋಡಿ

Savarnadeergha Sandhi Songs: ಕನ್ನಡ ಸಿನಿಮಾರಂಗಕ್ಕೆ ಸಾಕಷ್ಟು ಹಿಟ್ ಹಾಡುಗಳನ್ನು ನೀಡಿದ್ದ ಸಂಗೀತ ನಿರ್ದೇಶಕ ಮನೋಮೂರ್ತಿ- ಗಾಯಕಿ ಶ್ರೇಯಾ ಘೋಷಾಲ್ ಜೋಡಿ ಮತ್ತೆ ಒಂದಾಗಿದೆ. ಸವರ್ಣದೀರ್ಘ ಸಂಧಿ ಸಿನಿಮಾದ ಹಾಡಿಗೆ ಬಹುಭಾಷಾ ಗಾಯಕಿ ಶ್ರೇಯಾ ಘೋಷಾಲ್ ಧ್ವನಿಯಾಗಿದ್ದಾರೆ.

Sushma Chakre | news18-kannada
Updated:September 8, 2019, 12:56 PM IST
ಸವರ್ಣದೀರ್ಘ ಸಂಧಿ ಹೊಸ ಹಾಡು ರಿಲೀಸ್; ಮತ್ತೆ ಒಂದಾದ ಮನೋಮೂರ್ತಿ-ಶ್ರೇಯಾ ಘೋಷಾಲ್ ಜೋಡಿ
ಸವರ್ಣದೀರ್ಘ ಸಂಧಿ ಸಿನಿಮಾಗೆ ಹಾಡಿದ ಶ್ರೇಯಾ ಘೋಷಾಲ್
  • Share this:
'ಮುಂಗಾರುಮಳೆ' ಸಿನಿಮಾ ಹಾಡುಗಳು ಯಾರಿಗೆ ತಾನೇ ನೆನಪಿಲ್ಲ ಹೇಳಿ? ಆ ಸಿನಿಮಾ ತೆರೆಕಂಡು 13 ವರ್ಷಗಳೇ ಕಳೆದಿವೆ. ಆದರೂ ಈಗಲೂ ಬಹುತೇಕರ ಫೇವರಿಟ್​ ಹಾಡುಗಳ ಪಟ್ಟಿಯಲ್ಲಿ 'ಮುಂಗಾರುಮಳೆ' ಹಾಡುಗಳಿರುತ್ತವೆ. ತಮ್ಮ ಸಂಗೀತದ ಮೂಲಕ ಮ್ಯಾಜಿಕ್ ಸೃಷ್ಟಿಸಿದ್ದ ಮನೋಮೂರ್ತಿ ಮತ್ತೆ ಸ್ಯಾಂಡಲ್​ವುಡ್​ಗೆ ಮರಳಿದ್ದಾರೆ. ಅಷ್ಟೇ ಅಲ್ಲ... ಮನೋಮೂರ್ತಿ ಸಂಗೀತದ ಅನೇಕ ಹಾಡುಗಳಿಗೆ ಧ್ವನಿಯಾಗಿದ್ದ ಕೋಗಿಲೆ ಕಂಠದ ಗಾಯಕಿ ಶ್ರೇಯಾ ಘೋಷಾಲ್ ಇದೀಗ ಮತ್ತೆ ಅವರ ಸಂಗೀತ ನಿರ್ದೇಶನದ ಹಾಡೊಂದನ್ನು ಹಾಡಿದ್ದಾರೆ.

'ಮುಂಗಾರುಮಳೆ'ಯ ಅರಳುತಿರು ಜೀವದ ಗೆಳೆಯ, 'ಚೆಲುವಿನ ಚಿತ್ತಾರ'ದ ಉಲ್ಲಾಸದ ಹೂಮಳೆ, 'ಈ ಬಂಧನ' ಸಿನಿಮಾದ ಅದೇ ಭೂಮಿ ಅದೇ ಬಾನು ಈ ನಯನ ನೂತನ, 'ಮಾತಾಡ್ ಮಾತಾಡು ಮಲ್ಲಿಗೆ' ಸಿನಿಮಾದ ಬಣ್ಣ ಬಣ್ಣದ ಹೂವೆ, 'ಮಿಲನ'ದ ಮಳೆ ನಿಂತು ಹೋದ ಮೇಲೆ ರೀತಿಯ ಹಿಟ್​ ಹಾಡುಗಳನ್ನು ಕೊಟ್ಟಿದ್ದ ಮನೋಮೂರ್ತಿ- ಶ್ರೇಯಾ ಘೋಷಾಲ್ ಜೋಡಿ ಮತ್ತೆ ಒಂದಾಗಿದೆ.

ಕನ್ನಡದಲ್ಲಿ 'ಸವರ್ಣ ದೀರ್ಘ ಸಂಧಿ' ಎಂಬ ಸಿನಿಮಾವೊಂದು ಬರಲಿದೆ ಎಂಬುದು ಅನೇಕರಿಗೆ ಗೊತ್ತಿರುವ ವಿಚಾರ. ಕೋಸ್ಟಲ್​ವುಡ್​ನ ನಿರ್ದೇಶಕ ವೀರೇಂದ್ರ ಶೆಟ್ಟಿ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಬಹುತೇಕ ಹೊಸಬರೇ ಇರುವ ಈ ಸಿನಿಮಾದ ಹಾಡೊಂದಕ್ಕೆ ಶ್ರೇಯಾ ಘೋಷಾಲ್ ಧ್ವನಿಯಾಗಿದ್ದು, ಮನೋಮೂರ್ತಿ ಸಂಗೀತ ನೀಡಿದ್ದಾರೆ.ಸಾಹೋ ಜೊತೆ ಕೈ ಜೋಡಿಸಿದ ಕನ್ನಡದ ಸವರ್ಣ ದೀರ್ಘ ಸಂಧಿ

ಅಮೆರಿಕ ಅಮೆರಿಕ, ಅಮೃತಧಾರೆ, ನನ್ನ ಪ್ರೀತಿಯ ಹುಡುಗಿ, ಮಿಲನ, ಮೊಗ್ಗಿನ ಮನಸು, ಮನಸಾರೆ, ಪಂಚರಂಗಿ ಮುಂತಾದ ಹಿಟ್ ಚಿತ್ರಗಳಿಗೆ ಸಂಗೀತ ನೀಡಿರುವ ಮನೋಮೂರ್ತಿ 20ರ ದಶಕದಲ್ಲಿ ಸ್ಯಾಂಡಲ್​ವುಡ್​ನ ಬಹುಬೇಡಿಕೆಯ ಸಂಗೀತ ನಿರ್ದೇಶಕ ಎನಿಸಿಕೊಂಡವರು. 3 ವರ್ಷಗಳ ನಂತರ ಮತ್ತೊಮ್ಮೆ ಕನ್ನಡ ಸಿನಿಮಾವೊಂದಕ್ಕೆ ಮನೋಮೂರ್ತಿ ಸಂಗೀತ ನೀಡಿದ್ದಾರೆ.

ಸ್ಯಾಂಡಲ್​ವುಡ್​ ಅಂಗಳದಲ್ಲಿ ಹೊಸ ಫ್ರತಿಭೆಗಳು ಅಭಿನಯಿಸಿರುವ ‘ಸವರ್ಣದೀರ್ಘ ಸಂಧಿ‘ ಸಿನಿಮಾದ ಟ್ರೈಲರ್​​ ಈಗಾಗಲೇ ಬಿಡುಗಡೆಯಾಗಿದ್ದು, ಒಳ್ಳೆಯ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಕೋಸ್ಟಲ್​ವುಡ್​ನಲ್ಲಿ ದಾಖಲೆ ನಿರ್ಮಿಸಿದ ‘ಚಾಲಿಲೂ ಪೋಲಿಲೂ‘ ಕಾಮಿಡಿ ಸಿನಿಮಾ ನಿರ್ದೇಶಿಸಿದ ವೀರೇಂದ್ರ ಶೆಟ್ಟಿ ಈ ಸಿನಿಮಾದಲ್ಲಿ ಹೀರೋ ಪಾತ್ರದಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಕಾಮಿಡಿ ಕಥಾಹಂದರವನ್ನು ಹೊಂದಿರುವ 'ಸವರ್ಣ ದೀರ್ಘ ಸಂಧಿ' ಸಿನಿಮಾದ 'ಕೊಳಲಾದೆ ನಾ ಕೃಷ್ಣ ನಿನ್ನ ಕೈಯಲ್ಲಿ' ಹಾಡನ್ನು ಶ್ರೇಯಾ ಘೋಷಾಲ್ ಹಾಡಿದ್ದಾರೆ. ಈ ಹಾಡಿನ ಲಿರಿಕಲ್ ವಿಡಿಯೋವನ್ನು 'ಸವರ್ಣ ದೀರ್ಘ ಸಂಧಿ' ತಂಡ ಬಿಡುಗಡೆ ಮಾಡಿದೆ. ವೀರೇಂದ್ರ ಶೆಟ್ಟಿಯವರೇ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ಮನೋಮೂರ್ತಿ ಸಂಗೀತ ನಿರ್ದೇಶನವಿದೆ.ಗಾಂಧಿ ನಗರದಲ್ಲೀಗ ವ್ಯಾಕರಣ ವಿಚಾರ; ‘ಸವರ್ಣದೀರ್ಘ ಸಂಧಿ‘ ಬಗ್ಗೆ ಭಾರೀ ಚರ್ಚೆ

‘ಸವರ್ಣದೀರ್ಘ ಸಂಧಿ‘ ವ್ಯಾಕರಣದ ಜೊತೆ ಜೊತೆಗೆ ಕಳ್ಳಪೋಲೀಸ್ ಆಟ ಆಡುವಂತಹ ಕಲರ್​ಫುಲ್​ ಸಿನಿಮಾವಾಗಿದೆ. ಈ ಚಿತ್ರಕ್ಕೆ ಮನೋಮೂರ್ತಿ ಸಂಗೀತ ಸಂಯೋಜಿಸಿರುವುದು ಮಾತ್ರವಲ್ಲದೆ ಈ ಚಿತ್ರದ ನಿರ್ಮಾಣದಲ್ಲೂ ಜೊತೆಯಾಗಿದ್ದಾರೆ. ವೀರು ಟಾಕೀಸ್, ಲೈಲಾಕ್ ಎಂಟರ್ಟೈನಮೆಂಟ್​ ಬ್ಯಾನರ್ ನಲ್ಲಿ ಲುಷಿಂಗ್ಟನ್ ಥಾಮಸ್, ಪಿವಿಆರ್ ಹೇಮಂತ್, ವೀರೇಂದ್ರ ಶೆಟ್ಟಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಸಿನಿಮಾ ಮುಂದಿನ ತಿಂಗಳು ತೆರೆಗೆ ಬರಲಿದೆ.

First published: September 8, 2019, 12:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading