• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Shraddha Kapoor: ನಾಲ್ಕೈದು ವರ್ಷಗಳಿಂದ ಕಾಮೆಂಟ್‌ ಮಾಡ್ತಿದ್ದ ಅಭಿಮಾನಿಗೆ ರಿಪ್ಲೈ ಮಾಡಿ ಶಾಕ್ ಕೊಟ್ಟ ಶ್ರದ್ಧಾ ಕಪೂರ್!‌

Shraddha Kapoor: ನಾಲ್ಕೈದು ವರ್ಷಗಳಿಂದ ಕಾಮೆಂಟ್‌ ಮಾಡ್ತಿದ್ದ ಅಭಿಮಾನಿಗೆ ರಿಪ್ಲೈ ಮಾಡಿ ಶಾಕ್ ಕೊಟ್ಟ ಶ್ರದ್ಧಾ ಕಪೂರ್!‌

ವೈರಲ್​ ನ್ಯೂಸ್​

ವೈರಲ್​ ನ್ಯೂಸ್​

ಅಭಿಮಾನಿಗಳಿಗೆ ನಮ್ಮ ನೆಚ್ಚಿನ ನಟ-ನಟಿ ಮತ್ತು ಕ್ರಿಕೆಟ್ ಆಟಗಾರ ತಮ್ಮ ಕಾಮೆಂಟ್ ಗಳನ್ನು ಗಮನಿಸುತ್ತಿದ್ದಾರೋ, ಇಲ್ಲವೋ ಅಂತ ಸಹ ಗೊತ್ತಿರುವುದಿಲ್ಲ. ಆದರೂ ಸಹ ತಮ್ಮ ಅಭಿಮಾನವನ್ನು ತಮ್ಮ ನೆಚ್ಚಿನ ನಟರ ಮತ್ತು ಆಟಗಾರರ ಮೇಲೆ ಹಾಗೆಯೇ ಮುಂದುವರೆಸಿಕೊಂಡು ಹೋಗುತ್ತಿರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.

ಮುಂದೆ ಓದಿ ...
  • Share this:
  • published by :

ಸಾಮಾನ್ಯವಾಗಿ ಈ ಚಲನಚಿತ್ರೋದ್ಯಮದಲ್ಲಿರುವ ನಟ ಮತ್ತು ನಟಿಯರಿಗೆ ಮತ್ತು ಕ್ರಿಕೆಟ್ ಆಟಗಾರರಿಗೆ ಇರುವ ಅಭಿಮಾನಿಗಳು ಬಹುಶಃ ಬೇರೆ ಯಾವ ಕ್ಷೇತ್ರದಲ್ಲಿ ಕೆಲಸ ಮಾಡುವ ಸೆಲೆಬ್ರಿಟಿಗಳಿಗೂ (Celebrity) ಇರುವುದಿಲ್ಲ ನೋಡಿ. ಅದರಲ್ಲೂ ಕೆಲ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಅಥವಾ ನಟಿ ಮತ್ತು ಕ್ರಿಕೆಟ್ ಆಟಗಾರನನ್ನು ಎಷ್ಟರ ಮಟ್ಟಿಗೆ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಫಾಲೋ ಮಾಡುತ್ತಿರುತ್ತಾರೆ ಅಂತ ಹೇಳಿದರೆ, ಅವರ ನೆಚ್ಚಿನ ನಟ, ನಟಿಯರು ಹಾಕುವ ಪ್ರತಿಯೊಂದು ಪೋಸ್ಟ್ (Post), ಫೋಟೋ (Photo) ಮತ್ತು ವೀಡಿಯೋಗಳನ್ನು (Video) ತಪ್ಪದೆ ನೋಡುತ್ತಿರುತ್ತಾರೆ ಮತ್ತು ಅದಕ್ಕೆ ಕಾಮೆಂಟ್ (Comment)ಗಳು, ಲೈಕ್ (Like) ಗಳನ್ನು ಸಹ ಹಾಕುತ್ತಲೇ ಇರುತ್ತಾರೆ ಅಂತ ಹೇಳಬಹುದು.


ಅಭಿಮಾನಿಗಳಿಗೆ ನಮ್ಮ ನೆಚ್ಚಿನ ನಟ-ನಟಿ ಮತ್ತು ಕ್ರಿಕೆಟ್ ಆಟಗಾರ ತಮ್ಮ ಕಾಮೆಂಟ್ ಗಳನ್ನು ಗಮನಿಸುತ್ತಿದ್ದಾರೋ, ಇಲ್ಲವೋ ಅಂತ ಸಹ ಗೊತ್ತಿರುವುದಿಲ್ಲ. ಆದರೂ ಸಹ ತಮ್ಮ ಅಭಿಮಾನವನ್ನು ತಮ್ಮ ನೆಚ್ಚಿನ ನಟರ ಮತ್ತು ಆಟಗಾರರ ಮೇಲೆ ಹಾಗೆಯೇ ಮುಂದುವರೆಸಿಕೊಂಡು ಹೋಗುತ್ತಿರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಹೀಗೆ ಇಲ್ಲೊಬ್ಬ ಅಭಿಮಾನಿ ತನ್ನ ನೆಚ್ಚಿನ ನಟಿಗೆ ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ಕೈದು ವರ್ಷಗಳವರೆಗೆ ಆಕೆಯು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಪ್ರತಿಯೊಂದು ಫೋಟೋಗೆ ಕಾಮೆಂಟ್ ಮಾಡಿದ್ದಾನೆ ನೋಡಿ. ಅಬ್ಬಾ.. ಎಂತಹ ಕಟ್ಟಾ ಅಭಿಮಾನಿ ಈತ ಅಂತೀರಾ?


ನಟಿ ಶ್ರದ್ದಾ ಹಾಕುತ್ತಿದ್ದ ಫೋಟೋಗಳಿಗೆ ಬಿಟ್ಟುಬಿಡದೆ ಕಾಮೆಂಟ್ ಮಾಡ್ತಿದ್ದ ಅಭಿಮಾನಿ


ಹೌದು, ನಟಿ ಶ್ರದ್ಧಾ ಕಪೂರ್ ಅವರ ಒಬ್ಬ ಅಭಿಮಾನಿ ಸುಮಾರು ನಾಲ್ಕೈದು ವರ್ಷಗಳಿಂದ ಅವರ ಪ್ರತಿಯೊಂದು ಫೋಟೋಗಳಿಗೆ ಕಾಮೆಂಟ್ ಗಳನ್ನು ಹಾಕುತ್ತಾ ಬಂದಿದ್ದಾನೆ.


ಇದನ್ನೂ ಓದಿ: ಹಿಂದಿಗೆ ರಿಮೇಕ್‌ ಆಗಿರುವ 'ಸೂರರೈ ಪೊಟ್ರು' ರಿಲೀಸ್‌ ಡೇಟ್‌ ಫಿಕ್ಸ್‌, ಅಕ್ಷಯ್‌ ಕುಮಾರ್‌ಗೆ ಫ್ಯಾನ್ಸ್​ ಕೊಟ್ಟ ಸಲಹೆ ಏನು?


ಈಗ ನಟಿ ಶ್ರದ್ದಾ ಅಂತಿಮವಾಗಿ ಆ ಕಟ್ಟಾ ಅಭಿಮಾನಿಯ ಕಾಮೆಂಟ್ ಗಳಿಗೆ ಪ್ರತಿಕ್ರಿಯಿಸಿದ್ದಾರೆ ನೋಡಿ. ಪ್ರತಿಯೊಬ್ಬ ಅಭಿಮಾನಿಯು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ನೆಚ್ಚಿನ ಸೆಲೆಬ್ರಿಟಿಯಿಂದ ಏನಾದರೂ ಉತ್ತರ ಬರಲಿ ಅಂತ ಆಸೆ ಪಡುವುದು ಸಹಜ ಮತ್ತು ಈ ಅಭಿಮಾನಿಗೆ ಅವನ ಬಹುದಿನದ ಆಸೆಯೊಂದು ಈಡೇರಿದ್ದು, ಸಂತೋಷಕ್ಕೆ ಮಿತಿಯೇ ಇರಲಿಲ್ಲ ಅಂತ ಹೇಳಲಾಗುತ್ತಿದೆ.


ಸಂತೋಷಗೊಂಡ ಆ ಅಭಿಮಾನಿ ತನ್ನ ಸಂತೋಷವನ್ನು ಹಂಚಿಕೊಳ್ಳಲು ತನ್ನ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಈ ಘಟನೆ ಮತ್ತು ಶ್ರದ್ಧಾ ಅವರ ಪ್ರತಿಕ್ರಿಯೆಯನ್ನು ದಾಖಲಿಸುವ ವೀಡಿಯೋವನ್ನು ಅಪ್ಲೋಡ್ ಮಾಡಿದ್ದಾನೆ.


ತನ್ನ ಇನ್‌ಸ್ಟಾಗ್ರಾಮ್ ನಲ್ಲಿ ಏನಂತ ಬರೆದುಕೊಂಡಿದ್ದಾನೆ ನೋಡಿ ಆ ಅಭಿಮಾನಿ


ಈ ಅಭಿಮಾನಿ ತಮ್ಮ ಆ ಸಂದೇಶಗಳ ವಿಡಿಯೋವನ್ನು ಹಂಚಿಕೊಂಡಿದ್ದು "ಕ್ಯೂಟಿ ಶ್ರದ್ಧಾ ಕಪೂರ್ ಅವರ ಫೋಟೋಗಳಿಗೆ ನಾಲ್ಕೈದು ವರ್ಷಗಳಿಂದ ನಿರಂತರವಾಗಿ ಕಾಮೆಂಟ್ ಮಾಡಿದ ನಂತರ, ಅವರು ಅಂತಿಮವಾಗಿ ಎರಡು ಬಾರಿ ನನ್ನ ಕಾಮೆಂಟ್ ಗಳಿಗೆ ಪ್ರತಿಕ್ರಿಯಿಸಿದ್ದಾರೆ.


ಇದನ್ನೂ ಓದಿ; ಮಗಳ ಜೊತೆಗೆ ಸಿದ್ದಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ನಟಿ ಪ್ರಿಯಾಂಕಾ ಚೋಪ್ರಾ


ಈ ಸಂತೋಷದಲ್ಲಿ, ನಾನು ನನ್ನ ಇನ್ಸ್ಟಾ ಐಡಿ ಹೆಸರನ್ನು ಬದಲಾಯಿಸಿದ್ದೇನೆ. ಶಾರುಖ್ ಖಾನ್ ಅವರು ಹೇಳುವ ಮಾತು ನಿಜವಾಗಿದೆ ನೋಡಿ "ನೀವು ಯಾವುದಾದರೊಂದನ್ನು ಮನಸ್ಸಿನಿಂದ ಇಷ್ಟಪಟ್ಟರೆ, ಅದು ನಿಮಗೆ ಎಂದಾದರೊಂದು ದಿನ ಸಿಕ್ಕೆ ಸಿಗುತ್ತದೆ” ಅನ್ನೋದು ನಿಜವಾಗಿದೆ. ನಾನು ನಿನ್ನನ್ನು ತುಂಬಾನೇ ಪ್ರೀತಿಸುತ್ತೇನೆ" ಎಂದು ಅಭಿಮಾನಿ ಬರೆದುಕೊಂಡಿದ್ದಾರೆ.

View this post on Instagram


A post shared by Keshav (@shylohcaaster)

ಅವರ ಶೀರ್ಷಿಕೆಯಲ್ಲಿ "ಶ್ರದ್ಧಾ ಅವರು ಕೊನೆಗೂ ನನ್ನ ಪೋಸ್ಟ್ ಗೆ ಕಾಮೆಂಟ್ ಮಾಡಿದ್ದಾರೆ.  ನಾನು ಜೀವನದಲ್ಲಿ ಗೆದ್ದಿದ್ದೇನೆ. ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಶ್ರದ್ಧಾ ಕಪೂರ್ ಅವರಿಗೆ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ ಈ ಅಭಿಮಾನಿ.


ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ


ಆನ್ಲೈನ್ ನಲ್ಲಿ ಹಂಚಿಕೊಂಡಾಗಿನಿಂದ, ಈ ವಿಡಿಯೋವನ್ನ 1.7 ಲಕ್ಷಕ್ಕೂ ಹೆಚ್ಚು ಬಾರಿ ನೋಡಿದ್ದಾರೆ ಮತ್ತು ಸುಮಾರು 32,252 ಲೈಕ್ ಗಳು ಸಹ ಇದಕ್ಕೆ ಬಂದಿವೆ.
"ಶಾರುಖ್ ಖಾನ್ ಸರ್ ನೋಡ್ತಾ ಇದ್ದೀರಾ? ನನಗೂ ರಿಪ್ಲೈ ಮಾಡಿ ನೀವು” ಅಂತ ಶಾರುಖ್ ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಎರಡನೇ ಬಳಕೆದಾರರು "ನಿಮ್ಮ ಜೀವನದ ಆಸೆ ಈಡೇರಿತು, ದೇವರು ನಿಮಗೆ ಒಳ್ಳೆಯದು ಮಾಡಲಿ” ಅಂತ ಕಾಮೆಂಟ್ ಹಾಕಿದ್ದಾರೆ.

top videos
    First published: