Samantha: ಸಮಂತಾ ತೊಟ್ಟ ಔಟ್‌ ಫಿಟ್ ಹೇಗಿದೆ ನೋಡಿ, ಇದನ್ನು ನೀವೂ ಖರೀದಿಸಬೇಕೇ?

ಫ್ಯಾಶನ್ ವಿಚಾರವಾಗಿ ಮುಂಚೂಣಿಯಲ್ಲಿರುವ ಸಮಂತಾಳ ಒಂದು ಲೇಟೆಸ್ಟ್ ಔಟ್ ಫಿಟ್ ಅನ್ನು ನಾವು ನಿಮಗೆ ಹುಡುಕಿ ತಂದಿದ್ದೇವೆ. ನೀವು ಸಮಂತಾಳನ್ನು ಸೋಷಿಯಲ್ ಮೀಡಿಯಾದಲ್ಲಿ ಅನುಸರಿಸುತ್ತಿದ್ದರೆ ನಿಮಗೆ ಈಕೆಯ ಈ ಡ್ರೆಸ್ ನೆನಪಿರಬಹುದು. ಕ್ರಿಸ್ ಮಸ್ ಸಂದರ್ಭದಲ್ಲಿ ಒಂದು ಬ್ಲ್ಯಾಕ್ ಗೌನ್ ಧರಿಸಿದ್ದು, ಆ ಉಡುಪಿಗೆ ಸಾಕಷ್ಟು ಮೆಚ್ಚುಗೆ ಪಡೆದಿದ್ದರು.

ಸಮಂತಾ ರುತ್ ಪ್ರಭು

ಸಮಂತಾ ರುತ್ ಪ್ರಭು

  • Share this:
ಫ್ಯಾಶನ್ ಐಕಾನ್ (fashion icon) ಆಗಿ ಕಾಣಿಸಿಕೊಳ್ಳುವ ನಟಿಮಣಿಯರ ಬಟ್ಟೆ ಮೇಲೆ ಎಲ್ಲರದ್ದೂ ಒಂದು ಕಣ್ಣಿರುತ್ತದೆ. ಅವರು ಹಾಕಿಕೊಳ್ಳುವ ಬಟ್ಟೆ (Dress) ಎಲ್ಲಿ ಸಿಗುತ್ತವೆ, ನಮಗೆ ಅವು ಲಭ್ಯವಾಗುತ್ತವೆಯಾ, ಅವರು ಬಟ್ಟೆಗಳನ್ನು ಎಲ್ಲಿ ಖರೀದಿ ಮಾಡುತ್ತಾರೆ ಹೀಗೆ ಹಲವಾರು ಕುತೂಹಲಗಳು ನಮ್ಮಲ್ಲಿ ಸಾಕಷ್ಟು ಯುವತಿಯರಿಗೆ ಇರುತ್ತದೆ. ಕೆಲವರು ನಟಿಮಣಿಯರಿಗೆ ಖಾಸಗಿ ಡಿಸೈನರ್ ಗಳಿರುತ್ತಾರೆ ಅವರೇ ಅವರ ಎಲ್ಲಾ ಬಟ್ಟೆಗಳನ್ನು ಡಿಸೈನ್ (Design) ಮಾಡುತ್ತಾರೆ ಎಂಬ ಕಲ್ಪನೆ ಇರುತ್ತದೆ. ಇದು ಕೂಡ ಒಪ್ಪುವಂತಹ ವಿಷಯವಾದರೂ ನಟಿಯರು ಕೂಡ ಆನ್ ಲೈನ್ ಸೇರಿ ಹಲವೆಡೆ ತಮ್ಮ ಔಟ್ ಫಿಟ್ (Outfit) ಖರೀದಿ ಮಾಡುತ್ತಾರೆ.

ಸಮಂತಾ ಧರಿಸುವ ಟ್ರೆಂಡಿಂಗ್ ಡ್ರೆಸ್ ಗಳು 
ನಟಿಯರು ತೊಟ್ಟ ಅದೇ ರೀತಿಯ ಡ್ರೆಸ್ ತೊಡಬೇಕು ಎಂದು ಹಲವು ದಿನಗಳಿಂದ ನೀವು ಬಯಕೆ ಹೊಂದಿದ್ದರೆ ಅದು ಈಗ ನೆರವೇರುವ ಸಂದರ್ಭ ಬಂದಿದೆ ನೋಡಿ. ಖ್ಯಾತ ನಟಿ, ಫ್ಯಾಷನ್ ಐಕಾನ್, ನಟಿ ಸಮಂತಾ ಧರಿಸಿರುವ ಈ ಬ್ಲ್ಯಾಕ್ ಗೌನ್ ಅನ್ನು ನೀವು ಖರೀದಿಸಿ ಧರಿಸಬಹುದು.

ತೆಲಗು ಮತ್ತು ತಮಿಳು ಚಿತ್ರರಂಗದಲ್ಲಿ ಬಹು ಬೇಡಿಕೆ ಇರುವ ನಟಿ ಸಮಂತಾ ರುತ್ ಫ್ರಭು ಫ್ಯಾಶನ್  ಗೆ ಮತ್ತೊಂದು ಹೆಸರು ಎಂದರೂ ತಪ್ಪಗಲಾರದು. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸ್ಟೈಲಿಶ್ ಆಗಿ ಕಾಣುವ ಸಮಂತಾ ಬೇರೆ ಬೇರೆ ರೀತಿಯ ಟ್ರೆಂಡಿ ಔಟ್ ಫಿಟ್ ಧರಿಸುತ್ತಿದ್ದಾರೆ. ಟ್ಯಾಂಕ್ ಟಾಪ್‌ಗಳು, ಬಾಡಿಕಾನ್ ಗೌನ್‌ಗಳು ಮತ್ತು ಫ್ಲೋರಲ್ ಫ್ರಿಂಟ್ ಇರುವ ಮಿನಿ ಡ್ರೆಸ್‌ ಹೀಗೆ ಬೇರೆ ಬೇರೆ ರೀತಿಯ ಬಟ್ಟೆ ಧರಿಸುತ್ತಿದ್ದಾರೆ. ರೆಡ್ ಕಾರ್ಪೆಟ್, ಮಾಧ್ಯಮ ಸಂದರ್ಶನ, ಪ್ರವಾಸ, ಫ್ಯಾಮಿಲಿ ಸಮಾರಂಭ ಹೀಗೆ ಹಲವೆಡೆ ಈಕೆ ಧರಿಸುವ ಬಟ್ಟೆಗಳು ಟ್ರೆಂಡಿಂಗ್ ನಲ್ಲಿರುತ್ತವೆ.

ಇದನ್ನೂ ಓದಿ: Urfi Javed: ಎಲ್ಲಾ ಹಾಕಿದ್ದಾಯ್ತು ಈಗ ಕಲ್ಲಿನಲ್ಲೇ ಮೈ ಮುಚ್ಚಿಕೊಂಡು ಬಂದ್ಳು ಉರ್ಫಿ

ಸಮಂತಾ ತೊಟ್ಟ ಕ್ಲಾಸಿಕ್ ಕಪ್ಪು ಬಾಡಿಕಾನ್ ಅನ್ನು ನೀವು ಖರೀದಿಸಿ
ನಟಿಮಣಿಯ ಸಾಲಿನಲ್ಲಿ ಫ್ಯಾಶನ್ ವಿಚಾರವಾಗಿ ಮುಂಚೂಣಿಯಲ್ಲಿರುವ ಸಮಂತಾಳ ಒಂದು ಲೇಟೆಸ್ಟ್ ಔಟ್ ಫಿಟ್ ಅನ್ನು ನಾವು ನಿಮಗೆ ಹುಡುಕಿ ತಂದಿದ್ದೇವೆ. ನೀವು ಸಮಂತಾಳನ್ನು ಸೋಷಿಲ್ ಮೀಡಿಯಾದಲ್ಲಿ ಅನುಸರಿಸುತ್ತಿದ್ದಾರೆ ನಿಮಗೆ ಈಕೆಯ ಈ ಡ್ರೆಸ್ ನೆನಪಿರಬಹುದು. ಕ್ರಿಸ್ ಮಸ್ ಸಂದರ್ಭದಲ್ಲಿ ಒಂದು ಬ್ಲ್ಯಾಕ್ ಗೌನ್ ಧರಿಸಿದ್ದು, ಆ ಉಡುಪಿಗೆ ಸಾಕಷ್ಟು ಮೆಚ್ಚುಗೆ ಪಡೆದಿದ್ದರು. ತೊಡೆಯ ಭಾಗದಲ್ಲಿ ಸೀಳಿದ್ದಕ್ಲಾಸಿಕ್ ಕಪ್ಪು ಬಾಡಿಕಾನ್ ಉಡುಗೆ ಧರಿಸಿದ್ದ ಸಮಂತಾ ಸಕತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು.




ನೋರ್ಮಕಮಲಿಯಲ್ಲಿ ಶಾಪಿಂಗ್ ಆ್ಯಪ್ ನಲ್ಲಿದೆ ಈ ಡ್ರೆಸ್.. ಬೆಲೆ 11,630 ರೂ
ನೀವು ಈ ಬಟ್ಟೆ ಖರೀದಿ ಮಾಡಲು ಬಯಸಿದರೆ ನೀವು ನೋರ್ಮಕಮಲಿಯಲ್ಲಿ ಚೆಕ್ ಮಾಡಬಹುದು. ಈ ವೆಬ್ ಸೈಟ್ ನಲ್ಲಿ ಸಮಂತಾ ತೊಟ್ಟಿದ್ದ ಈ ಕಪ್ಪು ಗೌನ್ ಇದ್ದು, ಡೇಟ್ ನೈಟ್‌ಗಳು, ಕಾಕ್‌ಟೈಲ್ ಪಾರ್ಟಿಗಳು ಮತ್ತು ಸಂಜೆಯ ಈವೆಂಟ್‌ಗಳಿಗೆ ಪರಿಪೂರ್ಣ ಆಯ್ಕೆಯಾಗಿದೆ ಮತ್ತು ಇದರ ಬೆಲೆ 11,630 ರೂ ಆಗಿದೆ. ಯಾವುದೇ ಡ್ರೆಸ್ ಧರಿಸಿದರೂ ಚೆನ್ನಾಗಿ ನಿಭಾಯಿಸುವ ಸಮಂತಾ, ಸದ್ಯದ ಫ್ಯಾಶನ್ ಬೆಡಗಿ. ಮತ್ತು ನೀವು ಸಹ ಸಮಂತಾಳ ಲುಕ್ ಗಳನ್ನು ನೋಡಿ ಸ್ಟೈಲ್ ಟಿಪ್ಸ್ ಅನ್ನು ಕಲಿಯಬಹುದು.

ಇದನ್ನೂ ಓದಿ: Rashmika Mandanna: ಟ್ರೆಡಿಷಿನಲ್ ಲುಕ್​ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದ ರಶ್ಮಿಕಾ! ನ್ಯಾಷನಲ್ ಕ್ರಶ್​ನ ಸಖತ್ ಫೋಟೋಗಳು

ಇನ್ನೂ ಸಿನಿಮಾಗಳ ವಿಚಾರಕ್ಕೆ ಬಂದರೆ ವಿಜಯ್ ದೇವರಕೊಂಡ ಜೊತೆಗೆ ಖುಷಿ ಮತ್ತು ಗುಣಶೇಖರ್ ನಿರ್ದೇಶನದ ಶಾಕುಂತಲಂ, ಹರಿಶಂಕರ್ ಜೊತೆಗೆ ಯಶೋಧಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಮಂತಾ ಕೊನೆಯದಾಗಿ ಅಕ್ಷಯ್ ಕುಮಾರ್ ಜೊತೆ ಕಾಫಿ ವಿತ್ ಕರಣ್ ನಲ್ಲಿ ಕಾಣಿಸಿಕೊಂಡಿದ್ದರು. ಕಾಫಿ ವಿತ್ ಕರಣ್ ಶೋನಲ್ಲೂ ಸಮಂತಾ ಗುಲಾಬಿ ಮತ್ತು ಕೆಂಪು ಬಣ್ಣದ ಡ್ರೆಸ್ ನಲ್ಲಿ ಸಖತ್ ಆಗಿ ಕಾಣಿಸಿಕೊಂಡಿದ್ದರು.
Published by:Ashwini Prabhu
First published: