ಮಾರ್ಚ್ 27ರಂದು KGF Chapter 2 ಅಭಿಮಾನಿಗಳಿಗೆ ಬಿಗ್ ಗಿಫ್ಟ್! Trailer ರಿಲೀಸ್ ಮಾಡಲಿದ್ದಾರೆ ಶಿವಣ್ಣ

‘ಕೆಜಿಎಫ್ ಚಾಪ್ಟರ್ 2’ ಸಿನಿಮಾದ ಟ್ರೇಲರ್ ರಿಲೀಸ್ಗೆ ಕೌಂಟ್ಡೌನ್ ಶುರುವಾಗಿದೆ. ಈ ವೇಳೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿಮಾನಿಗಳಿಗೂ ಕೆಜಿಎಫ್ ಚಿತ್ರತಂಡ ಗುಡ್ ನ್ಯೂಸ್ ಕೊಡುತ್ತಿದೆ. ಕನ್ನಡದಲ್ಲಿ ಟ್ರೇಲರ್ ಅನ್ನು ಶಿವಣ್ಣ ರಿಲೀಸ್ ಮಾಡಲಿದ್ದಾರೆ.

ಕೆಜಿಎಫ್-2 ಟ್ರೇಲರ್ ಲಾಂಚ್ ಮಾಡಲಿರುವ ಶಿವಣ್ಣ

ಕೆಜಿಎಫ್-2 ಟ್ರೇಲರ್ ಲಾಂಚ್ ಮಾಡಲಿರುವ ಶಿವಣ್ಣ

  • Share this:
‘ಕೆಜಿಎಫ್‌ ಚಾಪ್ಟರ್ 2’ (KGF Chapter 2) ಸಿನಿಮಾ (Cinema) ಅಭಿಮಾನಿಗಳಿಗೆ (Fans) ಮತ್ತೊಂದು ಗುಡ್ ನ್ಯೂಸ್ (Good News) ಸಿಕ್ಕಿದೆ. ಇದರ ಜೊತೆಗೆ ಹ್ಯಾಟ್ರಿಕ್ ಹೀರೋ (Hattrick Hero) ಶಿವರಾಜ್‌ ಕುಮಾರ್ (Shivaraj Kumar) ಅಭಿಮಾನಿಗಳಿಗೂ ಕೆಜಿಎಫ್ ಚಿತ್ರತಂಡ ಗುಡ್ ನ್ಯೂಸ್ ಕೊಡುತ್ತಿದೆ. ಬಹು ನಿರೀಕ್ಷಿತ ಕೆಜಿಎಫ್‌ ಚಾಪ್ಟರ್ 2 ಸಿನಿಮಾದ ಟ್ರೇಲರ್ (Trailer) ಲಾಂಚ್ (Launch) ಆಗುವುದಕ್ಕೆ ಕೌಂಟ್ ಡೌನ್ (Count Down) ಶುರುವಾಗಿದೆ. ಇನ್ನು ಎರಡೇ ದಿನಗಳಲ್ಲಿ ಕೆಜಿಎಫ್‌ 2 ಟ್ರೇಲರ್ ಅಪ್ಪಳಿಸಲಿದೆ. ಮೊನ್ನೆ ಮೊನ್ನೆಯಷ್ಟೇ ‘ತೂಫಾನ್’ (Toofan) ಎಂಬ ಮೊದಲ ಲಿರಿಕಲ್ ವಿಡಿಯೋ ಸಾಂಗ್ (First Lyrical Video Song) ರಿಲೀಸ್ ಆಗಿತ್ತು. ಅದನ್ನು ನೋಡಿದ ಅಭಿಮಾನಿಗಳು ಟ್ರೇಲರ್ ನೋಡುವುದಕ್ಕಾಗಿ ತುದಿಗಾಲ ಮೇಲೆ ನಿಂತಿದ್ದಾರೆ. ಇದೀಗ ಮಾರ್ಚ್ 27ರಂದು ಟ್ರೇಲರ್ ಲಾಂಚ್ ಆಗಲಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್ ಅವರೇ ಕನ್ನಡ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ.

 ‘ಕೆಜಿಎಫ್‌ ಚಾಪ್ಟರ್ 2’ ಟ್ರೇಲರ್ ರಿಲೀಸ್ ಮಾಡಲಿರುವ ಶಿವಣ್ಣ

‘ಕೆಜಿಎಫ್​: ಚಾಪ್ಟರ್​ 2’ ಬಿಡುಗಡೆಗೆ ಇನ್ನು ಕೆಲವೇ ದಿನಗಳ ಬಾಕಿ ಉಳಿದುಕೊಂಡಿದೆ. ಈಗಾಗಲೇ ಪ್ರಚಾರ ಕಾರ್ಯಕ್ಕೆ ಚಿತ್ರತಂಡ ಚಾಲನೆ ನೀಡಿದೆ. ಕೆಲವೇ ದಿನಗಳ ಹಿಂದೆ ಈ ಸಿನಿಮಾದಿಂದ ‘ತೂಫಾನ್​..’ ಲಿರಿಕಲ್​ ವಿಡಿಯೋ ಬಿಡುಗಡೆ ಮಾಡಲಾಗಿತ್ತು. ಅದಕ್ಕೆ ಜನರಿಂದ ಭರ್ಜರಿ ಸ್ಪಂದನೆ ಸಿಕ್ಕಿದೆ. ಅದರ ಬೆನ್ನಲ್ಲೇ ಅದ್ದೂರಿಯಾಗಿ ಟ್ರೇಲರ್​ ರಿಲೀಸ್​ ಮಾಡಲು ಚಿತ್ರತಂಡ ಪ್ಲ್ಯಾನ್​ ಮಾಡಿಕೊಂಡಿದೆ.ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಟ್ರೇಲರ್ ರಿಲೀಸ್ ಆಗಲಿದೆ. ಕನ್ನಡದ ಟ್ರೇಲರ್ ಅನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಲಾಂಚ್ ಮಾಡಲಿದ್ದಾರೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಕರಣ್ ಜೋಹರ್

ಮಾರ್ಚ್ 27ರಂದು ಟ್ರೇಲರ್ ರಿಲೀಸ್ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ. ವಿಶೇಷ ಅಂದರೆ ಈ ಕಾರ್ಯಕ್ರಮವನ್ನು ಬಾಲಿವುಡ್‌ನ ಖ್ಯಾತ ನಿರ್ದೇಶಕ, ನಿರ್ಮಾಪಕ, ಬಿಗ್‌ ಬಾಸ್ ಒಟಿಟಿ ಆವೃತ್ತಿಯ ನಿರೂಪಕ ಕರಣ್​ ಜೋಹರ್​ ನಡೆಸಿಕೊಡಲಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ RRRಗೆ ತೊಂದ್ರೆ ಕೊಟ್ರೆ, KGF 2 ಬರ್ತಿದೆ ಹುಷಾರ್​! ಕನ್ನಡಿಗರಿಗೆ ಜ್ಯೂ. NTR, ರಾಮ್​ಚರಣ್​ ಫ್ಯಾನ್ಸ್​ ಧಮ್ಕಿ

ಬೇರೆ ಬೇರೆ ಭಾಷೆಗಳಲ್ಲಿ ಖ್ಯಾತ ನಾಮರಿಂದಲೇ ಟ್ರೇಲರ್ ರಿಲೀಸ್

ಹಿಂದಿಯಲ್ಲೂ ಕೂಡ ಕೆಜಿಎಫ್‌ ಚಾಪ್ಟರ್ 2 ಸಿನಿಮಾ ಟ್ರೇಲರ್ ರಿಲೀಸ್ ಆಗಲಿದೆ. ಇನ್ನು ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಯಾರು ಟ್ರೇಲರ್ ರಿಲೀಸ್ ಮಾಡುತ್ತಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆಯೂ ತಿಳಿದುಕೊಳ್ಳುವುದಕ್ಕೆ ಅಭಿಮಾನಿಗಳು ಕಾತರರಾಗಿದ್ದಾರೆ.

ಮಾರ್ಚ್ 27ಕ್ಕೆ ಬೆಂಗಳೂರಲ್ಲಿ ಅದ್ಧೂರಿ ಸಮಾರಂಭ

ಕೆಜಿಎಫ್‌ 2 ಟ್ರೇಲರ್‌ ಬಿಡುಗಡೆ ಸಮಾರಂಭ ಮಾ.27ಕ್ಕೆ ಬೆಂಗಳೂರಿನಲ್ಲಿ ನಡೆಯಲಿದೆ. ಅಂದು ಕನ್ನಡ, ಹಿಂದಿ. ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿ ಐದೂ ಭಾಷೆಗಳ ಟ್ರೇಲರ್‌ ಬಿಡುಗಡೆಯಾಗಲಿದೆ. ಈ ಕಾರ್ಯಕ್ರಮದಲ್ಲಿ ಚಿತ್ರದ ನಾಯಕ ಯಶ್‌, ನಾಯಕಿ ಶ್ರೀನಿಧಿ ಶೆಟ್ಟಿ, ಬಾಲಿವುಡ್‌ ನಟರಾದ ಸಂಜಯ್‌ ದತ್‌, ರವೀನಾ ಟಂಡನ್‌, ಚಿತ್ರದ ನಿರ್ದೇಶಕ ಪ್ರಶಾಂತ್‌ ನೀಲ್‌, ನಿರ್ಮಾಪಕ ವಿಜಯ್‌ ಕಿರಗಂದೂರು, ಮಲಯಾಳಂ ನಟ ಪ್ರಥ್ವಿರಾಜ್‌ ಭಾಗವಹಿಸಲಿದ್ದಾರೆ. ಜೊತೆಗೆ ಸಚಿವ ಅಶ್ವತ್ಥ ನಾರಾಯಣ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: Puneeth Rajkumar: ವಿದ್ಯಾರ್ಥಿಗಳೇ 'ಅಪ್ಪು' ಕುರಿತ ಪ್ರಶ್ನೆಗೆ ಉತ್ತರಿಸಿ, ಪರೀಕ್ಷೆ ಪಾಸ್ ಆಗಿ!

 ನಡೆಯುತ್ತಾ ಪ್ರೀ ರಿಲೀಸ್ ಈವೆಂಟ್?

ಅಪ್ಪು ಅಗಲಿಕೆಯ ಹಿನ್ನೆಲೆಯಲ್ಲಿ ಪ್ರಿ-ರಿಲೀಸ್‌ ಈವೆಂಟ್‌ ನಡೆಸದಿರಲು ಚಿತ್ರತಂಡ ತೀರ್ಮಾನಿಸಿದೆ. ಏ.14ರಂದು ವಿಶ್ವಾದ್ಯಂತ ಸುಮಾರು 7000 ಥಿಯೇಟರ್‌ಗಳಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ. ಇಡೀ ವಿಶ್ವದ ದಾಖಲೆಯ ಏಳು ಸಾವಿರ ಚಿತ್ರಮಂದಿರಗಳಲ್ಲಿ ಕೆಜಿಎಫ್‌ 2 ಅಬ್ಬರಿಸಲಿದೆ. ಕರ್ನಾಟಕದಲ್ಲಿ 450ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಚಿತ್ರ ಬಿಡುಗಡೆ ಆದರೆ, ವಿವಿಧ ರಾಜ್ಯಗಳ ಸಾವಿರಾರು ಥಿಯೇಟರ್‌ಗಳು ರಾಕಿ ಮಾಡೋ ಮ್ಯಾಜಿಕ್‌ಗೆ ಸಾಕ್ಷಿಯಾಗಲಿದೆ.
Published by:Annappa Achari
First published: