ಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ಭಾರೀ ಅಭಿಮಾನಿ ಬಳಗ ಹೊಂದಿದ್ದಾರೆ. ರಣಬೀರ್ ಹೋದಲೆಲ್ಲಾ ಅಭಿಮಾನಿಗಳು (Fans) ಮುತ್ತಿಕೊಳ್ತಾರೆ. ನೆಚ್ಚಿನ ನಟನ ಜೊತೆ ಫೋಟೋಗಾಗಿ (Photo) ಮುಗಿಬೀಳ್ತಾರೆ. ಹಾಗೇ ರಣಬೀರ್ ಕಪೂರ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿ ಜೊತೆ ರಣಬೀರ್ ವರ್ತಿಸಿ ರೀತಿ ನೋಡಿ ನೆರೆದಿದ್ದ ಜನರೆಲ್ಲಾ ಶಾಕ್ ಆಗಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಕೂಡ ನಟ ರಣಬೀರ್ ಕಪೂರ್ ವರ್ತನೆಯನ್ನು ಖಂಡಿಸಿದ್ದಾರೆ.
ಅಭಿಮಾನಿಯ ಫೋನ್ ಕಿತ್ತು ಎಸೆದ ರಣಬೀರ್
ಸೆಲ್ಫಿ ತೆಗೆದುಕೊಳ್ಳಲು ಬಂದಿದ್ದ ಅಭಿಮಾನಿಯ ಫೋನ್ನನ್ನು ರಣಬೀರ್ ಕಪೂರ್ ಕಿತ್ತು ಎಸೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸಖತ್ ವೈರಲ್ ಆಗಿದೆ. ವಿಡಿಯೋ ನೋಡಿದ ರಣಬೀರ್ ಅಭಿಮಾನಿಗಳು ಹಾಗೂ ನೆಟ್ಟಿಗರು ನಟನ ವರ್ತನೆ ನೋಡಿಯೇ ಶಾಕ್ ಆಗಿದ್ದಾರೆ.
ರಣಬೀರ್ ಕೋಪಗೊಂಡಿದ್ದು ಯಾಕೆ?
ರಣಬೀರ್ ಕಪೂರ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಯೊಬ್ಬರು ಬರುತ್ತಾರೆ. ಸುತ್ತಲೂ ಜನರು ಮುತ್ತಿಕೊಂಡಿರುತ್ತಾರೆ. ನಗು ನಗುತ್ತಲೇ ರಣಬೀರ್ ಕಪೂರ್ ಸೆಲ್ಫಿಗೆ ಪೋಸ್ ಕೊಡ್ತಾರೆ. ಆದರೆ ಫೋಟೋ ಚೆನ್ನಾಗಿ ಬರಲಿ ಎಂಬ ಕಾರಣಕ್ಕೆ ಆ ಅಭಿಮಾನಿ ಮತ್ತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗ್ತಾನೆ. 2-3 ಬಾರಿ ಫೋಟೋಗೆ ಪೋಸ್ ಕೊಟ್ಟ ರಣಬೀರ್ ಕಪೂರ್ ಕೋಪ ಮಾಡಿಕೊಳ್ತಾರೆ. ಬಳಿಕ ಅಭಿಮಾನಿ ಕೈಯಲ್ಲಿದ್ದ ಫೋನ್ ನನ್ನು ಕಿತ್ತುಕೊಂಡು ಎಸೆಯುತ್ತಾರೆ.
View this post on Instagram
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಬಗೆ ಬಗೆಯ ಕಮೆಂಟ್ ಮಾಡ್ತಿದ್ದಾರೆ. ಅಹಂಕಾರದಿಂದ ರಣಬೀರ್ ಕಪೂರ್ ಈ ರೀತಿ ಮಾಡಿದ್ದಾರೆ ಎಂದು ಹಲವರು ಟೀಕಿಸಿದ್ದಾರೆ. ಯಾರೇ ಆದ್ರೂ ಈ ರೀತಿ ವರ್ತನೆ ಸರಿ ಇಲ್ಲ ಎನ್ನುತ್ತಿದ್ದಾರೆ. ಕಳೆದ ವರ್ಷ ರಿಲೀಸ್ ಆದ ಬ್ರಹ್ಮಾಸ್ತ್ರ ಸಿನಿಮಾದಿಂದ ರಣಬೀರ್ ಕಪೂರ್ ಅವರಿಗೆ ಯಶಸ್ಸು ಸಿಕ್ಕಿತು. ಆ ಗೆಲುವಿನ ಬಳಿಕ ಅವರ ಈ ರೀತಿ ವರ್ತಿಸಲು ಆರಂಭಿಸಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಈ ವಿಡಿಯೋ ಅಸಲಿನಾ ನಕಲಿನಾ?
ಇನ್ನೂ ಕೆಲವರಿಗೆ ಈ ವಿಡಿಯೋದ ಅಸಲಿನಾ ನಕಲಿನಾ ಎನ್ನುವ ಅನುಮಾನ ಮೂಡಿದೆ. ರಣಬೀರ್ ಈ ರೀತಿ ಮಾಡುವ ವ್ಯಕ್ತಿಯಲ್ಲ ಎಂದು ಕೆಲವರು ಕಿಡಿಕಾರಿದ್ದಾರೆ. ಇದು ಪ್ರಚಾರದ ಗಿಮಿಕ್ ಎಂದು ಹಲವರು ಹೇಳುತ್ತಿದ್ದಾರೆ. ಯಾವುದೋ ಮೊಬೈಲ್ ಫೋನ್ ಕಂಪನಿಯ ಜಾಹೀರಾತಿನ ಶೂಟಿಂಗ್ ಇರಬಹುದು ಎಂದು ಒಂದಷ್ಟು ಮಂದಿ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ರಣಬೀರ್ ಕಪೂರ್ ಕಡೆಯಿಂದಲೇ ಸ್ಪಷ್ಟನೆ ಸಿಗಬೇಕಿದೆ.
He is kind. I have met him several times. This is a promotional campaign
— $@M (@SAMTHEBESTEST_) January 27, 2023
ಹಿಂದೆ ಅನುಷ್ಕಾ ಶರ್ಮಾ ಕೂಡ ಬ್ರ್ಯಾಂಡ್ ಪ್ರಚಾರಕ್ಕೆಂದು ಸೋಶಿಯಲ್ ಮೀಡಿಯಾದಲ್ಲಿ ಬ್ರ್ಯಾಂಡ್ ಕಂಪನಿ ವಿರುದ್ಧವೇ ಪೋಸ್ಟ್ ಮಾಡಿ ಬಳಿಕ ಅದೇ ಬ್ರ್ಯಾಂಡ್ ಪ್ರಚಾರ ಮಾಡಿದ್ರು. ರಣಬೀರ್ ಕಪೂರ್ ಕೂಡ ಹಾಗೇ ಮಾಡ್ತಿದ್ದಾರೆ ಎನ್ನುವ ಪ್ರಶ್ನೆ ಮೂಡಿದೆ. ಪ್ರಚಾರಕ್ಕಾಗಿ ನಟರು ನಾನಾ ತಂತ್ರಗಳನ್ನು ಮಾಡ್ತಾರೆ. ಮೊಬೈಲ್ ಕಂಪನಿ ಪ್ರಚಾರಕ್ಕೆ ಹೀಗೆ ಮಾಡ್ತಿದ್ದಾರೆ ಎಂದು ಅನೇಕು ಕಮೆಂಟ್ ಮಾಡ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ