ಸ್ಯಾಂಡಲ್ವುಡ್ ಚಿರ ಯುವಕ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು 58ನೇ ವಸಂತಕ್ಕೆ ಕಾಲಿಡಲು ದಿನಗಳು ಮಾತ್ರ ಉಳಿದಿವೆ. ಆದರೆ ಈ ಬಾರಿ ಕೊರೋನಾ ಕಾರಣದಿಂದ ಅದ್ದೂರಿ ಸಂಭ್ರಮಾಚರಣೆ ಇಲ್ಲ. ಹೀಗಾಗಿಯೇ ಹ್ಯಾಟ್ರಿಕ್ ಹೀರೋ ಅಭಿಮಾನಿಗಳು ಕೂಡ ಶಿವಣ್ಣನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ಸಿದ್ದತೆಯಲ್ಲಿ ತೊಡಗಿಸಿದ್ದಾರೆ.
ಅದರಂತೆ ಅಣ್ಣಾವ್ರ ಫ್ಯಾಮಿಲಿ ಆಪ್ತರಲ್ಲಿ ಗುರುತಿಸಿಕೊಂಡಿರುವ ಕರುನಾಡ ಚಕ್ರವರ್ತಿ ಶಿವಣ್ಣನ ಅಭಿಮಾನಿ ವರುಣ್ ಗೌಡ, ತಮ್ಮ ನೆಚ್ಚಿನ ತಾರೆಯ ಹುಟ್ಟುಹಬ್ಬಕ್ಕೆ ವಿಶೇಷ ವಿಡಿಯೋ ಸಮರ್ಪಣೆ ಮಾಡಲು ಸಜ್ಜಾಗಿ ನಿಂತಿದ್ದಾರೆ. ಅದರಂತೆ ವರುಣ್ ಸ್ಟುಡಿಯೋಸ್ ಮೂಲಕ ಯಾವತ್ತೂ ಕರಗದ ಎನರ್ಜಿ ನಾಯಕನಿಗೆ, ಸದಾ ನಗ್ತಿರೋ ಚಿರ ಯುವಕ ಶಿವಣ್ಣನಿಗಾಗಿ ಹಾಡೊಂದನ್ನು ನಿರ್ಮಿಸಿದ್ದಾರೆ.
ಶಿವ@58-ಸ್ಟಿಲ್ ಯಂಗ್ ಮಾ...ಹೆಸರಿನಲ್ಲಿ ಮೂಡಿ ಬರಲಿರುವ ಈ ಹಾಡಿಗೆ ಸಂಗೀತ ನೀಡಿರುವುದು ಗುಮ್ಮಿನೇನಿ ವಿಜಯ್. ಇನ್ನು ಸಾಹಿತ್ಯ ಬರೆದಿರುವುದು ಮೋಹನ್. ಹಾಗೆಯೇ ಎನರ್ಜಿಯ ಹರಿಕಾರನಿಗೆ ಎನರ್ಜಿಟಿಕ್ ಧ್ವನಿ ನೀಡಿರುವುದು ಅನಿರುದ್ಧ ಶಾಸ್ತ್ರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ