Puneeth Rajkumar: 'ಜೇಮ್ಸ್' ಸಿನಿಮಾ ನೋಡಿ ಶಿವಣ್ಣ ಹೇಳಿದ್ದೇನು? ಮೂವಿ ಬಗ್ಗೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್ ಏನಂದ್ರು?

‘ಜೇಮ್ಸ್’ ರಿಲೀಸ್ ಆಗಿ, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬರೀ ಕರ್ನಾಟಕ ಅಷ್ಟೇ ಅಲ್ಲದೇ, ವಿಶ್ವದಾದ್ಯಂತ ‘ಅಪ್ಪು’ ಅಭಿಮಾನಿಗಳು ಜೇಮ್ಸ್ ಸಿನಿಮಾವನ್ನು ಬಿಗಿದಪ್ಪಿದ್ದಾರೆ. ಇನ್ನು ಸಿನಿಮಾ ನೋಡಿದ ಶಿವಣ್ಣ ಏನ್ ಹೇಳಿದ್ರು? ಜೇಮ್ಸ್ ಬಗ್ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೇಳಿದ್ದೇನು? ಇಲ್ಲಿದೆ ಈ ಬಗ್ಗೆ ಮಾಹಿತಿ…

ಸಂಗ್ರಹ ಚಿತ್ರ

ಸಂಗ್ರಹ ಚಿತ್ರ

  • Share this:
    ಬಹು ನಿರೀಕ್ಷಿತ ಸಿನಿಮಾ (Cinema), ಪವರ್ ಸ್ಟಾರ್ (Power Star) ಪುನೀತ್ ರಾಜ್‌ಕುಮಾರ್ (Puneeth Rajkumar) ಅಭಿನಯದ ಕೊನೆಯ ಚಿತ್ರ (Last Movie) ‘ಜೇಮ್ಸ್’ (James)ರಿಲೀಸ್ ಆಗಿ, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬರೀ ಕರ್ನಾಟಕ ಅಷ್ಟೇ ಅಲ್ಲದೇ, ವಿಶ್ವದಾದ್ಯಂತ ‘ಅಪ್ಪು’ (Appu) ಅಭಿಮಾನಿಗಳು (Fans) ಜೇಮ್ಸ್ ಸಿನಿಮಾವನ್ನು ಬಿಗಿದಪ್ಪಿದ್ದಾರೆ. ಸಿನಿಮಾ ರಿಲೀಸ್ ಆಗಿದೆ ಎಂಬ ಸಂತೋಷದಿಂದ, ತಮ್ಮ ನೆಚ್ಚಿನ ಹೀರೋ (Hero) ಜೊತೆಗಿಲ್ಲ ಎಂಬ ದುಃಖದಿಂದಲೇ ಸಿನಿಮಾ ನೋಡಿದ್ದಾರೆ. ಇದೀಗ ಜೇಮ್ಸ್ ಸಿನಿಮಾ ದಾಖಲೆ  (Record) ಮೇಲೆ ದಾಖಲೆ ಬರೆಯುತ್ತಾ ಇದೆ. ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ (Box Office Collection) ವಿಚಾರದಲ್ಲಿ ಕೆಜಿಎಫ್‌ ದಾಖಲೆಯನ್ನು ಜೇಮ್ಸ್ ಮುರಿದಿದೆ. ಇನ್ನುಈ ಚಲನಚಿತ್ರವು ಅವರ ಎಲ್ಲಾ ಅಭಿಮಾನಿಗಳಿಗೆ ತುಂಬಾನೇ ವಿಶೇಷವಾಗಿದೆ, ಏಕೆಂದರೆ ಇದು ದೊಡ್ಡ ಪರದೆಯ ಮೇಲೆ ಅಪ್ಪು ಅವರನ್ನು ಕೊನೆಯ ಬಾರಿಗೆ ನೋಡುವ ಭಾವನಾತ್ಮಕ ಅನುಭವವನ್ನು ನೀಡಿದೆ. ಪುನೀತ್ ರಾಜ್ ಕುಮಾರ್ ಅವರ ವೃತ್ತಿ ಜೀವನದ ಅತಿದೊಡ್ಡ ಚಿತ್ರ ಬಿಡುಗಡೆ ‘ಜೇಮ್ಸ್’ ಗೆ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ದೊರೆಯುತ್ತಿದೆ.

    ರಾಜ್‌ ಮಕ್ಕಳನ್ನು ಒಟ್ಟಿಗೆ ನೋಡಿದ ಪ್ರೇಕ್ಷಕರು

    ಈ ಚಿತ್ರದ ಕ್ಲೈಮ್ಯಾಕ್ಸ್ ಮತ್ತು ಆಕ್ಷನ್ ದೃಶ್ಯಗಳು ಪ್ರೇಕ್ಷಕರಿಂದ ತುಂಬಾನೇ ಮೆಚ್ಚುಗೆಯನ್ನು ಪಡೆದಿವೆ. ಅಲ್ಲದೆ, ಪುನೀತ್ ಅವರ ಅಣ್ಣಂದಿರಾದ ನಟ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಅವರಿಬ್ಬರು ಈ ಚಿತ್ರದಲ್ಲಿ ಅತಿಥಿ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅಭಿಮಾನಿಗಳು ಈ ಚಿತ್ರವನ್ನು ಪುನೀತ್ ರಾಜ್ ಕುಮಾರ್ ಅವರ ಆಚರಣೆ ಎಂದು ಹೇಳುತ್ತಿದ್ದಾರೆ.

    ಜೇಮ್ಸ್ ಸಿನಿಮಾ ವೀಕ್ಷಿಸಿದ ಶಿವಣ್ಣ

    ಈ ಚಿತ್ರಕ್ಕೆ ಅಭಿಮಾನಿಗಳಿಂದ ಭಾರಿ ಪ್ರತಿಕ್ರಿಯೆ ಲಭ್ಯವಾಗುತ್ತಿದ್ದರೆ, ಅವರ ಸಹೋದರ ಶಿವರಾಜ ಕುಮಾರ್ ಕೂಡ ಪುನೀತ್ ಅವರ ಕೊನೆಯ ಚಿತ್ರವನ್ನು ಚಿತ್ರಮಂದಿರದಲ್ಲಿ ವೀಕ್ಷಿಸಿದರು. ಮೈಸೂರಿನಲ್ಲಿ ‘ಜೇಮ್ಸ್’ ಚಿತ್ರವನ್ನು ನೋಡಿದ ನಂತರ ನಟ ಅಭಿಮಾನಿಗಳತ್ತ ಕೈಬೀಸಿ ಧನ್ಯವಾದ ಹೇಳಿದರು.

    “ಅಪ್ಪು ನೋಡುವಾಗ ತುಂಬಾ ಕಷ್ಟವಾಯ್ತು”

    ಈ ಚಿತ್ರದಲ್ಲಿ ಶಿವರಾಜ ಕುಮಾರ್ ಅವರು ಪುನೀತ್ ಅವರ ಉಳಿದ ಭಾಗಗಳಿಗೆ ಡಬ್ ಮಾಡಿದ್ದಾರೆ ಮತ್ತು ಹಾಗೆ ಮಾಡುವಾಗ ತಮ್ಮ ಸಹೋದರನನ್ನು ತೆರೆಯ ಮೇಲೆ ನೋಡುವುದು ಭಾವನಾತ್ಮಕವಾಗಿ ತುಂಬಾನೇ ಕಷ್ಟದ ವಿಷಯ ಎಂದು ಹೇಳಿದ್ದಾರೆ.

    ಇದನ್ನೂ ಓದಿ: Puneeth Rajkumar: ಮೊದಲ ದಿನವೇ 'ಕೆಜಿಎಫ್‌' ದಾಖಲೆ ಮುರಿದ 'ಜೇಮ್ಸ್'! 'ಪವರ್ ಸ್ಟಾರ್' ಅಬ್ಬರಕ್ಕೆ ಬಾಕ್ಸ್ ಆಫೀಸ್ ಶೇಕ್!

     ಸಿನಿಮಾದ ಬಗ್ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೇಳಿದ್ದೇನು?

    ಪುನೀತ್ ಅವರ ಪತ್ನಿ ಅಶ್ವಿನಿ ಅವರು ತಮ್ಮ ಪತಿಯ ಅಗಲಿಕೆಯ ನೋವಿನಿಂದ ಇನ್ನೂ ಹೊರ ಬಂದಿಲ್ಲ. ಇತ್ತೀಚೆಗೆ ಮನೋರಂಜನಾ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ‘ಜೇಮ್ಸ್’ ಚಿತ್ರವನ್ನು ನೀವು ನೋಡುತ್ತೀರಾ ಎಂದು ಕೇಳಿದಾಗ, ಅಶ್ವಿನಿ ಅವರು "ನಾನು ಚಿತ್ರವನ್ನು ನೋಡಲು ನನಗೆ ಸಾಧ್ಯವಾಗುತ್ತದೆ ಎಂದು ನಾನು ಭಾವಿಸುವುದಿಲ್ಲ. ನನಗೆ ಸಾಧ್ಯವಿಲ್ಲ" ಎಂದು ಹೇಳಿದರು.

    “ಜನರ ಅಭಿಮಾನಿ ನೋಡಿ ಹೃದಯ ತುಂಬಿ ಬರುತ್ತಿದೆ”

    ಭಾವನಾತ್ಮಕವಾಗಿ ಇನ್ನೂ ಅಪ್ಪು ಅಗಲಿಕೆಯ ನೋವಿನಲ್ಲಿರುವ ಅಶ್ವಿನಿ ಸೇರಿದಂತೆ ಪುನೀತ್ ಅವರ ಅಭಿಮಾನಿಗಳು ಮತ್ತು ಕುಟುಂಬಕ್ಕೆ ನಿನ್ನೆ ಬಿಡುಗಡೆಯಾದ ಅವರ ಚಿತ್ರವು ಅಪ್ಪು ಅವರನ್ನು ಮತ್ತೆ ನೆನಪು ಮಾಡಿಕೊಳ್ಳುವಂತೆ ಆಯಿತು. "ಅವರ ನಷ್ಟವನ್ನು ಒಪ್ಪಿಕೊಳ್ಳುವುದು ಕಷ್ಟವಾಗಿದ್ದರೂ, ಪುನೀತ್ ಅವರ ಕೆಲಸಗಳ ಮೂಲಕ ಗಳಿಸಿದ ಪ್ರೀತಿಯನ್ನು ನೋಡಿದರೆ ತುಂಬಾನೇ ಖುಷಿಯಾಗುತ್ತದೆ" ಎಂದು ಅವರು ಹೇಳಿದರು.

    ‘ಜೇಮ್ಸ್’ ಸಿನಿಮಾಕ್ಕೆ ಗಣ್ಯರಿಂದ ಶುಭ ಹಾರೈಕೆ

    ಕಳೆದ ವರ್ಷ ಅಕ್ಟೋಬರ್ ನಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದ ನಂತರ ‘ಜೇಮ್ಸ್’ ಚಿತ್ರವು ಈ ನಟನ ಕೊನೆಯ ಚಿತ್ರವಾಗಿರುವುದರಿಂದ ಅನೇಕ ಅಭಿಮಾನಿಗಳು ಭಾವುಕರಾಗಿದ್ದರು. ಅನೇಕ ಖ್ಯಾತನಾಮರು ಸಹ ದಿವಂಗತ ಪವರ್ ಸ್ಟಾರ್ ಅನ್ನು ಇಂದಿಗೂ ನೆನಪಿಸಿಕೊಳ್ಳುತ್ತಾರೆ ಮತ್ತು ‘ಜೇಮ್ಸ್’ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

    ಪುನೀತ್ ರಾಜ್ ಕುಮಾರ್ ಅಭಿನಯದ ಈ ಚಿತ್ರವು ಮಾರ್ಚ್ 25 ರವರೆಗೆ ಪ್ರದರ್ಶನಗೊಳ್ಳಲು ಏಕೈಕ ಚಲನಚಿತ್ರ ವಾಗಲಿದೆ, ಇದು ಅವರಿಗೆ ಸಲ್ಲಿಸುತ್ತಿರುವ ಗೌರವವಾಗಿದೆ. ಈ ಚಿತ್ರವನ್ನು ಚೇತನ್ ಕುಮಾರ್ ನಿರ್ದೇಶಿಸಿದ್ದಾರೆ ಮತ್ತು ಕಿಶೋರ್ ಪತಿಕೊಂಡ ನಿರ್ಮಿಸಿದ್ದಾರೆ. ಇದರಲ್ಲಿ ಪುನೀತ್ ಅವರ ಸಹೋದರ ಮತ್ತು ನಟ ಶಿವರಾಜ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಸಹ ನಟಿಸಿರುವುದು ವಿಶೇಷವಾಗಿದೆ.

    ಇದನ್ನೂ ಓದಿ: Madikeri: ಪುನೀತ್​ಗೆ ಗೀತ ನಮನ ಸಲ್ಲಿಸಿದ ಕೊಡಗಿನ ಇನ್ಸ್‌ಪೆಕ್ಟರ್

    ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಜೊತೆಗೆ ನಾಯಕ ನಟಿಯಾಗಿ ಪ್ರಿಯಾ ಆನಂದ್ ಅವರು ನಟಿಸಿದ್ದು, ಈ ಆಕ್ಷನ್ ಪ್ರಾಜೆಕ್ಟ್ ನಲ್ಲಿ ಶರತ್ ಕುಮಾರ್, ಶ್ರೀಕಾಂತ್ ಆದಿತ್ಯ ಮೆನನ್, ಮುಖೇಶ್ ರಿಸಿ, ರಂಗಾಯಣ ರಘು, ಅವಿನಾಶ್, ಸಾಧು ಕೋಕಿಲಾ, ಚಿಕ್ಕಣ್ಣ, ಅನು ಪ್ರಭಾಕರ್, ಸುಚೇಂದ್ರ ಪ್ರಸಾದ್ ಮತ್ತು ಕೇತನ್ ಕರಂಡೆ ಸೇರಿದಂತೆ ಇತರರು ನಟಿಸಿದ್ದಾರೆ.
    Published by:Annappa Achari
    First published: