ಕಿಚ್ಚ ಸುದೀಪ್​ ‘ಫ್ಯಾಂಟಮ್‘​ ಚಿತ್ರದಲ್ಲಿ ಸಮಂತಾ ನಾಯಕಿಯಾಗಿ ನಟಿಸುತ್ತಿಲ್ಲ; ಮತ್ಯಾರು?

ನೂಪ್​ ಭಂಡಾರಿ ನಿರ್ದೇಶನಕ ‘ಫ್ಯಾಂಟಮ್​‘ ಚಿತ್ರದಲ್ಲಿ ಕಿಚ್ಚ ಸುದೀಪ್​ ನಾಯಕಿಯಾಗಿ ತೆಲುಗು ಬೆಡಗಿ ಸಮಂತಾ ನಟಿಸುತ್ತಿದ್ದಾರೆ, ‘ಈಗ‘ ಚಿತ್ರದ ನಂತರ ಈ ಜೋಡಿ ಮತ್ತೆ ಒಂದಾಗುತ್ತಿದ್ದಾರೆ ಎಂಬ ಮಾಹಿತಿಗಳು ಸ್ಯಾಂಡಲ್​ವುಡ್​ ಅಂಗಳದಲ್ಲಿ ಕೇಳಿಬಂದಿತ್ತು.

news18-kannada
Updated:March 4, 2020, 4:22 PM IST
ಕಿಚ್ಚ ಸುದೀಪ್​ ‘ಫ್ಯಾಂಟಮ್‘​ ಚಿತ್ರದಲ್ಲಿ ಸಮಂತಾ ನಾಯಕಿಯಾಗಿ ನಟಿಸುತ್ತಿಲ್ಲ; ಮತ್ಯಾರು?
ಶ್ರದ್ಧಾ ಶ್ರೀನಾಥ್
  • Share this:
ಕಿಚ್ಚ ಸುದೀಪ್​ ನಟನೆಯ ‘ಫ್ಯಾಂಟಮ್‘​ ಚಿತ್ರದಲ್ಲಿ ತೆಲುಗು ನಟಿ ಸಮಂತಾ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಹರಿದಾಡಿತ್ತು. ಆದರೀಗ ಕನ್ನಡದ ನಟಿಯೊಬ್ಬರು ಹೆಸರು ‘ಫ್ಯಾಂಟಮ್​‘ ಚಿತ್ರದಲ್ಲಿ ಕೇಳಿಬಂದಿದೆ.

ಹೌದು. ಅನೂಪ್​ ಭಂಡಾರಿ ನಿರ್ದೇಶನಕ ‘ಫ್ಯಾಂಟಮ್​‘ ಚಿತ್ರದಲ್ಲಿ ಕಿಚ್ಚ ಸುದೀಪ್​ ನಾಯಕಿಯಾಗಿ ತೆಲುಗು ಬೆಡಗಿ ಸಮಂತಾ ನಟಿಸುತ್ತಿದ್ದಾರೆ, ‘ಈಗ‘ ಚಿತ್ರದ ನಂತರ ಈ ಜೋಡಿ ಮತ್ತೆ ಒಂದಾಗುತ್ತಿದ್ದಾರೆ ಎಂಬ ಮಾಹಿತಿಗಳು ಸ್ಯಾಂಡಲ್​ವುಡ್​ ಅಂಗಳದಲ್ಲಿ ಕೇಳಿಬಂದಿತ್ತು. ಅದರೀಗ ಶ್ರದ್ಧಾ ಶ್ರೀನಾಥ್​ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿಗಳು ಹರಿದಾಡುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

‘ಫ್ಯಾಂಟಮ್‘​ ಚಿತ್ರದ ಚಿತ್ರೀಕರಣಕ್ಕೆ ಸೋಮವಾರ ಚಾಲನೆ ಸಿಕ್ಕಿದೆ. ಹಾಗಾಗಿ ಈ ಖುಷಿಯ ಸಂದರ್ಭವನ್ನು ಕಿಚ್ಚ ಸುದೀಪ್​ ಟ್ವೀಟ್​ ಮಾಡುವ ಮೂಲಕ ಹಂಚಿಕೊಂಡಿದ್ದರು. ‘ಫ್ಯಾಂಟಮ್ ಸಿನಿಮಾದ ಫೋಟೊಶೂಟ್ ಮತ್ತು ಪ್ರೋಮೋ ಶೂಟಿಂಗ್ ಕಂಠೀರವ ಸ್ಟುಡಿಯೋದಲ್ಲಿ ನಡೆದಿದೆ. ನಾಳೆಯಿಂದ ಸಿನಿಮಾ ಶೂಟಿಂಗ್ ಪ್ರಾರಂಭವಾಗುತ್ತಿದೆ. ಟೀಮ್ ಜೊತೆಗೆ ನಾನು ಕೂಡ ತುಂಬಾ ಎಕ್ಸೈಟ್ಮೆಂಟ್ ಆಗಿದ್ದೇನೆ. ಎಲ್ಲಾ ನಟರಿಗೆ, ಟೆಕ್ ಟಿಮ್ ಮತ್ತು ಪ್ರೊಡಕ್ಷನ್ ಹೌಸ್​ಗೆ ನನ್ನ ಬೆಸ್ಟ್​ ತಿಳಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದರು.

‘ಫ್ಯಾಂಟಮ್​‘ ಚಿತ್ರದಲ್ಲಿ ನಟ ಕಿಚ್ಚನ ಜೊತೆಗೆ ನಿರೂಪ್​ ಭಂಡಾರಿ ಕೂಡ ನಟಿಸುತ್ತಿದ್ದಾರೆ. ಜಾಕ್​ ಮಂಜು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

ನಟಿ ಸಮಂತಾ ಯಾಕೆ ನಟಿಸುತ್ತಿಲ್ಲ.?

ಟಾಲಿವುಡ್ ಮೂಲಗಳ ಪ್ರಕಾರ, ಸಮಂತಾ ವೈಯಕ್ತಿಕ ಕಾರಣಗಳಿಂದ ಯಾವ ಹೊಸ ಚಿತ್ರವನ್ನೂ ಕೈಗೆತ್ತಿಕೊಳ್ಳುತ್ತಿಲ್ಲವಂತೆ. ಹಾಗಾಗಿ ‘ಫ್ಯಾಂಟಮ್​‘ ಚಿತ್ರದಲ್ಲೂ ನಟಿಸುತ್ತಿಲ್ಲ ಎಂಬ ಮಾತು ಕೇಳಿಬಂದಿದೆ.

ಇದನ್ನೂ ಓದಿ: ಮಾರುತಿ ಸುಜುಕಿ ಉತ್ಪಾದಿಸುತ್ತಿದೆ ಅಗ್ಗದ ಬೆಲೆಯ ಕಾರು; ಈ ವರ್ಷಾಂತ್ಯಕ್ಕೆ ಹವಾ ಜೋರು 
First published:March 4, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading