Anitha EAnitha E
|
news18-kannada Updated:November 23, 2020, 1:54 PM IST
ಹನಿಮೂನ್ ವೆಬ್ ಸರಣಿ
ಈಗೇನಿದ್ದರೂ ಡಿಜಿಟಲ್ ಜಮಾನ. ಸಿನಿಮಾಗಳು ಹಾಗೂ ವೆಬ್ ಸರಣಿಗಳು ಒಟಿಟಿ ಮೂಲಕ ಡಿಜಿಟಲ್ ವೇದಿಕೆಯಲ್ಲಿ ಪ್ರೇಕ್ಷಕನ ಮುಂದೆ ಬರುತ್ತಿವೆ. ಬಾಲಿವುಡ್ನ ದೊಡ್ಡ ದೊಡ್ಡ ಫಿಲ್ಮ್ಮೇಕರ್ಸ್ ಸಹ ವೆಬ್ ಸರಣಿಗಳ ನಿರ್ಮಾಣದಲ್ಲಿ ತೊಡಗಿದ್ದಾರೆ. ಸಿನಿಮಾಗಳಂತೆಯೇ ವೆಬ್ ಸರಣಿಗಳೂ ಸಹ ದೊಡ್ಡ ಮಟ್ಟದಲ್ಲಿ ವೀಕ್ಷಣೆ ಪಡೆಯುತ್ತಿವೆ. ಹೀಗಿರುವಾಗ ಸ್ಯಾಂಡಲ್‌ವುಡ್ ಮಂದಿ ಸಹ ಈ ವೆಬ್ ಸರಣಿ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಕನ್ನಡದ ವೆಬ್ ಸರಣಿಗಳೂ ಡಿಜಿಟಲ್ ವೇದಿಕೆಗೆ ಲಗ್ಗೆ ಇಡುತ್ತಿವೆ. ಹೀಗಿರುವಾಗಲೇ ಕನ್ನಡದ ವೆಬ್ ಸರಣಿಗಳೂ ಸಿದ್ಧಗೊಳ್ಳುತ್ತಿವೆ. ಬಹಳ ಹಿಂದೆಯೇ ಶಿವರಾಜ್ ಕುಮಾರ್ ಅವರ ಮಗಳು ಹೇಟ್ ಯೂ ರೋಮಿಯೋ ಅನ್ನೋ ವೆಬ್ ಸರಣಿ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಇದು ರಿಲೀಸ್ ಆಗುವ ಮೊದಲೇ ಸಖತ್ ಸ್ಟೂಡಿಯೋ' ಹಾಗೂ ಶ್ರೀಮುತ್ತು ಸಿನಿ ಸರ್ವಿಸ್ ಬ್ಯಾನರ್'ನಲ್ಲಿ ಹೇಟ್ ಯು ರೋಮಿಯೋ ಎಂಬ ವೆಬ್ ಸರಣಿ ಈಗಾಗಲೇ ನಿರ್ಮಾಣ ಆಗುತ್ತಿದೆ. ಆ ವೆಬ್ ಸೀರಿಸ್ ಬಿಡುಗಡೆಗೆ ಮೊದಲೇ 'ಹನಿಮೂನ್' ಎಂಬ ಮತ್ತೊಂದು ಹೊಸ ಪ್ರಾಜೆಕ್ಟ್ ಶುರು ಮಾಡಿದ್ದಾರೆ. ಯುಗಾದಿ ಹಬ್ಬದ ವಿಶೇಷವಾಗಿ ಈ ಹೊಸ ಪ್ರಾಜೆಕ್ಟ್‌ನ್ನು ಅನೌನ್ಸ್ ಮಾಡಲಾಗಿತ್ತು.
ಶಿವರಾಜ್‌ಕುಮಾರ್ ಅವರ ಮಗಳು ನಿವೇದಿತಾ ವೆಬ್ ಸೀರಿಸ್ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ವಿಕ್ರಮ್ ಯೋಗಾನಂದ್ ನಿರ್ದೇಶನದ ಹನಿಮೂನ್ ವೆಬ್ ಸರಣಿಗೆ ಕಥೆ ಮತ್ತು ಪರಿಕಲ್ಪನೆ ಸಖತ್ ಸ್ಟೂಡಿಯೋ ನೀಡಿದೆ. ಆದಷ್ಟು ಬೇಗ ರಿಲೀಸ್ ಮಾಡಲು ಸಜ್ಜಾಗುತ್ತಿದೆ ವೆಬ್ ಸಿರೀಸ್ ತಂಡ.
ಹನಿಮೂನ್ ವೆಬ್ ಸಿರೀಸ್ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆಗಳು ಮೂಡಿವೆ. ಕಾರಣ, ಸ್ಯಾಂಡಲ್‌ವುಡ್ ಸ್ಟಾರ್ ನಟ ಶಿವಣ್ಣ ಇದರಲ್ಲಿ ನಟಿಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಅಲ್ಲದೆ ಈ ವೆಬ್ ಸರಣಿ ಈಗ ಕನ್ನಡ ಹಾಗೂ ತೆಲುಗಿನಲ್ಲೂ ರಿಲೀಸ್ ಆಗಲಿದೆ.
ಹನಿಮೂನ್ ವೆಬ್ ಸರಣಿ ರಿಲೀಸ್ಗೆ ರೆಡಿಯಾಗಿದ್ದು, ಟ್ರೇಲರ್ ಹಾಗೂ ಇನ್ನಷ್ಟು ವಿವರಗಳು ಈ ವಾರದಲ್ಲೇ ನಿಮ್ಮ ಮುಂದೆ ಬರಲಿವೆ. ನಿಮ್ಮ ಸಂಪೂರ್ಣ ಬೆಂಬಲ ನಮ್ಮ ಜೊತೆಗಿರಲಿ ಎಂದು ಪ್ರೇಕ್ಷಕರಲ್ಲಿ ಮನವಿ ಮಾಡಿದೆ ಈ ವೆಬ್ ಸರಣಿ ತಂಡ.
ಸಖತ್ ಸ್ಟೂಡಿಯೋ' ಹಾಗೂ ಶ್ರೀಮುತ್ತು ಸಿನಿ ಸರ್ವಿಸ್ ಬ್ಯಾನರ್ ನಲ್ಲಿ ಹೇಟ್ ಯು ರೋಮಿಯೋ ಎಂಬ ವೆಬ್ ಸರಣಿ ಈಗಾಗಲೇ ನಿರ್ಮಾಣ ಆಗುತ್ತಿದೆ. ಸದ್ಯಕ್ಕೆ ಈ ಸರಣಿ ಬಗ್ಗೆ ಯಾವುದೇ ಅಪ್ಡೇಟ್ ಇಲ್ಲ. ಇನ್ನು ಶಿವಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಇತ್ತೀಚೆಗಷ್ಟೆ ಶಿವಪ್ಪ ಚಿತ್ರವನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಧನಂಜಯ್ ಹಾಗೂ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಸಹ ನಟಿಸುತ್ತಿದ್ದಾರೆ.
Published by:
Anitha E
First published:
November 23, 2020, 1:54 PM IST