ಬಣ್ಣದ ಲೋಕಕ್ಕೆ ರೀಎಂಟ್ರಿ ಕೊಟ್ಟ ಶಿವಣ್ಣನ ಅಂಡಮಾನ್​ ಮಗಳು ನಿವೇದಿತಾ..!

news18
Updated:August 23, 2018, 1:04 PM IST
ಬಣ್ಣದ ಲೋಕಕ್ಕೆ ರೀಎಂಟ್ರಿ ಕೊಟ್ಟ ಶಿವಣ್ಣನ ಅಂಡಮಾನ್​ ಮಗಳು ನಿವೇದಿತಾ..!
news18
Updated: August 23, 2018, 1:04 PM IST
ನ್ಯೂಸ್​ 18 ಕನ್ನಡ 

ಅಪ್ಪ ಶಿವರಾಜ್​ಕುಮಾರ್​ ಅವರೊಂದಿಗೆ ಚಿಕ್ಕಂದಿನಲ್ಲೇ 'ಅಂಡಮಾನ್​' ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದ ನಿವೇದಿತಾ ಈಗ ಮತ್ತೆ ಬಣ್ಣದ ಲೋಕಕ್ಕೆ ಮರು ಪ್ರವೇಶ ಪಡೆಯುತ್ತಿದ್ದಾರೆ.

ಹೌದು ಅಂದು ಅಂಡಮಾನ್ ಅಂಡಮಾನ್​ ಎಷ್ಟು ಸುಂದರ ಎಂದು ಅಪ್ಪನೊಂದಿಗೆ ಹೆಜ್ಜೆ ಹಾಕಿದ್ದ ನಿವೇದಿತಾ ಈಗ ವೆಬ್‍ಸೀರಿಸ್‍ಗೆ ಎಂಟ್ರಿಕೊಟ್ಟಿದ್ದಾರೆ.

ನಿವೇದಿತಾ ಶಿವರಾಜ್‍ಕುಮಾರ್ ತಮ್ಮದೇ ಆದ  ಶ್ರೀ ಮುತ್ತು ಬ್ಯಾನರ್ ಸರ್ವಿಸ್​ ಅಡಿಯಲ್ಲಿ 'ಹೇಟ್ ಯು ರೋಮಿಯೋ' ಎಂಬ ವೆಬ್‍ ಸರಣಿ ಆರಂಭಿಸುತ್ತಿದ್ದಾರೆ. ಇದರಲ್ಲಿ ಕಿರಿಕ್‍ಪಾರ್ಟಿಯ ಅರವಿಂದ್ ಅಯ್ಯರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, 30 ನಿಮಿಷದ 7 ಸಂಚಿಕೆಗಳನ್ನ ಹೊರತರುವ ಯೋಜನೆ ಇದೆ.

ಸಖತ್ ಸ್ಟುಡಿಯೋ ಸಹಭಾಗಿತ್ವದಲ್ಲಿ ನಿರ್ಮಾಣವಾಗುತ್ತಿರುವ ಈ ವೆಬ್​ ಸರಣಿ ವಿದೇಶದಲ್ಲಿಯೂ ಚಿತ್ರೀಕರಣಗೊಳ್ಳಲಿದೆಯಂತೆ.

ಸದ್ಯ ಈ ಸರಣಿಯ ಚಿತ್ರೀಕರಣ ಪ್ರಾರಂಭದ ಹಂತದಲ್ಲಿದೆ. ಈಗಾಗಲೇ ಸೂಪರ್ ಹಿಟ್ ವೆಬ್ ಸೀರೀಸ್ ಆಗಿರುವ “ಲೂಸ್ ಕನೆಕ್ಷನ್” ನಿರ್ದೇಶಕರಾದ ಹಸೀನ್ ಖಾನ್ ಹಾಗೂ ಇಶಾಮ್ ಖಾನ್ 'ಹೇಟ್ ಯು ರೋಮಿಯೋ'ವನ್ನು ನಿರ್ದೇಶನ ಮಾಡಲಿದ್ದಾರೆ.

ಅರವಿಂದ್​ ಅಯ್ಯರ್​ ಲಂಡನ್​ನಲ್ಲಿ ಎಂಜಿನಿಯರಾಗಿ ಕಾರ್ಯನಿರ್ವಹಿಸುತ್ತಿದ್ದ ಸಮಯದಲ್ಲಿ ಅಲ್ಲೇ ಅಭಿನಯ ತರಬೇತಿ ಪಡೆದುಕೊಂಡಿದ್ದು, ಬೆಂಗಳೂರಿನಲ್ಲಿ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಕಿರಿಕ್ ಪರ್ಟಿ ಸಿನಿಮಾ ಮೂಲಕ ಗಮನ ಸೆಳೆದ್ದಿದ್ದ ಇವರು ಈಗ 'ಭೀಮಸೇನ ನಳಮಹರಾಜ' ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಇನ್ನು ಈ ಸರಣಿಗೆ ನಾಯಕಿ ಯಾರು ಅನ್ನೋ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
Loading...

ನಾಯಕಿ ಭಾರತದಲ್ಲೇ ಆನ್​ಲೈನ್​ನಲ್ಲಿ ಹೆಸರುವಾಸಿಯಾಗಿರುವ ಕನ್ನಡತಿಯಾಗಿದ್ದು, ಅತೀ ಶೀಘ್ರದಲ್ಲೇ ಯಾರು ಅಂತಾ ಬಹಿರಂಗವಾಗಲಿದೆ. ಹೊಸ ಭರವಸೆ ಮೂಡಿಸುತ್ತಿರೋ ವೆಬ್ ಸರಣಿಗಳು, ಈಗಾಗಲೇ ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಆರಂಭವಾಗಿದ್ದು ಪ್ರೇಕ್ಷಕರಿಗೆ ಹೊಸತನದೊಂದಿಗೆ ಹತ್ತಿರವಾಗುತ್ತದೆ. ಈ ಸಂದರ್ಭದಲ್ಲಿ ಈಗಾಗಲೇ ಹೆಸರು ಮಾಡಿರೋ ಸಂಸ್ಥೆಗಳು ಈ ಪ್ರಯೋಗ ಮಾಡುತ್ತಿವೆ.

 

 
First published:August 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ