ಚಿರಂಜೀವಿ ಸರ್ಜಾ ನಟನೆಯ ಶಿವಾರ್ಜುನ ರೀ-ರಿಲೀಸ್; 100 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಸಿನಿಮಾ

ಅಕ್ಟೋಬರ್‌ 16ರಿಂದ ಶಿವಾರ್ಜುನ ಸಿನಿಮಾ ರಾಜ್ಯಾದ್ಯಂತ 100ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ರೀ-ರಿಲೀಸ್‌ ಆಗಲಿದೆ. ಈ ಹಿಂದೆ ರಿಲೀಸ್‌ ಮಾಡಿದಂತೆಯೇ ಅದ್ಧೂರಿಯಾಗಿ ರೀ-ರಿಲೀಸ್‌ ಮಾಡುವುದಾಗಿ ನಿರ್ದೇಶಕ ಶಿವತೇಜಸ್‌ ತಿಳಿಸಿದ್ದಾರೆ.

news18-kannada
Updated:October 13, 2020, 11:42 AM IST
ಚಿರಂಜೀವಿ ಸರ್ಜಾ ನಟನೆಯ ಶಿವಾರ್ಜುನ ರೀ-ರಿಲೀಸ್; 100 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಸಿನಿಮಾ
ಶಿವಾರ್ಜುನ ಪೋಸ್ಟರ್​
  • Share this:
ಶಿವಾರ್ಜುನ, ಇದು ಸ್ಯಾಂಡಲ್‌ವುಡ್‌ ಯುವಸಾಮರಾಟ್‌ ಚಿರಂಜೀವಿ ಸರ್ಜಾ ನಟಿಸಿರುವ ಸಿನಿಮಾ. ಮಾರ್ಚ್‌ 12ರಂದು ರಿಲೀಸ್‌ ಆಗಿದ್ದ ಚಿತ್ರವಿದು. ಆದರೆ ಕೊರೊನಾ ಕಾಟದಿಂದಾಗಿ ಮಾರ್ಚ್‌ 14ರಿಂದ ರಾಜ್ಯಾದ್ಯಂತ ಥಿಯೇಟರ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳನ್ನು ಬಂದ್‌ ಮಾಡಲಾಗಿತ್ತು. ಮಾರ್ಚ್‌ 22ರಂದು ಜನತಾ ಕರ್ಫ್ಯೂ ನಂತರ ಲಾಕ್‌ಡೌನ್‌ ಘೋಷಿಸಲಾಯಿತಾದರೂ, ಅದಕ್ಕೂ ಒಂದು ವಾರ ಮೊದಲೇ ಥಿಯೇಟರ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಿಗೆ ಬೀಗ ಬಿದ್ದಿತ್ತು. ಇದರಿಂದಾಗಿ ಕೇವಲ ಎರಡು ದಿನ ಮುನ್ನ ರಿಲೀಸ್‌ ಆದ ಸಿನಿಮಾಗಳಿಗೆ ದೊಡ್ಡ ಪೆಟ್ಟೇ ಬಿದ್ದಿತ್ತು.

ಆದರೆ, ಶಿವಾರ್ಜುನ ಚಿತ್ರಕ್ಕೆ ಕೊರೊನಾ ಪೆಟ್ಟಿಗೂ ದೊಡ್ಡ ಪೆಟ್ಟು ಬಿದ್ದಿದ್ದು, ಚಿರು ಸರ್ಜಾ ಅವರ ಅಕಾಲಿಕ ನಿಧನ. ಹೌದು, ಚಿತ್ರತಂಡದವರೆಲ್ಲರೂ ಯಾವಾಗ ಲಾಕ್‌ಡೌನ್‌ ಅನ್‌ಲಾಕ್‌ ಆಗುತ್ತೋ ಯಾವಾಗ ಮತ್ತೆ ಸಿನಿಮಾ ರೀ-ರಿಲೀಸ್‌ ಮಾಡುತ್ತೀವೋ ಎಂಬ ಚಿಂತೆಯಲ್ಲಿರುವಾಗಲೇ, ಜೂನ್‌ ೭ರಂದು ಬರಸಿಡಿಲಿನಂತೆ ಬಂದೆರಗಿದ್ದು ನಾಯಕ ಚಿರು ಸರ್ಜಾ ಅವರ ಅಕಾಲಿಕ ನಿಧನ. ಹೀಗೆ ಶಿವಾರ್ಜುನ ಚಿತ್ರತಂಡ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿತ್ತು. ಅದರ ನಡುವೆಯೇ ಕೇಂದ್ರ ಸರ್ಕಾರ ಥಿಯೇಟರ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಮತ್ತೆ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡಿದೆ. ಅಕ್ಟೋಬರ್‌ ೧೫ರಿಂದ ಸಿನಿಮಾಮಂದಿರಗಳು ಬರೋಬ್ಬರಿ 7 ತಿಂಗಳ ಬಳಿಕ ಮತ್ತೆ ಬಾಗಿಲು ತೆರೆಯಲಿವೆ. ಅದರ ಬೆನ್ನಲ್ಲೇ ಶಿವಾರ್ಜುನ ಚಿತ್ರತಂಡ ಮತ್ತೆ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ.ಹೌದು, ಅಕ್ಟೋಬರ್‌ 16ರಿಂದ ಶಿವಾರ್ಜುನ ಸಿನಿಮಾ ರಾಜ್ಯಾದ್ಯಂತ 100ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ರೀ-ರಿಲೀಸ್‌ ಆಗಲಿದೆ. ಈ ಹಿಂದೆ ರಿಲೀಸ್‌ ಮಾಡಿದಂತೆಯೇ ಅದ್ಧೂರಿಯಾಗಿ ರೀ-ರಿಲೀಸ್‌ ಮಾಡುವುದಾಗಿ ನಿರ್ದೇಶಕ ಶಿವತೇಜಸ್‌ ತಿಳಿಸಿದ್ದಾರೆ. ಚಿರು ಸರ್ಜಾ ಅವರು ದೈಹಿಕವಾಗಿ ನಮ್ಮೊಂದಿಗಿಲ್ಲ. ಬದಲಾಗಿ ಸ್ಫೂರ್ತಿಯಾಗಿ ನಮ್ಮೆಲ್ಲರ ಜೊತೆ ಅವರು ಸದಾ ಇರಲಿದ್ದಾರೆ. ಸಿನಿಮಾ ಮೂಲಕ ಇಂದಿಗೂ ಅವರು ಜೀವಂತವಾಗಿದ್ದಾರೆ. ಇಂಥ ಸಮಯದಲ್ಲಿ ನಾವು ಚಿತ್ರರಸಿಕರಲ್ಲಿ ಕೇಳಿಕೊಳ್ಳುವುದೊಂದೇ, ಚಿತ್ರಮಂದಿರಗಳು ತೆರೆಯುತ್ತಿವೆ. ಮತ್ತೆ ಬನ್ನಿ ಸಿನಿಮಾ ನೋಡಿ ಎಂದು ಮನವಿ ಮಾಡಿಕೊಳ್ಳುತ್ತಾರೆ ನಿರ್ದೇಶಕ ಶಿವತೇಜಸ್‌.ಚಿರು ಸರ್ಜಾಗೆ ಅಮೃತಾ ಐಯ್ಯಂಗಾರ್‌ ನಾಯಕಿಯಾಗಿದ್ದು, ತಾರಾ, ಅವಿನಾಶ್‌, ಕುರಿ ಪ್ರತಾಪ್‌, ರವಿಕಿಶನ್‌, ಶಿವರಾಜ್‌ ಕೆಆರ್‌ ಪೇಟೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸಾಧು ಕೋಕಿಲ ಹಿನ್ನೆಲೆ ಸಂಗೀತ ನೀಡಿದ್ದು, ಅವರ ಪುತ್ರ ಸುರಾಗ್‌ ಹಾಡುಗಳಿಗೆ ಸಂಗೀತ ನಂಯೋಜನೆ ಮಾಡಿದ್ದಾರೆ. ಎಂಬಿ ಮಂಜುಳಾ ಶಿವಾರ್ಜುನ ಅವರು ನಿಶ್ಚಿತ ಕಂಬೈನ್ಸ್‌ ಲಾಂಛನದಲ್ಲಿ ಶಿವಾರ್ಜುನ ಚಿತ್ರವನ್ನು ನಿರ್ಮಿಸಿದ್ದಾರೆ.
Published by: Rajesh Duggumane
First published: October 13, 2020, 11:38 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading