ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಹಲವು ಸಲ ಟ್ರೋಲ್ (Troll) ಆಗಿದ್ದಾರೆ. ನಟಿ ಸುಮ್ಮನಿದ್ದರೂ ಏನಾದರೊಂದು ಹೇಳಿ ನೆಟ್ಟಿಗರು ಟ್ರೋಲ್ ಮಾಡುತ್ತಾರೆ. ವಿಜಯ್ ದೇವರಕೊಂಡ ಇದ್ದ ಅದೇ ಸ್ವಿಮ್ಮಿಂಗ್ ಪೂಲ್ನಲ್ಲಿ (Swimming Pool) ಕಾಣಿಸಿಕೊಂಡಿದ್ದ ನಟಿಯ ಹಳೆಯ ಫೋಟೋ ಈಗ ಕಂಪೇರ್ ಮಾಡಿ ವೈರಲ್ ಮಾಡಲಾಗಿದೆ. ಇದರಲ್ಲಿ ಅವರಿಬ್ಬರು ಒಂದೇ ಪೂಲ್ ಒಳಗಿದ್ದದ್ದು ಸ್ಪಷ್ಟವಾಗಿದೆ. ಇದೀಗ ನಟಿಯ ಹಳೆಯದೊಂದು ವಿಡಿಯೋ (Video) ವೈರಲ್ ಆಗಿದೆ. ಇದು ಈಗಾಗಲೇ ವೈರಲ್ ಆಗಿದ್ದರೂ ಅದರೊಂದಿಗೆ ಸಾಯಿ ಪಲ್ಲವಿ (Sai Pallavi) ವಿಡಿಯೋವನ್ನು ಸೇರಿಸಿ ಹೋಲಿಸಲಾಗಿದ್ದು ಮತ್ತಷ್ಟು ಸುದ್ದಿಯಾಗಿದೆ.
ಏನಿದೆ ವಿಡಿಯೋದಲ್ಲಿ?
ವಿಡಿಯೋದಲ್ಲಿ ರಶ್ಮಿಕಾ ಮಂದಣ್ಣ ಹಿಮ ಬೀಳುವಂತಹ ಜಾಗದಲ್ಲಿ ನಿಂತು ಶೂಟಿಂಗ್ ಮಾಡುವುದನ್ನು ಕಾಣಬಹುದು. ಇದರಲ್ಲಿ ಸ್ಲೀವ್ಲೆಸ್ ಲೆಹಂಗಾ ಧರಿಸಿದ್ದ ನಟಿ ಒಂದು ಸುತ್ತು ರೌಂಡ್ ಹಾಕಿ ಚಳಿಯಲ್ಲಿ ನಡುಗುವುದನ್ನೂ ಅವರತ್ತ ಹೆಲ್ಪಿಂಗ್ ಬಾಯ್ಸ್ ಜಾಕೆಟ್ ಹಿಡಿದು ಓಡುವುದನ್ನೂ ಕಾಣಬಹುದು.
ಇದನ್ನು ನೋಡಿದ ನೆಟ್ಟಿಗರೆಲ್ಲ ಇದು ಸ್ವಲ್ಪ ಜಾಸ್ತಿ ಆಗಿಲ್ವಾ? ಎಂದು ಕಾಲೆಳೆಯುತ್ತಿದ್ದಾರೆ. ಅದೇ ರೀತಿ ಕೂರ್ಗ್ನಲ್ಲಿಯೇ ಹುಟ್ಟಿ ಬೆಳೆದ ನಟಿ ರಶ್ಮಿಕಾಗೆ ಸಾಧಾರಣ ಚಳಿ ಅಭ್ಯಾಸವಿರುತ್ತದೆ. ಕೂರ್ಗ್ ತಂಪಿನ ಪ್ರದೇಶವಾಗಿರುವ ಕಾರಣ ಅಲ್ಲಿಯೂ ಚಳಿ ಹೆಚ್ಚಿರುತ್ತದೆ. ಹಾಗಾಗಿ ಇದರಲ್ಲಿ ನಟಿ ಬೇಕೆಂದೇ ಓವರ್ ಆ್ಯಕ್ಟಿಂಗ್ ಮಾಡಿದ್ದಾರೆ ಎಂದಿದ್ದಾರೆ ನೆಟ್ಟಿಗರು.
ಸಾಯಿ ಪಲ್ಲವಿ
ಸಾಯಿ ಪಲ್ಲವಿ ಅವರ ಫಿದಾ ಸಿನಿಮಾದ ರೊಮ್ಯಾಂಟಿಕ್ ಸಾಂಗ್ ಶೂಟಿಂಗ್ನಲ್ಲಿ ನಟಿ ಹೀರೋ ಜೊತೆ ಹಿಮಪರ್ವತದಲ್ಲಿಯೇ ಸೀರೆ ಉಟ್ಟು ಡ್ಯಾನ್ಸ್ ಮಾಡುವುದನ್ನು ಕಾಣಬಹುದು. ಸೀರೆಯಲ್ಲಿ ಅಷ್ಟು ಚಳಿ ಪ್ರದೇಶದಲ್ಲಿ ಡ್ಯಾನ್ಸ್ ಮಾಡುವುದು ಅಂದ್ರೆ ಸುಮ್ನೇನಾ? ಆದರೆ ಸಾಯಿ ಪಲ್ಲವಿ ಅತ್ಯಂತ ಸಹಜವಾಗಿದ್ದಾರೆ.
View this post on Instagram
ಇದನ್ನೂ ಓದಿ: Raai Laxmi: ಬೀಚ್ ಬ್ಯೂಟಿಯಾದ ಕಲ್ಪನಾ ನಟಿ! ಲಕ್ಷ್ಮಿ ಲೇಟೆಸ್ಟ್ ಫೋಟೋಸ್ ವೈರಲ್
ರಶ್ಮಿಕಾ ಸಿನಿಮಾಗಳಲ್ಲಿ ಬ್ಯುಸಿ
ರಶ್ಮಿಕಾ ಮಂದಣ್ಣ ಪುಷ್ಪಾ 2 ಸೇರಿದಂತೆ ಹಲವು ಪ್ರಾಜೆಕ್ಟ್ಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ಮೊದಲ ಹಿಂದಿ ಸಿನಿಮಾ ಗುಡ್ ಬೈ ರಿಲೀಸ್ ಆಗಿ ಅಷ್ಟು ಸಕ್ಸಸ್ ಕಾಣಲಿಲ್ಲ. ಇನ್ನು ಮಿಷನ್ ಮಜ್ನು ಸಿನಿಮಾ ರಿಲೀಸ್ ಆಗಲಿದ್ದು ನಟಿ ಸದ್ಯ ಅದರ ನಿರೀಕ್ಷೆಯಲ್ಲಿದ್ದಾರೆ. ಈ ಸಿನಿಮಾದಲ್ಲಿ ರಶ್ಮಿಕಾ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಕಾಣಿಸಿಕೊಂಡಿದ್ದಾರೆ.
ಇನ್ನು ಸಾಯಿ ಪಲ್ಲವಿ ಬಗ್ಗೆ ನೋಡುವುದಾದರೆ ಅವರು ವಿರಾಟ ಪರ್ವಂನಲ್ಲಿ ರಾಣಾ ದಗ್ಗುಬಾಟಿ ಜೊತೆ ನಟಿಸಿದ್ದರು. ನಂತರ ಸಿನಿಮಾದಿಂದ ಚಿಕ್ಕ ವಿರಾಮ ತೆಗೆದುಕೊಂಡಿದ್ದಾರೆ. ಸದ್ಯ ನಟಿ ಹಾಸ್ಪಿಟಲ್ ಕಟ್ಟಿಸುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ನಟಿ ಇನ್ನು ಸದ್ಯದಲ್ಲಿ ನಟಿ ಬೇರೆ ಸಿನಿಮಾ ಸೈನ್ ಮಾಡುವುದಿಲ್ಲ ಎಂದು ಹೇಳಲಾಗುತ್ತಿದೆ.
ನಟಿ ರಶ್ಮಿಕಾ ಇತ್ತೀಚೆಗೆ ವಿಜಯ್ ದೇವರಕೊಂಡ ಶೇರ್ ಮಾಡಿದ ಮಾಲ್ಡೀವ್ಸ್ ಫೋಟೋದಿಂದಾಗಿ ಪೇಚಿಗೆ ಸಿಲುಕಿದ್ದರು. ನಟಿ ಶೇರ್ ಮಾಡಿದ ಹಳೆಯ ಫೋಟೋದಲ್ಲಿಯೂ ಇದೇ ಲೊಕೇಷನ್ ಇದ್ದು ವಿಜಯ್ ಅವರ ಫೋಟೋದಲ್ಲಿಯೂ ಅದೇ ಲೊಕೇಷನ್ ಕಂಡುಬಂದಿದ್ದು ಅವರ ರಿಲೇಷನ್ಶಿಪ್ ಸುದ್ದಿಗೆ ಪುಷ್ಠಿ ಕೊಟ್ಟಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ