Bairagee: ಶಿವಪ್ಪ ಬೈರಾಗಿ ಆಗಿದ್ದು ಹೇಗೆ? ಸೀಕ್ರೆಟ್ ಬಿಚ್ಚಿಟ್ರು ಹ್ಯಾಟ್ರಿಕ್ ಹೀರೋ

ಎಂಟು ತಿಂಗಳ ನಂತ್ರ ಬರ್ತಿರುವ ಶಿವಣ್ಣನ ‘ಬೈರಾಗಿ’ ಚಿತ್ರ ಹೇಗಿರುತ್ತೆ? ಚಿತ್ರದಲ್ಲಿ ಶಿವಣ್ಣನ ಪಾತ್ರವೇನು? ಡಾಲಿ ಧನಂಜಯ್-ಶಿವಣ್ಣ ಕಾಂಬಿನೇಷನ್ ಹೇಗಿರುತ್ತೆ? ಹೀಗೆ ಹಲವು ಪ್ರಶ್ನೆಗಳು ಶಿವಣ್ಣನ ಅಭಿಮಾನಿಗಳಲ್ಲಿ ಮೂಡಿದ್ದು, ಈ ಎಲ್ಲಾ ಪ್ರಶ್ನೆಗಳಿಗೆ ಈಗ ಶಿವಣ್ಣನೇ ಉತ್ತರ ಕೊಟ್ಟಿದ್ದಾರೆ.

ಬೈರಾಗಿ ಸಿನಿಮಾದಲ್ಲಿ ಶಿವರಾಜ್‌ಕುಮಾರ್

ಬೈರಾಗಿ ಸಿನಿಮಾದಲ್ಲಿ ಶಿವರಾಜ್‌ಕುಮಾರ್

  • Share this:
    ಬೆಂಗಳೂರು: ಭಜರಂಗಿ-2 (Bhajarangi 2) ನಂತರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Hatrick Hero) "ಬೈರಾಗಿ"ಯಾಗಿ (Bairagee) ರಂಜಿಸೊಕೆ ಸಜ್ಜಾಗಿದ್ದಾರೆ. ಜುಲೈ 1ಕ್ಕೆ ಬೈರಾಗಿ ಬೆಳ್ಳಿ ತೆರೆಮೇಲೆ ರಾರಾಜಿಸಲಿದ್ದು, ಎಂಟು ತಿಂಗಳ ನಂತ್ರ ಬರ್ತಿರುವ ಶಿವಣ್ಣನ (Shivanna) ಭೈರಾಗಿ ಚಿತ್ರ ಹೇಗಿರುತ್ತೆ? ಚಿತ್ರದಲ್ಲಿ ಶಿವಣ್ಣನ ಪಾತ್ರವೇನು?, ಡಾಲಿ ಧನಂಜಯ್ (Dali Dhananjay) ಮತ್ತೆ ಶಿವಣ್ಣನ ಎದುರು ವಿಲನ್ (Villain) ಆಗಿ ಕಾಣಿಸಿದ್ದಾರೆ. ಹೇಗಿರುತ್ತೆ ಡಾಲಿ ಅಬ್ಬರ? ಹೀಗೆ ಹಲವು ಪ್ರಶ್ನೆಗಳು ಶಿವಣ್ಣನ ಅಭಿಮಾನಿಗಳಲ್ಲಿ ಮೂಡಿದ್ದು, ಈ ಎಲ್ಲಾ ಪ್ರಶ್ನೆಗಳಿಗೆ ಈಗ ಶಿವಣ್ಣ ಉತ್ತರ ಕೊಟ್ಟಿದ್ದಾರೆ. ಇಂದು ಶಿವಣ್ಣ ತಮ್ಮ ಶ್ರೀ ಮುತ್ತು ನಿವಾಸದಲ್ಲೆ ಭೈರಾಗಿಯ ಸುದ್ದಿಗೋಷ್ಠಿ (Press Meet) ನಡೆಸಿ, ಬೈರಾಗಿಯ ಒಂದಷ್ಟು ಸೀಕ್ರೆಟ್ ಗಳನ್ನುಶಿವಣ್ಣ ರಿವೀಲ್ ಮಾಡಿದ್ದಾರೆ.

    ಶಿವರಾಜ್‌ಕುಮಾರ್ ಸುದ್ದಿಗೋಷ್ಠಿ

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಣ್ಣ ಬೈರಾಗಿ ಸಿನಿಮಾ ಜುಲೈ 1 ಕ್ಕೆ ಬಿಡುಗಡೆ ಆಗುತ್ತಿದೆ. ಈಗಾಗಲೇ ಚಿತ್ರದ ಎರಡು ಹಾಡು ಜನರಿಗೆ ಇಷ್ಟ ಆಗಿದೆ. ವೇದ ಸಿನಿಮಾದ ಸೆಟ್ ವರ್ಕ್ ಕೆಲಸ ಶುರುವಾಗಿರೋದ್ರಿಂದ ಆ ಗ್ಯಾಪ್ ನಲ್ಲಿ ಭೈರಾಗಿ ಕೆಲಸ ಮಾಡೋಣ ಅಂತ ಈ ನಿರ್ಧಾರ ಮಾಡಿದ್ದೇನೆ. ಹುಲಿ ವೇಷದಲ್ಲಿ ನನ್ನ ಗೆಟಪ್ ಇದೆ. ಸಿನಿಮಾದಲ್ಲಿ ಹಲವು ಗೆಟಪ್ ಗಳಿವೆ ಆದ್ರೆ ವ್ಯಕ್ತಿತ್ವ ಬದಲಾಗಲ್ಲ.

    ಮತ್ತೊಮ್ಮೆ ಶಿವಣ್ಣ-ಡಾಲಿ ಕಾಂಬಿನೇಷನ್

    ನನ್ನ ಡಾಲಿ ಕಾಂಬಿನೇಷನ್ ತುಂಬಾ ಚೆನ್ನಾಗಿರುತ್ತೆ .ನನ್ನ ಡಾಲಿ ಪಾತ್ರವನ್ನ ಎಕ್ಸ್ ಪೆಕ್ಟ್ ಮಾಡೋಕೆ ಆಗಲ್ಲ ಅಷ್ಟು ಚೆನ್ನಾಗಿದೆ. ಕ್ಲೈಮ್ಯಾಕ್ಸ್ ನಲ್ಲಿ ಎಲ್ಲದಕ್ಕೂ ಉತ್ತರ ಕೊಡುತ್ತೆ..ಅಲ್ಲದೆ ರಿಧಂ ಆಫ್ ಶಿವಪ್ಪ ಹಾಡಿಗೆ ಸ್ಟೆಪ್ಸ್ ತುಂಬಾ ಚೆನ್ಆಗ್ತಿದೆ.. ಟಗರು, ವಿಲನ್ ಸ್ಟೆಪ್ಸ್ ಗಳು ಟ್ರೆಂಡ್ ಅಗಿದ್ವು, ಈಗ ರಿದಂ ಆಫ್ ಶಿವಪ್ಪ ಸ್ಟೆಪ್ಸ್ ಟ್ರೆಂಡ್ ಆಗ್ತಿದೆ..ಈ ಸಿನಿಮಾದಲ್ಲಿ ಶಿವಪ್ಪ ಅನ್ನೋ ಪಾತ್ರ ಮಾಡಿದ್ದೇನೆ.

    ಇದನ್ನೂ ಓದಿ: Dengue: ಒಂದೆಡೆ ಕೋವಿಡ್ ಅಬ್ಬರ, ಮತ್ತೊಂಡೆದೆ ಡೆಂಗ್ಯೂ ಜ್ವರ; ಎರಡರ ಮಧ್ಯೆ ರಾಜ್ಯದ ಜನ ತತ್ತರ!

    ಬೈರಾಗಿಯ ಮೊದಲ ಹೆಸರು ಶಿವಪ್ಪ!

    ಜೊತೆಗೆ ಚಿತ್ರದಲ್ಲಿ ಹಲವು ಬಗೆಯ ಕಾಸ್ಡ್ಯೈಮ್ ಅನ್ನ ಬಳಸಿದ್ದೇವೆ..ಈ ಸಿನಿಮಾಗೆ ಶಿವಪ್ಪ ಟೈಟಲ್ ಇತ್ತು. ಶಿವಪ್ಪ ಗಿಂತ ಬೇರೆ ಟೈಟಲ್ ಬೇಕು ಅಂತ ಬೈರಾಗಿ ಅಂತ ಇಟ್ಡಿದ್ದೇವೆ ಅಂತಹೇಳಿದ್ರು.

    ಚಾಮರಾಜನಗರದಲ್ಲಿ ಪ್ರೀ ರಿಲೀಸ್ ಇವೆಂಟ್

    ಇದಲ್ಲದೆ ಚಾಮರಾಜನಗರದಲ್ಲಿ ಭೈರಾಗಿ ಚಿತ್ರದ ಪ್ರೀ ರಿಲೀಸ್ ಈವೆಂಟ್ 25ಕ್ಕೆ ಮಾಡಲು ಪ್ಲಾನ್ ಮಾಡಿದ್ದೇವೆ..ಜೂನ್.24 ರಂದು ರಾಮನಗರದಿಂದ ಮೈಸೂರುವರೆಗೆ ರೋಡ್ ಶೋ ಮಾಡಿ, ಅದೇ  ರಾತ್ರಿ ಮೈಸೂರಲ್ಲಿ ಪ್ರೇಸ್ ಮೀಟ್ ಇರುತ್ತೆ.. ನಂತ್ರ ಮತ್ತೆ ರೋಡ್ ಶೋ ಮೂಲಕ ನಂಜನಗೂಡಿಗೆ ಹೋಗಿ  25ಕ್ಕೆ ಚಾಮರಾಜನಗರದಲ್ಲಿ ಪ್ರೀರಿಲೀಸ್ ಈವೆಂಟ್ ಪ್ಲಾನ್ ಮಾಡಿದ್ದೇವೆ.

    ರಾಮನಗರದಿಂದ ಮೈಸೂರಿನವರೆಗೆ ರೋಡ್‌ ಶೋ

    ಜೂ.24 ರಂದು  ರಾಮನಗರದಿಂದ ಮೈಸೂರುವರೆಗೆ ರೋಡ್ ಶೋ ಇರುತ್ತೆ..ಅಲ್ಲದೆ ಅದೇ ದಿನ ರಾತ್ರಿ ಮೈಸೂರಲ್ಲಿ ಪ್ರೇಸ್ ಮೀಟ್ ಮುಗಿಸಿಮತ್ತೆ ರೋಡ್ ಶೋ ಮೂಲಕ ನಂಜನಗೂಡಿಗೆ ಹೋಗಿ.ಜೂ.25ಕ್ಕೆ ಚಾಮರಾಜನಗರ ದಲ್ಲಿ ಪ್ರೀರಿಲೀಸ್ ಈವೆಂಟ್  ಮಾಡೊಕೆ ಎಲ್ಲಸ ತಯಾರಿ ನಡೆಯುತ್ತಿದೆ.

    ಅಪ್ಪು ನೆನೆದ ಶಿವಣ್ಣ

    ಈ ಹಿಂದೆ‌ ಚಾಮರಾಜನಗರದಲ್ಲಿ ಅಪ್ಪಾಜಿಯ ಒಂದು ಸಿನಿಮಾ ಕಾರ್ಯಕ್ರಮ ನಡೆದಿತ್ತು. ಅದಾದ ನಂತ್ರ ಈಗ ಭೈರಾಗಿ ಚಿತ್ರದ ಪ್ರೀ ರಿಲೀಸ್ ಇವೆಂಟ್ ನಡೆಯುತ್ತಿದೆ ಎಂದು ಹೇಳಿದ ಶಿವರಾಜ್ ಕುಮಾರ್ ರಿಧಂ ಆಫ್  ಶಿವಪ್ಪ ಹಾಡಿನ ಸಕ್ಸಸ್ ಬಗ್ಗೆ ಮಾತನಾಡುವ ವೇಳೆ ತಮ್ಮನನ್ನು ನೆನೆದ್ರು.. ರಿಧಂ ಆಫ್ ಶಿವಪ್ಪ ಹಾಡನ್ನ ಅಪ್ಪು ಹಾಡಬೇಕಿತ್ತುಆದ್ರೆ ಈಗ ಮಿಸ್ ಮಾಡಿಕೊಳ್ತಿದ್ದೇವೆ.

    ಇದನ್ನೂ ಓದಿ: Puneeth Rajkumar: ಅಭಿಮಾನಿಗಳ ದೇವರನ್ನ ತಲೆ ಮೇಲೆ ಹೊತ್ತು ಕುಣಿದ ಫ್ಯಾನ್ಸ್! ಅಪ್ಪು ಮೇಲಿನ ಪ್ರೀತಿ ನೋಡಿ ಭಾವುಕರಾದ ರಾಘಣ್ಣ

    ಭಜರಂಗಿ 2 ನಂತರ ಬಿಡುಗಡೆ ಆಗುತ್ತಿರೋ ಸಿನಿಮಾ ಇದು ಭಜರಂಗಿ 2 ಬಿಡುಗಡೆ ಆಗದಾಗ ಅಪ್ಪು ಇಲ್ಲವಾದ್ರು..ಅಪ್ಪು ಇಲ್ಲ ಅಂತ ಬರ್ತ್ ಡೇ ಬಗ್ಗೆ ನಾನು ಯೋಚನೆ ಮಾಡಿಲ್ಲ..ಅಪ್ಪು ನನ್ನ 60 ವರ್ಷದ ಬರ್ತ್ ಡೇ ಯನ್ನ ದೊಡ್ಡ ಮಟ್ಟಕ್ಕೆ ಮಾಡೋ ಪ್ಲಾನ್ ಮಾಡಿದ್ದ ಅನ್ನಿಸುತ್ತೆ ,ಆದ್ರೆ ನನಗೆ ಗೊತ್ತಿಲ್ಲ. ಅಣ್ಣ ಅನ್ನೋ ಅಭಿಮಾನಕ್ಕೆ ಇದ್ದೇ ಇರುತ್ತೆ ಅಂತ ಶಿವಣ್ಣ ಕೊಂಚ ಭಾವುಕರಾದ್ರು.

    (ವರದಿ: ಸತೀಶ್ ಬಿ.ಎಂ.)
    Published by:Annappa Achari
    First published: