'ಖೈದಿ'ಗೆ ನೋ ಅಂದ ಶಿವಣ್ಣ 'ಅಸುರ'ನಾಗಲು ರೆಡಿ

ಒಟ್ಟಿನಲ್ಲಿ ಖೈದಿ ಗೆಟಪ್​ನಲ್ಲಿ ಬರಲ್ಲ ಎಂದಿರುವ ಶಿವಣ್ಣ ಅಸುರ ಅವತಾರ ತಾಳಲು ಅಡ್ಡಿಯಿಲ್ಲ ಎನ್ನುವ ಮೂಲಕ ಮತ್ತೊಂದು ರಿಮೇಕ್ ಮಾಡುತ್ತಿರುವ ಬಗ್ಗೆ ಸುಳಿವು ನೀಡಿದ್ದಾರೆ. ಅಂದಹಾಗೆ 19 ವರ್ಷಗಳ ಹಿಂದೆ ಶಿವಣ್ಣ ಅಸುರ ಅನ್ನೋ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ತಮಿಳಿನ ಅಸುರನ್​​ ರಿಮೇಕ್ ಆಗುತ್ತಿರುವುದರಿಂದ ಅಸುರ ಎಂಬ ಟೈಟಲ್​ನಲ್ಲೇ ಹ್ಯಾಟ್ರಿಕ್ ಹೀರೋ ತೆರೆ ಮೇಲೆ ಬರಲಿದ್ದಾರಾ ಕಾದು ನೋಡಬೇಕಿದೆ.

Shivanna

Shivanna

  • Share this:
ಸ್ಯಾಂಡಲ್​ವುಡ್ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತೊಂದು ರಿಮೇಕ್ ಚಿತ್ರದಲ್ಲಿ ನಟಿಸಲಿದ್ದಾರಾ? ಅದು ಕೂಡ ಸೂಪರ್ ಡೂಪರ್ ಹಿಟ್ ತಮಿಳು ಚಿತ್ರದ ರಿಮೇಕ್​ನಲ್ಲಿ?...ಈ ಎರಡು ಪ್ರಶ್ನೆಗಳಿಗೆ ಕಳೆದೊಂದು ತಿಂಗಳಿಂದ ಗಾಂಧಿನಗರದಲ್ಲಿ ಸಿಕ್ಕ ಉತ್ತರ ಹೌದು. ಆ ಚಿತ್ರ ಕಾಲಿವುಡ್​ನ ಬ್ಲಾಕ್ ಬ್ಲಸ್ಟರ್ ಚಿತ್ರ  ಖೈದಿ ಎಂದಾಗಿತ್ತು.

ಆದರೆ ಇದೀಗ ಶಿವಣ್ಣ ಖೈದಿ ರಿಮೇಕ್​ನಲ್ಲಿ ನಟಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಗಳಿಗಾಗಿ ಪ್ರಾಣ ಪಣಕ್ಕಿಡುವ ಖೈದಿ ಕಥೆಯಲ್ಲಿ ಹ್ಯಾಟ್ರಿಕ್​ ಹೀರೋ ನಾಯಕನಾಗಲಿದ್ದಾರೆ ಎಂದೇ ಹೇಳಲಾಗಿತ್ತು.  ಆದರೆ ಈ ಚಿತ್ರದ ಆಫರ್​ ಅನ್ನು ಶಿವಣ್ಣ ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಬದಲಾಗಿ ಮಕ್ಕಳಿಗಾಗಿ ಹೋರಾಡುವ ತಂದೆಯ ಪಾತ್ರದಲ್ಲಿ  ಬಣ್ಣ ಹಚ್ಚಲು ಒಪ್ಪಿದ್ದಾರೆ ಎಂಬ ಸುದ್ದಿಯಿದೆ. ಅಂದರೆ ತಮಿಳಿನ ಮೆಗಾ ಹಿಟ್ ಅಸುರನ್ ರಿಮೇಕ್​ನಲ್ಲಿ ಸೆಂಚುರಿ ಸ್ಟಾರ್ ನಟಿಸಲಿರುವುದು ಕನ್ಫರ್ಮ್ ಎಂಬ ಮಾತುಗಳು ಆಪ್ತ ಮೂಲಗಳಿಂದ ಕೇಳಿ ಬಂದಿವೆ.

ಕನ್ನಡದಲ್ಲಿ ಅಸುರನ್ ಶಿವಸ್ವಾಮಿಯಾಗಿ ಶಿವಣ್ಣ ಅಭಿನಯಿಸಲು ಒಲವು ಹೊಂದಿದ್ದು, ಈಗಾಗಲೇ ನಿರ್ಮಾಪಕರ ಜೊತೆ ಒಂದು ಸುತ್ತಿನ ಮಾತುಕತೆಯನ್ನು ಕೂಡ ಮುಗಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಅಸುರನಾಗಿ ಹ್ಯಾಟ್ರಿಕ್ ಹೀರೋ ಅಬ್ಬರಿಸಲಿದ್ದಾರೆ.

ದಲಿತರ ಮೇಲೆ ನಡೆಯುವ ಶೋಷಣೆ ವಿರುದ್ಧ ತಿರುಗಿ ಬೀಳುವ ಕಥೆಯನ್ನು ಹೇಳುವ ಅಸುರನ್ ಚಿತ್ರದ ಕನ್ನಡ ರಿಮೇಕ್​ಗೆ ಜೇಕಬ್ ವರ್ಗೀಸ್ ಆ್ಯಕ್ಷನ್ ಕಟ್ ಹೇಳುವ ಸಾಧ್ಯತೆಯಿದೆ. ಈಗಾಗಲೇ ಕನ್ನಡದಲ್ಲಿ ಸವಾರಿ, ಪೃಥ್ವಿ, ಚಂಬಲ್​ನಂತಹ ಅತ್ಯುತ್ತಮ ಸಿನಿಮಾಗಳನ್ನು ನಿರ್ದೇಶಿಸಿರುವ ಜೇಕಬ್ ಕೂಡ ಅಸುರನ್ ಚಿತ್ರವನ್ನು ಕನ್ನಡದಲ್ಲಿ ರಿಮೇಕ್ ಮಾಡಲು ಉತ್ಸುಕರಾಗಿದ್ದಾರೆ ಎಂದು ಗಾಂಧಿನಗರ ಮೂಲಗಳ ಹೇಳಿಕೊಂಡಿವೆ.

ಒಟ್ಟಿನಲ್ಲಿ ಖೈದಿ ಗೆಟಪ್​ನಲ್ಲಿ ಬರಲ್ಲ ಎಂದಿರುವ ಶಿವಣ್ಣ ಅಸುರ ಅವತಾರ ತಾಳಲು ಅಡ್ಡಿಯಿಲ್ಲ ಎನ್ನುವ ಮೂಲಕ ಮತ್ತೊಂದು ರಿಮೇಕ್ ಮಾಡುತ್ತಿರುವ ಬಗ್ಗೆ ಸುಳಿವು ನೀಡಿದ್ದಾರೆ. ಅಂದಹಾಗೆ 19 ವರ್ಷಗಳ ಹಿಂದೆ ಶಿವಣ್ಣ ಅಸುರ ಅನ್ನೋ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ತಮಿಳಿನ ಅಸುರನ್​​ ರಿಮೇಕ್ ಆಗುತ್ತಿರುವುದರಿಂದ ಅಸುರ ಎಂಬ ಟೈಟಲ್​ನಲ್ಲೇ ಹ್ಯಾಟ್ರಿಕ್ ಹೀರೋ ತೆರೆ ಮೇಲೆ ಬರಲಿದ್ದಾರಾ ಕಾದು ನೋಡಬೇಕಿದೆ.
First published: