Video: ನೊರಾ ಫತೇಹಿ ಬಳಿ ಡಾನ್ಸ್​ ಕಲಿತ ಶ್ರದ್ಧಾ ಕಪೂರ್​; ಹಾಟ್​ ಸ್ಟೆಪ್​ಗೆ ಅಭಿಮಾನಿಗಳು ಫಿದಾ

Shraddha Kapoor: ಭಾರತೀಯ ಉಡುಗೆಯಲ್ಲಿ ಶ್ರದ್ಧಾ ಕಾಣಿಸಿಕೊಂಡರೆ ನೂರಾ ಶಾರ್ಟ್ಸ್​​ನಲ್ಲಿ ಮಿಂಚಿದ್ದಾರೆ. ದಿಲ್ಬರ್​ ಹಾಡಿಗೆ ಶ್ರದ್ಧಾ ಹೆಜ್ಜೆ ಹಾಕಲು ಪ್ರಯತ್ನಿಸಿದ್ದಾರೆ. ಅವರಿಗೆ ನೂರಾ ಡಾನ್ಸ್​ ಹೇಳಿಕೊಟ್ಟಿದ್ದಾರೆ.

ಶ್ರದ್ಧಾ ನೂರಾ

ಶ್ರದ್ಧಾ ನೂರಾ

  • News18
  • Last Updated :
  • Share this:
ಪಾರ್ಟಿ ಹಾಗೂ ವಿಶೇಷ ಕಾರ್ಯಕ್ರಮಗಳಲ್ಲಿ ಸೆಲೆಬ್ರಿಟಿಗಳು ಸ್ಟೆಪ್​ ಹಾಕುವುದು ಹೊಸದೇನಲ್ಲ. ಹೀಗೆ ಡಾನ್ಸ್​ ಮಾಡಿದ ವಿಡಿಯೋಗಳು ವೈರಲ್​ ಆದ ಸಾಕಷ್ಟು ಉದಾಹರಣೆಗಳಿವೆ. ಈಗ ನಟಿ ಶ್ರದ್ಧಾ ಕಪೂರ್​ಗೆ ನೊರಾ ಪತೇಹಿ ಡ್ಯಾನ್ಸ್​ ಸ್ಟೆಪ್​ ಹೇಳಿಕೊಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

‘ಸತ್ಯಮೇವ ಜಯತೆ’ ಸಿನಿಮಾದ ‘ದಿಲ್ಬರ್​…’ ಹಾಡು ತುಂಬಾನೇ ಖ್ಯಾತಿ ಪಡೆದುಕೊಂಡಿತ್ತು. ಈ ಹಾಡಿಗೆ ಸ್ಟೆಪ್​ ಹಾಕಿದ್ದು ಇದೇ ನೂರಾ. ಈಗ ‘ಸ್ಟ್ರೀಟ್ ಡ್ಯಾನ್ಸರ್​ 3ಡಿ’ ಚಿತ್ರದಲ್ಲಿ ಶ್ರದ್ಧಾ ಹಾಗೂ ನೂರಾ ಒಟ್ಟಾಗಿ ನಟಿಸುತ್ತಿದ್ದಾರೆ. ಚಿತ್ರದ ನಿರ್ದೇಶಕ ರೆಮೋ ಡಿಸೋಜಾ ಹೋಳಿ ನಿಮಿತ್ತ ಪಾರ್ಟಿ ಒಂದನ್ನು ಏರ್ಪಡಿಸಿದ್ದರು. ಈ ವೇಳೆ ಇವರು ಡ್ಯಾನ್ಸ್​ ಮಾಡಿದ್ದಾರೆ.

ಭಾರತೀಯ ಉಡುಗೆಯಲ್ಲಿ ಶ್ರದ್ಧಾ ಕಾಣಿಸಿಕೊಂಡರೆ ನೊರಾ ಶಾರ್ಟ್ಸ್​​ನಲ್ಲಿ ಮಿಂಚಿದ್ದಾರೆ. ದಿಲ್ಬರ್​ ಹಾಡಿಗೆ ಶ್ರದ್ಧಾ ಹೆಜ್ಜೆ ಹಾಕಲು ಪ್ರಯತ್ನಿಸಿದ್ದಾರೆ. ಅವರಿಗೆ ನೊರಾ ಡಾನ್ಸ್​ ಹೇಳಿಕೊಟ್ಟಿದ್ದಾರೆ.


First published: