ಕುಕ್ಕರಹಳ್ಳಿ ಕೆರೆಯಲ್ಲಿ ಬೆಳ್ಳಂಬೆಳಿಗ್ಗೆ ವಾಕಿಂಗ್​ ಮಾಡಿದ ಶಿವಣ್ಣ!

news18
Updated:July 30, 2018, 4:36 PM IST
ಕುಕ್ಕರಹಳ್ಳಿ ಕೆರೆಯಲ್ಲಿ ಬೆಳ್ಳಂಬೆಳಿಗ್ಗೆ ವಾಕಿಂಗ್​ ಮಾಡಿದ ಶಿವಣ್ಣ!
news18
Updated: July 30, 2018, 4:36 PM IST
ನ್ಯೂಸ್ 18 ಕನ್ನಡ 

ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಅವರಿಗೂ ಮೈಸೂರಿಗೂ ಏನೊ ಬಿಡಿಸಲಾಗದ ನಂಟು. ಮೈಸೂರಿಗೆ ಭೇಟಿ ನೀಡಿದಾಗಲೆಲ್ಲ ಅಲ್ಲಿ ಕೆಲವೊಂದು ಸ್ಥಳಗಳಿಗೆ ಅವರು ಭೇಟಿ ನೀಡದೆ ಬರುವುದೇ ಇಲ್ಲ. ಹೀಗೆಂದು ಹೇಳುತ್ತಿರೋದು ನಾವಲ್ಲ.

ಖುದ್ದು ಶಿವಣ್ಣನೇ ಇತ್ತೀಚೆಗೆ ಯುವ ರಾಜ್​ಕುಮಾರ್​ ನಿಶ್ಚಿತಾರ್ಥದ ಸಮಯದಲ್ಲಿ ಹೀಗೆ ಹೇಳಿಕೊಂಡಿದ್ದರು. ಅಲ್ಲದೆ ಅವರ ಅಪ್ಪಾಜಿ ಅವರ ಸಾಕಷ್ಟು ಸಿನಿಮಾಗಳ ಚಿತ್ರೀಕರಣ ಮೈಸೂರಿನಲ್ಲೇ ನಡೆದಿದ್ದು, ಇದರಿಂದಾಗಿಯೂ ಅವರಿಗೆ ಮೈಸೂರೆಂದರೆ ತುಂಬಾ ಒಂದು ರೀತಿಯ ಪ್ರೀತಿಯಂತೆ.

ಶಿವಣ್ಣ ಮೊನ್ನೆ ಚಿತ್ರೀಕರಣದ ನಿಮಿತ್ತ ಮೈಸೂರಿಗೆ ತೆರಳಿದ್ದಾರೆ. ಆಗ ಬೆಳಿಗ್ಗೆಯೇ ಶಿವಣ್ಣ ತಮ್ಮ ಇಷ್ಟದ ಜಾಗವಾದ ಕುಕ್ಕರಹಳ್ಳಿ ಕೆರೆಯಲ್ಲಿ ವಾಕಿಂಗ್ ಮಾಡಿದ್ದಾರೆ. ಪ್ರತೀ ಸಲವೂ ಮೈಸೂರಿಗೆ ಹೋದಾಗಲೂ ಇಲ್ಲಿಗೆ ಭೇಟಿ ಕೊಟ್ಟೆ ಶಿವಣ್ಣ ಹಿಂದಿರುಗುತ್ತಾರಂತೆ.
First published:July 30, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ