ಕಲಾದೇವಿ ಪುತ್ರ ಕಮಲ್ ಹಾಸನ್ ಮತ್ತೊಂದು (Kamal Haasan New Movie Updates) ಸಿನಿಮಾ ನಿರ್ಮಿಸುತ್ತಿದ್ದಾರೆ. ವಿಕ್ರಮ್ ಸಿನಿಮಾ ಗೆದ್ದ ಮೇಲೆ ಇನ್ನೂ ಒಂದು ಸಿನಿಮಾ ಮಾಡೋಕೆ ಧೈರ್ಯ ಮಾಡಿದ್ದಾರೆ. ಇನ್ನೂ ಒಂದು ಸತ್ಯ ಏನಂದ್ರೆ, ಕಮಲ್ ಜೊತೆಗೆ (Kollywood Super Star Cinema) ಇನ್ನೂ ಒಂದು ಚಿತ್ರ ನಿರ್ಮಾಣ ಸಾಥ್ ಕೊಟ್ಟಿದೆ. ಆದರೆ ಕಮಲ್ ಹಾಸನ್ ಈ ಚಿತ್ರದ ಮೇನ್ ಪ್ರೋಡ್ಯೂಸರ್ ಅನ್ನುವುದು ಕೂಡ ಅಷ್ಟೇ ಸತ್ಯ. ಚಿತ್ರಕ್ಕೆ ಕಮಲ್ ಹಾಸನ್ (Kamal Haasan New Production) ದುಡ್ಡೇನೋ ಹಾಕುತ್ತಿದ್ದಾರೆ. ಆದರೆ ಈ ಚಿತ್ರಕ್ಕೆ ಇವರು ಹೀರೋನೂ ಅಲ್ಲ. ನಿರ್ದೇಶಕರೂ ಅಲ್ಲ. ಎರಡೂ ಕೆಲಸವನ್ನ ಬೇರೆಯವರೇ ಮಾಡ್ತಿದ್ದಾರೆ.
ಕಮಲ್ (Sivakarthikeyan Movie Updates) ಹಾಸನ್ ಇಲ್ಲಿ ಒಬ್ಬ ನಿರ್ಮಾಪಕನಾಗಿಯೇ ತಮ್ಮ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಈ ಚಿತ್ರದ ಇನ್ನೂ ಒಂದಷ್ಟು ಮಾಹಿತಿ ಇಲ್ಲಿದೆ ಓದಿ.
ಕಮಲ್ ಹಾಸನ್ ನಿರ್ಮಾಣದ ಚಿತ್ರದ ಟೈಟಲ್ ಏನು?
ಕಮಲ್ ಹಾಸನ್ ನಿರ್ಮಾಣದ ಸಿನಿಮಾ ಹೆಸರೇನು? ಹಾಗೆ ಕೇಳುವ ಪ್ರಶ್ನೆಗೆ ಸದ್ಯಕ್ಕೆ ಆ ಚಿತ್ರಕ್ಕೆ SK21 ಅನ್ನು ಹೆಸರನ್ನ ಮಾತ್ರ ಹೇಳಬಹುದು. ಆದರೆ ಈ ಚಿತ್ರಕ್ಕೆ ಡೈರೆಕ್ಟರ್ ಸೆಲೆಕ್ಷನ್ ಆಗಿದೆ. ನಾಯಕ ಯಾರೂ ಅನ್ನೋದು ರಿವೀಲ್ ಆಗಿದೆ. ಅಷ್ಟೇ ಯಾಕೆ? ನಾಯಕಿನೂ ಫೈನಲ್ ಆಗಿದ್ದಾರೆ.
ಶಿವಕಾರ್ತಿಕೇಯನ್-ಸಾಯಿ ಪಲ್ಲವಿ ಜೋಡಿ-ಮೋಡಿ
SK21 ಸಿನಿಮಾ ಮೂಲಕ ತಮಿಳು ನಟ ಶಿವಕಾರ್ತಿಕೇಯನ್ ಮತ್ತು ಸಾಯಿ ಪಲ್ಲವಿ ಜೋಡಿ ಆಗಿದ್ದಾರೆ. ಇವರ ಜೋಡಿಯ ಈ ಚಿತ್ರವನ್ನೇ ಕಮಲ್ ಹಾಸನ್ ನಿರ್ಮಿಸುತ್ತಿದ್ದಾರೆ. ಕಮಲ್ ಹಾಸನ್ ಅವರ ಸಾರಥ್ಯದ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಚಿತ್ರ ನಿರ್ಮಾಣ ಸಂಸ್ಥೆಯ 51ನೇ ಸಿನಿಮಾ ಇದಾಗಿದೆ.
SK21 ಚಿತ್ರವನ್ನ ಕಮಲ್ ಹಾಸನ್ ನಿರ್ಮಿಸ್ತಿರೋದೇಕೆ?
ಈ ಹಿಂದೆ ಇದೇ ಸಂಸ್ಥೆ ಮೂಲಕವೇ ಕಮಲ್ ಹಾಸನ್ ವಿಕ್ರಮ್ ಸಿನಿಮಾ ಮಾಡಿದ್ದರು. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ. ಈ ಹಿನ್ನೆಲೆಯಲ್ಲಿ SK21 ಸಿನಿಮಾ ಮಾಡೋಕೆ ಕಮಲ್ ಹಾಸನ್ ಉತ್ಸಾಹ ತೋರಿದ್ದಾರೆ. ಧೈರ್ಯ ಕೂಡ ಮಾಡಿದ್ದಾರೆ.
ಕಮಲ್ ಹಾಸನ್ ಅವರ ಈ ಒಂದು ಧೈರ್ಯಕ್ಕೆ ಸೋನಿ ಪಿಕ್ಚರ್ಸ್ ಇಂಟರ್‌ನ್ಯಾಷನಲ್ ಪ್ರೋಡಕ್ಷನ್ ಕೂಡ ಸಾಥ್ ಕೊಟ್ಟಿದೆ. ಜಂಟಿಯಾಗಿ ನಿರ್ಮಾಣ ಆಗುತ್ತಿರೋ ಈ ಚಿತ್ರವನ್ನ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನ ಮಾಡುತ್ತಿದ್ದಾರೆ.
SK21 ಚಿತ್ರಕ್ಕೆ ಡೈರೆಕ್ಟರ್ ಕಮಲ್ ಹಾಸನ್ ಅಲ್ವೇ ಅಲ್ಲ!
ರಾಜ್‌ಕುಮಾರ್ ಪೆರಿಯಸಾಮಿ ಈ ಚಿತ್ರದ ಕಥೆಯನ್ನ ಬರೆದಿದ್ದಾರೆ. ತಮ್ಮ ಕಥೆಯನ್ನ ತಾವೇ ಡೈರೆಕ್ಟ್ ಮಾಡೋ ಅವಕಾಶವನ್ನೂ ಇಲ್ಲಿ ಪಡೆದುಕೊಂಡಿದ್ದಾರೆ. ಇವರ ಈ ಚಿತ್ರದಲ್ಲಿ ನಾಯಕ ಶಿವಕಾರ್ತಿಕೇಯನ್ ವಿಭಿನ್ನವಾಗಿಯೇ ಕಾಣಿಸಿಕೊಳ್ಳಲಿದ್ದಾರೆ. ಇಲ್ಲಿಯವರೆಗೂ ಅಭಿಮಾನಿಗಳು ನೋಡದೇ ಇರೋ ಪಾತ್ರದಲ್ಲಿ ಶಿವಕಾರ್ತಿಕೇಯನ್ ಕಂಗೊಳಿಸಲಿದ್ದಾರೆ.
ಕಮಲ್ ನಿರ್ಮಾಣದ ಚಿತ್ರಕ್ಕೆ ಕಾಶ್ಮೀರದಲ್ಲಿ 2 ತಿಂಗಳು ಶೂಟಿಂಗ್
SK21 ಸಿನಿಮಾದ ಶೂಟಿಂಗ್ ಪ್ಲಾನ್ ಕೂಡ ಆಗಿದೆ. ಕಾಶ್ಮೀರದಂತಹ ಜಾಗದಲ್ಲಿಯೇ ಚಿತ್ರದ ಶೂಟಿಂಗ್ ಪ್ಲಾನ್ ಆಗಿದೆ. ಬರೋಬ್ಬರಿ 2 ತಿಂಗಳು ಇಲ್ಲಿ ಚಿತ್ರೀಕರಿಸೋ ಪ್ಲಾನ್ ಅನ್ನ ಸಿನಿಮಾ ತಂಡ ಹಾಕಿಕೊಂಡಿದೆ. ಸ್ಟಿಫನ್ ರಿಕ್ಟರ್ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಜಿ.ವಿ. ಪ್ರಕಾಶ್ ಸಿನಿಮಾದ ಸಂಗೀತ ನಿರ್ದೇಶನದ ಹೊಣೆ ಹೊತ್ತಿದ್ದಾರೆ.
ಇದನ್ನೂ ಓದಿ: Dance Karnataka Dance: ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗೆ ಹೊಸ ಜಡ್ಜ್ ಎಂಟ್ರಿ- ಯಾರಂತ ಗೆಸ್ ಮಾಡಿ
ಚೆನ್ನೈನಲ್ಲಿ ಸಿನಿಮಾದ ಮುಹೂರ್ತ ನೆರವೇರಿದೆ. ನಿರ್ಮಾಪಕ ಕಮಲ್ ಹಾಸನ್ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ದಾರೆ. ಇಡೀ ತಂಡಕ್ಕೆ ಮನದುಂಬಿ ಶುಭ ಹಾರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ