ಕಂದಾಯ ಇಲಾಖೆಯಿಂದ ಸೈರಾ ನರಸಿಂಹ ರೆಡ್ಡಿ ಚಿತ್ರಕಂಡಕ್ಕೆ ಶಾಕ್

news18
Updated:August 1, 2018, 7:55 PM IST
ಕಂದಾಯ ಇಲಾಖೆಯಿಂದ ಸೈರಾ ನರಸಿಂಹ ರೆಡ್ಡಿ ಚಿತ್ರಕಂಡಕ್ಕೆ ಶಾಕ್
news18
Updated: August 1, 2018, 7:55 PM IST
- ಹರೀಶ್,  ನ್ಯೂಸ್ 18 ಕನ್ನಡ 

ಬಹುನಿರೀಕ್ಷಿತ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಬಾರೀ ಬಜೆಟ್ ನ 'ಸೈರಾ ನರಸಿಂಹ ರೆಡ್ಡಿ' ಚಿತ್ರಕಂಡಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಈ ಚಿತ್ರದ ಚಿತ್ರಿಕರಣಕ್ಕೆ ಹಾಕಲಾಗಿದ್ದ ಸೆಟ್ ಅನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಸೈರಾ ಚಿತ್ರಕ್ಕಾಗಿ ನಾಯಕನಿಗೆ ಅಂದರೆ ಚಿರಂಜೀವಿಗೆ ನಿರ್ಮಿಸಲಾಗಿದ್ದ ಮನೆಯನ್ನು ಅಧಿಕಾರಿಗಳು ಕೆಡವಿದ್ದಾರೆ.

ರಾಮ್ ಚರಣ್ ಅಭಿನಯದ ಬ್ಲಾಕ್ ಬಸ್ಟರ್ 'ರಂಗಸ್ಥಳಂ ' ಚಿತ್ರಕ್ಕೂ ಈ ಸ್ಥಳದಲ್ಲಿಯೇ ಸೆಟ್ ನಿರ್ಮಿಸಲಾಗಿತ್ತು.ಈ ಚಿತ್ರ ಮೆಗಾ ಸ್ಟಾರ್ ಚಿರಂಜೀವಿಯವರ ಹೋಂ ಬ್ಯಾನರ್ ನಲ್ಲಿ ನಿರ್ಮಾಣವಾಗುತಿದ್ದು, ಅವರ ಪುತ್ರ ರಾಮ್ ಚರಣ್ ಈ ಚಿತ್ರಕ್ಕೆ ಬಂಡವಾಳವನ್ನ ಹಾಕಿದ್ದಾರೆ. ಸೇರಿಲಿಂಗಂಪಲ್ಲಿ ಕಂದಾಯ ಪರದಿಯಲ್ಲಿ ಈ ಚಿತ್ರಕ್ಕಾಗಿ ಸೆಟ್ ಗಳನ್ನು ಅನಧಿಕೃತವಾಗಿ ನಿರ್ಮಿಸಲಾಗಿತ್ತು.

ಅದು ಸರ್ಕಾರಿ ಭೂಮಿಯಾಗಿದ್ದು, ಅನುಮತಿ ಇಲ್ಲದೆಯೇ ಸೆಟ್ ನಿರ್ಮಾಣ ಮಾಡಿರುವುದಕ್ಕೆ ಕಂದಾಯ ಅಧಿಕಾರಿಗಳು ಡೆಮಾಲೇಷನ್ ಮಾಡಿರುವುದು. ಅದರಲ್ಲೂ, ಸೈರಾ ಚಿತ್ರದಲ್ಲಿ ನಾಯಕನ ಮನೆಯನ್ನು ಈಗ ಕೆಡವಲಾಗಿರುವಂತಹದ್ದು. ಇನ್ನು, ಈ ಸ್ಥಳದಿಂದ ಸೆಟ್ ಅನ್ನು ಸ್ಥಳಾಂತರಿಸಲು ಹಲವು ಬಾರಿ ಸೂಚನೆಗಳನ್ನು ನೀಡಲಾಗಿದ್ದರೂ, ಫಲಿತಾಂಶ ಇಲ್ಲದಿದ್ದರಿಂದ ತೆರವು ಕಾರ್ಯಾಚರಣೆ ನಡೆದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಅನುಮತಿ ಕೋರಿದ್ದರೆ, ಉಚಿತವಾಗಿ ಅನುಮತಿಯನ್ನು ನೀಡಲಾಗುತ್ತಿತ್ತು, ಅನುಮತಿ ಇಲ್ಲದೆ ಸೆಟ್ ಹಾಕಿರುವುದು ಚಿತ್ರತಂಡ ಎಸೆಗಿರುವ ತಪ್ಪು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಈ ಸ್ಥಳ ಭೂ ಸ್ವಾಧೀನಕ್ಕೆ ಚಿತ್ರತಂಡ ಹಾಕಿದ್ದ ಪೂರ್ವ ಯೋಜಿತ ಪ್ಲಾನ್ ಎಂದು ಆದಾಯ ಅಧಿಕಾರಿಗಳು ಸಂಶಯವನ್ನ ವ್ಯಕ್ತಪಡಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಚಿತ್ರತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

 
First published:August 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...