HOME » NEWS » Entertainment » SHRADDHA SRINATH STARRER KRISHNA AND HIS LEELA IS ALL SET FOR OTT RELEASE AE

Rana Daggubati: ಒಟಿಟಿ ಮೂಲಕ ರಿಲೀಸ್​ ಆಗಲಿದೆ ಶ್ರದ್ಧಾ ಶ್ರೀನಾಥ್ ನಟನೆಯ ಈ ಸಿನಿಮಾ: ಸುಳಿವು ಕೊಟ್ಟ ರಾಣಾ ದಗ್ಗುಬಾಟಿ

Krishna and His Leela: ಟಾಲಿವುಡ್​ನ ಮತ್ತೊಂದು ರೊಮ್ಯಾಂಟಿಕ್​ ಲವ್​ ಸ್ಟೋರಿ ಈಗ ತೆರೆ ಕಾಣಲು ಸಿದ್ಧವಾಗಿದೆ. ಈ ಕುರಿತಾಗಿ ನಟ ರಾಣಾ ದಗ್ಗುಬಾಟಿ ಸುಳಿವು ನೀಡಿದ್ದಾರೆ. ತಮ್ಮ ಇನ್​ಸ್ಟಾಗ್ರಾಂನಲ್ಲಿ ತೆರೆ ಕಾಣಲಿರುವ ಚಿತ್ರದ ಬಗ್ಗೆ ಪೋಸ್ಟ್​ ಮಾಡಿದ್ದಾರೆ.

Anitha E | news18-kannada
Updated:June 23, 2020, 12:32 PM IST
Rana Daggubati: ಒಟಿಟಿ ಮೂಲಕ ರಿಲೀಸ್​ ಆಗಲಿದೆ ಶ್ರದ್ಧಾ ಶ್ರೀನಾಥ್ ನಟನೆಯ ಈ ಸಿನಿಮಾ: ಸುಳಿವು ಕೊಟ್ಟ ರಾಣಾ ದಗ್ಗುಬಾಟಿ
ಕೃಷ್ಣ ಆ್ಯಂಡ್​ ಹಿಸ್​ ಲೀಲ ಸಿನಿಮಾದ ಪೋಸ್ಟರ್​
  • Share this:
ಲಾಕ್​ಡೌನ್​ನಿಂದಾಗಿ ಈಗ ಸಿನಿಮಾಗಳು ಚಿತ್ರಮಂದಿರದ ಬದಲಾಗಿ ಒಟಿಟಿ ಮೂಲಕ ಡಿಜಿಟಲ್​​ ವೇದಿಕೆಯಲ್ಲೇ ಬಿಡುಗಡೆಯಾಗಲು ಸಿದ್ಧವಾಗುತ್ತಿವೆ. ಇತ್ತೀಚೆಗಷ್ಟೆ ಅಮಿತಾಭ್​ ಹಾಗೂ ಆಯುಷ್ಮಾನ್​ ಖುರಾನ ಅಭಿನಯದ 'ಗುಲಾಬೊ ಸಿತಾಬೊ' ಹಾಗೂ ಕೀರ್ತಿ ಸುರೇಶ್​​ ಅಭಿನಯದ 'ಪೆಂಗ್ವಿನ್​ 'ಒಟಿಟಿ ಮೂಲಕ ರಿಲೀಸ್​ ಆಗಿದೆ. ಈಗ ಮತ್ತೊಂಡು ಟಾಲಿವುಡ್ ಸಿನಿಮಾ ಬಿಡುಗಡೆಯಾಗಲು ಸಿದ್ಧವಾಗಿದೆ.

ಹೌದು, ಟಾಲಿವುಡ್​ನ ಮತ್ತೊಂದು ರೊಮ್ಯಾಂಟಿಕ್​ ಲವ್​ ಸ್ಟೋರಿ ಈಗ ತೆರೆ ಕಾಣಲು ಸಿದ್ಧವಾಗಿದೆ. ಈ ಕುರಿತಾಗಿ ನಟ ರಾಣಾ ದಗ್ಗುಬಾಟಿ ಸುಳಿವು ನೀಡಿದ್ದಾರೆ. ತಮ್ಮ ಇನ್​ಸ್ಟಾಗ್ರಾಂನಲ್ಲಿ ತೆರೆ ಕಾಣಲಿರುವ ಚಿತ್ರದ ಬಗ್ಗೆ ಪೋಸ್ಟ್​ ಮಾಡಿದ್ದಾರೆ.





ಅಷ್ಟಕ್ಕೂ ಅದು ರಾಣಾ ದಗ್ಗುಬಾಟಿ ಅಭಿನಯದ ಚಿತ್ರವಲ್ಲ. ವಯಾಕಾಮ್​ 18, ಸಂಜಯ್​​ ರೆಡ್ಡಿ ಹಾಗೂ ಸುರೇಶ್ ಪ್ರೊಡಕ್ಷನ್ಸ್ ನಿರ್ಮಾಣದ 'ಕೃಷ್ಣ ಆ್ಯಂಡ್​ ಹಿಸ್​ ಲೀಲ' ಸಿನಿಮಾ. ಸ್ಯಾಂಡಲ್​ವುಡ್​ ನಟಿ ಶ್ರದ್ಧಾ ಶ್ರೀನಾಥ್​ ಹಾಗೂ ಸಿದ್ದು ಜೊನ್ನಲಗಡ್ಡ ಅಭಿನಯದ ಈ ಚಿತ್ರ, ಅಭಿಮಾನಿಗಳು ಅಂದುಕೊಂಡದ್ದಕ್ಕಿಂತ ಮೊದಲೇ ರಿಲೀಸ್​ ಆಗಲಿದೆ ಎಂದು ರಾಣಾ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ರಾಜರಥವೇರಿದ್ದ ನಿರೂಪ್​ ಭಂಡಾರಿ ಈಗ ವಿಂಡೋಸೀಟ್​ ಬೇಕೆನ್ನುತ್ತಿದ್ದಾರೆ..!

'ಜೆರ್ಸಿ' ಸಿನಿಮಾದಲ್ಲಿ ನಾನಿ ಜೊತೆ ಸಖತ್​ ಬೋಲ್ಡ್​ ಆಗಿ ನಟಿಸಿದ್ದ ಶ್ರದ್ಧಾ ಶ್ರೀನಾಥ್​ ಈಗ ಚಿತ್ರದಲ್ಲೂ ಲಿಪ್​ ಲಾಕ್​ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ.  'ಕೃಷ್ಣ ಆ್ಯಂಡ್​ ಹಿಸ್​ ಲೀಲ' ಸಿನಿಮಾ ಒಟಿಟಿ ಮೂಲಕ ಈಗ ರಿಲೀಸ್​ ಆಗಲಿದೆ, ಆಗ ಬಿಡುಗಡೆಯಾಗಲಿದೆ ಅನ್ನೋ ಸುದ್ದಿ ಬಹಳ ದಿನಗಳಿಂದ ಹರಿದಾಡುತ್ತಿತ್ತು. ಈಗ ಅದಕ್ಕೆ ರಾಣ ಬ್ರೇಕ್​ ಹಾಕಿದ್ದಾರೆ.




ಈ ಸಿನಿಮಾದಲ್ಲಿ ಸಿದ್ದು ಕೃಷ್ಣನ ಪಾತ್ರದಲ್ಲಿ ಹಾಗೂ ಶ್ರದ್ಧಾ ಸತ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇವರ ಜೊತೆಗೆ ಸೀರತ್​ ಕಪೂರ್​ ಹಾಗೂ ಶಾಲಿನಿ ಸಹ ಕಾಣಿಸಿಕೊಂಡಿದ್ದಾರೆ. ರವಿಕಾಂತ್​ ಪೆರ್ಪು ಅವರ ನಿರ್ದೇಶನ ಈ ಚಿತ್ರಕ್ಕಿದೆ. ಇನ್ನು ಈ ಸಿನಿಮಾ ಯಾವಾಗ ಹಾಗೂ ಯಾವುದರಲ್ಲಿ ಬಿಡುಗಡೆಯಾಗಲಿದೆ ಎಂದಬ ಮಾಹಿತಿ ಲಭ್ಯವಾಗಿಲ್ಲ.

 Rashmika Mandanna: ಅಪ್ಪ-ಅಮ್ಮನ ವಿವಾಹ ವಾರ್ಷಿಕೋತ್ಸವಕ್ಕೆ ಶುಭ ಕೋರಿದ ರಶ್ಮಿಕಾ ಮಂದಣ್ಣ




ಇದನ್ನೂ ಓದಿ: Rashmika Mandanna: ಗರ್ಲ್ ​ಬಾಸ್​ ಆಗಿ ಸಾಮ್ರಾಜ್ಯ ಕಟ್ಟುವ ಪ್ರಯತ್ನದಲ್ಲಿ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ
Published by: Anitha E
First published: June 23, 2020, 10:47 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories