Rajinikanth with Shivarajkumar: ಸೂಪರ್‌ ಸ್ಟಾರ್ ಮತ್ತು ಸೆಂಚುರಿ ಸ್ಟಾರ್‌ ಕಾಂಬೋ ಸಿನಿಮಾ ಯಾವಾಗ ಗೊತ್ತಾ? ಇಲ್ಲಿದೆ ಪಕ್ಕಾ ಅಪ್‌ಡೇಟ್ಸ್

ಸೂಪರ್‌ ಸ್ಟಾರ್ ಹಾಗೂ ಸೆಂಚುರಿ ಸ್ಟಾರ್ ಅಭಿಮಾನಿಗಳು ಈ ಸಿನಿಮಾ ಯಾವಾಗ ಬರುತ್ತೆ? ಶೂಟಿಂಗ್ ಯಾವಾಗ ಸ್ಟಾರ್ಟ್ ಆಗುತ್ತೆ ಅಂತ ಕಾಯ್ತಿದ್ದಾರೆ. ಈ ಸಿನಿಮಾದ ಅಪ್‌ಡೇಟ್ಸ್ ಏನಿದೆ ಅಂತ ಹುಡುಕುತ್ತಿದ್ದಾರೆ. ಈ ಎಲ್ಲಾ ಕಾತರಕ್ಕೆ, ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಓದಿ…

ಶಿವರಾಜ್‌ಕುಮಾರ್ ಹಾಗೂ ರಜಿನಿಕಾಂತ್

ಶಿವರಾಜ್‌ಕುಮಾರ್ ಹಾಗೂ ರಜಿನಿಕಾಂತ್

  • Share this:
ಸೂಪರ್‌ ಸ್ಟಾರ್ (Super Star) ರಜಿನಿಕಾಂತ್ (Rajinikanth) ಹಾಗೂ ಸೆಂಚುರಿ ಸ್ಟಾರ್ (Century Star) ಶಿವರಾಜ್‌ಕುಮಾರ್ (Shivarajkumar) ಮುಂದಿನ ಸಿನಿಮಾದಲ್ಲಿ (Cinema) ಒಟ್ಟಿಗೆ ನಟಿಸುತ್ತಿರುವ ಸುದ್ದಿ (News) ಎಲ್ಲರಿಗೂ ಗೊತ್ತೇ ಇದೆ. ರಜಿನಿಕಾಂತ್ ಹೊಸ ಸಿನಿಮಾ ಬರ್ತಿದೆ ಅಂತ ‘ತಲೈವಾ’ (Thalaiva) ಅಭಿಮಾನಿಗಳು (Fans) ಕುಣಿದು ಕುಪ್ಪಳಿಸುತ್ತಿದ್ದಾರೆ. ಇತ್ತ ಶಿವಣ್ಣನ (Shivanna) ಅಭಿಮಾನಿಗಳೂ ಕೂಡ ಈ ಸುದ್ದಿ ತಿಳಿದು ಸಂತಸಗೊಂಡಿದ್ದಾರೆ. ಸೂಪರ್‌ ಸ್ಟಾರ್ ಹಾಗೂ ಸೆಂಚುರಿ ಸ್ಟಾರ್ ಅಭಿಮಾನಿಗಳು ಈ ಸಿನಿಮಾ ಯಾವಾಗ ಬರುತ್ತೆ? ಶೂಟಿಂಗ್ (Shooting) ಯಾವಾಗ ಸ್ಟಾರ್ಟ್ ಆಗುತ್ತೆ ಅಂತ ಕಾಯ್ತಿದ್ದಾರೆ. ಈ ಸಿನಿಮಾದ ಅಪ್‌ಡೇಟ್ಸ್ (Updates) ಏನಿದೆ ಅಂತ ಹುಡುಕುತ್ತಿದ್ದಾರೆ. ಈ ಎಲ್ಲಾ ಕಾತರಕ್ಕೆ, ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಓದಿ…

ಶಿವಣ್ಣ-ರಜಿನಿಕಾಂತ್ ಒಟ್ಟಿಗೆ ಅಭಿನಯ

ಭಾರತದ ಸೂಪರ್ ಸ್ಟಾರ್ ರಜಿನಿಕಾಂತ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಒಟ್ಟಿಗೆ, ಒಂದೇ ಸಿನಿಮಾದಲ್ಲಿ ನಟಿಸ್ತಾರೆ ಎಂಬ ಸುದ್ದಿ ಕೇಳಿಯೇ ಕನ್ನಡ ಹಾಗೂ ತಮಿಳು ಸಿನಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ರಜಿನಿಕಾಂತ್ ಅವರ 169ನೇ ಸಿನಿಮಾ ಇದಾಗಿದ್ದು, ಪಾನ್ ಇಂಡಿಯಾ ಮೂವಿ ಇದಾಗಿರಲಿದೆ. ಈ ಸುದ್ದಿಯನ್ನು ಮೂಲಗಳು ದೃಢಪಡಿಸಿವೆ.

ಶಿವಣ್ಣಗೆ ಕಥೆ ಹೇಳಿದ ನಿರ್ದೇಶಕ

ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರಲಿದೆ. ಖುದ್ದು ನೆಲ್ಸನ್ ಅವರೇ ಬೆಂಗಳೂರಿಗೆ ಆಗಮಿಸಿ, ಶಿವಣ್ಣಗೆ ಕಥೆಯನ್ನೂ ಹೇಳಿದ್ದಾರೆ. ಈ ವಿಷಯವನ್ನು ಸ್ವತಃ ಶಿವರಾಜ್ ಕುಮಾರ್ ಕೂಡ ಖಚಿತ ಪಡಿಸಿದ್ದಾರೆ.

ಇದನ್ನೂ ಓದಿ: Shivarajkumar: ಪ್ಯಾನ್ ಇಂಡಿಯಾ ಚಿತ್ರದಲ್ಲಿ ಶಿವಣ್ಣ, ತಮಿಳು ಸೂಪರ್ ಸ್ಟಾರ್​ ಸಿನಿಮಾದಲ್ಲಿ ಸೆಂಚುರಿ ಸ್ಟಾರ್​!

ಆಗಸ್ಟ್‌ನಿಂದಲೇ ತಲೈವಾ-ಶಿವಣ್ಣ ಕಾಂಬೋ ಸಿನಿಮಾ ಶೂಟಿಂಗ್

ಮುಂಬರುವ ಆಗಷ್ಟ್‌ನಿಂದಲೇ ಶಿವಣ್ಣ ಹಾಗೂ ತಲೈವಾ ಕಾಂಬೋ ಸಿನಿಮಾ ಶೂಟಿಂಗ್ ಶುರುವಾಗಲಿದೆ. ರಜನಿಕಾಂತ್ ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್‌ನ ದೃಶ್ಯಗಳನ್ನು ಮೈಸೂರು ಅಥವಾ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲು ಪ್ಲ್ಯಾನ್ ಮಾಡಲಾಗಿದೆಯಂತೆ. ಆಗಸ್ಟ್‌ನಿಂದ ಸಿನಿಮಾದ ಶೂಟಿಂಗ್ ಶುರುವಾದರೆ, ಶಿವಣ್ಣ ಮತ್ತು ರಜನಿಕಾಂತ್ ಕಾಂಬಿನೇಷನ್ ದೃಶ್ಯಗಳು ಸೆಪ್ಟಂಬರ್ ಹೊತ್ತಿಗೆ ಚಿತ್ರೀಕರಣವಾಗಲಿವೆಯಂತೆ.

“ರಜಿನಿ ಜೊತೆ ನಟಿಸಲು ಕಾತರನಾಗಿದ್ದೇನೆ”

ಇನ್ನು ರಜಿನಿಕಾಂತ್ ಜೊತೆ ನಟಿಸುವ ಬಗ್ಗೆ ಶಿವರಾಜ್‌ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. ನಾನು ಚಿಕ್ಕಂದಿನಿಂದಲೂ ರಜನಿಕಾಂತ್ ಅವರನ್ನು ಬಲ್ಲೆ. ಅಪ್ಪಾಜಿ ಜೊತೆ ಅನೇಕ ಬಾರಿ ಅವರನ್ನು ನೋಡಿದ್ದೇನೆ. ವಿಶೇಷವಾಗಿ ಗೌರವಿಸುವ ವ್ಯಕ್ತಿಗಳಲ್ಲಿ ಅವರು ಕೂಡ ಒಬ್ಬರು. ನನ್ನ ಮತ್ತು ರಜನಿಕಾಂತ್ ಅವರ ಕಾಂಬಿನೇಷನ್ ಅನ್ನು ಅಭಿಮಾನಿಗಳು ಇಷ್ಟ ಪಡುತ್ತಾರೆ. ಆಗಸ್ಟ್ ನಿಂದ ಈ ಸಿನಿಮಾದ ಶೂಟಿಂಗ್ ನಡೆಯಲಿದೆ ಎಂದು ಸಿನಿಮಾ ಟೀಮ್ ತಿಳಿಸಿದೆ ಅಂತ ಶಿವರಾಜ್‌ ಕುಮಾರ್ ಹೇಳಿದ್ದಾರೆ.

ತಲೈವರ್ 169 ರಿಲೀಸ್ ಯಾವಾಗ?

ಸಿನಿಮಾಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಹೀಗಾಗಿ ಸದ್ಯಕ್ಕೆ ತಲೈವರ್ 169 ಅಂತ ಹೆಸರು ಇಡಲಾಗಿದೆ ಇದು ಸೂಪರ್ ಸ್ಟಾರ್ ರಜಿನಿಕಾಂತ್ ಹಾಗೂ ನೆಲ್ಸನ್‌ ದಿಲೀಪ್‌ ಕುಮಾರ್ ಕಾಂಬೋದ ಮೊದಲ ಸಿನಿಮಾ ಆಗಿದೆ. ತಮಿಳಿನ ಖ್ಯಾತ ಮ್ಯೂಸಿಕ್ ಡೈರೆಕ್ಟರ್  ಅನಿರುದ್ಧ್ ರವಿಚಂದರ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ. ತಲೈವರ್ 169 ಅನ್ನು 2023ರ ಬೇಸಿಗೆ ತಿಂಗಳಲ್ಲಿ, ಅಂದರೆ ಏಪ್ರಿಲ್ ತಿಂಗಳ ಸುಮಾರಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: Puneeth Rajkumar: ಬೈರಾಗಿಯ ಪವರ್‌ಫುಲ್ ಹಾಡಿಗೆ ದನಿಯಾಗಬೇಕಿದ್ದ ಪುನೀತ್! ಅಪ್ಪು ಬಗ್ಗೆ ಶಿವಣ್ಣನ ನೋವಿನ ನುಡಿ

ಬೀಸ್ಟ್‌ಗೆ ಆ್ಯಕ್ಷನ್ ಕಟ್ ಹೇಳಿದ್ದ ನೆಲ್ಸನ್ ದಿಲೀಪ್ ಕುಮಾರ್

ನೆಲ್ಸನ್ ದಿಲೀಪ್‌ ಕುಮಾರ್ ತಮ್ಮ ಚೊಚ್ಚಲ ನಿರ್ದೇಶನದ ಕೊಲಮಾವು ಕೋಕಿಲಾ ಚಿತ್ರಕ್ಕಾಗಿ ನಾರ್ವೆ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಪಡೆದರು. ಇತ್ತೀಟಿಗೆ ವಿಜಯ್ ನಟನೆಯ ಬೀಸ್ಟ್ ಚಿತ್ರಕ್ಕೂ ಕೂಡ ಇವರೇ ಆ್ಯಕ್ಷನ್ ಕಟ್ ಹೇಳಿದ್ದರು.
Published by:Annappa Achari
First published: