Shivarajkumar: ಭಟ್ಟರ ಗರಡಿಯಲ್ಲಿ ಹೆಜ್ಜೆ ಹಾಕಲಿರುವ ಹ್ಯಾಟ್ರಿಕ್ ಹೀರೋ, ಸ್ಯಾಂಡಲ್​ವುಡ್​ಗೆ ಇಂಡಿಯನ್ ಡ್ಯಾನ್ಸ್ ಕಿಂಗ್ ಕಂಬ್ಯಾಕ್​

ಶಿವಣ್ಣ ಅವರ 126ನೇ ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿ ನೇರವೇರಿದೆ. ಯೋಗರಾಜ್​ ಭಟ್ (Yogaraj Bhat) ಮತ್ತು ಶಿವರಾಜ್​ ಕುಮಾರ್ ಕಾಂಬಿನೇಷನ್​ನ ಈ ಚಿತ್ರದ ಮುಹೂರ್ತವು ಇಂದು ನೆರವೇರಿದೆ.

ಶಿವರಾಜ್​ಕುಮಾರ್ ಜೊತೆ ಪ್ರಭುದೇವ

ಶಿವರಾಜ್​ಕುಮಾರ್ ಜೊತೆ ಪ್ರಭುದೇವ

  • Share this:
ಕನ್ನಡ ಚಿತ್ರರಂಗದ ‘ಚಿರಯುವಕ’ ಯಾರು ಅಂದ್ರೆ ಹ್ಯಾಟ್ರಿಕ್ ಹೀರೋ (Hattrick Hero) ಡಾ. ಶಿವರಾಜ್‌ ಕುಮಾರ್ (Dr. Shivarajkumar) ಅಂತ ಒಂದೇ ಮಾತಲ್ಲಿ ಹೇಳಬಹುದು. ನಿನ್ನೆ ಅಷ್ಟೇ ಕಿಚ್ಚ ಸುದೀಪ್ (Sudeep) ಅವರ ‘ವಿಕ್ರಾಂತ್ ರೋಣ‘ ಚಿತ್ರದ ಟ್ರೈಲರ್ ಪ್ರೀ ರಿಲೀಸ್ ಇವೆಂಟ್​ನಲ್ಲಿ ಭಾಗಿಯಾಗಿದದ್ ಅವರು, ಸಂಜೆ ‘ವೇದಾ‘ (Vedha) ಚಿತ್ರದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೀಗ ಬೆಳಂ ಬೆಳಗ್ಗೆ ಅವರ ಮತ್ತೊಂದು ಹೊಸ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಹೌದು, ಶಿವಣ್ಣ ಅವರ 126ನೇ ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿ ನೇರವೇರಿದೆ. ಯೋಗರಾಜ್​ ಭಟ್ (Yogaraj Bhat) ಮತ್ತು ಶಿವರಾಜ್​ ಕುಮಾರ್ ಕಾಂಬಿನೇಷನ್​ನ ಈ ಚಿತ್ರದ ಮುಹೂರ್ತವು ಇಂದು ನೆರವೇರಿದೆ.

ಭಟ್ಟರ ಗರಡಿಯಲ್ಲಿ ಶಿವಣ್ಣ:

ಹೌದು, ಶಿವರಾಜ್​ಕುಮಾರ್ ಅವರಿಗೆ ಇದೇ ಮೊದಲಬಾರಿಗೆ ನಿರ್ದೇಶಕ ಯೋಗರಾಜ್​ ಭಟ್​ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಇಂಡಿಯನ್ ಡ್ಯಾನ್ಸ್ ಕಿಂಗ್ ಪ್ರಭುದೇವ ಅವರು ಶಿವಣ್ಣನಿಗೆ ಸಾಥ್ ನೀಡಲಿದ್ದಾರೆ. ಈ ಮೂಲಕ ಅನೇಕ ವರ್ಷಗಳ ನಂತರ ಪ್ರಭುದೇವ ಕನ್ನಡಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ. ಚಿತ್ರvವದ ಮುಹೂರ್ತವು ಇಂದು ನೇರವಿರಿದ್ದು, ಚಿತ್ರಕ್ಕೆ ಇನ್ನೂ ಹೆರರಿಟ್ಟಾಗಿಲ್ಲ. ಸರಳವಾಗಿ ಇಂದು ಬೆಳಗ್ಗೆ ರಾಕ್ ಲೈನ್ ವೆಂಕಟೇಶ್ ಸ್ಟೂಡಿಯೋ ದಲ್ಲಿ ಚಿತ್ರ ಸೆಟ್ಟೇರಿದೆ.

ಪ್ಯಾನ್ ಇಂಡಿಯಾ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ:

ಇಷ್ಟು ದಿನ ಸ್ಯಾಂಡಲ್​ವುಡ್ ಕಿಂಗ್ ಆಗಿದ್ದ ಶಿವಣ್ಣ ಇದೇ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಚಿತ್ರ ಮಾಡಲಿದ್ದಾರೆ. ಯೋಗರಾಜ್ ಭಟ್ ನಿರ್ದೇಶನ, ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಈ ಚಿತ್ರ ಸೆಟ್ಟೇರಿದ್ದು, ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆ. ರಾಕ್ ಲೈನ್ ವೆಂಕಟೇಶ್ ಬ್ಯಾನರ್ ನಲ್ಲಿ ಮೂಡಿ ಬರ್ತಿರುವ 47ನೇ ಚಿತ್ರ ಇದಾಗಿದೆ. ಪಕ್ಕಾ ಆ್ಯಕ್ಷನ್ ಚಿತ್ರವಾದ ಇದಕ್ಕೆ ವಿ. ಹರಿಕೃಷ್ಣ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ಚಿತ್ರಕ್ಕೆ ಎಲ್ಲಾ ತಯಾರಿಗಳು ನಡೆಯುತ್ತಿದ್ದು, ಮುಂದಿನ ತಿಂಗಳಿಂದ ಚಿತ್ರದ ಶೂಟಿಂಗ್ ಆರಂಭವಾಗಲಿದೆ ಎಂದು ಹೇಳಲಾಗಿದೆ. ಅಲ್ಲದೇ ಇದೇ ವರ್ಷ ಸಿನಿಮಾವನ್ನು ರಿಲೀಸ್ ಮಾಡಲು ಪ್ಲಾನ್ ಮಾಡಿರುವ ರಾಕ್ ಲೈನ್ ವೆಂಕಟೇಶ್, ಚಿತ್ರದಲ್ಲಿ  ಮ್ಯೂಸಿಕ್ ಗೆ ಹೆಚ್ಚು ಪ್ರಾಮುಖ್ಯತೆ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Vedha Motion Poster: ಶಿವರಾಜ್​ ಕುಮಾರ್ 125ನೇ ಚಿತ್ರ ವೇದ ಮೋಷನ್ ಪೋಸ್ಟರ್ ರಿಲೀಸ್, ಶುರುವಾಗುತ್ತಿದೆ ಗೀತಾ ಪಿಕ್ಚರ್

ಸ್ಯಾಂಡಲ್​ವುಡ್​ಗೆ ಕಂಬ್ಯಾಕ್ ಮಾಡುತ್ತಿದ್ದಾರೆ ಡ್ಯಾನ್ಸ್ ಕಿಂಗ್:

ಇನ್ನು, H2O ಚಿತ್ರದ ನಂತರ ಪೂರ್ತಿ ಪ್ರಮಾಣದಲ್ಲಿ ಕನ್ನಡಕ್ಕೆ ಮತ್ತೆ ಪ್ರಭುದೇವ ಕಂಬ್ಯಾಕ್ ಮಾಡುತ್ತಿದ್ದಾರೆ. ಅಲ್ಲದೇ ಇಬ್ಬರು ಡ್ಯಾನ್ಸ್ ಕಿಂಗ್​ಗಳು ಒಂದೇ ಸ್ಕ್ರೀನ್​ ನಲ್ಲಿ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಅನೇಕ ವರ್ಷಗಳ ನಂತರ ಪ್ರಭುದೇವ ಕನ್ನಡಕ್ಕೆ ಬರುತ್ತಿದ್ದು, ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿದೆ. ಅಲ್ಲದೇ ಇದೊಂದು ಪಕ್ಕಾ ಮಾಸ್ ಎಂಟರ್​ಟೈನ್​ಮೆಂಟ್ ಆಗಿರಲಿದ್ದು, ಶಿವಣ್ಣ ಹಾಗೂ ಪ್ರಭುದೇವ ಅವರ ಆ್ಯಕ್ಷನ್ ಸೀನ್ ನೋಡಲು ಸಿನಿ ರಸಿಕರು ತುದಿಗಾಲಲ್ಲಿ ನಿಂತಿದ್ದಾರೆ. ಉಪೇಂದ್ರ ಅವರೊಟ್ಟಿಗಿನ H2O ಚಿತ್ರದ ನಂತರ ಪ್ರಭುದೇವ ಅವರು ಸ್ಯಾಂಡಲ್​ವುಡ್​ನಿಂದ ದೂರವಾಗಿದ್ದರು. ಆದರೆ ಇದೀಗ ಸೂಪ್ ಕಂಬ್ಯಾಕ್ ಮಾಡಲು ಅವರು ಸಜ್ಜಾಗಿದ್ದಾರೆ.

ಇದನ್ನೂ ಓದಿ: Vikrant Rona: 'ವಿಕ್ರಾಂತ್​ ರೋಣ'ನ ಹೆಸರಲ್ಲಿ ಒಂದಾದ ಸ್ಯಾಂಡಲ್​ವುಡ್, ಒಂದೇ ವೇದಿಕೆಯಲ್ಲಿ ಘಟಾನುಘಟಿಗಳು

'ವೇದ' ಚಿತ್ರದ ಟೀಸರ್ ರಿಲೀಸ್:

ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್​ನ ವೈಟ್ ಪೆಟಲ್ಸ್​ನಲ್ಲಿ ಶಿವರಾಜ್ ಕುಮಾರ್ (Shiva RajKumar) ನಟನೆಯ 125ನೇ ಚಿತ್ರ 'ವೇದ' ಚಿತ್ರದ ಟೀಸರ್ ಹಾಗೂ ಗೀತಾ ಪಿಕ್ಚರ್ ಲಾಂಚ್ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಎ. ಹರ್ಷ ನಿರ್ದೇಶನದಲ್ಲಿ ವೇದ ಸಿನಿಮಾ ತಯಾರಾಗಿದ್ದು, ಭಜರಂಗಿ, ವಜ್ರಕಾಯ, ಭಜರಂಗಿ- 2 ಹಿಟ್ ಚಿತ್ರಗಳ ನಿರ್ದೇಶಕ ಹರ್ಷ ವೇದ ಸಿನಿಮಾದ ಮೂಲಕ ಭರವಸೆ ಮೂಡಿಸಿದ್ದಾರೆ.
Published by:shrikrishna bhat
First published: